Tel: 7676775624 | Mail: info@yellowandred.in

Language: EN KAN

    Follow us :


ಈ ದೇಶದ ಒಡೆಯ ರೈತನೇ ವಿನಹ ರಾಜಕಾರಣಿಗಳಲ್ಲಾ. ಚೀಲೂರು ಶ್ರೀನಿವಾಸ

Posted date: 31 Jan, 2022

Powered by:     Yellow and Red

ಈ ದೇಶದ ಒಡೆಯ ರೈತನೇ ವಿನಹ ರಾಜಕಾರಣಿಗಳಲ್ಲಾ. ಚೀಲೂರು ಶ್ರೀನಿವಾಸ

ದೇಶದ ಒಡೆಯ ರೈತನೇ ಹೊರತು ಅಧಿಕಾರಿಯಾಗಲಿ, ರಾಜಕಾರಣಿಯಾಗಲಿ ಅಲ್ಲಾ .

ಸಣ್ಣಪುಟ್ಟ ಜಮೀನ್ದಾರರು ಸಹ ಒಡೆಯರು, ಒಬ್ಬೊಬ್ಬ ರೈತನೂ ಸಹ ಹಲವಾರು ಮಂದಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾನೆ. ಅವನಿಲ್ಲದಿದ್ದರೆ ದೇಶದ ಉಳಿಗಾಲವಿಲ್ಲ ಎಂದು

ಕನಕಪುರ ತಾಲೂಕಿನ ಹಿರಿಯ ರೈತ ಮುಖಂಡ ಚೀಲೂರು ಶ್ರೀನಿವಾಸ ತಿಳಿಸಿದರು. ಅವರು ತಾಲ್ಲೂಕಿನ ಕೋಟಮಾರನಹಳ್ಳಿ ಗ್ರಾಮದಲ್ಲಿ 'ಸಮಾನ ಮನಸ್ಕರ ಸಹಭಾಗಿತ್ವ'ದ ರೈತಸಂಘದ ವತಿಯಿಂದ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಅಧಿಕಾರಿಗಳಲ್ಲಿ ಒಗ್ಗಟ್ಟಿದೆ, ರಾಜಕಾರಣಿಗಳು ಸಹ ಮೇಲ್ನೋಟಕ್ಕೆ ಕಿತ್ತಾಡಿದರೂ ಅವರಲ್ಲಿ ಒಗ್ಗಟ್ಟಿದೆ. ಮನುಷ್ಯ ಪ್ರಾಣಿ ಹೊರತುಪಡಿಸಿ ಮಿಕ್ಕೆಲ್ಲಾ ಪ್ರಾಣಿಗಳಲ್ಲೂ ಒಗ್ಗಟ್ಟಿದೆ. ಅಧಿಕಾರ ಮತ್ತು ಹಣ ಬರುವ ಕಡೆಯೂ ಸಹ ಒಗ್ಗಟ್ಟಿದೆ. ದೇಶ ಉಳಿಯಬೇಕಾದರೆ ರೈತರ ಒಗ್ಗಟ್ಟು ಬಹಳ ಮುಖ್ಯ. ಹಾಗಾಗಿ ನಾವೆಲ್ಲರೂ ಕಾರಣ ಹೇಳದೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತಿಳಿಯಬೇಕು ಎಂದರು.


ವಿಶೇಷ ಆಹ್ವಾನಿತರಾಗಿ ಮಾತನಾಡಿದ ಎಪಿಎಂಸಿ ಯ ನಿವೃತ್ತ ಸಿಇಓ ಪಿ ಸ್ವಾಮಿ ಯವರು, ಆಧುನಿಕತೆ ಮುಂದುವರೆದಂತೆಲ್ಲಾ ವ್ಯವಸಾಯ ಹಿಂದುಳಿಯುತ್ತಿದೆ. ಪ್ರಪಂಚದಲ್ಲೇ ಅತಿ ಹೆಚ್ಚು ಜಾನುವಾರುಗಳನ್ನು ಹೊಂದಿದ ದೇಶ ನಮ್ಮದಾಗಿದ್ದು, ಇತ್ತೀಚೆಗೆ ಕಡಿಮೆಯಾಗುತ್ತಿವೆ. ಹಸು, ಎಮ್ಮೆ, ಮೇಕೆ, ಕುರಿ ಮತ್ತು ಕೋಳಿಗಳು ಇದ್ದರೆ ಮಾತ್ರ ಆತ ರೈತ. ರೈತನಿಗಾಗಿ ಇಂದು ಹಲವಾರು ಯೋಜನೆಗಳಿದ್ದು, ಅವುಗಳು ರೈತನಿಗೆ ಸೇರುತ್ತಿಲ್ಲಾ, ನೀವು ಬೆಳೆದ ಅನೇಕ ಬೆಳೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ಇದೆ. ಭೈರಾಪಟ್ಟಣ ಗ್ರಾಮದ ಬಳಿ ಸಂಸ್ಕರಣಾ ಘಟಕ ಶೀಘ್ರದಲ್ಲೇ ಆರಂಭವಾಗಲಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಇಲಾಖೆಗೆ ಸಂಬಂಧಿಸಿದ ಯೋಜನೆಗಳನ್ನು ರೈತರಿಗೆ ನಾವು ತಲುಪಿಸುವ ಮೂಲಕ ನಾವು ನಿಮ್ಮ ಜೊತೆ ಇರುತ್ತೇವೆ ಎಂದರು.


ಹಿರಿಯ ರೈತ ಮುಖಂಡ ಹಾಗೂ ಮುಖ್ಯಸ್ಥ ಸಿ ಪುಟ್ಟಸ್ವಾಮಿ ಯವರು ಮಾತನಾಡಿ, ನಮ್ಮ ಆಯುಷ್ಯದಲ್ಲಿ ಅರ್ಧ ಆಯಸ್ಸನ್ನು ನಿದ್ರೆ ಮತ್ತು ಆಲಸ್ಯದಲ್ಲೇ ಕಳೆದು ಬಿಟ್ಟಿದ್ದೇವೆ. ಉಳಿದ ಆಯಸ್ಸು ಬಾಲ್ಯ, ವಿದ್ಯಾಭ್ಯಾಸ, ತುಂಟತನ, ಕೆಲಸ ಮತ್ತು ಸಂಸಾರದಲ್ಲಿ ಕಳೆದುಕೊಂಡಿದ್ದೇವೆ. ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನುತಿಳಿದುಕೊಳ್ಳಬೇಕು. ಕೊಡುಗೆ ನೀಡಬೇಕು. ಮಣ್ಣಿನ ಶ್ರೇಷ್ಠತೆ ತಿಳಿದುಕೊಳ್ಳಬೇಕು. ರೈತನ ಸಂಕಷ್ಟ ಅರ್ಥೈಸಿಕೊಂಡು ಹೋರಾಟ ಮಾಡಬೇಕು.


ಇವುಗಳಿಗೆ ಮುಖ್ಯವಾಗಿ ಶಿಸ್ತು ಮತ್ತು ತಾಳ್ಮೆ ಬಹಳ ಮುಖ್ಯ. ಕಾನೂನನ್ನು ತಿಳಿದುಕೊಳ್ಳುವ ಜಾಣ್ಮೆಬೇಕು. ಸಂಘಟನೆ ಸೇರಿ ಹೋರಾಟ ಮಾಡಿದರೆ ನಮ್ಮ ರೈತರ ಕಷ್ಟ ಪರಿಹಾರವಾಗುವುದರಲ್ಲಿ ಅನುಮಾನವಿಲ್ಲಾ. ಪ್ರಪಂಚದ ಎಪ್ಪತ್ತು ದೇಶಗಳಲ್ಲಿ ಹಸಿರು ಶಾಲು ಹಾಕಿಕೊಂಡು ಸಂಘಟನೆ ಕಟ್ಟಿ ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ನಾವು ಸಹ ಮನಸ್ಸಿನಲ್ಲಿರುವ ಕೀಳುತನವನ್ನು ತೆಗೆದು, ರೈತರ ಬದುಕನ್ನು ಹಸನುಗೊಳಿಸೋಣಾ ಎಂದು ಕರೆ ನೀಡಿದರು.


ಮೋಗೇನಹಳ್ಳಿ ಗ್ರಾಮದ ತಮ್ಮಣ್ಣಗೌಡ ಮಾತನಾಡಿ, ರಾಜಕಾರಣಿಗಳು ಹಾಗೂ ಚುನಾವಣೆ ಗೆಲ್ಲುವ ಎಲ್ಲರೂ ಹಸಿರು ಶಾಲು ಹೊದ್ದು ಬರುತ್ತಾರೆ. ಆದರೆ ರೈತರ ಸಮಸ್ಯೆಗಳನ್ನು ಮಾತ್ರ ಬಗೆಹರಿಸುವಲ್ಲಿ ಸೋತಿದ್ದಾರೆ. ಎಪಿಎಂಸಿ ಸೇರಿದಂತೆ ಯಾವುದೇ ಸಮಸ್ಯೆಗಳನ್ನು ಉಲ್ಬಣ ಮಾಡುತ್ತಾರೆಯೇ ವಿನಹ ಶಮನ ಮಾಡಲ್ಲಾ. ಎಲ್ಲೋ ದುಡ್ಡು ಮಾಡಿದವರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಕೂರುತ್ತಾರೆ. ಇದುವರೆಗೂ ಯಾವುದೇ ನ್ಯಾಯವನ್ನು ಕೊಡಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ಒಟ್ಟಾರೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ರೈತ ಉಳಿಯಲು ಸಾಧ್ಯ ಎಂದು ತಿಳಿಸಿದರು.


ರಾಮನಗರ ನಂಜಪ್ಪ (ಕುಮಾರ್) ಹಾರೋಹಳ್ಳಿಯ ಗಜೇಂದ್ರ ಸಿಂಗ್, ಹುಲುವಾಡಿ ಗ್ರಾಮದ ಪ್ರಕಾಶ್, ಸೀಬನಹಳ್ಳಿ ಶಿವಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ರೈತ ಮುಖಂಡರಾದ ಹೊಂಬಾಳೇಗೌಡ, ಭೈರಾಪಟ್ಟಣ ಗ್ರಾಮದ ಲಿಂಗೇಗೌಡ, ಕೋಟಮಾರನಹಳ್ಳಿ ಗ್ರಾಮಸ್ಥರಾದ ಪುಟ್ಟಸ್ವಾಮಿ, ಪಾಪಣ್ಣ, ಉಮೇಶ್, ಪ್ರಕಾಶ್, ಸೇರಿದಂತೆ ನೂತನವಾಗಿ ಶಾಲು ಹಾಕಿಸಿಕೊಂಡ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅರವತ್ತಕ್ಕೂ ಹೆಚ್ಚು ಮಂದಿ ಹಸಿರು ಶಾಲುಗಳನ್ನು ಹಾಕಿಕೊಳ್ಳುವ ಮೂಲಕ ಸಮಾನ ಮನಸ್ಕರ ಸಹಭಾಗಿತ್ವ ರೈತ ಸಂಘಟನೆಗೆ ಸೇರ್ಪಡೆಯಾದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ

ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ

ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ

ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ

ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ

ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್

ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು  ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ

ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ




ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

Top Stories »  


Top ↑