Tel: 7676775624 | Mail: info@yellowandred.in

Language: EN KAN

    Follow us :

ಅನಾವೃಷ್ಠಿಯಿಂದ ಪಾರಾದ ರಾಗಿ ಬೆಳೆ ಅತಿವೃಷ್ಟಿಗೆ ಬಲಿಯಾಗುವತ್ತ

Posted date: 04 Nov, 2019

Powered by:     Yellow and Red

ಅನಾವೃಷ್ಠಿಯಿಂದ ಪಾರಾದ ರಾಗಿ ಬೆಳೆ ಅತಿವೃಷ್ಟಿಗೆ ಬಲಿಯಾಗುವತ್ತ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಈ ಬಾರಿ ರಾಗಿ ಬೆಳೆಯು ಹುಲುಸಾಗಿ ಬೆಳೆದಿದ್ದು ರೈತನ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು.

ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಇನ್ನೇನು ಕುಯಿಲಿಗೆ ಬಂದ ಹುಲುಸಾದ ರಾಗಿ ಫಸಲು ಆಗಾಗ್ಗೆ ಸುರಿದ ಮಳೆಯಿಂದ ಬಾಗಿ ನೆಲಕಚ್ಚಿದ್ದು ರೈತನ ಆಶಾಗೋಪುರ ಕಳಚಿ ಬಿದ್ದಿದೆ.

ಕಳೆದ ಹಲವಾರು ವರ್ಷಗಳಿಗೆ ಹೋಲಿಸಿದರೆ ಈ ಸಾಲಿನ ರಾಗಿ ಮತ್ತು ಸಿರಿಧಾನ್ಯ ದ ಜೊತೆಗೆ ರಾಗಿಯ ಮಧ್ಯೆ ಬಿತ್ತಿರುವ ಸಾಲುಗಳು ಸಹ ನಳನಳಿಸುತ್ತಿವೆಯಾದರೂ ತೆನೆಗಟ್ಟಿದ ಫಸಲ

ನೆಲಕ್ಕೊರಗಿರುವುದರಿಂದ ಅಲ್ಲಿಯೇ ಪೈರು ಬರುವ ಸಾಧ್ಯತೆ ಹೆಚ್ಚಿದೆ. ಇನ್ನೂ ಕೆಲವು ಕಾಚಕ್ಕಿ (ಹೊಡೆಗಟ್ಟುವಿಕೆ) ಹಂತದಲ್ಲಿದ್ದರೆ ಕೆಲವು ಹಣ್ಣುಗಾಚಕ್ಕಿಯಾಗಿವೆ. ಭೂಮಿಗೆ ಬಿದ್ದ ತೆನೆಗಳಲ್ಲಿ ಕೆಲವು ಕೊಳೆಯಲಾರಂಭಿಸಿದ್ದು ಹಣ್ಣುಗಾಚಕ್ಕಿ ಮೊಳಕೆಯೊಡೆಯುತ್ತಿವೆ.

ಜುಲೈ ನ ಕೊನೆಯ ವಾರ ಹಾಗೂ ಆಗಸ್ಟ್ ನ‌ ಮೊದಲ ವಾರಗಳಲ್ಲಿ ಸುರಿದ ಮಳೆಗೆ ರೈತರು ನಾಟಿ ಮಾಡಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಬೀಳದೆ ಕೊಂಚ ಒಣಗಿದರೂ ನಂತರ ಸುರಿದ ಮಳೆಗೆ ಚೇತರಿಸಿಕೊಂಡಿತ್ತು. ಮುಂದುವರೆದ ಮಳೆಯಿಂದಾಗಿ ಮನೆಗೆ ಬರಬೇಕಾದ ರಾಗಿ ಹೊಲದಲ್ಲೇ ಮಣ್ಣಾಗುವ ಸ್ಥಿತಿ ಇದೆ.

ಜನಜಾನುವಾರುಗಳಿಗೆ ಸಮೃದ್ಧ ಮೇವು ಸಿಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದ ರೈತನಿಗೆ ಮುಂದೆ ಬರುವ‌ ಜಡಿ ಹಿಡಿಯುವ ಸ್ವಾತಿ ಮಳೆ ಹಾಗೂ ವಿಶಾಖ ಮಳೆಯ ಭಯ ಮತ್ತಷ್ಟು ಕಾಡುತ್ತಿದೆ. ಅನಾವೃಷ್ಟಿಯಿಂದ ಪಾರಾದ ರೈತ ಅತಿವೃಷ್ಟಿಗೆ ಸಿಲುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಯೂರಿಯಾ, ಅಗತ್ಯಕ್ಕಿಂತಲೂ ಹೆಚ್ಚಿನ ಪೂರೈಕೆಯಾಗಿದ್ದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ರೈತ. ಕಾರಣವೇನು ?
ಯೂರಿಯಾ, ಅಗತ್ಯಕ್ಕಿಂತಲೂ ಹೆಚ್ಚಿನ ಪೂರೈಕೆಯಾಗಿದ್ದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ರೈತ. ಕಾರಣವೇನು ?

ಚನ್ನಪಟ್ಟಣ: ಸೆ/26/20/ಶನಿವಾರ. ತಾಲ್ಲೂಕಿನಲ್ಲಿ ಮಳೆಗಾಲದ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿಗೆ, ಈಗಾಗಲೇ ಬಿತ್ತನೆ ಮಾಡಿರುವ ತೋಟಗಾರಿಕೆ ಮತ

ರೈತರ ಕೂಗಿಗೆ ಸರ್ಕಾರ ಸ್ಪಂದಿಸದಿದ್ದರೆ, ಪರ್ಯಾಯ ಅಧಿವೇಶನ ಮಾಡಿ. ವಿಧಾನಸೌಧ ಮುಚ್ಚುತ್ತೇವೆ. ಬಡಗಲಪುರ ನಾಗೇಂದ್ರ
ರೈತರ ಕೂಗಿಗೆ ಸರ್ಕಾರ ಸ್ಪಂದಿಸದಿದ್ದರೆ, ಪರ್ಯಾಯ ಅಧಿವೇಶನ ಮಾಡಿ. ವಿಧಾನಸೌಧ ಮುಚ್ಚುತ್ತೇವೆ. ಬಡಗಲಪುರ ನಾಗೇಂದ್ರ

ಚನ್ನಪಟ್ಟಣ:ಸೆ/15/20/ಮಂಗಳವಾರ. ರಾಜ್ಯ ಸರ್ಕಾರವು ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯದೇ ಹೋದರೆ, ರಾಜ್ಯ ರೈತ ಸಂಘಟನೆಗಳು ಸೇರಿದಂತ

ರಸಗೊಬ್ಬರಕ್ಕೆ ಹಾತೊರೆಯುತ್ತಿರುವ ರೈತರು. ಸಕಾಲದಲ್ಲಿ ಸ್ಪಂದಿಸದ‌ ಇಲಾಖೆ
ರಸಗೊಬ್ಬರಕ್ಕೆ ಹಾತೊರೆಯುತ್ತಿರುವ ರೈತರು. ಸಕಾಲದಲ್ಲಿ ಸ್ಪಂದಿಸದ‌ ಇಲಾಖೆ

ಚನ್ನಪಟ್ಟಣ:ಸೆ/14/20/ಸೋಮವಾರ. ಇತ್ತೀಚೆಗೆ ಒಳ್ಳೆಯ ಮಳೆಯಾಗುತ್ತಿದ್ದು, ತಾಲೂಕಿನಾದ್ಯಂತ ರಾಗಿ ಸೇರಿದಂತೆ ಇನ್ನಿತರ ಬೆಳೆಗಳನ್ನು ರೈತರು ಬಿತ್ತ

ಹಾಲಿನ ಪೂರಕ ಉತ್ಪನ್ನಗಳಿಂದ ರೈತರಿಗೆ ಲಾಭ : ಎಸ್.ಟಿ. ಸೋಮಶೇಖರ್
ಹಾಲಿನ ಪೂರಕ ಉತ್ಪನ್ನಗಳಿಂದ ರೈತರಿಗೆ ಲಾಭ : ಎಸ್.ಟಿ. ಸೋಮಶೇಖರ್

ರಾಮನಗರ:ಸೆ/11/20/ಶುಕ್ರವಾರ. ಹಾಲಿನ ಜೊತೆಗೆ ಹಾಲಿನ ಪೂರಕ ಉತ್ಪನ್ನಗಳನ್ನು ಉತ್ಪಾದಿಸಲು ಹೆಚ್ಚಿನ ಒತ್ತು ನೀಡುವುದರಿಂದ ರೈತರಿಗೆ ಅಧಿಕ ಲಾಭ ದ

ಮುಂಗಾರು ಮಳೆಗೆ ಚುರುಕುಗೊಂಡ ಬಿತ್ತನೆ ಕಾರ್ಯ. ಮುಂದುವರೆದ ರಸಗೊಬ್ಬರ ಕೊರತೆ
ಮುಂಗಾರು ಮಳೆಗೆ ಚುರುಕುಗೊಂಡ ಬಿತ್ತನೆ ಕಾರ್ಯ. ಮುಂದುವರೆದ ರಸಗೊಬ್ಬರ ಕೊರತೆ

ಚನ್ನಪಟ್ಟಣ:ಆ/13/20/ಗುರುವಾರ. ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ನಡುವೆಯೇ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈಗಾಗಲೇ ರಾಗಿ ಬಿತ್ತನೆ ಮಾಡಿದ ಅನೇಕ ರೈತರು‌ ಅವುಗಳನ್ನು ಬಿಡಿಬಿಡಿಯಾಗಿಸ

ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್. ಮರಿಗೌಡ ಅವರ ೧೦೪ ನೇ ಜನ್ಮದಿನದ ನೆನಪಿಗಾಗಿ ಸು ತ ರಾಮೇಗೌಡ ರ ಲೇಖನ.
ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್. ಮರಿಗೌಡ ಅವರ ೧೦೪ ನೇ ಜನ್ಮದಿನದ ನೆನಪಿಗಾಗಿ ಸು ತ ರಾಮೇಗೌಡ ರ ಲೇಖನ.

ಜೀವನಕ್ಕೆ ದವಸ ಧಾನ್ಯ ನಂಬಿದ್ದ ರೈತಾಪಿ ವರ್ಗಕ್ಕೆ ಫಲಪುಷ್ಪ ಬೆಳೆಸುವ ಕಾಂಚಾಣ ಮಾರ್ಗವನ್ನು ತೋರಿಸಿದ ಕೀರ್ತಿ ಡಾ. ಎಂ.ಎಚ್. ಮರಿಗೌಡ ಅವರದು. ದೇಶದ ನಕಾಶೆಯಲ್ಲಿ *‘ತೋಟಗಾರಿಕೆ ಬೀಡು’* ಎಂಬ ಖ್ಯಾತಿ

ನಮ್ಮ ಭೂಮಿ, ನಮ್ಮ ತಾಯಿ ಮಾರಾಟಕ್ಕಿಲ್ಲ. ರೈತಸಂಘ
ನಮ್ಮ ಭೂಮಿ, ನಮ್ಮ ತಾಯಿ ಮಾರಾಟಕ್ಕಿಲ್ಲ. ರೈತಸಂಘ

ಚನ್ನಪಟ್ಟಣ:ಆ/11/20/ಮಂಗಳವಾರ. ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ  ಮತ್ತು ಹಸಿರು ಸೇನೆಯ ಜಿಲ್ಲಾ ಘಟಕ ದಿಂದ *'ನಮ್ಮ ಭೂಮಿ, ನಮ್ಮ ತಾಯ

ರೈತ ಶಕ್ತಿ ಬಲಗೊಳ್ಳಲು ಮುಂಚೂಣಿಯಲ್ಲಿರುವವರು ಪ್ರಾಮಾಣಿಕರಾಗಿರಬೇಕು. ಅನಸೂಯಮ್ಮ
ರೈತ ಶಕ್ತಿ ಬಲಗೊಳ್ಳಲು ಮುಂಚೂಣಿಯಲ್ಲಿರುವವರು ಪ್ರಾಮಾಣಿಕರಾಗಿರಬೇಕು. ಅನಸೂಯಮ್ಮ

ಚನ್ನಪಟ್ಟಣ:ಜು/೨೨/೨೦/ಬುಧವಾರ. ಜುಲೈ ೨೧ ರಂದು ನರ ಗುಂದ-ನವಲುಗುಂದ ಪ್ರದೇಶದಲ್ಲಿ ರೈತರು ತಮ್ಮ ಹಕ್ಕುಗಳಿಗಾಗಿ, ಲೆವಿ ಪದ್ಧತಿ ಯನ್ನು ವಿರೋಧಿಸಿ ಗೋಲಿಬಾರಿಗೆ ಒಳಗಾದರು ಅವರ ಸ್ಮರಣಾರ್ಥ ಕಳೆದ

ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತ ಹುತಾತ್ಮ ದಿನಾಚರಣೆ
ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತ ಹುತಾತ್ಮ ದಿನಾಚರಣೆ

ರಾಮನಗರ:ಜು/೨೧/೨೦/ಮಂಗಳವಾರ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ೪೦ ನೇ ವರ್ಷದ ರೈತ ಹುತಾತ್ಮ ದಿನಾಚರಣೆಯನ್ನು ಸಂಘದ ಕಛೇರ

Top Stories »  

Top ↑