Tel: 7676775624 | Mail: info@yellowandred.in

Language: EN KAN

    Follow us :


ನಾಡಪ್ರಭು ಹೆಸರಿಗಿಂತ ಸಾಮಂತ ಅಥವಾ ಮಹಾಮಂಡಲಾಧಿಪತಿ ಹೆಸರು ಸೂಕ್ತ ರಾಜಶೇಖರ

Posted Date: 14 Jul, 2019

ನಾಡಪ್ರಭು ಹೆಸರಿಗಿಂತ ಸಾಮಂತ ಅಥವಾ ಮಹಾಮಂಡಲಾಧಿಪತಿ ಹೆಸರು ಸೂಕ್ತ ರಾಜಶೇಖರ

ಕೆಂಪೇಗೌಡರನ್ನು ನಾಡಪ್ರಭು ಎನ್ನುವ ಬಿರುದುಗಿಂತ ಸಾಮಂತ ರಾಜ ಅಥವಾ ಮಹಾಂಮಡಲಾಧಿಪತಿ ಎಂಬ ಬಿರುದಿನಿಂದ ಕರೆಯುವುದು ಸೂಕ್ತ ಎಂದು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಶಿಕ್ಷಕ ರಾಜಶೇಖರ ರವರು ಅಭಿಪ್ರಾಯ ಪಟ್ಟರು, ಅವರು ಇಂದು ಮಹದೇಶ್ವರ ನಗರದಲ್ಲಿ ಕೆಂಪೇಗೌಡ ಸಾಂಸ್ಕೃತಿಕ ಬಳಗ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಕೆಂಪೇಗೌಡರ ಕುರಿತು ಮುಖ್ಯ ಭಾಷಣ ಮಾಡಿದರು.


ಹದಿನೈದನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ವಿಜಯದಶಮಿ ವೇಳೆ ಆಗಮಿಸಿದ ಕೆಂಪೇಗೌಡರು ವಿಜೃಂಭಣೆಯಿಂದ ಜರುಗಿದನ್ನು ಕಣ್ತುಂಬಿಕೊಂಡು ಕನಸು ಕಾಣುತ್ತಾರೆ,

ಮತ್ತೊಂದು ಬಾರಿ ನಡೆದ ವಿಜಯದಶಮಿಯಲ್ಲಿ ತಿರುಮಲರಾಯನನ್ನು ಕುಸ್ತಿಯಲ್ಲಿ ಸೋಲಿಸಿದ ಕೆಂಪೇಗೌಡರನ್ನು ಶ್ರೀ ಕೃಷ್ಣ ದೇವರಾಯರು ಸಾಮಂತ ರಾಜರನ್ನಾಗಿ ಮಾಡುತ್ತಾರೆ.


ಕೆಂಪೇಗೌಡ ರ ದೂರದೃಷ್ಟಿಗೆ ನೆರವಾಗಿ ನಿಂತ ಮಹರಾಜರು ಬೆಂಗಳೂರು ನಗರ ನಿರ್ಮಾಣ ಮಾಡಲು ಆರ್ಥಿಕ ನೆರವಿನ ಜೊತೆಗೆ ಸ್ಥಳೀಯವಾಗಿ ಬರುವ ತೆರಿಗೆಯ ಹಣವನ್ನು ಉಪಯೋಗಿಸಿ ಕೊಳ್ಳಲು ಅನುಮತಿ ನೀಡುತ್ತಾರೆ, ನಂತರ ಅರ್ಕಾವತಿ ಯಿಂದ ಕಾವೇರಿ ವರೆಗೆ ವಿಸ್ತಾರ ಮಾಡಿಕೊಂಡು ಆಳ್ವಿಕೆ ಮಾಡಿದವರು ಶೈವ ಕೆಂಪೇಗೌಡರು.


ನಗರ ನಿರ್ಮಾಣದ ಸಂದರ್ಭದಲ್ಲಿ ಗಡಿಯನ್ನು ಗುರುತಿಸುವ ಜೊತೆಗೆ ಎಲ್ಲಾ ಜನಾಂಗದ ವರಿಗೆ ಅವರ ವೃತ್ತಿಯ ಹೆಸರಿನಲ್ಲಿ ಪೇಟೆಗಳನ್ನು ನಿರ್ಮಿಸಿ ಕೊಡುತ್ತಾರೆ, ಕೆರೆ ಕಟ್ಟೆಗಳ ನಿರ್ಮಾಣ, ಸಾಲುಮರಗಳನ್ನು ನೆಡುವ, ಕೃಷಿಗೆ ಆದ್ಯತೆ ನೀಡಿ,  ಬಸವನಿಂದ ಧರ್ಮರಾಯ ರವರೆಗಿನ ಹಲವಾರು ಮಂದಿರಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರದು ಎಂದರು.

ಇದೇ ವೇಳೆ ಅವರು ಜಯಂತಿ ಎಂಬುದು ಕೇವಲ ಸರ್ಕಾರಿ ಶಾಲೆಗಳ ಮತ್ತು ಇಲಾಖೆಗಳಿಗೆ ಸೀಮಿತವಾಗಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.


ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿಗಳು ಕೆಂಪೇಗೌಡ ಸಾಂಸ್ಕೃತಿಕ ಬಳಗಕ್ಕೆ ಕೊಡುಗೆ ನೀಡಿದ ಅನೇಕ ಗಣ್ಯರಿಗೆ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿಗಳು ಸನ್ಮಾನಿಸಿ ಆಶೀರ್ವಚನ ನೀಡಿದರು.


ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ ಮಾತನಾಡಿ ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದಾಗ ಕೇವಲ ಸಮುದಾಯಕ್ಕೆ ಸೀಮಿತವಾಗದೇ ಎಲ್ಲಾ ಸಮುದಾಯಕ್ಕೆ ಮೀಸಲಾಗಿದ್ದವರು, ಇತ್ತೀಚಿಗೆ ಸಹ ಕೆಂಗಲ್ ಹನುಮಂತಯ್ಯ ನವರು ವಿಧಾನಸೌಧ, ಎಸ್ ಎಂ ಕೃಷ್ಣ ರವರು ವಿಕಾಸಸೌಧ ಹಾಗೂ ಕುಮಾರಸ್ವಾಮಿ ಯವರು ಸುವರ್ಣಸೌಧ ಗಳನ್ನು ನಾಡಿನ ಎಲ್ಲಾ ಧರ್ಮ ಮತ್ತು ಸಮುದಾಯದ ಜನರಿಗೆ ನೀಡಿರುವುದು ಗಮನಾರ್ಹ ಎಂದರು.


ಮಾಜಿ ನಗರಸಭಾ ಸದಸ್ಯ ಜೆಸಿಬಿ ಲೋಕೇಶ್, ಎ ಜಿ ಸ್ವಾಮಿ (ಎಜಿಎಸ್) ತಿಮ್ಮೇಶಪ್ರಭು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರು ಸೇರಿದಂತೆ ಕೆಂಪೇಗೌಡ ಸಾಂಸ್ಕೃತಿಕ ಬಳಗ ದ ಅಧ್ಯಕ್ಷ ಮುನಿಸಿದ್ದೇಗೌಡ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑