Tel: 7676775624 | Mail: info@yellowandred.in

Language: EN KAN

    Follow us :


ಕಾಡಹಳ್ಳಿ ಶಿವಲಿಂಗೇಗೌಡರಿಗೆ ಗಣ್ಯರಿಂದ ನುಡಿನಮನ

Posted date: 18 Jul, 2019

Powered by:     Yellow and Red

ಕಾಡಹಳ್ಳಿ ಶಿವಲಿಂಗೇಗೌಡರಿಗೆ ಗಣ್ಯರಿಂದ ನುಡಿನಮನ

ಕನಕಪುರ: ರಾಜಕೀಯ ಮುತ್ಸದ್ದಿ, ಅಜಾತಶತ್ರು, ಅಂದಿನ ಸಾತನೂರು ಕ್ಷೇತ್ರದಲ್ಲಿ ಮೂರು ಬಾರಿ ವಿಜಯಶಾಲಿಯಾಗಿ ಶಾಸಕರಾಗಿದ್ದ ಕೆ ಎಲ್ ಶಿವಲಿಂಗೇಗೌಡರ ಹನ್ನೊಂದನೇ ದಿನದ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಗಣ್ಯರು ನುಡಿನಮನ ಸಲ್ಲಿಸಿದರು.


ಮೊದಲಿಗೆ ಮಾತನಾಡಿದ ಬಿಎಂಐಸಿಪಿಎ ಮಾಜಿ ಅಧ್ಯಕ್ಷರಾದ ಹೆಚ್ ಕೆ ಶ್ರೀಕಂಠು ರವರು ಮಾತನಾಡಿ ಮೂರು ಬಾರಿ ಶಾಸಕರಾಗಿದ್ದ ಶಿವಲಿಂಗೇಗೌಡರಿಗೆ ಮಂತ್ರಿ ಸ್ಥಾನ ಹುಡುಕಿ ಕೊಂಡು ಬಂದಿದ್ದರು ಸಹ ತಿರಸ್ಕರಿಸಿ ಮತ್ತೊಬ್ಬ ಆಕಾಂಕ್ಷಿಗೆ ಬಿಟ್ಟುಕೊಟ್ಟು ಔದಾರ್ಯ ಮೆರೆದವರು, ಆ ದಿನದ ರಾಜಕಾರಣಿಗಳು ಮತ್ತು ಇಂದಿನ ದೊಂಬರಾಟದ ರಾಜಕಾರಣಿಗಳಿಗೆ ಹೋಲಿಸಿ ಅವರ ಗುಣಗಾನ ಮಾಡಿದರು.


ನಿವೃತ್ತ ಪ್ರಾಂಶುಪಾಲ ಆರ್ ವಿ‌ ನಾರಾಯಣ ಮಾತಾನಾಡಿ ವಿದ್ಯಾದಾನ ಮಾಡಿದ ಕರಿಯಪ್ಪ ಹಾಗೂ ಶಿವಲಿಂಗೇಗೌಡರ ರಾಜಕೀಯ ಜೀವನ ನಂತರ ರೂರಲ್ ಕಾಲೇಜಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆಸಿದ ಆಡಳಿತದ ಮೆಲುಕು ಹಾಕಿದರು.


ಶಿವಲಿಂಗೇಗೌಡರ ಒಡನಾಡಿ ಹಾಗೂ ಬಯಲುಸೀಮೆ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ರು ಮಾತನಾಡಿ, ೧೯೭೫ ರಿಂದ ನಮ್ಮ ಅವರ ಒಡನಾಟ ಇತ್ತು, ಹೆಚ್ ಕೆ ವೀರಣ್ಣಗೌಡ ಮತ್ತು ನಾವು ಹಲವಾರು ಸಭೆಗಳಲ್ಲಿ ಭಾಗವಹಿಸಿ ಒಕ್ಕಲಿಗರ ಬದುಕಿನ ಬಗ್ಗೆ, ಹಲವಾರು ವಿಧಾನ ಸಭಾ ಕ್ಷೇತ್ರಕ್ಕೆ ಉತ್ತಮ ಶಾಸಕರನ್ನು ನೀಡುವ ಬಗ್ಗೆ ಮಹತ್ವದ ಚರ್ಚೆಗಳನ್ನು ಮಾಡುತ್ತಿದ್ದೆವು.

ಉಪ್ಪು ಕೊಟ್ಟವನನ್ನು ಮುಪ್ಪಿರುವ ತನಕ‌ ನೆನೆ ಎಂಬ ನಾಣ್ಣುಡಿಯಂತೆ ಇಂತಹ ಸಜ್ಜನರ ಸ್ಮರಣೆ ನಿತ್ಯ ಅಗತ್ಯ ಎಂದು ಸ್ಮರಿಸಿದರು.


ಎ ಸಿ ಶಿವರಾಜು ಮಾತನಾಡಿ ಶಿವಲಿಂಗೇಗೌಡರು ಆರೋಗ್ಯ ಇಲಾಖೆ ಮತ್ತು ಶಾಲೆಗೆ ತಮ್ಮ ಸ್ವಂತ ಜಮೀನು ನೀಡಿ ತಾಲ್ಲೂಕಿನ ಸಾರ್ವಜನಿಕರಿಗೆ ವಿದ್ಯೆ ಮತ್ತು ಆರೋಗ್ಯದ ಕೊಡುಗೆ ನೀಡಿದ ಮಹಾತ್ಮ ಎಂದರು. ಸಿಂ ಲಿಂ ನಾಗರಾಜು, ಸೂರನಹಳ್ಳಿ ಜಯರಾಮು, ಡೈರಿ ಶಿವಣ್ಣ ಮುಂತಾದವರು ವೇದಿಕೆಯ ಮೂಲಕ ನುಡಿನಮನ ಅರ್ಪಿಸಿದರು, ಉಮೇಶ್ ಶಿವಾರ ಮತ್ತು ಹೊನ್ನಗಾನಹಳ್ಳಿ ಸಿದ್ದರಾಜಯ್ಯ ತಂಡದಿಂದ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.



ಪುಣ್ಯ ಕಾರ್ಯದಲ್ಲಿ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು, ವಿಧಾನಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ, ರೈತ ಮುಖಂಡರಾದ ಸಿ ಪುಟ್ಟಸ್ವಾಮಿ, ಅನುಸೂಯಮ್ಮ, ಪ್ರೊ ಜಯಪ್ರಕಾಶಗೌಡ, ಚಕ್ಕೆರೆ ಶಿವಶಂಕರ್, ಕೃಷ್ಣದಾಸ್ ಹಾಗೂ ಶಿವಲಿಂಗೇಗೌಡರ ಸಂಬಂಧಿಗಳಾದ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎ ಜೆ ಸದಾಶಿವ, ನಿವೃತ್ತ ಜಿಲ್ಲಾಧಿಕಾರಿ ಲಕ್ಕೇಗೌಡ, ಬಿ ಟಿ ಜಯಮುದ್ದಪ್ಪ , ಕುಟುಂಬದ ಸದಸ್ಯರು, ಸಂಬಂಧಿಗಳು ಸೇರಿದಂತೆ ಅನೇಕ ಗಣ್ಯರು, ಒಡನಾಡಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑