Tel: 7676775624 | Mail: info@yellowandred.in

Language: EN KAN

    Follow us :


ಒಂಭತ್ತು ತಿಂಗಳ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ರಾಮನಗರ ಜಿಲ್ಲೆ ಗೆ ಕೊಡುಗೆ ? ಸಿ ಪುಟ್ಟಸ್ವಾಮಿ

Posted date: 23 Feb, 2019

Powered by:     Yellow and Red

ಒಂಭತ್ತು ತಿಂಗಳ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ರಾಮನಗರ ಜಿಲ್ಲೆ ಗೆ ಕೊಡುಗೆ ? ಸಿ ಪುಟ್ಟಸ್ವಾಮಿ

ಸಮ್ಮಿಶ್ರ ಸರ್ಕಾರದ ತನ್ನ ಒಂಬತ್ತು ತಿಂಗಳ ಅವಧಿಯಲ್ಲಿ ಒಂದು ಪೂರಕ ಮತ್ತೊಂದು ವಾರ್ಷಿಕ ಬಜೆಟ್ ಮಂಡನೆ ಆಗಿದ್ದು ಬಹುಸಂಖ್ಯಾತ ಕೃಷಿಕ ಸಮುದಾಯಕ್ಕೆ ನಲವತ್ತಾರು ಸಾವಿರದ ಎಂಟು ನೂರಾ ಐವತ್ತು ಮೂರು ಕೋಟಿ ಅನುದಾನ ಘೋಷಣೆ ಕೇವಲ ಶೇ ಇಪ್ಪತ್ತರಷ್ಟು ಆಗಿದ್ದು ರೈತರ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಶೇಕಡಾ ಎಂಟರಿಂದ ಹತ್ತು ಪ್ರಮಾಣ ಪ್ರತ್ಯಕ್ಷವಾಗಿ ಸಹಕಾರಿ ಆಗಬಹುದೇ ಹೊರತು ಶಾಶ್ವತ ಹಾಗೂ ದೂರದೃಷ್ಟಿಯಿಂದ ಗಮನಿಸಿದಾಗ ಕೃಷಿ ಕ್ಷೇತ್ರವನ್ನು ಕಡೆಗಣಿಸಿದಂತೆಯೇ ಸರಿ, ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ವಿಶ್ಲೇಷಿಸಿದ್ದಾರೆ.


ಸಂಸ್ಕರಣ ಘಟಕಗಳು

ಆದರೆ ಮೊಟ್ಟ ಮೊದಲ ಬಾರಿಗೆ ಮಾವು ಮತ್ತು ಟೊಮೊಟೊ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಮೂವತ್ತು ಕೋಟಿ ಅನುದಾನ ಘೋಷಿಸಿದ್ದು ಘಟಕಗಳ ಸ್ಥಾಪನೆಗೆ ಖಾಸಗಿಯವರಿಂದಲೂ, ಸರಕಾರಿ ಸಂಸ್ಥೆಗಳಿಂದಲೂ, ಅಥವಾ ಜಂಟಿ ಸಹಭಾಗಿತ್ವದ ಹೊಣೆಗಾರಿಕೆಯ ಮೂಲಕ ಸಾದರಪಡಿಸುವ ಬಗ್ಗೆ ತಿಳಿಸಿಲ್ಲದಿರುವುದು ಏನನ್ನು ಸೂಚಿಸುತ್ತದೆ ?


ರೂಪುರೇಷೆ

ಸಂಸ್ಕರಣ ಘಟಕದ ಸಾಮರ್ಥ್ಯದ ಗಾತ್ರದ ಬಗ್ಗೆ ಸಮಗ್ರ ಯೋಜನಾ ವರದಿ ತಯಾರಿಸಿ, ಅಗತ್ಯ ಭೂಮಿ, ಮೂಲಭೂತ ಸೌಕರ್ಯಗಳನ್ನು, ಟೆಂಡರ್ ಪ್ರಕ್ರಿಯೆಗಳನ್ನೂ ಹಾಗೂ ಸಂಸ್ಕರಣೆಯ ನಂತರದಲ್ಲಿ ವಸ್ತುಗಳ ತಯಾರಿಕೆ, ಹಾಗೂ ಮಾರಾಟ ಭದ್ರತೆ ಬಗ್ಗೆ ಅವಶ್ಯ ಮಾರ್ಗಸೂಚಿಗಳು ಹಾಗೂ ಬೆಳೆಗಾರರಿಂದ ಯಾವ ತಳಿ ಮಾವು, ಯಾವ ಗುಣಮಟ್ಟ ಮತ್ತು ಯಾವ ಪ್ರಮಾಣದಲ್ಲಿ ಖರೀದಿ ಸಾಧ್ಯತೆಗಳ ಬಗ್ಗೆ ಕನಿಷ್ಠ ಪೂರ್ವಭಾವಿ ಚರ್ಚೆಗಳ ಮುಖಾಂತರ ಅಖೈರುಗೊಳಿಸಿ ಉತ್ಪಾದಕರ ಹಂತದಿಂದ ಬಳಕೆದಾರರ ವರೆಗೂ, ಎಲ್ಲ ಹಂತದಲ್ಲೂ ಪರಸ್ಪರ ಒಪ್ಪಂದದ ಒಡಂಬಡಿಕೆ (ಎಂಒಯು) ಆಗಬೇಕಿದೆಯಾದರೂ ಯಾವಾಗ ಕೈಗೂಡಬಹುದು ?


ವಿಳಂಬವಾಗದಿರಲಿ

ಕಾರ್ಯಾದೇಶಗಳು ವಿಳಂಬವಿಲ್ಲದಂತೆ ಸಾಧ್ಯವಾಗಿ ಯೋಜನೆ ಆರಂಭಕ್ಕೆ ಮುನ್ನುಡಿ ಬರೆಯಬೇಕಿದೆ. ಜೊತೆಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವುದು ಸಹ ಸರ್ಕಾರದ ಜವಾಬ್ದಾರಿ ಎಂಬುದನ್ನು ನಾಗರೀಕ ಸರ್ಕಾರ ಮರೆಯಬಾರದು.


ನಗರದ ಹೊರಭಾಗದಲ್ಲಿ ಬೃಹತ್ ರೇಷ್ಮೆ ಮಾರುಕಟ್ಟೆ

ರೇಷ್ಮೆಗೂಡಿನ ಮಾರುಕಟ್ಟೆ ನಗರ ಹೊರಭಾಗದಲ್ಲಿ ಸಾಧ್ಯವಾಗಬೇಕಾದ ಅನಿವಾರ್ಯತೆಯನ್ನು ಜಿಲ್ಲಾಡಳಿತ ಮನಗಾಣಬೇಕಿದೆ, ರೇಷ್ಮೆಗೂಡಿನ ಗುಣಮಟ್ಟ ರೇಷ್ಮೆ ಇಳುವರಿ ಸಿಲ್ಕ್ ರೆಪೋ ಆಧಾರಿತ ವೈಜ್ಞಾನಿಕ ಬೆಲೆ ನಿಗದಿಗೆ ಅತ್ಯಂತ ತ್ವರಿತವಾಗಿ ಸಮರ್ಥ ಮಾರ್ಗಸೂಚಿ ಮತ್ತು ಮಾನದಂಡ ಚಾಲ್ತಿಗೆ ತರುವುದರ ಮುಖಾಂತರ ಬೆಲೆ ಕುಸಿತ ವೈಪರೀತ್ಯಗಳ ನಿವಾರಣೆ ಸಾಧ್ಯ ಆಗಲಿದ್ದು ಬೆಳೆಗಾರರನ್ನು ಕನಿಷ್ಠ ಪ್ರಮಾಣದಲ್ಲಿ ರಕ್ಷಣೆ ಮಾಡಬಹುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.


ಖರ್ಚಿಗಿಂತಲೂ ಕಡಿಮೆ ಬೆಲೆ

ಡಿ ಡಾಟಾ ಮಾದರಿ ಅಥವಾ ಅದಕ್ಕೂ ಉತ್ತಮ ವಿಧಾನ ಇಲ್ಲವಾದಲ್ಲಿ ಬಾಯಿ ಹರಾಜು ಹೋಗಿ ಬೆರಳ ತುದಿ ಹರಾಜು ರೈತರ ನಷ್ಟಕ್ಕೆ ಪರಿಹಾರವಾಗಲಾರದು, ಕಳೆದ ಹದಿನೈದು ವರ್ಷದಿಂದಲೂ ಸರಾಸರಿ ಬೆಳೆಗಿಂತ ಶೇಕಡಾ ಐವತ್ತು ಮೂರು ಪ್ರಮಾಣದ ಗೂಡು ಕಮ್ಮಿ ಬೆಲೆಗೆ ಮಾರಾಟವಾಗಿದ್ದು ಬೆಳೆಗಾರರು ಒಂದು ರೀತಿ ಇಲಾಖೆ ಪ್ರಾಯೋಜಿತ ಹಗಲು ದರೋಡೆಗೆ ಕಾರಣವಾಗಿದೆ ಎಂದು ರೈತರ ಸಂಕಷ್ಟವನ್ನು ತೆರೆದಿಡುತ್ತಾರೆ.


ಬಲಿಷ್ಠ ಕಪಿಮುಷ್ಠಿಯಿಂದ ಹೊರತರಲಿ

ರೇಷ್ಮೆ ಟ್ರೇಡರ್ಸ್ ಗಳ ಕಪಿಮುಷ್ಟಿಯಿಂದ ರೀಲರುಗಳನ್ನು, ರೈತರನ್ನು ಬಂಡವಾಳ ಶಾಹಿ ಕುತಂತ್ರದಿಂದ ಪಾರು ಮಾಡದಿದ್ದರೆ ಇಡೀ ಜಗತ್ಪ್ರಸಿದ್ಧ ರೇಷ್ಮೆ ಕೃಷಿ ನಿರ್ನಾಮವಾಗಲಿದೆ. ಸರ್ಕಾರದ ಉದಾಸೀನ ಸಲ್ಲದು, ಈ ನಿಟ್ಟಿನಲ್ಲಿ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಮೇಕೆದಾಟು ಯೋಜನೆ

ಮೇಕೆದಾಟು ಯೋಜನೆ ಎಲ್ಲ ಅಡೆತಡೆಗಳನ್ನು ದಾಟಿ ಯೋಜನೆಯ ಆರಂಭಕ್ಕೆ ಬೃಹತ್ ನೀರಾವರಿ ಸಚಿವರೇ ಜವಾಬ್ದಾರಿ ನಿರ್ವಹಿಸುತ್ತಿದ್ದು ಎತ್ತಿನ ಹೊಳೆಯಂತೆ ವಿಳಂಬ ದ್ರೋಹ ಆಗಬಾರದು.


ಸತ್ತೇಗಾಲ ಕುಡಿಯುವ ನೀರು ಯೋಜನೆ

ಸತ್ತೇಗಾಲ ಕುಡಿನೀರು ಯೋಜನೆ ಮತ್ತು ರಾಮನಗರ ಚನ್ನಪಟ್ಟಣ ನಗರಕ್ಕೆ ನಗರ ನೀರು ಸರಬರಾಜು ಯೋಜನೆಗಳಿಗೆ ಸಂಪುಟ ಅನುಮೋದಿಸಿದ್ದು ತಿಂಗಳುಗಳೇ ಜಾರಿದ್ದರೂ ಕಾರ್ಯಾದೇಶಗಳು ಹೊರಬಿದ್ದಿಲ್ಲ, ಉದ್ದೇಶದ ಗೌಪ್ಯತೆಗೆ ಕಾರಣವೇನಿದೆ ? ಶ್ರೀರಂಗ ಏತ ನೀರಾವರಿಗೆ ಇರುವ ಅಡಚಣೆ ಬಗೆಹರಿಯುತ್ತಿಲ್ಲ ಏಕೆ ? ಎಂದು ಅವರು ಪ್ರಶ್ನಿಸುತ್ತಾರೆ.


ಬೆಂಗಳೂರು ಕೊಳಚೆ

ಮಹಾನಗರದ ಕೊಳಚೆ ತೊಳೆಯಲು ಮೇಕೆದಾಟಿನ ಮೂರನೇ ಒಂದು ಭಾಗದ ನೀರು ಬೇಕಾಗಬಹುದು, ಇಲ್ಲಿನ ವೃಷಭಾವತಿ, ಭೈರಮಂಗಲ, ಅರ್ಕಾವತಿ, ಕೆಸಿ ವ್ಯಾಲಿ ಮತ್ತು ಸಂಗಮ ಸೇರಿದಂತೆ ಎಲ್ಲಾ ಭಾಗಗಳಲ್ಲಿಯೂ ಜನ ಜಾನುವಾರು ಭೂಮಿ ನಂಬಿ ಬದುಕುತ್ತಿರುವ ಅನ್ನದಾತನ ಬದುಕು ಸಮಸ್ಯೆಯ ಗೂಡಾಗಿದೆ, ಈ ಭಾಗದ ಕೃಷಿ, ಜಾನುವಾರು, ಪಕ್ಷಿ ಕೀಟ, ಸಸ್ಯ ಮತ್ತು ಜಲಚರಗಳ ಹಾದಿಯಾಗಿ ಭೀಕರ ಮಾರಕವೂ ಆದ ರೋಗಗಳಿಂದ ಬಳಲುತ್ತಿದ್ದು ಒಟ್ಟಾರೆ ಸಕಲ ಜೀವ ವೈವಿಧ್ಯತೆಗೆ ಗಂಡಾಂತರವನ್ನು ತಂದೊಡ್ಡುತ್ತಿರುವ ಮಹಾನಗರದ ವೇಗದ ಬೆಳವಣಿಗೆ ಮತ್ತು ದೌಲತ್ತು ಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕಾಗಿದೆ.


ಸುತ್ತಲಿನ ಬದುಕು ಸರ್ವ ನಾಶವಾಗುತ್ತಿದ್ದು ತುರ್ತಾಗಿ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ಎಲ್ಲ ಜನಪ್ರತಿನಿಧಿಗಳ ಮೇಲಿದೆ ಎಂಬುದನ್ನು ಜನಪ್ರತಿನಿಧಿಗಳು ಮರೆಯಬಾರದು.


ಅಕ್ರಮ ಗಣಿಗಾರಿಕೆ

ಬಿಡದಿ ಸುತ್ತಲಿನ ಕಲ್ಲು ಕ್ರಷರ್, ಗ್ರಾನೈಟ್ ಗಣಿಗಾರಿಕೆ ನಡೆಯುವ ಪ್ರದೇಶ ಕಳೆದ ನಾಲ್ಕಾರು ವರ್ಷಗಳಲ್ಲಿ ಸುರಕ್ಷಿತವಲ್ಲ ಎಂದು ವರದಿ ನೀಡಿ, ಮಾಗಡಿ ಮತ್ತು ಕನಕಪುರದ ಕಬ್ಬಾಳು ಪ್ರಾಂತ್ಯದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಬೇಕೆಂದು ತೀರ್ಮಾನವಾಗಿದ್ದರೂ ಸಹ ಯಾರ ? ಮತ್ತು ಯಾವ ಕಾರಣಕ್ಕೆ ? ವರ್ಗಾಯಿಸಿಲ್ಲ, ಈ ಪ್ರಸ್ತಾಪ ಎಲ್ಲಿ ಮುಳುಗಿಹೋಗಿದೆ ? ಎಂದು ಜಿಲ್ಲೆಯ ಜನತೆಗೆ ಉಸ್ತುವಾರಿ ಸಚಿವರೇ ತಿಳಿಸಿದರೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಹಗಲು ದರೋಡೆಯಾಗುತ್ತಿರುವ ಮರಳು ಮಾಫಿಯಾ

ಮರಳು ಮಾಫಿಯಾ ದಂಧೆ ಇಡೀ ಜಿಲ್ಲೆಯ ನದಿ, ಕೆರೆಗಳ ಒಡಲನ್ನು ಬಗೆದು ಕೃಷಿ ಭೂಮಿಯನ್ನು ಆಪೋಶನ ತೆಗೆದುಕೊಳ್ಳುತ್ತಿರುವವರ ದಂಧೆಕೋರರಿಗೆ ಅಂಕುಶ  ಹಾಕುತ್ತಿಲ್ಲ ಏಕೆ ?


ಸಂಸದರ ಘೋಷಣೆ ಭರವಸೆಯೇ ? ಕನಕಪುರದಲ್ಲಾಗುವ ಕೆಲಸ ಇಲ್ಯಾಕಿಲ್ಲ

ಸಂಸದರು ಘೋಷಣೆ ಮಾಡಿದ್ದ ಸಿಲ್ಕ್ ಪಾರ್ಕ್, ಫುಡ್ ಪಾರ್ಕ್, ನೆನೆಗುದಿಗೆ ಬಿದ್ದಿದೆ,

ಕನಕಪುರದಲ್ಲಿ ಪೋಡಿ ದುರಸ್ತಿ ಸಾಗುವಳಿ ಚೀಟಿ ಅರಣ್ಯ ಹಕ್ಕು ಚೀಟಿಗಳು, ಖಾತೆಗಳ ನಡವಳಿಕೆ ಏಳು ಗಂಟೆಯ ಹಗಲು ವಿದ್ಯುತ್ ಎಲ್ಲವೂ ಸರಿಯಾಗಿ ನಡೆಯುತ್ತಿರಬೇಕಾದರೇ ಬೇರೆ ತಾಲ್ಲೂಕುಗಳಲ್ಲಿ ಈ ಕೆಲಸಗಳು ಹಿಂದಕ್ಕೆ ಸಾಗುತ್ತಿರುವುದರ ಗುಟ್ಟೇನು ?

ಕೆಡಿಪಿ ದಿಶಾ ಸಭೆಗಳಲ್ಲಿ ಚರ್ಚೆಗೆ ಏಕೆ ಬರುತ್ತಿಲ್ಲ ?


ಪಹಣಿ ವ್ಯಾಪಾರ

ಹತ್ತು ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ ಪಹಣಿಯನ್ನು ಹದಿನೈದು ರೂಪಾಯಿಗಳಿಗೆ ಏರಿಸಿ ವ್ಯಾಪಾರಕ್ಕಿಳಿದ ಕಂದಾಯ ಇಲಾಖೆ ವಾಸ್ತವವಾಗಿ ಖರ್ಚು ಎಷ್ಟು ಬೀಳುತ್ತದೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಿದೆ.


ನಲವತ್ತು ಪೈಸೆ ಬಿಳಿ ಹಾಳೆ, ಪ್ರಿಂಟ್ ಮೊಹರಿನ ಖರ್ಚು ಅರವತ್ತು ಪೈಸೆ, ಮಿಷಿನರಿ ವೆಚ್ಚ ಒಂದು ರೂಪಾಯಿ, ದಾಖಲೆ ವಹಿವಾಟು ಕೇಂದ್ರೀಕರಿಸಿ ಸಂಗ್ರಹಿಸಲು ಹಾಗೂ ಮಾಹಿತಿ ಶೇಖರಣೆ ಮುಂತಾದ ಪ್ರತಿ ಸರ್ವೇ ನಂಬರಿಗೆ ಮೂರು ರೂಪಾಯಿ ಆದರೂ ಒಟ್ಟು ಐದು ರೂಪಾಯಿ ತಗಲುತ್ತದೆ, ಆದರೆ ರೈತರ ಹಕ್ಕು ಪ್ರತಿ ಪಡೆಯುವುದು ಸೇವೆ ಆಗಿರಬೇಕಾಗಿದ್ದು ವ್ಯಾಪಾರ ಆಗುತ್ತಿರುವುದು ಈ ನಾಡಿನ ದೌಭಾರ್ಗ್ಯ ಎಂದು ಬೇಸರ ವ್ಯಕ್ತಪಡಿಸಿದರು.


ಭರವಸೆ ಅಷ್ಟೇ ಆಗದಿರಲಿ

ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪಟಾಲಂ ಜೊತೆಗೆ ಬಹುತೇಕ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಇಂದು ಒಂದೆಡೆ ಸೇರಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸಂತಸವಾದರೂ ಸಹ ಎಲ್ಲರಂತೆ ಕೇವಲ ಶಂಕುಸ್ಥಾಪನೆ ಮತ್ತು ಭರವಷೆಗಳಿಗೆ ಸೀಮಿತವಾಗದೇ ನಿಗದಿತ ಸಮಯದಲ್ಲಿ ಕಾರ್ಯರೂಪಕ್ಕೆ ತರಲಿ ಎಂದು ಅವರು ಆಶಿಸಿದ್ದಾರೆ.


(ಮೂಲ ಬರಹ ಸಿ ಪುಟ್ಟಸ್ವಾಮಿ)


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑