Tel: 7676775624 | Mail: info@yellowandred.in

Language: EN KAN

    Follow us :


ವಿಜ್ಞಾನ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸ್ವಾಬ್ ಸಂಗ್ರಹಣೆಗೆ ತರಬೇತಿ ನೀಡಿ: ಡಿಸಿಎಂ ಅಶ್ವಥ್ ನಾರಾಯಣ

Posted date: 03 Aug, 2020

Powered by:     Yellow and Red

ವಿಜ್ಞಾನ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸ್ವಾಬ್ ಸಂಗ್ರಹಣೆಗೆ ತರಬೇತಿ ನೀಡಿ: ಡಿಸಿಎಂ ಅಶ್ವಥ್ ನಾರಾಯಣ

ರಾಮನಗರ:ಆ/03/20/ಸೋಮವಾರ. ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸಲಾಗುತ್ತಿದ್ದು, ಸ್ವಾಬ್ ಸಂಗ್ರಹಣೆಗೆ ವಿಜ್ಞಾನ ಹಿನ್ನೆಲೆಯುಳ್ಳ  ಬಿ.ಎಸ್.ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜಿಲ್ಲೆಯಲ್ಲಿ ನಿಯೋಜಿಸಿಕೊಳ್ಳಿ ಎಂದು ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು.


ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿರುವ 69 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಪರೀಕ್ಷೆಯ  ಸ್ವಾಬ್ ಸಂಗ್ರಹಣೆ ಕೇಂದ್ರಗಳನ್ನು ತೆರೆದು ತರಬೇತಿ ನೀಡಲಾಗುವ ವಿದ್ಯಾರ್ಥಿಗಳನ್ನು ನಿಯೋಜಿಸಿಕೊಳ್ಳಿ. ಜಿಲ್ಲೆಯಲ್ಲಿ ಕೋವಿಡ್-19 ಲಕ್ಷಣವುಳ್ಳ ರೋಗಿ ಪರೀಕ್ಷೆಗೆ ಒಳಪಡಬೇಕು ಎಂದರೆ ಯಾವುದೇ ಕಾರಣಕ್ಕೂ ಅವರು ಅದರಿಂದ ವಂಚಿತರಾಗಬಾರದು ಎಂದರು.


 *24 ಗಂಟೆಯೊಳಗೆ ವರದಿ :* ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟವರಿಗೆ 24 ಗಂಟೆಯೊಳಗೆ ಪರೀಕ್ಷೆಯ ವರದಿ ನೀಡಬೇಕು. ಪರೀಕ್ಷೆಯ ವರದಿ ಬ್ಯಾಕ್‌ಲಾಗ್ ಆಗದಂತೆ ನೋಡಿಕೊಳ್ಳಿ. ಕೋವಿಡ್-19 ಪರೀಕ್ಷೆ ರೋಗಿಗಳನ್ನು ಒಳಪಡಿಸುವಾಗ ಸರಿಯಾದ ವಿಳಾಸ ಪಡೆದುಕೊಳ್ಳಿ. ಇಲ್ಲಾವಾದಲ್ಲಿ ಪಾಸಿಟಿವ್ ಬಂದ ಸಂದರ್ಭದಲ್ಲಿ ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ ಹಾಗೂ ರೋಗ ಕೂಡ ಹರಡುತ್ತದೆ. ಐ.ಎಲ್.ಐ ಮತ್ತು ಎಸ್.ಎ.ಆರ್.ಐ ಪ್ರಕರಣಗಳಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ನಡೆಸಿ ಎಂದರು.


*ಹೆಚ್ಚುವರಿ ಕಟ್ಟಡಕ್ಕೆ ಪ್ರಸ್ತಾವನೆ:* ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಆಸ್ಪತ್ರೆಗೆ ಹೆಚ್ಚುವರಿ ಕಟ್ಟಡದ ಅವಶ್ಯಕತೆಯಿದ್ದಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸಿ. ಮಂಡ್ಯ ಜಿಲ್ಲೆಯ ನಂತರ ಬೆಂಗಳೂರಿಗೆ ತಲುಪವವರೆಗೂ ಮೈಸೂರು -ಬೆಂಗಳೂರು  ಹೆದ್ದಾರಿಯಲ್ಲಿ ಯಾವುದೇ ಟ್ರಾಮಾ ಸೆಂಟರ್ ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಸೇರಿದಂತೆ ಆಸ್ಪತ್ರೆಗೆ ಬೇಕಿರುವ  ಸಿಬ್ಬಂದಿ, ಸಲಕರಣೆಗಳ ವಿವರದ ಮಾಹಿತಿಯನ್ನು ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.


*ಕೆರೆ ಒತ್ತುವರಿ ತೆರವುಗೊಳಿಸಿ:* ಜಿಲ್ಲೆಯಲ್ಲಿರುವ ಕೆರೆಗಳ ಸರ್ವೆ ನಡೆಸಿ ಒತ್ತುವರಿಯನ್ನು ಶೀಘ್ರವಾಗಿ ತೆರವುಗೊಳಿಸಬೇಕು. ಗ್ರಾಮಗಳಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ತಮ್ಮ ವ್ಯಾಪ್ತಿಗೆ ಬರುವ ಕೆರೆಗಳ ಬಗ್ಗೆ ನಿಗಾವಹಿಸಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಒತ್ತುವರಿ ಪ್ರಕರಣಗಳಿದ್ದಲ್ಲಿ ನೋಟಿಸ್ ನೀಡಿ ತೆರವುಗೊಳಿಸಿ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.


*ಸಿಎಸ್ಆರ್ ಅನುದಾನ*: ರಾಮನಗರ ಜಿಲ್ಲೆಯಲ್ಲಿ ಬಹಳಷ್ಟು ಕೈಗಾರಿಕೆಗಳು ತಮ್ಮ ಸಿ.ಎಸ್.ಆರ್. ಅನುದಾನವನ್ನು ಬೇರೆ ಜಿಲ್ಲೆಗಳಿಗೆ ನೀಡಿ ಅಭಿವೃದ್ಧಿ ಕೆಲಸ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ ಕೈಗಾರಿಕೆಗಳ ಸಿ.ಎಸ್.ಆರ್. ಅನುದಾನವನ್ನು ಪಡೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಿ ಎಂದರು.


ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಅವರು ಮಾತನಾಡಿ ಜಿಲ್ಲೆಯಲ್ಲಿ 1,273 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, 566 ಮಂದಿ ಗುಣಮುಖರಾಗಿರುತ್ತಾರೆ. 690 ಸಕ್ರಿಯ ಪ್ರಕರಣಗಳಿದ್ದು, 17 ಜನ ಮೃಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.


ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ
ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ

ರಾಮನಗರ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ನಂತರ ಇದೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬಿಡದಿ ಬಳಿಯ ಬೈರಮಂಗಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌

ಸೆ.17 ರಂದು ತಪ್ಪದೇ  ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ

ರಾಮನಗರ.ಸೆ 17: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 318 ಲಸಿಕಾ ತಂಡವನ್ನು ರಚಿಸಲಾಗಿದೆ. ತಂಡಗಳು

ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ

ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಮೇಳವನ್ನು ಹಮ್ನಿಕೊಳ್ಳಲಾಗಿದ್ದು, 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರ

ಸೆಪ್ಟೆಂಬರ್ 8  ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ
ಸೆಪ್ಟೆಂಬರ್ 8 ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ

ರಾಮನಗರ ,ಸೆ.7; ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ದಿಯ ಉಪಕ್ರಮವಾಗಿ ಸೆಪ್ಟೆಂಬರ್ 8 ರಂದು  ಜಿಲ್ಲೆಯಾದ್ಯಂತ  ಕೋವಿಡ್-19 ಲಸಿಕಾ

ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ
ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ

ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು  ಆಸ್ಪತ್ರೆಗಳಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ  ಮಾಡಿಕೊಳ್ಳಿ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ

ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ
ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ

ಚನ್ನಪಟ್ಟಣ.ಜು.12: ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ  ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಮಂತ್ರಿ ಮತ್ತು ಶಾಸಕರ ನೇತೃತ್

ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ
ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ

ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್

ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ
ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ

ರಾಮನಗರ: ವಾರಾಂತ್ಯದ ಕರ್ಫ್ಯೂ ಗೆ ಕಳೆದ ವಾರದಂತೆ ಈ ವಾರವೂ ಸಹ ಬದಲಾವಣೆಗಳೊಂದಿಗೆ ಮಾರ್ಪಡಿಸಿದ್ದು, ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ

ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಸಂಭವನೀಯ ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ

115 ನೇ ದಿನಕ್ಕೆ ಕಾಲಿಟ್ಟ  ಇರುಳಿಗರ ಪ್ರತಿಭಟನೆ
115 ನೇ ದಿನಕ್ಕೆ ಕಾಲಿಟ್ಟ ಇರುಳಿಗರ ಪ್ರತಿಭಟನೆ

ರಾಮನಗರ: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ 

ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಕೋವಿಡ್ ಎರಡನೇ ಅಲೆ ಹೆ

Top Stories »  


Top ↑