ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ

ಚನ್ನಪಟ್ಟಣ.ಆ.೧೦: ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಜನರಿಗೆ ಅರಿವು ಮೂಡಿಸಲು ಆಟೋ ಪ್ರಚಾರ ಆಂದೋಲನಕ್ಕೆ ತಾಲ್ಲೂಕಿನ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಸುದರ್ಶನ್ ಅವರು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಆವರಣದಲ್ಲಿ ಚಾಲನೆ ನೀಡಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪ್ರಾರಂಭವಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಸಹ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಬೆಳೆದಿರುವ ಬೆಳೆಯ ವಿವರಗಳನ್ನು ದಾಖಲಿಸಲು, ಮುಂಗಾರು ರೈತರ ಬೆಳೆ ಸಮೀಕ್ಷೆ-೨೦೨೨-೨೩’ ಎಂಬ ಮೊಬೈಲ್ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ ಮಾಡಿಕೊಂಡು, ದಾಖಲೆಗಳನ್ನು ಅಪ್ಲೋಡ್ ಮಾಡಬಹುದು. ಮೊಬೈಲ್ ಆ್ಯಪ್ ಬಳಕೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲು, ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದೆ ಎಂದರು.
ಈ ತಿಂಗಳ ೧೬ರಂದು ಪ್ರಧಾನಮಂತ್ರಿ ಫಸಲ್ಭಿಮಾ ಯೋಜನೆಯಡಿ ನೋಂದಾವಣಿಗೆ ಅಂತಿಮ ದಿನಾಂಕವಾಗಿದ್ದು, ಯಾವ ಯಾವ ಬೆಳೆಗೆ ಎಷ್ಟು ಪ್ರೀಮಿಯಂ ತುಂಬಿಸಬೇಕು ಎಂಬ ಬಗ್ಗೆ ತಿಳಿಸಲಾಗಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಪಸಲ್ಭಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಲು ಇಚ್ಛೆಉಳ್ಳ ಬೆಳೆ ಸಾಲ ಪಡೆಯದ ರೈತರು, ನಿಗದಿತ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ ಪುಸ್ತಕ, ಕಂದಾಯ/ ರಸೀದಿ, ಖಾತೆ, ಬ್ಯಾಂಕ್ ಪಾಸ್ಬುಕ್/ ಆಧಾರ್ ಕಾರ್ಡ್ ನೀಡಿ ಬ್ಯಾಂಕ್ನ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಚಾಲನಾ ಕಾರ್ಯಕ್ರಮ ದಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟ ಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »

ಪ್ರಗತಿಪರ ರೈತರನ್ನು ಸನ್ಮಾನಿಸಿದ ತಾಲ್ಲೂಕು ಆಡಳಿತ
ಚನ್ನಪಟ್ಟಣ ಜ..೧೬: ತಾಲೂಕು ಕಚೇರಿಯಲ್ಲಿ ಸೋಮವಾರ ವಿಶೇಷವಾಗಿ ತಾಲ್ಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ನೌಕರರ ಸಂಘವು ಸಂಕ್ರಾಂತಿ ಹಬ್ಬ ಆಚರಣೆ ಮೂ

ಇ-ಕೆವೈಸಿ ಮಾಡಿಸದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಇಲ್ಲ
ರಾಮನಗರ, ಡಿ. 08: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂಕಿಸಾನ್) ಯೋಜನೆಯನ್ನು 2018ರ ಡಿಸೆಂಬರ್

ಕಾಡುಹಂದಿ ಕೊಲ್ಲಲು ಅವಕಾಶವಿದ್ದರೂ ಅರಣ್ಯ ಇಲಾಖೆ ಪ್ರಚಾರ ನೀಡಿಲ್ಲ ರೈತರ ಆರೋಪ
ಮದ್ದೂರು: ಮಾನವರ ಪ್ರಾಣಹಾನಿ, ರೈತ ಬೆಳೆದ ಬೆಳೆ ನಾಶಮಾಡುವ ಕಾಡುಹಂದಿಗಳನ್ನು ಕೊಲ್ಲಲು ಸರ್ಕಾರ ಅನುಮತಿ ನೀಡಿದೆ. ಆದರೆ ರೈತರಿಗೆ ಅರಣ್ಯಾಧಿಕಾರ

ಅನ್ನದಾತ ಇಂದು ತಲ್ಲಣಗೊಂಡಿದ್ದಾನೆ. ಎಸ್ಎ ಕಂಪನಿ ಆತನನ್ನು ಉನ್ನತಕ್ಕೇರಿಸಲಿ ವಿಲ್ಟ್ರೆಡ್ ಡಿಸೋಜಾ
ಮಂಡ್ಯ: ನ: ೧೫/೨೦೨೨. ಅನ್ನದಾತೋ ಸುಖೀನೋಭವ ಎಂಬ ಮಾತನ್ನು ಉಳಿಸಿಕೊಂಡಿರುವ ರೈತ ಇಂದು ತಲ್ಲಣಗೊಂಡಿದ್ದಾನೆ. ರೈತನ ಸೋಗಿನಲ್ಲಿ ಮಾರಾಟ ಮಾಡುತ್ತಿರುವ

ಕಳಂಕಿತ ಕೋಡಿಹಳ್ಳಿ ಇರುವ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ: ವಿಧಾನಸೌಧಲ್ಲಿ ನಡೆದ ಸಚಿವರ ನೇತೃತ್ವದ ಸಭೆಯಲ್ಲಿ ರೈತರ ಪಟ್ಟು
ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭ

ರಾಮನಗರ ಗಡಿ ಗ್ರಾಮಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ರೋಗ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ರೋಗ ಪತ್ತೆ
ರಾಮನಗರ: ರಾಮನಗರ ಜಿಲ್ಲೆಯಲ್ಲಿಯೂ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೆ ದೂಡಿದೆ.

ಜಿಲ್ಲೆಯಲ್ಲಿ ಜಾನುವಾರು ಜಾತ್ರೆ ಮತ್ತು ಸಾಗಾಣಿಕೆ ನಿಷೇಧ
ರಾಮನಗರ-ಅ.11: ರಾಜ್ಯದಾದ್ಯಂತ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೋಗವು ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ಅಕ್ಟೋಬರ್ 11 ರಿಂದ ನವೆಂಬರ್ 10 ರವರೆಗೆ ರಾಮನಗರ ಜಿಲ್ಲೆಯಾದ್ಯಂತ ಜಾ

ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ
ಚನ್ನಪಟ್ಟಣ: ಈಬಾರಿ ಏಪ್ರಿಲ್ ನಿಂದಲೇ ಮಳೆ ಆರಂಭವಾಗಿದ್ದು ಈಗಲೂ ಮುಂದುವರೆದಿದೆ. ಕೆಲವರು ಮಧ್ಯಮಧ್ಯ ಅಂದರೆ ಮಳೆ ಬಿಡುವು ಕೊಟ್ಟಾಗ ಬಿತ್ತನೆ ಮಾಡಿದ್

ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ
ಚನ್ನಪಟ್ಟಣ.ಆ.೧೦: ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್

ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ
ಆರಿದ್ರಾ ಮತ್ತು ಆಶ್ಲೇಷ ಮಳೆಯು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಪರಿಣಾಮ ರೇಷ್ಮೆನಾಡು ರಾಮನಗರ ಜಿಲ್ಲೆ ತಲ್ಲಣಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಕಳಲ್ಲಿ ಬೆಳೆದ ಬೆಳೆ ಮತ್ತು ಮನೆಗಳಿಗೆ ಹೆಚ್
ಪ್ರತಿಕ್ರಿಯೆಗಳು