Tel: 7676775624 | Mail: info@yellowandred.in

Language: EN KAN

    Follow us :


ಡಾ ವಿಜಯನರಸಿಂಹ ಗೆ ಬೆವರಿಳಿಸಿದ ಸಂಸದ ಡಿ ಕೆ ಸುರೇಶ್. ತಾಲ್ಲೂಕಿನಾದ್ಯಂತ ಕೊರೊನಾ ಸೋಂಕಿತರ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ

Posted date: 18 May, 2021

Powered by:     Yellow and Red

ಡಾ ವಿಜಯನರಸಿಂಹ ಗೆ ಬೆವರಿಳಿಸಿದ ಸಂಸದ ಡಿ ಕೆ ಸುರೇಶ್. ತಾಲ್ಲೂಕಿನಾದ್ಯಂತ ಕೊರೊನಾ ಸೋಂಕಿತರ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ

ಚನ್ನಪಟ್ಟಣ ನಗರದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ವಿಜಯನರಸಿಂಹ ರವರಿಗೆ ಸಂಸದ ಡಿ ಕೆ ಸುರೇಶ್ ವಾಗ್ದಾಳಿ ನಡೆಸಿ ಛೀಮಾರಿ ಹಾಕುವ ಮೂಲಕ ಅವರ ಬೆವರಳಿಸಿದರು. ಅವರು ಸೋಮವಾರ ಮಧ್ಯಾಹ್ನ ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದರು.


ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಕೊರತೆ ಇದೆ. 53 ಆಕ್ಸಿಜನ್ ಬೆಡ್ ಇವೆ. ದಿನವೊಂದಕ್ಕೆ 15 ರಿಂದ 30 ಸಿಲಿಂಡರ್ ಆಕ್ಸಿಜನ್ ಖಾಲಿಯಾಗುತ್ತಿದೆ. ವೆಂಟಿಲೇಟರ್ ವ್ಯವಸ್ಥೆ ಮಾಡಬೇಕಾಗಿದೆ, ರೆಮಿಸಿಡರ್ ಇಂಜೆಕ್ಷನ್ ಕೊರತೆ ಇಲ್ಲಾ ಎಂದು ಡಾ ವಿಜಯನರಸಿಂಹ ವರದಿ ಒಪ್ಪಿಸುತ್ತಿದ್ದಂತೆ ಕೆಂಡಾಮಂಡಲರಾದ ಡಿ ಕೆ ಸುರೇಶ್ ರವರು, ನೀವು ಸುತ್ತಿಬಳಸಿ ಹೇಳುವುದು ಬೇಡ. ನೀವು ಏನು ಎಂಬುದು ನನಗೆ ಗೊತ್ತು.


*ನಾಚಿಕೆ ಆಗಲ್ವೇನ್ರೀ ನಿಮಗೆ ! ಕಾಮನ್ ಸೆನ್ಸ್ ಇಲ್ವಾ ? ಜನ ನಿಮ್ಮ ಆಸ್ಪತ್ರೆಗೆ ಬರಬೇಕಾ ? ನಮ್ಮನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಉಗಿಯುತ್ತಿದ್ದಾರೆ. ನಿಮ್ಮಂತಹವರಿಂದ ನಮ್ಮ ಮಾನ ನಾವೇ ಕಳೆದುಕೊಳ್ಳಬೇಕಾಗಿದೆ. ಆಕ್ಸಿಜನ್ ಸೇರಿದಂತೆ ಕೋವಿಡ್ ರೋಗಿಗಳಿಗೆ ಔಷಧೋಪಚಾರವನ್ನು ಎಷ್ಟು ಮಂದಿಗೆ ಕೊಟ್ಟಿದ್ದೀರಿ ? ಯಾವ ಲೆವಲ್ ನಲ್ಲಿ ಕೊಟ್ಟಿದ್ದೀರಿ ? ಡಿಮ್ಯಾಂಡ್ ಇದೆ ಅಂತ ಮಾರಕೊಂಡ್ರಾ ? ಆತ್ಮಸಾಕ್ಷಿಯಿಂದ ಕೆಲಸ ಮಾಡಿ. ನಿಮ್ಮ ವಯಸ್ಸಿಗೆ ತಕ್ಕನಾಗಿ ನಡೆದುಕೊಳ್ಳಿ ಎಂದು ಛೀಮಾರಿ ಹಾಕಿದರು. ಸಂಸದರು ಅಷ್ಟು ಮಾತನಾಡಿದರೂ ಸಹ ಅವರು ಕಮಕ್-ಕಿಮಕ್ ಎನ್ನದೆ ತಲೆತಗ್ಗಿಸಿ ನಿಂತಿದ್ದರು.*


*ಡಾ ಕೆ ಪಿ ರಾಜು ಗೆ ತರಾಟೆ*

ಬಳಿಕ ತಾಲೂಕು ವೈದ್ಯಾಧಿಕಾರಿ ಡಾ. ಕೆ.ಪಿ.ರಾಜುರವರನ್ನು ಪ್ರಶ್ನೆ ಮಾಡಿದ ಸುರೇಶ್‌ ರವರು ತಾಲೂಕಿನಲ್ಲಿ ಕೋವಿಡ್ ಪರೀಕ್ಷೆ ಬಗ್ಗೆ ಮಾಹಿತಿ ಕೇಳಿದರು. ಈ ವೇಳೆ ರಾಜು ಅವರು ಕೋವಿಡ್ ಪರೀಕ್ಷೆ ಕಡಿಮೆ ಮಾಡಿ ಎಂದು ಸರ್ಕಾರ ಸೂಚನೆ ನೀಡಿರುವ ಬಗ್ಗೆ ತಿಳಿಸುತ್ತಿದ್ದಂತೆ ಕೆಂಡಾಮಂಡಲರಾದ ಸುರೇಶ್ ನೀವೇನು ಜನರನ್ನು ಸಾಯಿಸಬೇಕು ಎಂದುಕೊಂಡಿದ್ದೀರಾ ! ಎಂದು ಕಿಡಿಕಾರಿದರು. ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಪರೀಕ್ಷೆ ಕಡಿಮೆ ಮಾಡುವಂತೆ ಹೇಳುತ್ತಿದೆ. ಆದರೆ ನನ್ನ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಪ್ರತಿ ಮನೆಯಲ್ಲಿ ಕೊರೊನಾ ಪರೀಕ್ಷೆ ಮಾಡಬೇಕು ಎಂದು ಸೂಚನೆ ನೀಡಿದರು. ಬಳಿಕ ಆರೋಗ್ಯಾಧಿಕಾರಿಗಳ ಬಗ್ಗೆ ಕೊಂಚ ಕೂಲ್ ಆದ ಸುರೇಶ್ ಲಾಕ್‌ಡೌನ್ ಇರುವ ಈ ಸಮಯದಲ್ಲೇ ನಾವು ಜನರನ್ನು ಟೆಸ್ಟಿಂಗ್‌ಗೆ ಒಳಪಡಿಸಿಕೊಂಡು ಜನರ ಆರೋಗ್ಯ ಕಾಪಾಡಿಕೊಳ್ಳಲು ಅವಕಾಶ ಇರುವುದು. ಲಾಕ್‌ಡೌನ್ ತೆರೆದರೆ ಮುಂದೆ ಅವರನ್ನು ಟೆಸ್ಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಪರಿಸ್ಥಿತಿ ಕೈಮೀರುತ್ತದೆ. ಈ ನಿಟ್ಟಿನಲ್ಲಿ ನೀವು ಟೆಸ್ಟಿಂಗ್ ಮಾಡಿ ಗ್ರಾಮ ಪಂಚಾಯ್ತಿಯಲ್ಲಿನ ಪ್ರತಿಯೊಬ್ಬ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳ ಸಹಕಾರ ಪಡೆದು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಟೆಸ್ಟಿಂಗ್‌ಗೆ ಒಳಪಡಿಸಿ, ಕೊರೋನಾ ಬಂದಿದೆ ಎಂದು ಹೇಳಿಕೊಳ್ಳಲು ನಾವು ಅವಮಾನ ಪಡಬಾರದು. ಕೊರೋನಾ ವಾಸಿಯಾಗದ ಖಾಯಿಲೆಯಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಧೈರ್ಯ ತುಂಬಿ ಜನರಲ್ಲಿ ಧೈರ್ಯ ಇದ್ದರೆ ಮಾತ್ರ ಯಾವುದೇ ಔಷಧಿ ಇಲ್ಲದೆ ಇದ್ದರೂ ಸೋಂಕನ್ನು ಎದುರಿಸುವ ಶಕ್ತಿ ಹೆಚ್ಚಾಗುತ್ತದೆ. ಜನರು ನನಗೆ ಸೋಂಕು ಬಂದಿದೆ ನಾನು ಸಾಯುತ್ತೇನೆ ಎಂದು ಭಯಪಟ್ಟುಕೊಂಡರೆ ಅದೇ ಅವರನ್ನು ಸಾವಿನ ಮನೆಗೆ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಮನೆಯಲ್ಲೂ ಪ್ರತಿಯೊಬ್ಬರ ಆರೋಗ್ಯದ ಮಾಹಿತಿ ಪಡೆಯಿರಿ, ಸಂಪೂರ್ಣ ಟೆಸ್ಟಿಂಗ್ ಮಾಡಿಸಿ ಎಂದು ಹೇಳಿದರು.


*ತಹಶಿಲ್ದಾರ್ ನಾಗೇಶ್ ಗೆ ವರದಿ ಸಲ್ಲಿಸಲು ಸೂಚನೆ*

ಹೊನ್ನನಾಯಕನಹಳ್ಳಿ, ಚಕ್ಕೆರೆ ಮತ್ತು ಹೋಬಳಿ ಮಟ್ಟದಲ್ಲಿ ಕೋವಿಡ್ ಕೇಂದ್ರ ಮಾಡಲು ಚಿಂತನೆ ನಡೆಸಿದ್ದೇವೆ.ಮಹದೇಶ್ವರ ದೇವಾಲಯದ ಬಳಿ ಇರುವ ಹಾಸ್ಟೆಲ್ ನ್ನು ಈಗಾಗಲೇ ರೆಡಿ ಮಾಡಿಕೊಂಡಿದ್ದೇವೆ. ಕಳೆದೆರಡು ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಸಭೆಯಲ್ಲಿ ತಾಲ್ಲೂಕು ದಂಡಾಧಿಕಾರಿ ನಾಗೇಶ್ ರವರು ತಿಳಿಸಿದರು. 

ಏಳು ದಿನಗಳೊಳಗೆ ತಾಲ್ಲೂಕಿನ ಎಲ್ಲಾ ಸೋಂಕಿತರು ಮತ್ತು ಶಂಕಿತರ ಮಾಹಿತಿ ಕಲೆ ಹಾಕಿ. ಖಾತೆ ಮಾಡಿ ನ್ಯಾಯ ಮಾಡಿ ಎಂದು ಯಾರೂ ಬರಲ್ಲ. ಸಂಪೂರ್ಣ ಕೊರೊನಾ ಕಡೆ ಗಮನ ನೀಡಿ.

ಕೇಂದ್ರ ಮತ್ತು ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟೆಷ್ಟು ರೇಷನ್ ಕೊಡುತ್ತಿದ್ದಾರೆ. ಕೇಳಿ ತಿಳಿದುಕೊಳ್ಳಿ. ಕಡಿಮೆ ಕೊಡುವುದು ಗಮನಕ್ಕೆ ಬಂದರೆ ಸಮಯ ನೀಡದೆ ಸೀಜ್ ಮಾಡಿ. ಯಾರ ಮುಲಾಜಿಗೂ ಒಳಗಾಗುವುದು ಬೇಡ. ತಾಲ್ಲೂಕಿನ ಸಂಪೂರ್ಣ ಕೊರೊನಾ ಮಾಹಿತಿ ನನಗೆ ವಾರದೊಳಗೆ ಬೇಕು ಎಂದರು.


*ಪೌರಾಯುಕ್ತರಿಗೆ ಸೂಚನೆ*

ನಗರಸಭೆ ವತಿಯಿಂದ ಮನೆ ಚಿಕ್ಕದಿರುವ ಸೋಂಕಿತರನ್ನು ಮನೆಯಲ್ಲಿ ಬಿಡದೆ ಕಡ್ಡಾಯವಾಗಿ ಕೋವಿಡ್ ಆಸ್ಪತ್ರೆಗೆ ಸೇರಿಸಿ. ಕೇಳದಿದ್ದರೆ ಪೋಲೀಸರ ಸಹಾಯ ಪಡೆಯಿರಿ. ನಗರದಲ್ಲಿ ಯಾವ ಏರಿಯಾದಲ್ಲಿ ಹೆಚ್ಚು ಸೋಂಕಿತರಿದ್ದಾರೋ ಅಲ್ಲಿ ಹೆಚ್ಚು ಗಮನ ನೀಡಿ. ಅಂಗನವಾಡಿ, ಆಶಾ ಕಾರ್ಯಕರ್ತರು ಮತ್ತು ನೋಡಲ್ ಅಧಿಕಾರಿಗಳನ್ನು ಬಳಸಿಕೊಂಡು ಕರಪತ್ರ ಮುದ್ರಿಸಿ ಅರಿವು ಮೂಡಿಸಿ. ಕೊರೊನಾ ವಾಸಿಯಾಗುವ ರೋಗ. ಮೊದಲ ದಿನದಿಂದಲೇ ಔಷಧೋಪಚಾರ ನೀಡಿ. ನಗರದ ಮಂಗಳವಾರಪೇಟೆ, ಕನಕನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹೆಚ್ಚು ಸೋಂಕಿತರಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಾಯ ಪಡೆದು ಪ್ರತಿ ಮನೆಯ ಸರ್ವೇ ಮಾಡಿಸಿ. ಕೋವಿಡ್ ಇದ್ದು ಮನೆಯಿಂದಾಚೆ ಬರದಿರುವವರ ಮೇಲೆ ಕ್ರಮಕೈಗೊಳ್ಳಿ ಎಂದು ನಗರಸಭೆ ಪೌರಾಯುಕ್ತ ಶಿವನಂಕಾರಿಗೌಡ ರವರಿಗೆ ಸೂಚಿಸಿದರು.


*ಇಓ ಚಂದ್ರ ರವರಿಗೆ ವರದಿ ಸಲ್ಲಿಸಲು ಗಡುವು*

ಪ್ರತಿ ಪಂಚಾಯತಿಯಲ್ಲೂ ಏಳು ದಿನಗಳೊಳಗೆ ಸರ್ವೇ ಮಾಡಿಸಿ. ಸೋಂಕಿತರು ಮತ್ತು ಶಂಕಿತರನ್ನು ಗುರುತಿಸಿ. ಎಲ್ಲರನ್ನೂ ಕೋವಿಡ್ ಟೆಸ್ಟ್ ಮಾಡಿಸಿ. ಗ್ರಾಪಂ ಅಧಿಕಾರಿಗಳು ಸಿಬ್ಬಂದಿಗಳನ್ನು ಬಳಸಿಕೊಳ್ಳಿ. ಬೆಂಗಳೂರಿನಿಂದ ಬಂದವರ ಮೇಲೆ ನಿಗಾವಹಿಸಿ, ಕ್ವಾರಂಟೈನ್ ಮಾಡಿ. ಗ್ರಾಮ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸದಸ್ಯರನ್ನು ಕರೆದು ಸಭೆ ನಡೆಸಿ ಸಲಹೆಸೂಚನೆಗಳನ್ನು ನೀಡಿ. ನಾಗವಾರ, ದಶವಾರ, ವಂದಾರಗುಪ್ಪೆ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.ವಾರದೊಳಗೆ ಸರ್ವೇ ಮಾಡಿಸಿ ವರದಿ ನೀಡಿ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರ ರವರಿಗೆ ಸೂಚಿಸಿದರು.


*ಹಳ್ಳಿಗಳಲ್ಲಿ ಅಂಗಡಿ ಸೀಜ್ ಮಾಡುವಂತೆ ತಾಕೀತು*

ಹಲವಾರು ಹಳ್ಳಿಗಳಲ್ಲಿ ಸಂಜೆವರೆಗೂ ಅಂಗಡಿಗಳು ತೆಗೆದಿರುತ್ತವೆ. ಅವುಗಳನ್ನು ಮುಚ್ಚಿಸಿ. ಕೇಳಲಿಲ್ಲಾಂದ್ರೆ ಸೀಜ್ ಮಾಡಿ. ಸೀಜ್ ಮಾಡಿದ ಅಂಗಡಿಗಳನ್ನು ಪತ್ರಿಕೆಯಲ್ಲಿ ಹಾಕಿಸಿ. ಉಳಿದವರು ಎಚ್ಚೆತ್ತುಕೊಳ್ಳುತ್ತಾರೆ. ಕುಮಾರಸ್ವಾಮಿ ಹೆಸರು ನನ್ನ ಹೆಸರು ಹೇಳಿದರು ಎಂದು ಕೇಳಬೇಡಿ. ಕೋರೊನಾ ಯಾರನ್ನೂ ಕೇಳಲ್ಲಾ ! ಮುಲಾಜಿಲ್ಲದೆ ಸೀಜ್ ಮಾಡಿ. ಉಳಿದವರು ಎಚ್ಚರಿಸಿಕೊಳ್ಳುತ್ತಾರೆ ಎಂದು ಪೋಲೀಸ್ ಅಧಿಕಾರಿಗಳಿಗೆ ತಿಳಿಸಿದರು.


*ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಿದ್ದರಾಜು ರವರ ಮಾಹಿತಿಗೆ ದಂಗಾದ ಸುರೇಶ್ ರವರು ವೇದಿಕೆಯ ಮೇಲೆಯೇ ಇದ್ದ ಉಪ ವಿಭಾಗಾಧಿಕಾರಿಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ದಾಸೋಹದ ಕಡೆಯಿಂದ 132 ದಿನಗಳ ಆಹಾರ ಪದಾರ್ಥಗಳನ್ನು ಶೀಘ್ರವಾಗಿ ನೀಡುವಂತೆ ಆದೇಶಿಸಿದರು. ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಕ್ರಮವಾಗಿ ಆಹಾರ ನೀಡಿ. ಬ್ಯಾಲೆನ್ಸ್ ಇರುವವರಿಗೆ ಶೀಘ್ರವೇ ನೀಡಿ. ನೀಡದಿರುವುದರ ಬಗ್ಗೆ ಕ್ರಮ ಕೈಗೊಳ್ಳಿ ಎಂದರು.*


ಸರ್ವೇ ಸಿಬ್ಬಂದಿಗಳಿಗೆ ಈಗ ಕೆಲಸವಿಲ್ಲ. ಸ್ಮಶಾನ, ಕೆರೆ ಮತ್ತು ಕಟ್ಟೆಗಳನ್ನು ಸರ್ವೇ ಮಾಡಿಸಿ. ನರೇಗಾ ಸಂಬಂಧಿಸಿದಂತೆ ಸಭೆ ನಡೆಸಿ, ಹತ್ತಾರು ಲಕ್ಷ ರೂಪಾಯಿಗಳ ಕೆಲಸ ಒಬ್ಬರಿಗೆ ನೀಡುವುದು ಬೇಡ. ಕೂಲಿಕಾರ್ಮಿಕರಿಗೆ ನೇರ ಹಣ ಜಮಾ ಮಾಡಿ. ಸ್ತ್ರೀಶಕ್ತಿ ಸಂಘದವರಿಗೂ ಕೆಲಸ ನೀಡಿ. ನರೇಗಾ ಕೆಲಸದಲ್ಲಿ ಸ್ತ್ರೀಯರನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢಗೊಳಿಸಿ ಎಂದು ಅವರು ಸಭೆಗೆ ತಿಳಿಸಿದರು.

ಸಭೆಯಲ್ಲಿ  ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿ ವರ್ಗ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ
ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ

ರಾಮನಗರ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ನಂತರ ಇದೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬಿಡದಿ ಬಳಿಯ ಬೈರಮಂಗಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌

ಸೆ.17 ರಂದು ತಪ್ಪದೇ  ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ

ರಾಮನಗರ.ಸೆ 17: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 318 ಲಸಿಕಾ ತಂಡವನ್ನು ರಚಿಸಲಾಗಿದೆ. ತಂಡಗಳು

ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ

ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಮೇಳವನ್ನು ಹಮ್ನಿಕೊಳ್ಳಲಾಗಿದ್ದು, 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರ

ಸೆಪ್ಟೆಂಬರ್ 8  ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ
ಸೆಪ್ಟೆಂಬರ್ 8 ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ

ರಾಮನಗರ ,ಸೆ.7; ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ದಿಯ ಉಪಕ್ರಮವಾಗಿ ಸೆಪ್ಟೆಂಬರ್ 8 ರಂದು  ಜಿಲ್ಲೆಯಾದ್ಯಂತ  ಕೋವಿಡ್-19 ಲಸಿಕಾ

ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ
ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ

ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು  ಆಸ್ಪತ್ರೆಗಳಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ  ಮಾಡಿಕೊಳ್ಳಿ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ

ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ
ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ

ಚನ್ನಪಟ್ಟಣ.ಜು.12: ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ  ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಮಂತ್ರಿ ಮತ್ತು ಶಾಸಕರ ನೇತೃತ್

ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ
ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ

ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್

ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ
ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ

ರಾಮನಗರ: ವಾರಾಂತ್ಯದ ಕರ್ಫ್ಯೂ ಗೆ ಕಳೆದ ವಾರದಂತೆ ಈ ವಾರವೂ ಸಹ ಬದಲಾವಣೆಗಳೊಂದಿಗೆ ಮಾರ್ಪಡಿಸಿದ್ದು, ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ

ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಸಂಭವನೀಯ ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ

115 ನೇ ದಿನಕ್ಕೆ ಕಾಲಿಟ್ಟ  ಇರುಳಿಗರ ಪ್ರತಿಭಟನೆ
115 ನೇ ದಿನಕ್ಕೆ ಕಾಲಿಟ್ಟ ಇರುಳಿಗರ ಪ್ರತಿಭಟನೆ

ರಾಮನಗರ: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ 

ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಕೋವಿಡ್ ಎರಡನೇ ಅಲೆ ಹೆ

Top Stories »  


Top ↑