Tel: 7676775624 | Mail: info@yellowandred.in

Language: EN KAN

    Follow us :


ಹೆಚ್ಚುತ್ತಿರುವ ಸಾವಿನ ಸಂಖ್ಯೆ : ಉಪಮುಖ್ಯಮಂತ್ರಿ ಕಳವಳ

Posted date: 08 Sep, 2020

Powered by:     Yellow and Red

ಹೆಚ್ಚುತ್ತಿರುವ ಸಾವಿನ ಸಂಖ್ಯೆ : ಉಪಮುಖ್ಯಮಂತ್ರಿ ಕಳವಳ

ರಾಮನಗರ ಸೆ:07/20/ಸೋಮವಾರ.

ಜಿಲ್ಲೆಯಲ್ಲಿ ನಿರಂತರವಾಗಿ ಕೋವಿಡ್-19 ನಿಂದ ನಿಧನರಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತ ಪಡಿಸಿದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಜನರ ಜೀವ ಉಳಿಸಲು ಎಲ್ಲಾ ರೀತಿಯಿಂದ ಶ್ರಮಿಸುವಂತೆ ಸೂಚಿಸಿದರು.


ರಾಮನಗರದ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಇಂದು ಬೆಂಗಳೂರಿನಿಂದ ಮಾತನಾಡಿ ಉಪ ಮುಖ್ಯಮಂತ್ರಿಗಳು ಕಳೆದ 10  ದಿನಗಳಿಂದ ಜಿಲ್ಲೆಯಲ್ಲಿ ದಿನ ನಿತ್ಯವೂ ಒಂದು ಇಲ್ಲವೆ ಎರಡು ಸಾವು ದಾಖಲಾಗುತ್ತಿದೆ. ಹಿಂದೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶೇ. 0.60 ರಷ್ಟು ಇತ್ತು. ಈಗ ಇದು ಶೇ. 1.24ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣವನ್ನು ತಗ್ಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಅವರು ತಿಳಿಸಿದರು.


*ವರದಿ ಸಲ್ಲಿಸಿ:* ಜಿಲ್ಲೆಯಲ್ಲಿ ಎಲ್ಲಾ ರೀತಿಯ ಮುಂಜಾಗರೂ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೀಗಿದ್ದರೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಉಪಮುಖ್ಯಮಂತ್ರಿಗಳು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ನಿರ್ದೇಶನ ನೀಡಿದರು.


ಜಿಲ್ಲೆಯಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಾಗಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ರಾಮನಗರ ಜಿಲ್ಲೆಯವರ ಪೈಕಿ ಕೆಲವರು ಬೆಂಗಳೂರಿನಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಇಂತಹವರ ಪೈಕಿ ಪರಿಸ್ಥಿತಿ ಕೈಮೀರಿದಾಗ ಅನಿವಾರ್ಯವಾಗಿ ರಾಮನಗರ ಜಿಲ್ಲೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯವರು ಕಳುಹಿಸುತ್ತಿದ್ದಾರೆ. ಹೀಗಾಗಿ, ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 75 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದವರು ನಿಧನರಾಗಿರುತ್ತಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಅವರು ಮಾಹಿತಿ ನೀಡಿದರು.


*ಸಾವು :* ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 11, ಕನಕಪುರ ತಾಲ್ಲೂಕಿನಲ್ಲಿ 11, ಮಾಗಡಿ ತಾಲ್ಲೂಕಿನಲ್ಲಿ 13 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 15 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 50 ಮಂದಿ ನಿಧನರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಅವರು ಮಾಹಿತಿ ನೀಡಿದರು.


*ಆಂಬ್ಯುಲೆನ್ಸ್ ಕೊರತೆ ಇಲ್ಲ :* ಜಿಲ್ಲೆಯಲ್ಲಿ ಒಟ್ಟು 16 ಆಂಬ್ಯುಲೆನ್ಸ್ಗಳು ಲಭ್ಯವಿದ್ದು, ಪ್ರತಿ ತಾಲ್ಲೂಕಿಗೂ ತಲಾ ಮೂರು ಆಂಬ್ಯುಲೆನ್ಸ್ಗಳನ್ನು ನೀಡಲಾಗಿದೆ. ಕೋವಿಡ್ ಕೇರ್ ಸೆಂಟರ್ಗಳಲ್ಲೂ ಒಂದೊಂದು ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಉಪಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.


*ವೈದ್ಯರ ಕೊರತೆ :* ಜಿಲ್ಲೆಯಲ್ಲಿ ಇನ್ನೂ 10 ವೈದ್ಯರ ಕೊರತೆ ಇದೆ. ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದ್ದು, ಎಂಬಿಬಿಎಸ್ ಮಾಡಿರುವ ವೈದ್ಯರು ಕೋವಿಡ್ ಕೇರ್ನಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಅದೇ ರೀತಿ 20 ನರ್ಸ್ಗಳ ಪೈಕಿ ಆರು ಜನರು ಮಾತ್ರ ಸೇರ್ಪಡೆಯಾಗಿದ್ದಾರೆ. ಇನ್ನೂ 14 ಮಂದಿಯ ಅವಶ್ಯಕತೆ ಇದೆ. ಹಾಗೆಯೇ, 12 ಮಂದಿ ಲ್ಯಾಬ್ ಟೆಕ್ನೀಷಿಯನ್ ಕೊರತೆ ಇರುವುದಾಗಿ ಜಿಲ್ಲಾಧಿಕಾರಿಗಳು ಉಪ ಮುಖ್ಯಮಂತ್ರಿಗಳಿಗೆ ತಿಳಿಸಿದರು.


*ಕೋವಿಡ್ ಪರೀಕ್ಷೆ :* ಜಿಲ್ಲೆಯಲ್ಲಿ ಪ್ರತಿ ದಿನವೂ 950 ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ರೋಗ ಲಕ್ಷಣ ಉಳ್ಳವರು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಆದ್ಯತೆ ಮೇರೆಗೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇಡೀ ರಾಜ್ಯದಲ್ಲೇ ನಿಗದಿ ಪಡಿಸಿರುವ ಸಂಖ್ಯೆಗಿಂತಲೂ ಅಧಿಕ ಪ್ರಮಾಣದ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಜಿಲ್ಲೆ ಎನ್ನುವ ಹಿರಿಮೆಯನ್ನು ರಾಮನಗರ ಹೊಂದಿದೆ ಎಂದು ಅರ್ಚನಾ ಅವರು ತಿಳಿಸಿದರು.


*ಕಲಾಗ್ರಾಮ:* ಚನ್ನಪಟ್ಟಣದ ಗೊಂಬೆಗಳು, ರೇಷ್ಮೆ, ಕರಕುಶಲ ವಸ್ತುಗಳನ್ನು ಒಂದೆಡೆ ತಯಾರಿಸುವ ಮತ್ತು ಅವುಗಳನ್ನು ಅಲ್ಲೇ ಮಾರಾಟ ಮಾಡುವಂತಹ ಒಂದು ’ಕಲಾಗ್ರಾಮ’ವನ್ನು ಜಿಲ್ಲೆಯಲ್ಲಿ ತೆರೆಯುವ ಉದ್ದೇಶವಿದೆ. ಇದಕ್ಕಾಗಿ 50 ಎಕರೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಸಮೀಪ ಗುರುತಿಸುವಂತೆ ಉಪಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.


ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಉಲ್ಲಾ ಷರೀಫ್, ಪೋಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಮತ್ತು ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ
ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ

ರಾಮನಗರ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ನಂತರ ಇದೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬಿಡದಿ ಬಳಿಯ ಬೈರಮಂಗಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌

ಸೆ.17 ರಂದು ತಪ್ಪದೇ  ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ

ರಾಮನಗರ.ಸೆ 17: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 318 ಲಸಿಕಾ ತಂಡವನ್ನು ರಚಿಸಲಾಗಿದೆ. ತಂಡಗಳು

ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ

ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಮೇಳವನ್ನು ಹಮ್ನಿಕೊಳ್ಳಲಾಗಿದ್ದು, 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರ

ಸೆಪ್ಟೆಂಬರ್ 8  ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ
ಸೆಪ್ಟೆಂಬರ್ 8 ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ

ರಾಮನಗರ ,ಸೆ.7; ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ದಿಯ ಉಪಕ್ರಮವಾಗಿ ಸೆಪ್ಟೆಂಬರ್ 8 ರಂದು  ಜಿಲ್ಲೆಯಾದ್ಯಂತ  ಕೋವಿಡ್-19 ಲಸಿಕಾ

ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ
ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ

ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು  ಆಸ್ಪತ್ರೆಗಳಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ  ಮಾಡಿಕೊಳ್ಳಿ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ

ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ
ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ

ಚನ್ನಪಟ್ಟಣ.ಜು.12: ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ  ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಮಂತ್ರಿ ಮತ್ತು ಶಾಸಕರ ನೇತೃತ್

ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ
ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ

ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್

ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ
ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ

ರಾಮನಗರ: ವಾರಾಂತ್ಯದ ಕರ್ಫ್ಯೂ ಗೆ ಕಳೆದ ವಾರದಂತೆ ಈ ವಾರವೂ ಸಹ ಬದಲಾವಣೆಗಳೊಂದಿಗೆ ಮಾರ್ಪಡಿಸಿದ್ದು, ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ

ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಸಂಭವನೀಯ ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ

115 ನೇ ದಿನಕ್ಕೆ ಕಾಲಿಟ್ಟ  ಇರುಳಿಗರ ಪ್ರತಿಭಟನೆ
115 ನೇ ದಿನಕ್ಕೆ ಕಾಲಿಟ್ಟ ಇರುಳಿಗರ ಪ್ರತಿಭಟನೆ

ರಾಮನಗರ: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ 

ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಕೋವಿಡ್ ಎರಡನೇ ಅಲೆ ಹೆ

Top Stories »  


Top ↑