Tel: 7676775624 | Mail: info@yellowandred.in

Language: EN KAN

    Follow us :


ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ

Posted Date: 29 Feb, 2020

ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ

ಚನ್ನಪಟ್ಟಣ: ನೂತನ ತಂತ್ರಜ್ಞಾನ ಎನ್ನುವುದು ಉಳ್ಳವರ, ವಿದೇಶಿಗರ ಪಾಲಾಗದೇ ದೇಶಕ್ಕೆ ಅನ್ನ ನೀಡುವ ದೇಶದ ಬೆನ್ನೆಲುಬು ಎಂದೆನಿಸಿಕೊಂಡ ರೈತಾಪಿ ವರ್ಗಕ್ಕೆ ಅನುಕೂಲಕರವಾಗಿರಬೇಕೆಂದು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ ಟಿ ಜಯಮುದ್ದಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ನಗರದ ಒಕ್ಕಲಿಗರ ಸಾರ್ವಜನಿಕ ಸಂಸ್ಥೆಯ ಐಟಿಐ ಕಾಲೇಜಿನ ಮಕ್ಕಳು ತಯಾರಿಸಿದ ಉಪಕರಣಗಳನ್ನು ವೀಕ್ಷಿಸಿ ಮಾತನಾಡಿದರು.


ಇಂದಿನ ವಿದ್ಯಾರ್ಥಿಗಳು ಕೇವಲ ಮೊಬೈಲ್ ಮತ್ತು ಟಿವಿ ಗೆ ಅಂಟಿಕೊಳ್ಳದೆ ತಾವು ಕಲಿತ ವಿದ್ಯೆಯನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯಬೇಕು, ಐಟಿಐ, ಡಿಪ್ಲೊಮಾ ಮತ್ತು ಇಂಜಿನಿಯರ್ ವಿದ್ಯಾರ್ಥಿಗಳು ಸಾಪ್ಟ್ ವೇರ್ ಗೆ ಸೀಮಿತವಾಗದೆ ರೈತ ಮತ್ತು ಸೈನಿಕರಿಗೆ ಬೇಕಾದ ಸರಳ ಉಪಕರಣಗಳನ್ನು ಸಂಶೋಧಿಸಿ ನೀಡಿದರೆ ಅದು ದೇಶ ಸೇವೆಯಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.


ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ ಮಲ್ಲಯ್ಯ ನವರು ಮಾತನಾಡಿ ಐಟಿಐ ಕಾಲೇಜಿನ ಮಕ್ಕಳು ಇಂದು ರೈತನಿಗೆ ಬೇಕಾದ ಕೆಲ ಉಪಕರಣಗಳನ್ನು ಸಂಶೋಧಿಸಿರುವುದು ಒಳ್ಳೆಯ ಬೆಳವಣಿಗೆ ಇನ್ನೂ ಉನ್ನತ ಮಟ್ಟದ ಉಪಕರಣವನ್ನು ಕಡಿಮೆ ದರ ಹಾಗೂ ಸರಳವಾಗಿ ಉಪಯೋಗಿಸುವಂತಹ ಉಪಕರಣಗಳನ್ನು ಸಂಶೋಧಿಸಲು ಕಾಲೇಜಿನ ಶಿಕ್ಷಕರು ತರಬೇತಿ ನೀಡಬೇಕು ಎಂದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಂ ಲಿಂ ನಾಗರಾಜು ಮಾತನಾಡಿ ಮಕ್ಕಳು ತಯಾರಿಸಿರುವ ಉಪಕರಣಗಳನ್ನು ನೋಡುತ್ತಿದ್ದರೆ ತುಂಬಾ ಸಂತೋಷವಾಗುತ್ತದೆ. ನಮ್ಮ ಕಾಲೇಜಿನ ಮಕ್ಕಳು ಇತರ ಕಾಲೇಜಿನ ಮಕ್ಕಳಿಗೆ ಮಾದರಿಯಾಗಿ ಬೆಳೆಯಬೇಕು. ಇವರಿಗೆ ಅನುಕೂಲವಾಗುವಂತ ಮತ್ತು ಪೂರಕವಾದ ವಾತಾವರಣವನ್ನು ಶಾಲೆಯ ಆಡಳಿತ ಮಂಡಳಿ ನೀಡಿದರೆ ರಾಜ್ಯ ಮಟ್ಟದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿ ನಮ್ಮ ಕಾಲೇಜಿಗೆ ಕೀರ್ತಿ ತರಬಲ್ಲರು ಎಂದರು.


ಕಾಲೇಜಿನ ಮಕ್ಕಳು ರೈತರಿಗೆ ಅನುಕೂಲವಾಗುವಂತ ಮತ್ತು ಇನ್ನಿತರ ಬಹುಪಯೋಗಿ ಉಪಕರಣಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು. ಮಾರ್ಕಿಂಗ್ ಶೀಟ್ ಕಟ್ಟರ್, ಪೊಟಾಟೋ ರಿಮೂವರ್, ಸಿಂಪಲ್ ಕಲ್ಟಿವೇಟರ್, ಪ್ಯಾಡಿ ಕಟ್ಟರ್, ಗ್ರಾಸ್ ಕ್ಲೀನರ್, ಆಟೋಮ್ಯಾಟಿಕ್ ರೈಲ್ವೇ ಗೇಟ್, ವಾಹನಗಳಿಗೆ ಅಡ್ಡಬಂದಾಗ ಅಪಘಾತಕ್ಕೆ ಮುಂಚೆಯೇ ನಿಲ್ಲುವ ಸಾಧನ ಸೇರಿದಂತೆ ಮೂವತ್ತೆಂಟಕ್ಕೂ ಹೆಚ್ಚು ಸಾಧನಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಅಯೂಬ್  ಖಾನ್, ಕಾಲೇಜಿನ ಆಡಳಿತ ಮಂಡಳಿಯ ಎಸ್ ರಾಜಣ್ಣ, ಅನಂತಮೂರ್ತಿ, ವಿಜಯ್ ರಾಂಪುರ, ಕೆಲಗೆರೆ ಪಟೇಲ್ ರಾಜು, ರಾಜು ಕನ್ನಸಂದ್ರ, ರೈತ ಮುಖಂಡ ರಾಜು, ಶಂಭೂಗೌಡ, ಕಾಲೇಜಿನ ಪ್ರಾಧ್ಯಾಪಕರಾದ ಮರಿದೇವರು, ಮಹದೇವ, ಸಿ ಬಿ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೀಲರ್ ಗಳ ವಿರುದ್ಧ ಹೂಂಕರಿಸಿದ ಪೋಲೀಸ್ ಅಧಿಕಾರಿ ಓಂಪ್ರಕಾಶ್
ರೀಲರ್ ಗಳ ವಿರುದ್ಧ ಹೂಂಕರಿಸಿದ ಪೋಲೀಸ್ ಅಧಿಕಾರಿ ಓಂಪ್ರಕಾಶ್

ಚನ್ನಪಟ್ಟಣ:ಏ/೦೭/೨೦/ಮಂಗಳವಾರ. ನಿಮ್ಮ ಅಭಿಪ್ರಾಯ ಏನಿದ್ದರೂ ಹರಾಜು ಆದ ನಂತರ ಮಾಡಿ, ನೀವು ಬರೋವರೆಗೂ‌ ಹರಾಜು ಆಗಲ್ಲ ಅಂದರೆ ಏನರ್ಥ, ರೈತರ ಕಷ್

ಇಂದಿನಿಂದ ವಹಿವಾಟು ಪುನಾರಾರಂಭಿಸಿದ ಏಷ್ಯಾದ ಬಹುದೊಡ್ಡ ರೇಷ್ಮೆ ಮಾರುಕಟ್ಟೆ
ಇಂದಿನಿಂದ ವಹಿವಾಟು ಪುನಾರಾರಂಭಿಸಿದ ಏಷ್ಯಾದ ಬಹುದೊಡ್ಡ ರೇಷ್ಮೆ ಮಾರುಕಟ್ಟೆ

ರಾಮನಗರ:ಏ/೦೨/೨೦/ಗುರುವಾರ. ಕೊರೊನಾ ವೈರಸ್ ನಿಂದ ಇಡೀ ಕರ್ನಾಟಕವೇ ಲಾಕ್ ಡೌನ್ ಆದ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸದುದ್ದೇಶದಿಂದ ಏಷ್ಯಾ

ರೈತರ ಜಮೀನಿಗೆ ತೆರಳಿ ಕೃಷಿ ಉತ್ಪನ್ನ ಖರೀದಿಸಿ ಕುಮಾರಸ್ವಾಮಿ
ರೈತರ ಜಮೀನಿಗೆ ತೆರಳಿ ಕೃಷಿ ಉತ್ಪನ್ನ ಖರೀದಿಸಿ ಕುಮಾರಸ್ವಾಮಿ

ರಾಮನಗರ:ಏ/೦೧/೨೦. ಅಧಿಕಾರಿಗಳು ನೇರವಾಗಿ ರೈತರ ಜಮೀನಿಗೆ ಹೋಗಿ‌ ಅವರು ಬೆಳೆದಿರುವ ಬೆಳೆಯನ್ನು ಖರೀದಿಸಿ ಎಂದು ಚನ್ನಪಟ್ಟಣ ಕ್ಷೇತ್ರದ ಶಾಸಕ, ಮಾ

ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ
ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ರಾಜ್ಯ ಸರ್ಕಾರವು ಕೃಷಿ ಭೂಮಿಗೆ ಸಂಬಂಧಿಸಿದ ಸೆಕ್ಷನ್ ೭೯ ಎ ಮತ್ತು ಬಿ ಯನ್ನು ರದ್ದು ಪಡಿಸಿ ಅನ್ನದಾತನ ಬೆನ್ನಿಗೆ ಬರೆ ಎಳೆದು ಬಲಾ

ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ
ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ

ಚನ್ನಪಟ್ಟಣ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಗ್ರಾಮ ಲೆಕ್ಕಿಗ, ಕಂದಾಯ

ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ
ವಿಶ್ವದಲ್ಲಿ ರೈತನೋರ್ವನೇ ಶ್ರೀಮಂತ, ನಾನು ಬಡ ರೈತ ಎಂಬ ಕೀಳರಿಮೆಯಿಂದ ಹೊರಬನ್ನಿ ಡಾ ವೀರೇಂದ್ರ ಹೆಗ್ಗಡೆ

ಚನ್ನಪಟ್ಟಣ: ನಗರದ ಹೊರವಲಯದಲ್ಲಿರುವ ದೊಡ್ಡಮಳೂರು ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದ ಬಳಿಯ ಬಯಲು ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಡಿಯಲ್ಲಿ ಒಂ

ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ
ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ

ಚನ್ನಪಟ್ಟಣ: ನೂತನ ತಂತ್ರಜ್ಞಾನ ಎನ್ನುವುದು ಉಳ್ಳವರ, ವಿದೇಶಿಗರ ಪಾಲಾಗದೇ ದೇಶಕ್ಕೆ ಅನ್ನ ನೀಡುವ ದೇಶದ ಬೆನ್ನೆಲುಬು ಎಂದೆನಿಸಿಕೊಂಡ ರೈತಾಪಿ ವರ

ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ
ರೈತರ ಬೆಲೆಬಾಳುವ ಭೂಮಿ ಕಸಿಯುವ ತಂತ್ರ

ಚನ್ನಪಟ್ಟಣ:ಫೆ/೧೩/೨೦/ಗುರುವಾರ.


ರೈತರ ರಕ್ಷಣೆಯನ್ನು ಕಾಯುವ ಬದಲು ಅವರ ಭಕ್ಷಣೆಗಾಗಿಯೇ ನಿಂತಿರುವ ಬೀಜಕಾಯಿದೆ, ಗುತ್ತಿಗೆ ಕೃಷಿ ಹೆಸರಿನಲ್ಲಿ ರೈತರ ಒಕ್ಕಲೆಬ್ಬಿಸುವ ಹುನ್ನಾರ, ರಾಮನಗರ ಜಿಲ್ಲೆ ನುಂಗಿ ನೀರು ಕುಡಿದು ತನ

ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ
ರೈತ ಸಂಘಟನೆಗಳು ಒಗ್ಗೂಡಬೇಕು, ಯುವಕರು ಮುಂದಾಳತ್ವ ವಹಿಸಬೇಕು ಸುನೀತಾ ಪುಟ್ಟಣ್ಣಯ್ಯ

ಚನ್ನಪಟ್ಟಣ.ಫೆ.೧೩:


ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಲ್ಲಿ ಒಂದೇ ಇರಬೇಕು, ಈಗಿರುವ ಹಲವು ಬಣಗಳು ಒಗ್ಗೂಡಬೇಕು. ವಿಚಾರ ವಿನಿಮಯವಾಗಬೇಕು, ಮೂಲ ಉದ್ದೇಶ ಗಳನ್ನು ಅರಿತು ಯುವಕ ರನ್ನು ಸಂಘಟಿಸಿ ರೈತ ಸಂಘಟನೆಯನ್ನು ಬಲಪಡಿ ಸ

ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?
ಕರ್ನಾಟಕ ರಾಜ್ಯ ರೈತ ಸಂಘ ಸಂಘ(ಗ)ಗಳಾಗಿದ್ದೆ ಸಾಧನೆಯೇ!?

ಎಂಭತ್ತರ ದಶಕದ ಕರ್ನಾಟಕ ರಾಜ್ಯ ರೈತ ಸಂಘ ೨೦೧೦ ನೆಯ ಇಸವಿ ಹೊತ್ತಿಗೆ ಸಿಟಿಲೊಡೆದು, ೨೦೨೦ ನೆಯ ಇಸವಿಯ ಹೊತ್ತಿಗೆ ರೆಂಬೆಕೊಂಬೆಗಳಾಗಿ ಕೆಲ ಮುಂದಾಳುಗಳು ನಗರ ಸೇರಿ ವಿಧಾನಸೌಧದ ಒಳಹೊಕ್ಕು ತಮ್ಮ ಬೇಳೆ ಬೇಯ

Top Stories »  


Top ↑