Tel: 7676775624 | Mail: info@yellowandred.in

Language: EN KAN

    Follow us :


ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

Posted date: 07 Nov, 2023

Powered by:     Yellow and Red

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ ರೈತರು ಇಂದು ಕೆಲವರ ಕುಂತತ್ರಕ್ಕೆ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುವಂತಾಗಿದೆ ಎಂದು ಮಾಜಿ ಸಚಿವೆ ಹಾಗೂ ಬರಹಗಾರ್ತಿ ಬಿ.ಟಿ.ಲಲಿತಾ ನಾಯಕ್ ಅವರು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪಟ್ಟಣದ ತಿಟ್ಟಮಾರನಹಳ್ಳಿ ರಸ್ತೆಯ ಮಹೇಶ್ವರ ಕನ್ವೆನ್‌ಷನ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಹಿಳಾ ಮತ್ತು ಯುವ ಘಟಕದ ರಾಜ್ಯ ಮಟ್ಟದ ಪದಾಧಿಕಾರಿಗಳ ಸಮಾವೇಶ ಹಾಗೂ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿ ದೇಶವನ್ನು ಕಾಪಾಡುವ ಸೈನಿಕನ ಪಾತ್ರದಂತೆ ದೇಶದ ಜನರಿಗೆ ಅನ್ನ ನೀಡುವ ಹಿನ್ನಲೆಯಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು, ಪ್ರಂಚದಲ್ಲಿ ರೈತನಿಲ್ಲದ ಜಾಗವಿಲ್ಲ ಎಂದರೂ ತಪ್ಪಿಲ್ಲ. ಇಂತಹ ರೈತನಿಗೆ ನೇಗಿಲ ಯೋಗಿ ಎಂದು ಕುವೆಂಪು ಅವರು ವಿಶೇಷ ಮಾನ್ಯತೆ ನೀಡಿದ್ದಾರೆ. ಆದರೆ ಆಳುವ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಕಾರ್ಪೋರೇಟ್ ಸಂಸ್ಥೆಗಳ ಕುತಂತ್ರಕ್ಕೆ ಒಳಗಾಗಿ ರೈತರ ಅಸ್ವಿತ್ವವೇ ಅಲುಗಾಡುತ್ತಿದ್ದು ೨೧ ನೇ ಶತಮಾನದಲ್ಲಿ ರೈತರು ಯಾವ ರೀತಿ ಬದುಕಬೇಕು ಎಂದು ತಿಳಿಯದೆ ಇದ್ದರೆ ಅವನ ಅಸ್ಥಿತ್ವ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.


ಪ್ರಸಕ್ತ ಸಂದರ್ಭದಲ್ಲಿ ಭಾರತ ದೇಶ ಬಡ ರೈತನ ದೇಶ ಎನ್ನುವ ಕಲ್ಪನೆ ಬಡ ಬ್ರಾಹ್ಮಣ ಎನ್ನುವ ಹೆಸರು ಉಳಿದು ಬರುತ್ತಿದೆ. ಈ ನಿಟ್ಟಿನಲ್ಲಿ ರೈತರಿಗೆ ಶಕ್ತಿ ತುಂಬುವ ಹಿನ್ನೆಲೆಯಲ್ಲಿ ಆಡಳಿತ ಸರ್ಕಾರಗಳು ಗಂಭೀರವಾಗಿ ಆಲೋಚನೆ ಮಾಡಿ ರೈತರ ಹಿತ ಕಾಯಬೇಕಿದೆ. ಜೊತೆಗೆ  ರೈತನ ಹಿತ ಕಾಯುವ ನಿಟ್ಟಿನಲ್ಲಿ  ಮಹಿಳೆಯರು ಸಹ ಸಮಾನಾಂತರವಾಗಿ ಪೂರಕವಾಗಿ ನಿಲ್ಲುವ ಕಾಲ ಒದಗಿ ಬಂದರೆ ರೈತ ಸಂಘಟನೆ ತನ್ನ ಗೌರವ, ಘನತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ರೈತರ ಬಗ್ಗೆ ಕೀಳರಿಮೆ ಹೆಚ್ಚಾಗಿದ್ದು ರೈತರ ಮಗಳನ್ನು ಮದುವೆ ಮಾಡಿಕೊಳ್ಳುವವರು ರೈತನ ಮನೆಗೆ ಹೆಣ್ಣು ಕೊಡುವುದಿಲ್ಲ ಎನ್ನುವ ಪ್ರವೃತ್ತಿ ಸರಿಯಲ್ಲ ಎಂದು ಹೇಳಿದರು.


ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ನಾಗರತ್ನಮ್ಮ ವಿ. ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತ ಮಹಿಳೆಯರು ಹೋರಾಟಗಳಿಗೆ ಬೆಂಬಲ ನೀಡುವ ಕಾಲ ಬಂದಿದೆ. ಅದನ್ನು ಪುರುಷ ರೈತರು ಸದ್ಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಮಹಿಳೆಯರನ್ನು ಸಂಘಟಿಸುವ ಕೆಲಸ ಮಾಡಲಾಗುತ್ತಿದ್ದು ಇದಕ್ಕೆ ಇಂತಹ ಶಿಬಿರಗಳು ಪೂರಕವಾಗಿವೆ. ಇದಕ್ಕೆ ಯುವಕರು ಚಳಿ ಬಿಟ್ಟು ಕೆಲಸ ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.


ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ದಿಕ್ಸೂಚಿ ಭಾಷಣ ಮಾಡಿ, ರೈತ ಸಂಘ ಬೆಳೆದು ಬಂದ ದಾರಿ ಮತ್ತು ಅದರಲ್ಲಿ ಕವಲು ದಾರಿ ಸೃಷ್ಠಿಯಾದ ಬಗ್ಗೆ ಮತ್ತು ಆಳುವ ಸರ್ಕಾರಗಳು ಮತ್ತು ರಾಜಕಾರಣಿಗಳು ರೈತ ಸಂಘವನ್ನು ನೋಡುವ ರೀತಿ ನೀತಿಯನ್ನು ವಿವರಿಸಿದರು. ೪೫ ವರ್ಷಗಳ ಹಿಂದೆ ನವಲಗುಂದ-ನರಗುಂದ ರೈತರ ಮೇಲೆ ನಡೆದ ನರಮೇಧನವನ್ನು ಖಂಡಿಸಿ ಸೃಷ್ಠಿಯಾಗಿದ್ದು ಈಗ ರೈತ ಸಂಘಟನೆಯಾಗಿದೆ. ಯಾರು ಏನೇ ಮಾಡಿದರೂ ರೈತಸಂಘದ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.


ವಿಚಾರಗೋಷ್ಠಿಯಲ್ಲಿ ರೈತ ಸಂಘದ ಹುಟ್ಟು ಮತ್ತು ನಡೆದು ಬಂದ ಹಾದಿ ಬಗ್ಗೆ ಹಿರಿಯ ಪತ್ರಕರ್ತರಾದ ಸು.ತ. ರಾಮೇಗೌಡರು ಮಾತನಾಡಿ, ೧೯೮೦ರ ನವಲಗುಂದ ನರಗುಂದ ನರಮೇಧವನ್ನು ಖಂಡಿಸಿ ಆರಂಭವಾದ ರೈತ ಸಂಘಟನೆ ಅನೇಕ ಚಳವಳಿಗಳನ್ನು ಮಾಡಿಕೊಂಡು ಬಂದಿದೆ. ಪ್ರಮುಖವಾಗಿ ಗ್ರಾನೈಟ್ ಕಲ್ಲು ಹೋರಾಟ, ಮದ್ಯಪಾನ ನಿಷೇಧ ಹೋರಾಟ, ಸಾಲ ವಸೂಲಾತಿ ವಿರುದ್ಧ ಹೋರಾಟಗಳು ಪ್ರಮುಖವಾಗಿದೆ. ತಾಲೂಕಿನಲ್ಲಿ ಗೇಣಿದಾರರ ಮೇಲಿನ ಹಲ್ಲೆಯನ್ನು ಖಂಡಿಸಿ ಎ.ಸೋಮಲಿಂಗಯ್ಯ ಇತರರು ಸಂಘಟನೆ ಕಟ್ಟಿದರು ಅಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲೆಯ ಜೊತೆಗೆ ಅಕ್ಕಪಕ್ಕದ ಜಿಲ್ಲೆಯಲ್ಲಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಜಾಗೃತಿ ನಡೆಸುತ್ತಾ ಬಂದರು. ಆದರೆ ಕೆಲವರು ಸೃಷ್ಠಿಸಿದ ಗೊಂದಲಗಳಿಂದ ರೈತ ಸಂಘ ಗುಂಪುಗಳಾಗಿ ವಿಭಾಗವಾಗಿದ್ದು ಈ ಎಲ್ಲಾ ಗೊಂದಲವನ್ನು ಸರಿ ಮಾಡಿ ರೈತರೆಲ್ಲಾ ಒಂದೇ ಸಂಘಟನೆಯಲ್ಲಿ ಹೋರಾಟಕ್ಕೆ ಮುಂದಾಗದಿದ್ದರೆ ರೈತ ಸಂಘಟನೆ ಅಸ್ಥಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಕಿವಿಮಾತು ಹೇಳಿದರು.


ಈ ದಿನ ಡಾಟ್ ಕಾಮ್ ನ ಸಂಪಾದಕರಾದ ಡಾ. ವಾಸು ಅವರು ಕೃಷಿ ಸದೃಡಗೊಳಿಸುವಲ್ಲಿ ಯುವ ರೈತರ ಪಾತ್ರದ ಕುರಿತು ವಿಚಾರ ಮಂಡನೆ ಮಾಡಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವ ಅಗತ್ಯ ಇದ್ದು ಇದಕ್ಕೆ ಪೂರಕವಾಗಿ ಸರ್ಕಾರಗಳು ಸಹ ಇಲಾಖೆಗಳ ಮೂಲಕ ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಿತ್ತನೆ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ತಂತ್ರಾಂಶವನ್ನು ರೈತರಿಗೆ ನೀಡಬೇಕು ಎಂದು ಅಭಿಪ್ರಾಯಿಸಿದರು.


ಇಂದು ಕೆಲವು ಬೆಳೆಗಳ ಬೆಲೆಯು ಏಕಾಏಕಿ ಗಗನಕ್ಕೆ ಏರಿ ಬಳಿಕ ಪಾತಾಳಕ್ಕೆ ಇಳಿಯುವ ಮೂಲಕ ರೈತರು ಆರ್ಥಿಕವಾಗಿ ಕೈಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮೂಲಕ ರಾಜ್ಯದಲ್ಲಿ ಯಾವ ಬೆಳೆಗಳು ಎಷ್ಟು ಬಿತ್ತನೆ ಆಗಿದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಲು ಮುಂದಾಗಬೇಕು. ಅಲ್ಲದೆ ಬಿತ್ತನೆ ಬೀಜ ಮಾರಾಟದ ಆಧಾರದಲ್ಲಿ ಉತ್ಪತ್ತಿ ಆಗುವ ಬೆಳೆಯ ಪ್ರಮಾಣ ಮತ್ತು ಉಪಯೋಗಿಸುವ ಗ್ರಾಹಕರ ಸಂಖ್ಯೆಯನ್ನು ಗುರುತಿಸಿದರೆ ಯಾವ ಬೆಳೆ ಎಷ್ಟು ಬೇಕು ಎಂಬ ಅಂಶ ಸಿಗುತ್ತದೆ ಈ ನಿಟ್ಟಿನಲ್ಲಿ ರೈತರು ಹೆಚ್ಚು ಬಿತ್ತನೆ ಮಾಡಿದ ಬೆಳೆಯನ್ನು ಗರಿಷ್ಠ ಅಂಕಕ್ಕೆ ನಿಲ್ಲಿಸಿ ಇತರೆ ರೈತರಿಗೆ ಆ ಬೆಳೆಯ ಬಿತ್ತನೆ ಬೀಜವನ್ನು ನೀಡದೆ ಬೇರೆ ಬೆಳೆಗಳನ್ನು ಬೆಳೆಯುವ ಬಿತ್ತನೆ ಬೀಜಗಳನ್ನು ನೀಡುವಲ್ಲಿ ಇಲಾಖೆ ಕ್ರಮಕ್ಕೆ ಮುಂದಾದರೆ ರೈತರು ಬೆಳೆಯುವ ಬೆಳೆ ಮತ್ತು ಗ್ರಾಹಕರು ಖರೀದಿಸುವ ಬೆಳೆಯ ನಡುವೆ ಸಮತೋಲನ ಉಂಟಾಗಿ ರೈತರಿಗೂ ಉತ್ತಮ ಬೆಲೆ ಸಿಗುವ ಮೂಲಕ ಆರ್ಥಿಕ ಸದೃಢತೆ ಕಾಣುತ್ತಾರೆ. ಈ ಬಗ್ಗೆ ರೈತ ಸಂಘದ ಯುವ ಘಟಕ ಹೆಚ್ಚು ಆಸಕ್ತಿ ವಹಿಸಿ ಸರ್ಕಾರದ ಮೇಲೆ ಒತ್ತಡ ಹಾಕುವಂತಾಗಬೇಕು ಎಂದು ಸಲಹೆ ನೀಡಿದರು.


ಪ್ರಕೃತಿಯಲ್ಲಿ ಇಂದು ಅತಿವೃಷ್ಠಿ ಮತ್ತು ಅನಾವೃಷ್ಠಿ ಆಗುತ್ತಿದೆ. ಈ ನಿಟ್ಟಿನಲ್ಲಿ ಹವಾಮಾನ ವೈಪರೀತ್ಯದ ಆಧಾರದಲ್ಲಿ ಸಹ ಕೃಷಿಗೆ ಪೂರಕ ಬೆಳೆಯನ್ನು ಬೆಳೆಯುವ ಬಗ್ಗೆ ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೆ ತರುವ ಅಗತ್ಯ ಇದೆ. ಯಾವ ಹವಾಮಾನದಲ್ಲಿ ಯಾವ ಬೆಳೆ ಹೆಚ್ಚು ಬೆಳೆಯುತ್ತದೆ ಈ ಬೆಳೆಯ ಅಗತ್ಯತೆ ಎಷ್ಟು ಎಂಬುದನ್ನು ಪತ್ತೆ ಮಾಡಿ ಅಂತಹ ಬೆಳೆಗಳಿಗೆ ನಿರ್ಧಿಷ್ಠ ಬಿತ್ತನೆ ಬೀಜ ಮಾರಾಟ ಮಾಡುವ ಯೋಜನೆಗಳ ಜಾರಿಯಾಗಬೇಕು, ಜೊತೆಗೆ ಹವಾಮಾನ ವೈಪರೀತ್ಯದ ಬಗ್ಗೆ ಮುನ್ಸೂಚನೆ ನೀಡಿ ಇಂತಹ ಬೆಳೆಗಳನ್ನು ಬೆಳೆಯದಂತೆ ಎಚ್ಚರಿಸುವ ತಂತ್ರಾಂಶಗಳನ್ನು ಸಹ ಜಾರಿಗೆ ತರುವಂತಾಗಬೇಕು ಈ ಎಲ್ಲಾ ನಿಟ್ಟಿನಲ್ಲಿ ಯುವ ರೈತ ಘಟಕ ಚಿಂತನೆ ಮಾಡುವ ಅಗತ್ಯ ಇದೆ ಎಂದು ಹೇಳಿದರು.


ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಬಿ.ಟಿ.ನೇತ್ರಾವತಿಗೌಡ ಅವರು ಚಳವಳಿಯಲ್ಲಿ ಮಹಿಳೆಯರ ಪಾತ್ರ ಜಿಲ್ಲೆಯಲ್ಲಿ ರೈತ ಚಳವಳಿ ಬಗ್ಗೆ ವಿಚಾರ ಮಂಡನೆ ಮಾಡಿ ರೈತ ಸಂಘಟನೆಗಳ ಹೋರಾಟದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ರೈತ ಮಹಿಳೆಯರನ್ನು ಹೋರಾಟದ ದಾರಿಗೆ ತಂದು ಅವರ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದರು.


ಮುಂಜಾನೆ ಎದ್ದು ದನದ ಕೊಟ್ಟಿಗೆ ಸ್ವಚ್ಚ ಮಾಡುವುದರಿಂದ ಆರಂಭವಾಗುವ ಮಹಿಳೆಯ ಕೃಷಿ ಚಟುವಟಿಕೆ ರಾತ್ರಿ ಮತ್ತೆ ಜಾನುವಾರುಗಳಿಗೆ ಹುಲ್ಲು ಹಾಕುವ ತನಕ ನಡೆಯುತ್ತದೆ. ಪುರುಷ ರೈತರು ಸಂಘಟನೆಗಳಲ್ಲಿ ಭಾಗವಹಿಸುತ್ತಾರೆ ಎಂದರೆ ಯಾವುದೇ ಪ್ರತಿಫಲಾಪೇಕ್ಷೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳಾ ರೈತರು ಕೃಷಿಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾರಣದಿಂದ ರೈತರು ಯಾವುದೇ ಆತಂಕ ಇಲ್ಲದೆ ಹೋರಾಟಗಳಿಗೆ ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಕೃಷಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಮಹಿಳೆಯರು ಸಂಘಟನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿಲ್ಲ. ಆದರೆ ಅವರನ್ನು ಸಂಘಟನೆಗೆ ಕರೆತಂದು ಅವಕಾಶ ನೀಡಿದರೆ ದೊಡ್ಡ ಕ್ರಾಂತಿಗೆ ನಾಂದಿ ಆಗುತ್ತದೆ ಎಂದು ಬಿ.ಟಿ.ನೇತ್ರಾವತಿಗೌಡ ಅಭಿಪ್ರಾಯಿಸಿದರು.


ರೈತ ಸಂಘಟನೆಗಳು ಹೋರಾಟಕ್ಕೆ ಇಳಿಯುವ ಮಹಿಳೆಯರಿಗೆ ಪೂರಕ ಬೆಂಬಲವಾಗಿ ನಿಲ್ಲುತ್ತಾರೆ. ರೈತರು ಹೋರಾಟ ಮಾಡುವ ವೇಳೆ ಅವರಿಗೆ ಬುತ್ತಿ ನೀಡುವ ಮೂಲಕ ಹೋರಾಟಕ್ಕೆ ಹೆಚ್ಚು ಬಲ ತುಂಬುತ್ತಾರೆ. ರೈತಸಂಘಟನೆಗಳ ಹೋರಾಟಕ್ಕೆ ಸಿಗುವ ಜಯದ ಫಲ ಮಹಿಳೆಯರಿಗೆ ಹೆಚ್ಚು ಪಾಲು ಸಿಗುತ್ತದೆ. ಇಂತಹ ಮಹಿಳೆಯರನ್ನು ಹೋರಾಟದ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಸಮಾಜದಲ್ಲಿ ರೈತ ಸಂಘಟನೆಯಲ್ಲಿ ಸಹ ಮಹಿಳೆಯರನ್ನು ಕರೆತರುವ ಇಂತಹ ಶಿಬಿರಗಳು ಹೆಚ್ಚು ಸಹಕಾರಿಯಾಗುತ್ತದೆ ಎಂದು ಹೇಳಿದರು.


ಗೌರವಾಧ್ಯಕ್ಷ ಚಾಮರಸ ಪಾಟೀಲ್ ಮಾತನಾಡಿ, ರೈತ ಸಂಘಟನೆಗೆ ಶಿಸ್ತು ಪ್ರಮುಖವಾಗಿದೆ. ಕೆಲವರು ಸ್ವಾರ್ಥ ಸಾಧನೆಗಾಗಿ ರೈತಸಂಘಕ್ಕೆ ನುಸುಳಿ ಅಶಿಸ್ತು ತಂದಿದ್ದಾರೆ. ಅವರ ಅಧಿಕಾರದ ಲಾಲಸೆಗಾಗಿ, ಹಣದ ದುರಾಸೆಗಾಗಿ, ಚಳುವಳಿಯನ್ನು ಶಿಸ್ತಿನಿಂದ ದೂರ ಮಾಡಿದ್ದಾರೆ. ಆದರೆ  ಶಿಸ್ತು ಉಲ್ಲಂಘನೆ ಮಾಡಿದವರು ಹೆಚ್ಚು ಕಾಲ ಉಳಿದಿಲ್ಲ. ರೈತ ಚಳುವಳಿಯನ್ನು ಒಡೆಯಲು ಪ್ರಯತ್ನ ಪಟ್ಟ ರಾಜಕಾರಣಿಗಳು ಸಹ ಸೋತಿದ್ದಾರೆ. ಶಿಸ್ತುಬದ್ದ ಹೋರಾಟಕ್ಕೆ ಸೋಲಿಲ್ಲವಾಗಿದ್ದು ಈ ನಿಟ್ಟಿನಲ್ಲಿ ನಾವು ಪ್ರಧಾನಿ ಎದುರಾಗಲಿ, ಮುಖ್ಯಮಂತ್ರಿ ಎದುರಾಗಲಿ ಧೈರ್ಯವಾಗಿ ಮಾತನಾಡಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಹೋರಾಟಕ್ಕೆ ಹೆಜ್ಜೆ ಇಡುವ ಯುವ ರೈತರು ಶಿಸ್ತು ಪಾಲನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.


ಹೋರಾಟ ಎಂದರೆ ಅದು ಅಹಿಂಸಾ ಮಾರ್ಗವಾಗಿರಬೇಕು, ಸಾರ್ವಜನಿಕರ ಆಸ್ತಿಪಾಸ್ತಿ ನಾಶ ಮಾಡುವುದು ಹೋರಾಟವಲ್ಲ. ರೈತ ಸಂಘಟನೆ ಹುಟ್ಟಿನಿಂದಲೂ  ಅಹಿಂಸಾತ್ಮಕ ಮಾರ್ಗದಲ್ಲೇ ಚಳುವಳಿ ಮಾಡಿಕೊಂಡು ಬಂದಿದ್ದು ಚಳುವಳಿಯಲ್ಲಿ ೧೦ ಮಂದಿ ಇರಲಿ, ೩ ಲಕ್ಷ ಮಂದಿ ಇರಲಿ ಶಿಸ್ತುಬದ್ದವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ನಿಟ್ಟಿನಲ್ಲಿ ಯುವ ರೈತರು ಒಬ್ಬರಿಗೆ ನ್ಯಾಯ ಕೊಡಿಸುತ್ತೇವೆ ಎನ್ನುವ ನಿಟ್ಟಿನಲ್ಲಿ ಅಹಿಂಸಾ ಮಾರ್ಗವನ್ನು ತುಳಿಯಬಾರದು. ಅದು ರೈತಸಂಘವನ್ನೇ ದೂಷಣೆ ಮಾಡುತ್ತದೆ. ಈ ನಿಟ್ಟಿನಲ್ಲಿ ಯುವ ರೈತರು ಒಳ್ಳೆಯದು ಮಾಡದಿದ್ದರೂ ಸರಿ ಕೆಟ್ಟ ಕೆಲಸಕ್ಕೆ ಕೈಹಾಕಬಾರದು. ನಿಮ್ಮಲ್ಲಿ ಆಲೋಚನೆ ಮಾಡುವ ಶಕ್ತಿ ಇದೆ. ಅದನ್ನು ಸರಿಯಾಗಿ ಉಪಯೋಗ ಮಾಡಿ ಬದ್ದತೆಯಿಂದ ಸಂಘಟನೆ ಮಾಡಲು ಮುಂದಾಗಿ ಎಂದರು.

ನಾವು ಕೃಷಿಗೆ ಬಳಸುವ ಯಂತ್ರೋಪಕರಣಗಳು ಬಿತ್ತನೆಬೀಜ, ಗೊಬ್ಬರ, ಔಷಧಿಗಳನ್ನು ದುಬಾರಿ ಬೆಲೆ ನೀಡಿ ಕೊಂಡುಕೊಳ್ಳುತ್ತೇವೆ. ಜೊತೆಗೆ ಮೂರ್‍ನಾಲ್ಕು ತಿಂಗಳು ಕಷ್ಟದಿಂದ ಬೆವರು ಸುರಿಸಿ ಬೆಳೆ ತೆಗೆಯುತ್ತೇವೆ. ಆದರೆ ನಮ್ಮ ಬೆಳೆಗೆ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಯೂ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಗಳು ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಲೆ ನಿಗದಿ ಮಾಡಿ ಆ ಬೆಲೆಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಬೆಳೆಯನ್ನು ಮಾರಾಟ ಮಾಡದಂತೆ ಕಾನೂನು ಜಾರಿಗೆ ತರುವ ಕೆಲಸ ಆಗಬೇಕಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಯುವ ರೈತರು ಶಿಸ್ತುಬದ್ದ ಸಂಘಟನೆಯ ಮೂಲಕ ಸರ್ಕಾರವನ್ನು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಬೆಂಗಳೂರು ವಿಭಾಗೀಯ ಉಪಾಧ್ಯಕ್ಷರಾದ ಕೆ. ಮಲ್ಲಯ್ಯ ಕಾರ್ಯಕ್ರಮದ ಸ್ವಾಗತ ಮಾಡಿದರು.

ಯುವ ಘಟಕದ ರಾಜ್ಯ ಸಂಚಾಲಕ ಮುನಿರಾಜು ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ರವಿಕಿರಣ್ ಪೊಣಚ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಂಜುಳ ಎಸ್ ಅಕ್ಕಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಿಳಾ ಘಟಕ, ನೇತ್ರಾವತಿ ಕಾರ್ಯದರ್ಶಿ ಮಹಿಳಾ ಘಟಕ, ರತ್ನಮ್ಮ ಅಧ್ಯಕ್ಷರು ರಾಮನಗರ ಜಿಲ್ಲೆ, ಶಿಲ್ಪ ಪ್ರಧಾನ ಕಾರ್ಯದರ್ಶಿ ರಾಮನಗರ ಜಿಲ್ಲೆ, ಸಂತೋಷ್ ರಾಜ್ಯ ಸಂಚಾಲಕರು ಯುವ ಘಟಕ, ವಿನೋದ್ ರಾಜ್ಯ ಸಂಚಾಲಕರು ಯುವ ಘಟಕ, ಮಂಜುನಾಥ ಕೋಣನಹಳ್ಳಿ ರಾಜ್ಯ ಸಂಚಾಲಕರು ಯುವ ಘಟಕ,  ಸಿದ್ದನಗೌಡ ಪಾಟೀಲ್ ರಾಜ್ಯ ಸಂಚಾಲಕರು ಯುವ ಘಟಕ,  ರಾಮೇಗೌಡ ತಾ|| ಅಧ್ಯಕ್ಷರು, ಕೋದಂಡರಾಮು ತಾ|| ಕಾರ್ಯದರ್ಶಿ, ತಿಮ್ಮೇಗೌಡ ಜಿಲ್ಲಾಧ್ಯಕ್ಷ, ಕೆ.ಎನ್. ರಾಜು ಜಿಲ್ಲಾ ಉಪಾಧ್ಯಕ್ಷ, ವಿಜಿ,  ಹೆಚ್.ಸಿ. ಕೃಷ್ಣಯ್ಯ, ಜೈಕೃಷ್ಣ ತೌಟನಹಳ್ಳಿ, ಕೆ.ಟಿ. ಗುರುಲಿಂಗಯ್ಯ ಕನ್ನಸಂದ್ರ, ಬೋರೇಗೌಡ ದಶವಾರ, ರಾಜು ಮಾಗನೂರು, ಶಂಕರೇಗೌಡ, ನಾರಾಯಣ ಮಂಕುಂದ, ಕುಳ್ಳಯ್ಯ ಬೇವೂರು, ಪಟೇಲ್ ರಾಜು ಕೆಲಗೆರೆ, ವಿಶ್ವನಾಥ ಮಂಗಳವಾರಪೇಟೆ, ರಾಮಕೃಷ್ಣ ಬೈರಾಪಟ್ಟಣ, ಚನ್ನಂಕಪ್ಪ ಹುಲುವಾಡಿ, ವೆಂಕಟೇಶ್, ಸುಣ್ಣಘಟ್ಟ, ರಮೇಶ್ ಹರೂರು, ಧನಂಜಯ ಆಣಿಗೆರೆ, ರಾಜ್ಯ ಪದಾಧಿಕಾರಿಗಳು/ಮಹಿಳಾ ಮತ್ತು ಯುವ ಘಟಕದ ರಾಜ್ಯ ಪದಾಧಿಕಾರಿಗಳು,  ಮುನಿರಾಜು ರಾಜ್ಯ ಸಂಚಾಲಕರು ಯುವ ಘಟಕ, ಶ್ರೀಮತಿ ರಮ್ಯ ರಾಮಣ್ಣ ರಾಜ್ಯ ಕಾರ್ಯದರ್ಶಿ ಮಹಿಳಾಘಟಕ, ಆದಿತ್ಯ ನಾರಾಯಣ ಕೊಲ್ಲಾಜೆ ರಾಜ್ಯ ಸಂಚಾಲಕರು ಯುವ ಘಟಕ, ಜೆ.ಎಂ. ವೀರಸಂಗಯ್ಯ ಕಾರ್ಯಾಧ್ಯಕ್ಷರು, ರಾಜ್ಯ ರೈತ ಸಂಘ, ಮುತ್ತುಲಕ್ಷ್ಮಿ, ಸೋರೇಕಾಯಿದೊಡ್ಡಿ ಮಂಗಳಮ್ಮ, ಜಯಶೀಲಮ್ಮ ಆಣಿಗೆರೆ, ಶೋಭಾ ಆಣಿಗೆರೆ, ಸುಧಾಮಣಿ ಹರೂರು, ರಮ್ಯ, ಶಿಲ್ಪ ಹರೂರು, ತಾಯಮ್ಮ, ಶಾರದಮ್ಮ ರಾಜಣ್ಣ, ಪುಟ್ಟಪ್ಪನದೊಡ್ಡಿ, ಸುಧಾ ಮಂಗಳವಾರಪೇಟೆ, ರವಿ ಮಂಗಳವಾರಪೇಟೆ, ಬೈರಾಪಟ್ಟಣದ ಪುಟ್ಟಲಿಂಗಮ್ಮ, ಚಿಕ್ಕನದೊಡ್ಡಿ ಗೀತಾ ಇತರರು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑