Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಲ್ಲಿ ಚುರುಕಾದ ಬಿತ್ತನೆ ಕಾರ್ಯ

Posted date: 26 Jul, 2019

Powered by:     Yellow and Red

ತಾಲ್ಲೂಕಿನಲ್ಲಿ ಚುರುಕಾದ ಬಿತ್ತನೆ ಕಾರ್ಯ

ಚನ್ನಪಟ್ಟಣ: ಮುಂಗಾರು ಮಳೆ ಕೈಕೊಟ್ಟ ಹಾಗೂ ತಡವಾಗಿ ಆಗಮಿಸಿದ ಕಾರಣ ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಲಾಗದೇ ಕಂಗಲಾಗಿದ್ದ ರೈತ, ತಡವಾಗಿ ಆಗಮಿಸಿರುವ ಮಳೆಯಿಂದ ಉಲ್ಲಾಸಗೊಂಡ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.


ಕಳೆದ ತಿಂಗಳೇ ಪ್ರಾರಂಭ ಆಗಬೇಕಿದ್ದ ಬಿತ್ತನೆ ಮಳೆಯು ವಾತಾವರಣದ ಏರುಪೇರಿನಿಂದ ಇಳೆಗೆ ಇಳಿಯದ್ದರಿಂದ ಬಿತ್ತನೆ ಮಾಡಲು ಕಾತರಿಸುತ್ತಿದ್ದ ರೈತ ಕಂಗಾಲಾಗಿದ್ದರೂ ಸಹ ತಿಂಗಳು ತಡವಾಗಿ ಬಂದ ಮಳೆಗೆ ರೈತ ಬಿತ್ತನೆ ಮಾಡುವ ತವಕದಲ್ಲಿದ್ದಾನೆ.


ಕೆಲವು ರೈತರು ಮಾತ್ರ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದು ಈ ಮಳೆಯನ್ನು ನಂಬಿಕೊಳ್ಳಲು ಬರುವುದಿಲ್ಲ, ಬಿತ್ತನೆ ಮಾಡಿ ಕೈಸುಟ್ಟುಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವಾರು ರೈತರು ಬಿತ್ತನೆ ಗೆ ಮುಂದಾಗದೆ ಕೈಚೆಲ್ಲಿದ್ದಾರೆ.


ಸಂಬಂಧಿಸಿದ ಕೃಷಿ ಅಧಿಕಾರಿಗಳು ರೈತರ ನೆರವಿಗೆ ಧಾವಿಸಿ ತಡವಾಗಿ ಬಿತ್ತನೆ ಮಾಡುವ ರೈತರಿಗೆ ಯಾವ ತಳಿ ಬಿತ್ತನೆ ಮಾಡಿದರೆ ಉಪಯೋಗವಾಗಲಿದೆ, ಎಷ್ಟು ಅವಧಿಗೆ ಅದು ಬರಲಿದೆ ಮತ್ತು ತಡವಾಗಿರುವುದರಿಂದ ಕೀಟ ಬಾಧೆ ಬರಲಿದೆಯೇ ಎಂಬ ಮಾಹಿತಿಯನ್ನು ಒದಗಿಸಿಕೊಟ್ಟರೆ ರೈತನ ಶ್ರಮಕ್ಕೆ ಬೆಲೆ ಸಿಗಲಿದೆ.

ಮುಂಗಾರು ಮಳೆ ತಡವಾಗಿ ಆಗಮಿಸಿರುವುದರಿಂದ ರೈತರು ಪರ್ಯಾಯ ಬೆಳೆಗೆ ಒಗ್ಗಿಕೊಳ್ಳಬೇಕು, ಉದಾಹರಣೆಗೆ ಕಳೆದ ತಿಂಗಳಲ್ಲಾಗಿದ್ದರೆ ಎಂಆರ್ ೦೧ ಅಥವಾ ಎಂಆರ್ ೦೬ ತಳಿಯ ರಾಗಿ ಬಿತ್ತನೆ ಮಾಡಬಹುದಾಗಿತ್ತು, ತಡವಾಗಿರುವುದರಿಂದ ೧೦೫ ದಿವಸಗಳಿಗೆ ಬರುವಂತಹ ಜಿಪಿಯು ೨೮, ೪೬ ಮತ್ತು ೬೬ ಎಂಬ ತಳಿಯ ರಾಗಿಯನ್ನು ಬಿತ್ತನೆ ಮಾಡಿದರೆ ಅನುಕೂಲವಾಗಲಿದೆ.


ನಮ್ಮಲ್ಲಿ ಜಿಪಿಯು ತಳಿಯ ರಾಗಿಯು ದಾಸ್ತಾನು ಇದ್ದು ರೈತರು ನೇರವಾಗಿ ಬಂದು ಖರೀದಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಬೊಮ್ಮೇಶ್ ರವರು ನಮ್ಮ ಪತ್ರಿಕೆಗೆ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑