Tel: 7676775624 | Mail: info@yellowandred.in

Language: EN KAN

    Follow us :


ಯೂರಿಯಾ, ಅಗತ್ಯಕ್ಕಿಂತಲೂ ಹೆಚ್ಚಿನ ಪೂರೈಕೆಯಾಗಿದ್ದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ರೈತ. ಕಾರಣವೇನು ?

Posted date: 26 Sep, 2020

Powered by:     Yellow and Red

ಯೂರಿಯಾ, ಅಗತ್ಯಕ್ಕಿಂತಲೂ ಹೆಚ್ಚಿನ ಪೂರೈಕೆಯಾಗಿದ್ದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ರೈತ. ಕಾರಣವೇನು ?

ಚನ್ನಪಟ್ಟಣ: ಸೆ/26/20/ಶನಿವಾರ. ತಾಲ್ಲೂಕಿನಲ್ಲಿ ಮಳೆಗಾಲದ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿಗೆ, ಈಗಾಗಲೇ ಬಿತ್ತನೆ ಮಾಡಿರುವ ತೋಟಗಾರಿಕೆ ಮತ್ತು ಕೃಷಿ ಎರಡಕ್ಕೂ ಸಂಬಂಧಿಸಿದಂತೆ 450 ರಿಂದ 500 ಮೆಟ್ರಿಕ್ ಯೂರಿಯಾ ಸಾಕಾಗುತ್ತದೆ ಎಂದು ಕೃಷಿ ಇಲಾಖೆಯ ಅಂಕಿಅಂಶಗಳು ತಿಳಿಸುತ್ತವೆ.

ಈಗಾಗಲೇ ತಾಲ್ಲೂಕಿಗೆ 910 ಮೆಟ್ರಿಕ್ ಟನ್ ಯೂರಿಯಾ ಬಂದಿದ್ದರು ಸಹ ರೈತರು ಸರತಿ ಸಾಲಿನಲ್ಲಿ ನಿಲ್ಲುವುದು ಮಾತ್ರ ತಪ್ಪದಿರುವುದು ಯಾಕೆ ಎಂಬುದು ಗೊಂದಲವನ್ನು ಉಂಟುಮಾಡುತ್ತಿದೆ.


ಇಡೀ ರಾಮನಗರ ಜಿಲ್ಲೆಯಾದ್ಯಂತ ನಾಲ್ಕು ತಾಲ್ಲೂಕುಗಳಲ್ಲಿ ಚನ್ನಪಟ್ಟಣ ತಾಲೂಕಿಗೆ ಪೂರೈಕೆಯಾಗಿರುವಷ್ಟು ರಸಗೊಬ್ಬರ ಉಳಿದ ಮೂರು ತಾಲೂಕುಗಳಿಗೆ ಆಗಿಲ್ಲ. ತಾಲ್ಲೂಕಿನಲ್ಲಿ ಹನ್ನೆರಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಇದ್ದು, ಮೂವತ್ತು ಖಾಸಗಿ ರಸಗೊಬ್ಬರಗಳ ಅಂಗಡಿಗಳಿವೆ. ಇವುಗಳಲ್ಲಿ ವಿರೂಪಾಕ್ಷಿಪುರ ಹೋಬಳಿಯಲ್ಲೆ ಹೆಚ್ಚಿದ್ದು, ಪ್ರತಿ ಬಾರಿ ರಸಗೊಬ್ಬರ ಬಂದಾಗಲೂ ರೈತರು ಗಂಟೆಗಟ್ಟಲೆ ನಿಂತು ರಸಗೊಬ್ಬರ ಖರೀದಿಸುತ್ತಿರುವುದು ಕಂಡುಬರುತ್ತಿದೆ.


ಕೆಲ ಖಾಸಗಿ ರಸಗೊಬ್ಬರಗಳ ಅಂಗಡಿಗಳ ಮಾಲೀಕರು ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಈಗಾಗಲೇ ನಾಲ್ಕು ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ರಸಗೊಬ್ಬರಗಳ ಖರೀದಿ ಸಮಯದಲ್ಲಿ ಕೃಷಿ ಇಲಾಖಾಧಿಕಾರಿಗಳು ಪೋಲೀಸರ ಸಹಾಯ ಪಡೆಯುತ್ತಿರುವುದು ರಸಗೊಬ್ಬರಗಳ ಅವಶ್ಯಕತೆ ಇನ್ನೂ ಇದೆ ಎಂಬುದನ್ನು ತೋರಿಸುತ್ತದೆ. ಕೊರೊನಾ ಸಮಯವಾದ್ದರಿಂದ ಶೇಕಡಾ 5 ರಷ್ಟು ವ್ಯವಸಾಯ ವೃದ್ದಿಯಾಗಿದೆ ಎಂಬುದು ಸತ್ಯವಾದರೂ ಶೇಕಡಾ 100 ರಷ್ಟು ರಸಗೊಬ್ಬರ ಬೇಡಿಕೆ ಏಕೆ ?


*ಆಧಾರ್ ಕಾರ್ಡ್ ಲಿಂಕ್ ಮಾಡಿರುವುದೇ ಸಮಸ್ಯೆಯೇ ?*

ರಸಗೊಬ್ಬರ ಖರೀದಿಗೆ ಆಧಾರ್ ಲಿಂಕ್ ಮಾಡಿರುವುದೇ ಸಮಸ್ಯೆ ಉದ್ಭವವಾಗಲು ಕಾರಣ ಎನ್ನುತ್ತವೆ ಬಲ್ಲ ಮೂಲಗಳು. ಅದೆಷ್ಟೋ ಮಂದಿಗೆ ಕೃಷಿ ಭೂಮಿಯೇ ಇಲ್ಲ, ಕೆಲವರಿಗೆ ಇದ್ದರೂ ವ್ಯವಸಾಯ ಮಾಡುತ್ತಿಲ್ಲ. ಮತ್ತೆ ಕೆಲವರಿಗೆ ಒಂದು ಅಥವಾ ಎರಡು ಚೀಲ ರಸಗೊಬ್ಬರ ಸಾಕಾಗುತ್ತದೆಯಾದರೂ ಮನೆಯಲ್ಲಿರುವ ಅಷ್ಟೂ ಮಂದಿಯ ಆಧಾರ್ ಕಾರ್ಡ್ ತಂದು ರಸಗೊಬ್ಬರ ಖರೀದಿಸುತ್ತಿದ್ದಾರೆ. ಆಧಾರ್ ಕಾರ್ಡ್ ಮೂಲಕ ಅವಶ್ಯಕತೆ ಇಲ್ಲದಿರುವವರು ರಸಗೊಬ್ಬರ ಖರೀದಿಸಿತ್ತಿರುವುದು ಏಕೆ ?.


*ಪಹಣಿ ಲಿಂಕ್ ಮಾಡಿದರೆ ಸಮಸ್ಯೆ ಉದ್ಭವ ಕಡಿಮೆ*

ಆಧಾರ್ ಕಾರ್ಡ್ ಬದಲಿಗೆ ಪಹಣಿ ಲಿಂಕ್ ಮಾಡಿದರೆ ಎಲ್ಲರೂ ಖರೀದಿಸಲು ಸಾಧ್ಯವಾಗುವುದಿಲ್ಲ ಎಂಬುದು ಅಧಿಕಾರಿಗಳ ಯೋಚನೆಯಾಗಿದೆ. ಆದರೆ ಹೆಚ್ಚು ಜಮೀನು ಉಳ್ಳವರಿಗೆ ಒಂದೇ ಪಹಣಿಯಲ್ಲಿ ಅವಶ್ಯಕತೆ ಇರುವಷ್ಟು ರಸಗೊಬ್ಬರ ಸಿಗುವುದೇ ಎಂಬುದು ಗೊಂದಲವಾಗಿದೆ. ಇದು ರಾಜ್ಯಮಟ್ಟದ ಸಮಸ್ಯೆಯಾಗಿರುವುದರಿಂದ ತಾಲ್ಲೂಕು ಒಂದರಲ್ಲೇ ಬಗೆಹರಿಯುವಂತಹದಲ್ಲ. ಆದರೂ ಯಥೇಚ್ಛ ರಸಗೊಬ್ಬರ ಖರೀದಿಯ ಹಿಂದಿನ ಸತ್ಯ ತಿಳಿಸಬೇಕಾದ ಹೊಣೆ ಕೃಷಿ ಇಲಾಖೆಯ ಮೇಲಿದೆ.


*ಖಾಸಗಿ ಅಂಗಡಿ ಮಾಲೀಕರ ಕೈವಾಡವೇ ? ಅಥವಾ ರೈತರ ಮುಂದಾಲೋಚನೆಯೇ ?*

ಈ ತಿಂಗಳಲ್ಲಿ 450 ರಿಂದ 500 ಮೆಟ್ರಿಕ್ ಟನ್ ರಸಗೊಬ್ಬರ ಸಾಕಾಗಿದ್ದರೂ 910 ಮೆಟ್ರಿಕ್ ಗೊಬ್ಬರ ಬಂದಿದ್ದರೂ, ಇನ್ನೂ ಬೇಡಿಕೆ ಇದೆ ಎನ್ನುವುದಾದರೆ ಇದರಲ್ಲಿ ಖಾಸಗಿ ರಸಗೊಬ್ಬರ ಅಂಗಡಿಗಳ ಪಾತ್ರವಿದೆಯೆ ? ಅಥವಾ ಮುಂದೆ ಸಿಗದೇ ಹೋಗಬಹುದು ಎಂಬ ಮುಂದಾಲೋಚನೆಯಿಂದ ರೈತನೇ ಶೇಖರಿಸಿ ಇಡುತ್ತಿದ್ದಾನೆಯೇ ? ಇಲ್ಲಿ ಆಧಾರ್ ಕಾರ್ಡ್ ಲಿಂಕ್ ದುರುಪಯೋಗವಾಗುತ್ತಿದೆಯೇ ಎಂಬ ಮಾತಿಗೆ ಕೃಷಿ ಇಲಾಖೆ ಉತ್ತರ ನೀಡಬೇಕಾಗಿದೆ.


ಈ ತಿಂಗಳಿಗೆ‌ ಬೇಕಾದ ರಸಗೊಬ್ಬರ ಕ್ಕಿಂತ ಎರಡು ಪಟ್ಟು ರಸಗೊಬ್ಬರ ಪೂರೈಕೆಯಾಗಿದ್ದರೂ ಬೇಡಿಕೆ ಕುಂದಿಲ್ಲ. ಇಲ್ಲಿ ಆಧಾರ್ ಲಿಂಕ್ ಬದಲಿಗೆ ಪಹಣಿ ಲಿಂಕ್ ಮಾಡಿದರೆ ಸಣ್ಣ ರೈತರಿಗೆ ಸಕಾಲದಲ್ಲಿ ಸಮರ್ಪಕವಾಗಿ ಗೊಬ್ಬರ ಪೂರೈಕೆ ಸಾಧ್ಯ. ಆದರೆ ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ. ಎರಡು ಪಟ್ಟು ಗೊಬ್ಬರ ಪೂರೈಕೆಯಾಗಿದ್ದರೂ ಇನ್ನೂ ಬೇಡಿಕೆ ಇರುವುದು ಆಶ್ಚರ್ಯ ಉಂಟುಮಾಢಿದೆ. ಇದರ ಹಿನ್ನೆಲೆ ತಿಳಿಯಲು ಪ್ರಯತ್ನಿಸುತ್ತೇವೆ.

*ಅಪರ್ಣಾ. ಕೃಷಿ ಸಹಾಯಕ ನಿರ್ದೇಶಕರು*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑