Tel: 7676775624 | Mail: info@yellowandred.in

Language: EN KAN

    Follow us :


ಬೊಂಬೆನಾಡಿನ ಡಾ.ಚಕ್ಕೆರೆ ಶಿವಶಂಕರ್ ರವರಿಗೆ ಒಲಿದು ಬಂದ ಜೀಶಂಪ ರಾಜ್ಯ ಪ್ರಶಸ್ತಿ

Posted date: 27 Feb, 2020

Powered by:     Yellow and Red

ಬೊಂಬೆನಾಡಿನ ಡಾ.ಚಕ್ಕೆರೆ ಶಿವಶಂಕರ್ ರವರಿಗೆ ಒಲಿದು ಬಂದ ಜೀಶಂಪ ರಾಜ್ಯ ಪ್ರಶಸ್ತಿ

ಚನ್ನಪಟ್ಟಣ: ಸಂಗ್ರಹ, ಸಂಪಾದನೆ, ವಿಚಾರ, ವಿಮರ್ಶೆ ಮತ್ತು 

ಸಂಶೋಧನೆ ಹೀಗೆ ಜಾನಪದ ಸಾಹಿತ್ಯದ ಎಲ್ಲಾ 

ಪ್ರಕಾರಗಳಲ್ಲಿ ಎರಡು ದಶಕಗಳಿಗೂ ಹೆಚ್ಚು 

ಕಾಲದಿಂದ ನಿರಂತರ ಸೇವೆಸಲ್ಲಿಸುತ್ತಿರುವ ತಾಲೂಕಿನ 

ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ರವರ ಮುಕುಟಕ್ಕೆ ಇದೀಗ ಜಾನಪದ ಅಕಾಡೆಮಿಯಿಂದ ಕೊಡಮಾಡುವ ಜಾನಪದ ತಜ್ಞ 

ಪ್ರಶಸ್ತಿಯ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.


ಬುಧವಾರ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು  ಪ್ರಕಟಿಸಿದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಯವರು

ಅಕಾಡೆಮಿ ವತಿಯಿಂದ ಜೀವಮಾನ ಸಾಧನೆಗಾಗಿ ನೀಡಲಾಗುವ ಜಿಶಂಪ ಜಾನಪದ ತಜ್ಞ ಪ್ರಶಸ್ತಿಯನ್ನು ಕೊಡಮಾಡಿದೆ ಎಂದು ಘೋಷಿಸಿದ್ದಾರೆ.


*ಡಾ.ಚಕ್ಕೆರೆ ಶಿವಶಂಕರ್ ಪರಿಚಯ:*


ತಾಲೂಕಿನ ಚಕ್ಕೆರೆ ಗ್ರಾಮದ ಕಲ್ಯಾಣಮ್ಮ ಮತ್ತು ಟಿ.ಜವರೇಗೌಡ ದಂಪತಿಗಳ ನಾಲ್ಕನೇ ಪುತ್ರರಾಗಿ ೧೯೫೭ ರ ಮೇ ೧೯ ರಂದು ಜನಿಸಿದ ಇವರು, ಚಕ್ಕೆರೆಯಲ್ಲಿ ಪ್ರಾಥಮಿಕ ಮತ್ತು 

ಹಿರಿಯ ಪ್ರಾಥಮಿಕ ಶಿಕ್ಷಣ ಪೂರ್ಣ ಗೊಳಿಸಿ, ಚನ್ನಪಟ್ಟಣದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ಪಡೆದರು. ಬಳಿಕ 

ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದು ದೇ ಜವರೇಗೌಡ ರ ಮಾರ್ಗದರ್ಶನದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ *‘ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆಯ ಸ್ವರೂಪ’* 

ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು.


ಬೆಂಗಳೂರಿನ ಎನ್ ಜಿ ಇ ಎಫ್ ಸರ್ಕಾರಿ ಕಾರ್ಖಾನೆಯಲ್ಲಿ ಕನ್ನಡ ಭಾಷಾಂತರಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಕ್ಕೆರೆಯವರನ್ನು ಜಾನಪದ ಲೋಕದ ರೂವಾರಿ ಎಚ್. 

ಎಲ್. ನಾಗೇಗೌಡರು ೧೯೯೬ ರ ಜನವರಿಯಲ್ಲಿ ನಿಯೋಜನೆಯ ಮೇರೆಗೆ ತಮ್ಮ ಸಂಸ್ಥೆಗೆ ಕರೆಸಿಕೊಂಡರು. ಅಂದಿನಿಂದ 

ಸುಮಾರು ೧೬ ವರ್ಷಗಳ ಕಾಲ ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕದ 

ಕಾರ್ಯದರ್ಶಿಯಾಗಿ, ಎಚ್. ಎಲ್. ನಾಗೇಗೌಡ ಮತ್ತು ಜಿ. ನಾರಾಯಣ ಅವರ ಮಾರ್ಗದರ್ಶನದಲ್ಲಿ ಜಾನಪದ ಲೋಕವನ್ನು ಕಟ್ಟಿ ಬೆಳೆಸಿದ ಸಾರ್ಥಕ ಸೇವೆ ಚಕ್ಕೆರೆಯವರದಾಗಿದೆ.


ನಾಡಿನ ಜಾನಪದ ಸಂರಕ್ಷಣೆ, ಸಂವರ್ಧನೆ ಮತ್ತು 

ಪ್ರಸಾರದ ಕನಸು ಕಂಡಿದ್ದ ನಾಗೇಗೌಡರ 

ಆಶಯಗಳನ್ನು ಸಾಕಾರಗೊಳಿಸಿದರು. ಪರಿಷತ್ತು 

ಹೊರ ತರುತ್ತಿದ್ದ *‘ಜಾನಪದ ಜಗತ್ತು’* ಪತ್ರಿಕೆಗೆ 

ಹೊಸ ಆಯಾಮವನ್ನು ನೀಡಿದರು. ಜಾನಪದ ವಿದ್ವಾಂಸರು ಮತ್ತು ಕಲಾವಿದರುಗಳಿಗೆ ನಿರಂತರ ವೇದಿಕೆಗಳನ್ನು ಕಲ್ಪಿಸಿದರು. ಜಾನಪದ ಲೋಕದಲ್ಲಿ ಸಂಶೋಧನಾ ಕೇಂದ್ರ ಮತ್ತು ಜಾನಪದ ಮಹಾ ವಿದ್ಯಾಲಯವನ್ನು ಪ್ರಾರಂಭ ಮಾಡಿದರು. 

ಜಾನಪದ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಿದರು. 

ಜಾನಪದ ಕುರಿತು ನಾಡಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ  ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ನಾಗೇಗೌಡರು ಧ್ವನಿಮುದ್ರಿಸಿಕೊಂಡಿದ್ದ ನೂರಾರು ಧ್ವನಿಮುದ್ರಿಕೆಗಳ ಸಾಹಿತ್ಯವನ್ನು ಬರವಣಿಗೆಗಿಳಿಸಿದರು. ಜಾನಪದ 

ಪ್ರಕಟಣೆಗಳನ್ನು ಹೊರತಂದರು. ವಿಚಾರ 

ಸಂಕಿರಣಗಳು, ಕಮ್ಮಟಗಳು, ಶಿಬಿರಗಳು, ಜಾನಪದ ಮೇಳಗಳನ್ನು ಸಂಘಟಿಸಿದರು. ಜನಪ್ರಿಯ ಜಾನಪದ ಪುಸ್ತಕ ಮಾಲೆ ಯೋಜನೆಯನ್ನು ರೂಪಿಸಿ ಜನಪದ 

ಕಲಾವಿದರು ಮತ್ತು ವಿದ್ವಾಂಸರ ಕಿರು ಪುಸ್ತಕಗಳನ್ನು ಹೊರ ತರುವ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಕಲಾವಿದರು ಮತ್ತು ವಿದ್ವಾಂಸರನ್ನು ಪರಿಚಯಿಸಿದರು. ಕಲಿಯದವರಿಂದ 

ಕಲಿತವರಿಗೆ ಕಲಿಸುವ ಯೋಜನೆಯ ಅನ್ವಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಯುವಕ ಯುವತಿಯರಿಗೆ ಜನಪದ ಕಲೆಗಳು ಮತ್ತು ಮೂಡಲಪಾಯ ಯಕ್ಷಗಾನದ ತರಬೇತಿ ನೀಡಿದರು.


ಜಾನಪದ ಲೋಕದ ಅಭಿವೃದ್ಧಿಗಾಗಿ ತ್ರೈವಾರ್ಷಿಕ 

ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದರು.

ಜನಪದ ಕಲಾವಿದರುಗಳನ್ನು ಪ್ರೋತ್ಸಾಹಿಸಿದ್ದು, ಅವರ ಕಷ್ಟ-ಸುಖಗಳಿಗೆ ದನಿಯಾದದ್ದು, ಪ್ರಶಸ್ತಿ ವಂಚಿತ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ದೊರಕಿಸಿಕೊಟ್ಟದ್ದು, ಸಾವಿರಾರು ಮಂದಿ ಕಲಾವಿದರಿಗೆ ಮಾಸಾಶನ ಕೊಡಿಸುವಲ್ಲಿ ಶ್ರಮಿಸಿದ್ದು, ನಶಿಸಿ ಹೋಗುತ್ತಿದ್ದ 

ಕಲೆಗಳನ್ನು ತರಬೇತಿ ಮೂಲಕ 

ಪುನಃಶ್ಚೇತನಗೊಳಿಸಿದ್ದು, ಜಾನಪದದ ಬಗ್ಗೆ 

ಅಸಂಖ್ಯಾತ ವೇದಿಕೆಗಳಲ್ಲಿ ಅರಿವು ಮೂಡಿಸಿದ್ದು ಹೀಗೆ ಜಾನಪದ ಲೋಕವನ್ನು ಸಾಂಸ್ಥಿಕವಾಗಿ ಬಲಪಡಿಸುವ ಮತ್ತು ಬೌದ್ಧಿಕವಾಗಿ ಎತ್ತರಕ್ಕೇರಿಸುವ ಪ್ರಕ್ರಿಯೆಯಲ್ಲಿ 

ಚಕ್ಕೆರೆಯವರ ಕೊಡುಗೆ ಅನನ್ಯವಾದುದು.


ಕನ್ನಡ ಸಾಹಿತ್ಯ ಮತ್ತು ಸೈದ್ಧಾಂತಿಕ ಜ್ಞಾನದಲ್ಲಿ 

ಆಳವಾದ ಪರಿಜ್ಞಾನವನ್ನುಳ್ಳ ಚಕ್ಕೆರೆಯವರು, 

ವಿದ್ವಾಂಸರ ಪ್ರಕಾರ ನಾಡಿನ ಬೆರಳೆಣಿಕೆಯ ಜಾನಪದ ತಜ್ಞರುಗಳಲ್ಲಿ ಒಬ್ಬರು. ನಾಡಿನ ಬಹುತೇಕ ಪತ್ರಿಕೆಗಳು ಚಕ್ಕೆರೆಯವರ ಲೇಖನಗಳನ್ನು ಪ್ರಕಟಿಸಿವೆ. ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಘಸಂಸ್ಥೆಗಳು ನಡೆಸಿರುವ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ 

ಸುಮಾರು ೩೦೦ ಕ್ಕೂ ಹೆಚ್ಚು ಮೌಲಿಕ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಕನ್ನಡ ಜಾನಪದ ಕ್ಷೇತ್ರಕ್ಕೆ ೪೪ ಕ್ಕೂ ಹೆಚ್ಚು ಕೃತಿಗಳ ಕೊಡುಗೆ ಕೊಟ್ಟಿರುತ್ತಾರೆ.


ಈ ಎಲ್ಲಾ ಪ್ರಕಾರಗಳಿಗೂ ಸಂಬಂಧಿಸಿದಂತೆ ಇವರ ಕೃತಿಗಳು ಹೊರಬಂದಿವೆ. ಜಾನಪದ ಪ್ರವೇಶ, ಜಾನಪದ ಗ್ರಹಿಕೆ, ಜಾನಪದ ತಿಳಿವಳಿಕೆ, ಜಾನಪದ ಮಂಥನ, ಜಾನಪದ ಕಲಾ ಪ್ರವೇಶ, ಗೊರವರ ಸಂಸ್ಕೃತಿ, ಮೂಡಲಪಾಯ ಯಕ್ಷಗಾನ (ಐದು ಸಂಪುಟಗಳು), ಬೆಂಗಳೂರು ಜಾನಪದ, ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ, ಕಲ್ಯಾಣದೊಳಗೊಂದು ಪಂಚಾಯಿತಿ, ಬೆಳ್ಳಿ ಬೆಳಸು, ಸಹ್ಯಾದ್ರಿಯ ಸೂರ್ಯ, ನಾಗಸಂಪದ, ನೀಲವೇಣಿ, ಹಿರೇಬಳ್ಳಾಪುರದ ಸುಬ್ಬರಾಯಪ್ಪನವರ ಯಕ್ಷಗಾನ, ಕಾವ್ಯಗಳು ಇವರ ಬಹು ಮುಖ್ಯ ಕೃತಿಗಳು. ಜಾನಪದ ತಿಳಿವಳಿಕೆ ಮತ್ತು ಜನಪದ ಕಲಾ ಪ್ರವೇಶ ಕೃತಿಗಳಂತೂ ಎಲ್ಲಾ ವಿಶ್ವವಿದ್ಯಾಲಯಗಳ ಜಾನಪದ ವಿದ್ಯಾರ್ಥಿಗಳಿಗೆ ಪರಾಮರ್ಶನ ಪುಸ್ತಕಗಳಾಗಿವೆ.


ಚಕ್ಕೆರೆಯವರು ಬೆಂಗಳೂರು ಆಕಾಶವಾಣಿ ದ್ವನಿ 

ಪರೀಕ್ಷಾಮಂಡಳಿ ಸದಸ್ಯರಾಗಿ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ, ಮಹಾರಾಷ್ಟ್ರ ಜಿಲ್ಲೆ ನಾಗಾಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ, ಕರ್ನಾಟಕ ಜಾನಪದ ಮತ್ತು 

ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಕರ್ನಾಟಕ 

ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿ, *‘ಜಾನಪದ ಶ್ರೀ’* ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸುವರ್ಣ ಸಂಸ್ಕೃತಿ ದರ್ಶಿಕೆ ಪರಿಶೀಲನಾ ಸಮಿತಿ ಸದಸ್ಯರಾಗಿ, ಕಲಾವಿದರ 

ಮಾಸಾಶನ ಮಂಜೂರಾತಿ ಸಮಿತಿ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ಸಬ್ಸಿಡಿ ಆಯ್ಕೆ ಸಮಿತಿ ಸದಸ್ಯರಾಗಿ ಹೀಗೆ ಸರ್ಕಾರದ ವಿವಿಧ ಉನ್ನತ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುತ್ತಾರೆ.


ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬಹು ಮಹತ್ವದ ’ಗ್ರಾಮ ಚರಿತ್ರೆ ಕೋಶ’ ಯೋಜನೆಯ ಸಂಯೋಜಿತ ಸಂಪಾದಕರಾಗಿ ಮತ್ತು ಕನ್ನಡ ಜಾನಪದ ವಿಶ್ವಕೋಶ ಯೋಜನೆಯ ಗೌರವ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಕನ್ನಡ ಮತ್ತು ಸಂಸ್ಕøತಿ 

ನಿರ್ದೇಶನಾಲಯದ ‘ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ’ (ನೂರು ಸಂಪುಟಗಳ ಯೋಜನೆ)ಯ ಸಂಯೋಜಕರಾಗಿ ಹಾಗೂ ರಾಷ್ಟ್ರೀಯ ಸಂತ ಕವಿ ಕನಕದಾಸ ಸಂಶೋಧನಾ ಕೇಂದ್ರದ  ‘ತತ್ವಪದಕಾರರು’ ಯೋಜನೆಯ ಜಿಲ್ಲಾ ಸಂಪಾದಕರಾಗಿ 

ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಇವರು ಜಾನಪದ ಕ್ಷೇತ್ರಕ್ಕೆ ಸಲ್ಲಿಸಿರುವ 

ಕೊಡುಗೆಯನ್ನು ನಾಡಿನ ಅನೇಕ ಸಂಘ ಸಂಸ್ಥೆಗಳು 

ಗುರುತಿಸಿ ಗೌರವಿಸಿ ಸನ್ಮಾನಿಸಿರುತ್ತವೆ. *ಇವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಎಸ್. ಕೆ. ಕರೀಂಖಾನ್ ಪ್ರಶಸ್ತಿ, ಬೆಂಗಳೂರಿನ ಬೃಹತ್ ಮಹಾನಗರ ಪಾಲಿಕೆ ವತಿಯಿಂದ 

ಕೆಂಪೇಗೌಡ ಪ್ರಶಸ್ತಿ, ಮಂಡ್ಯದ ಜೀಶಂಪ ಜಾನಪದ 

ಪುರಸ್ಕಾರ, ಬಯಲು ಸೀಮೆ ಜಾನಪದ ತಜ್ಞ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು 

ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ಜಾನಪದ ಸೇತು ಪ್ರಶಸ್ತಿ, ಜಾನಪದ ರತ್ನ ಪ್ರಶಸ್ತಿಗಳು ಲಭಿಸಿವೆ.

 

ಕನ್ನಡ ಸಾಹಿತ್ಯ ಪರಿಷತ್ತು ೭೭ ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸಲ್ಲಿಸಿದೆ. ಕೆ.ಎಸ್.ಆರ್.ಟಿ.ಸಿ ಮೈಕೊ, 

ಕನ್ನಡ ಸಾಹಿತ್ಯ ಪರಿಷತ್ತು, ಐಸಾಕ್ ನಂತಹ ಪ್ರತಿಷ್ಠಿತ 

ಸಂಸ್ಥೆಗಳು ಸನ್ಮಾನಿಸಿ ಗೌರವ ಸಲ್ಲಿಸಿವೆ. ಜೀಶಂಪ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಜಿಲ್ಲೆಯ ಪ್ರಥಮ ಜಾನಪದ ತಜ್ಞ ಡಾ ಚಕ್ಕೆರೆ ಶಿವಶಂಕರ್ ರವರಿಗೆ ಅನೇಕ ಮಹನೀಯರು ಅಭಿನಂದನೆ ಸಲ್ಲಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in arts »

ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ
ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ

ರಾಮನಗರ : ಫೆ 10: ಜಾನಪದಕ್ಕೆ ಆದಿ ಅಂತ್ಯವಿಲ್ಲ, ಇಂತಹ ಸಂದರ್ಭದಲ್ಲೇ ಜಾನಪದ ಜನ್ಮತಾಳಿತು. ಮುಂದೆ ಇಂತಹ ಸಮಯದಲ್ಲಿ ಅಂತ್ಯವಾಗುತ್ತದೆ ಎಂದು ಯಾರು ಹೇಳಲು

ಜಾನಪದ ಲೋಕದಲ್ಲಿ ಇಂದಿನಿಂದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ: ಪ್ರೊ. ಬೋರಲಿಂಗಯ್ಯ
ಜಾನಪದ ಲೋಕದಲ್ಲಿ ಇಂದಿನಿಂದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ: ಪ್ರೊ. ಬೋರಲಿಂಗಯ್ಯ

ರಾಮನಗರ : ಇಲ್ಲಿನ ಜಾನಪದ ಲೋಕದಲ್ಲಿ ಫೆ. 10 ಮತ್ತು 11 ರಂದು ಪ್ರತಿಷ್ಠಿತ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕರ

ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ
ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ

ಬೆಂಗಳೂರು: ರಂಗ ನಿರ್ದೇಶಕ ಶಿವಲಿಂಗಯ್ಯ ನವರು ನಿರ್ದೇಶಿಸಿದ ಮಹಾಪೌರ್ಣಿಮೆ ನಾಟಕವು ಬಡಜನರ ದನಿಯಾಗಿದೆ, ಒಂದಲ್ಲಾ ಹತ್ತು ಬಾರಿ ನೋಡಿದರೂ ಮತ್ತೊಮ್ಮೆ ನೋಡಬ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್

ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ  ಶುಭಾಪುಂಜಾ
20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.


ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ

ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್

ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ

ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ

ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ
ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ

ರಾಮನಗರ:ಏ/೨೫/೨೦/ಶನಿವಾರ. ಕೊರೊನಾ (ಕೋವಿಡ್-೧೯) ವೈರಸ್ ದೇಶಕ್ಕೆ ಕಾಲಿಟ್ಟ ನಂತರ ದೇಶ ಮತ್ತು ರಾಜ್ಯದ ಆರ್ಥಿಕತೆಗೆ ಪೆಟ್ಟು ಬಿದ್ದಿರುವಂತೆಯೇ,

ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*
ಅಬ್ಬೂರು ರಾಜಶೇಖರ ರವರಿಗೆ ಎಚ್ ಕೆ ವೀರಣ್ಣಗೌಡ ಪ್ರಶಸ್ತಿ*

ರಾಮನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿಗೆ ಹಿರಿಯ ಪರ್ತಕರ್ತರು ಆರಂಭ ಪತ್ರಿಕೆಯ ಸಂಸ್ಥಾಪಕ ಸಂ

Top Stories »  


Top ↑