Tel: 7676775624 | Mail: info@yellowandred.in

Language: EN KAN

    Follow us :


ಕುಡಿತದ ಫಲಾಫಲ (ಕಿರುನಾಟಕ; ರಚನೆ ಡಾ ಸಿ ಗುರುವಪ್ಪ.)

Posted date: 04 Dec, 2019

Powered by:     Yellow and Red

ಕುಡಿತದ ಫಲಾಫಲ (ಕಿರುನಾಟಕ; ರಚನೆ ಡಾ ಸಿ ಗುರುವಪ್ಪ.)

*ದೃಶ್ಯ-೧*

*ಬೀದಿಯಲ್ಲಿ*

ಭೀಮ: ಲೈಲಾ! ಲೈಲ! ಲೈಲಾ... ಓ... ಲೈಲ (ಕಣ್ಣು ಮಿಟುಕಿಸಿ) ಆ! ಇದು ನನ್ದಾರಿ... ಆಹ... (ಕೇಕೆ ಹಾಕುತ್ತಾ).

ಅಲ್ಲಾ ನೀತಿ ಹೇಳಿ ಕುಡಿ ಬ್ಯಾಡಿ ಅಂತೀರಿ, ಇಸ್ಪೀಟ್ ಆಡ್ಬೇಡಿ ಅಂತೀರಿ, ಯಾವ್ದು ಕೆಟ್ಕೆಲ್ಸ ಮಾಡ್ಬೇಡಿ ಅಂತೀರಿ ಇದೆಂಗೆ ? ಬೀರು ಬ್ರಾಂದಿ ತಯಾರಿಸಲು ಸರ್ಕಾರ ಪರ್ಮಿಷನ್ ಕೊಟ್ಟಿದೆ. ಮತ್ತೇ ಕುಡಿಬ್ಯಾಡ ಅಂದ್ರೆ ನಾನು ಕುಡಿತೀನಿ. ಪೋಲಿಸ್ ಬರ್ಲಿ ಯಾರೇ ಬರ್ಲಿ ಧೈರ್ಯವಾಗಿ ಕೇಳ್ತಿನಿ. ಅದೆಂಗೆ ಕುಡಿಯೋದ್ನ ತಪ್ಪಿಸ್ತಾರೆ ನೋಡ್ತಿನಿ.

ಹೆಂಡ್ತಿ ಮಕ್ಳವ್ರೇ ನಾನು ಮದುವೆ ಬೇಕಂದ್ನಾ, ಮಕ್ಳು ಬೇಕಂದ್ನಾ... ಇಲ್ವಲ್ಲಾ. ಅಂದ್ಮೇಲೆ ಹೆಂಡ್ತಿ ಮಕ್ಳು ನೋಡೋಕಿಲ್ಲಾ ಕುಡ್ದ್ ಹಾಳಾಕ್ತಾನೆ ಅಂತಾರೆ. ಕುಡ್ದು ಹಾಳಾಗೋದು ನನ್ನ ಹೆಂಡ ನನ್ನ ಬುಂಡೆ ಯಾವೋನ್ ಕೇಳೋನು...?


ಪೋಲಿಸಪ್ಪ:  ಏಯ್ ಏನಪ್ಪಾ ನಿನ್ನೆಸ್ರು

ಭೀಮ;  ಯಾಕಪ್ಪಾ ನಿನ್ ತಲೆಗಿಲೆ ತಿರುಗುತ್ತಾ

ಪೋಲಿಸ್:  ನಾನು ಪೋಲಿಸು

ಭೀಮ:  ಪೋಲಿಸವ್ನೇ... ಪೋಲೀಸವ್ನೇ... ನನಗೊತ್ತಿಲ್ಲ. ನನ್ಕಟ್ಕೊಂಡ್ ನಿಂಗ್ಯಾಕ್ ಹೋಗು.

ಪೋಲಿಸ್:  ನೀನು ಮರ್ಯಾದೆಯಾಗಿ ಮನೆಕಡೆ ಹೋದರೆ ಸರಿ ಇಲ್ಲಾಂದ್ರೆ ಒಳಗಾಕಿಬಿಡ್ತಿನಿ.

ಭೀಮ:  ಅಷ್ಟು ಮಾಡಿ ಪುಣ್ಯ ಕಟ್ಕೊ.


*ದೃಶ್ಯ-೨*

*ಡಾಕ್ಟರ್ ಕ್ಲಿನಿಕ್ *

ಪೋಲಿಸ್:  ಡಾಕ್ಟ್ರೇ ಇವ್ನು ಕುಡ್ದು ರಸ್ತೇನಾ ಅಳತೆ ಮಾಡ್ಕೊಂಡ್ ಬರ್ತಿದ್ದ.

ಡಾಕ್ಟರ್:  ನಿನಗೇನು ಕಷ್ಟ ? ಪಿಡಬ್ಲ್ಯೂಡಿನೋರೆ ಮಾಡ್ಬೇಕಾ, ಫ್ರೀಯಾಗಿ ಇವ್ನೇ ಮಾಡ್ತಿದ್ದಾನಲ್ಲಾ ಬಿಡು.

ಪೋಲಿಸ್:  ಕುಡಿದು ರಸ್ತೆಲೆಲ್ಲಾದ್ರೂ ಹೋಗಿ ಆಕ್ಸಿಡೆಂಟ್ ಅದ್ರೇ ಏನ್ಮಾಡೋದು ಅಂತ ನಿಮ್ಮ ಹತ್ರ ಸರ್ಟಿಫಿಕೇಟ್ ಮಾಡ್ಸೋಕ್ ಕರ್ಕೊಂಡ್ಬಂದಿದ್ದಿನಿ.

ಡಾಕ್ಟರ್:  (ರೋಗಿಯನ್ನು ಪರೀಕ್ಷೆ ಮಾಡುವರು) ಪೋಲಿಸ್ ನೋರೆ ನೀವು ಸ್ವಲ್ಪ ದೂರ ಇರಿ.

ಪೋಲಿಸ್:  ಯಾಕ್ ಸರ್ ಅಂಗನ್ತೀರಿ ?

ಡಾಕ್ಟರ್:  ಏನೂ ಇಲ್ಲರೀ ಕುಡ್ದಿರೋ ವಾಸ್ನೇ ನಿಮ್ದೋ ರೋಗಿದೋ ಅನ್ನೋದು ಗೊತ್ತಾಗ್ತಿಲ್ಲಾ ಅದ್ಕೆ ಹೇಳ್ದೆ.

ಪೋಲಿಸ್:  ನಿಮ್ಮ ಮಾತೂ ಒಂಥರಾ ನಿಜ ಸ್ವಾಮಿ. ಆದರೆ ನಿಮ್ ಕಡೆಯಿಂದ್ಲೂ ಅದೇ ವಾಸ್ನೆ ಬರ್ತಿದ್ಯಲ್ಲಾ !

ಡಾಕ್ಟರ್:  ಇದೊಂತರ ಔಷಧಿ ಕಣ್ರೀ.

ಪೋಲಿಸ್:  ಸರಿ ಸ್ವಾಮಿ ನಿಮ್ದೇ ಒಂಥರಾ ವಾಸ್ನೆ.

ಡಾಕ್ಟರ್:  ಅವನ್ನಾ ಒಳಗೆ ಕರ್ಕೊಂಡ್ ನಡೀ.

(ಭೀಮ ಕುಡ್ದ್ ರೋಡಲ್ಲಿ ಗಲಾಟೆ ಮಾಡ್ತಿದದ್ದು ಕೋಟ್೯ನಲ್ಲಿ ಸಾಬೀತಾಗಿ ಒಂದು ವಾರ ಸಜೆ ಅನುಭವಿಸಿ ಬಂದಮೇಲೆ)


*ದೃಶ್ಯ-೩.* ಕುಡಿಯೋದು ತಪ್ಪು ಅಂತಾ ಮತ್ತೇ ಕುಡ್ದ್ ಮನೆಗೆ ಬರ್ತಾನೆ.

ಭೀಮ:  ಲೇ... ಇವ್ಳೇ... ಎಲ್ಲೋಗಿದ್ದಿಯೇ ? ಲೇ... ಲೇ...

ಗೌರಮ್ಮ:(ಹೆಂಡತಿ) ನಾನೆಲ್ಲಿ ಹಾಳಾಗಿದ್ದೀನ್ರಿ. ನಿಮ್ಗೆ ಆ ದೇವ್ರೂ ಇನ್ನೂ ಬುದ್ದಿ ಕೊಡ್ನಿಲ್ಲ. ಜೈಲ್ಗೋಗ್ಬಂದ್ರೂ ನಿಮ್ಗಿನ್ನೂ ಬುದ್ದಿ ಬರ್ಲಿಲ್ಲಾ.

ಮಗು:  ಅಮ್ಮಾ ಹೊಟ್ಟೆ ಹಸಿತಾದೆ.. ಅಮ್ಮಾ ಹಸಿವು... (ಅಳುತ್ತಾ)

ಗೌರಮ್ಮ: ನಾನೇನ್ಮಾಡ್ಲಿ ಕಂದಾ ನಿಮ್ಮಪ್ಪಂಗೇಳೋ ತಂದಾಕೋಕೆ.

ಮಗು:  ಅಪ್ಪಾ... ಊಟ ಕೊಡಪ್ಪಾ ಹೊಟ್ಟೆ ಹಸಿತಾದೆ..

ಭೀಮ:  ಯಾಕೇ... ಮಗಿಗ್ ಇನ್ನೂ ಊಟ ಕೊಟ್ಟಿಲ್ಲಾ... (ಹೊಡೆಯುವನು).

ಗೌರಮ್ಮ:  ಹೊಡಿಯೋ ಮೊದ್ಲು ಒಂದಿಷ್ಟು ವಿಷ ಕೊಡಿ.

ಭೀಮ:  ವಿಷ ತಾನೇ ಕೊಡ್ತಿನಿ ಕುಡ್ದ್ ಸಾಯೇ.

ಶಂಕರ: (ಭೀಮನ ಸ್ನೇಹಿತ). ಏನೋ ಭೀಮಣ್ಣ ಮನೇಲಿ ಕುರುಕ್ಷೇತ್ರ ನಡಿತಿದೆ.

ಭೀಮ:  ಏನಿಲ್ಲಾ ಬಾರೋ.. ಕೂತ್ಕೋ ಬಾರೋ.. ಏನ್ ಇಷ್ಯ.

ಶಂಕರ:  ಏನಿಲ್ಲಾ ಭೀಮಣ್ಣ ಹಿಂಗೆ ನೋಡ್ಕೊಂಡ್ ಹೋಗೋಣಾಂತ ಬಂದೆ ಭೀಮಣ್ಣ. ಏನೋ ಭೀಮಣ್ಣ ಹೀಗೆ ಕುಡ್ದ್ ಬಂದ್ರೆ ಹೆಂಗೋ ! ಹೆಂಡ್ತಿ ಮಕ್ಳುನಾ ಹೆಂಗೋ ಸಾಕೋದು ?

ಗೌರಮ್ಮ:  ಅಣ್ಣಾ ನೀನಾರು ಬುದ್ದಿ ಹೇಳಣ್ಣಾ.

ಶಂಕರ:  ನಾನು ಬುದ್ದಿ ಹೇಳ್ತಿನಿ. ನಿಂಗೆ ಗಲಾಟೆ ಮಾಡ್ದಾಗೆ ಮಾಡ್ತನಿ ಇರವ್ವ. (ಎಂದು ಹೇಳಿ ಭೀಮನ ಹತ್ತಿರ ಬಂದು) ಲೋ ಭೀಮ ನಿಂಗ್ಯಾಕೋ ಈ ಕೆಟ್ಬುದ್ದಿ ಬಂತೋ ?

ಭೀಮ:  ಕುಡುಕ್ ಸೂಳೇ ಮಗನೆ ನೀನು ಕುಡಿಯೋದಿಲ್ವೇನೋ.. ನಂಗ್ ಬುದ್ದಿ ಹೇಳುಕ್ ಬಂದ್ಬುಟ್ಟಾ !

ಶಂಕರ: ನಂಗೇನೋ ಹೆಂಡ್ತಿ ಮಕ್ಳಿಲ್ಲ. ಹೆಂಗ್ ಬೇಕಾರೂ ಇರ್ತಿನಿ. ನೀನು ಹೆಂಡ್ತಿ ಮಕ್ಳಿರೋನು. (ಹೇಳ್ತಿದಂಗೆ ಶಂಕರ ಜೇಬಿನಿಂದ ಬ್ರಾಂದಿ ಬಾಟಲು ತೆಗೆದು ಇಬ್ಬರೂ ಕುಡಿಯವರು.) ಇಬ್ಬರೂ ಮತ್ತು ಬಂದು ತೂಕಡಿಸುವರು. ಭೀಮನಿಗೆ ಹೆಚ್ಚಾಗಿ ಮಲಗುವನು.

ಶಂಕರ:  (ಭೀಮ ಮಲಗಿದ ಮೇಲೆ) ಗೌರಮ್ಮಾ ಗೌರು ನೀನೆಷ್ಟೊಂದ್ ಚನ್ನಾಗಿದ್ದಿಯಾ, ನಿನ್ನ ಮೈಕಟ್ಟೇನು, ನಿನ್ನ ನಡಿಗೆ ಏನು ನೀ ಕೋಪ ಮಾಡ್ಕೊಂಡಾಗ ಬೋ ಚನ್ನಾಗ್ ಕಾಣ್ತಿಯೇ.

ಗೌರಮ್ಮ:  ಶಂಕರಾ ! .. ನಿನ್ನ ಮಾತು ಎಲ್ಲೆ ಮೀರ್ತಾದೆ ನಂಗೆ ಇಷ್ಟವಾಗ್ದು.

ಶಂಕರ:  ನೀನು.. ನಾ ಹೇಳ್ದಂಗ್ ಕೇಳುದ್ರೆ ಹೂವಿನಂಗೆ ನೋಡ್ಕೋತಿನಿ ಯೋಚ್ನೇ ಮಾಡು.

(ನಂತರ ಭೀಮನಿಗೆ ಎಚ್ಚರವಾಗುವುದು. ಇಬ್ಬರೂ ಸ್ನೇಹಿತರ ಜೊತೆ ಸೇರಿ ಇಸ್ಪೀಟ್ ಆಡಿ ಸೋತು ಹೋಗುವರು.)


*ದೃಶ್ಯ-೪. ಮನೆ.*


ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಭೀಮನನ್ನು ಯಾರೋ‌ ಮನೆಗೆ ತಂದು ಹಾಕುವರು. ಡಾಕ್ಟರ್ ನ್ನು ಕರೆಸುವರು.

(ಭೀಮನಿಗೆ ಜ್ಞಾನ ಬಂದು ಚನ್ನಾಗದ ನಂತರ)

ಯಥಾ ಪ್ರಕಾರ ಹೆಂಡತಿಗೆ ಹೊಡೆದು, ಕೂಲಿ ಮಾಡಿ ತಂದ ದುಡ್ ಕಿತ್ಕೊಂಡು ಹೋಗುವನು.

(ದುಡ್ಡು ಕೊಡದಿದ್ರೂ ಹೊಡೆಯೋದು, ಕೊಟ್ಮೇಲೆ ಕುಡಿದು ಬಂದು ಹೊಡೆಯೋದು)

ಮಕ್ಕಳಿಗೆ ಉಪವಾಸ, ಬಟ್ಟೆ ಇಲ್ಲ, ಅಮ್ಮನನ್ನು ಮಕ್ಕಳು ಊಟ ಕೇಳ್ತಾರೆ. (ಅಮ್ಮ ಹೊಡೆಯುವಳು)


*ದೃಶ್ಯ-೫ ಮನೆ*

ಕುಡಿದು ಸ್ನೇಹಿತನ ಜೊತೆ ಬರುವುದು

ಸ್ನೇಹಿತ ಹೆಂಡತಿಯ ಶೀಲ ಕೆಡಿಸುವನು.

ಗಂಡ (ಭೀಮ) ಸ್ನೇಹಿತ (ಶಂಕರ) ನನ್ನು ಕೊಲ್ಲುವನು.


*ದೃಶ್ಯ-೬.ಪೋಲಿಸ್ ಠಾಣೆ.*

ಭೀಮನನ್ನು ಪೋಲಿಸರು ಬಂಧಿಸಿ(ಆರೆಸ್ಟ್) ದರು, ವಿಚಾರಣೆ, ಸಾಕ್ಷಿ, ಭೀಮನ ತಮ್ಮನೇ ನ್ಯಾಯವಾದಿ.


*ದೃಶ್ಯ-೭. ನ್ಯಾಯಾಲಯ.*

ವಾದ-ವಿವಾದ-ಸಾಕ್ಷಿ ಆಧಾರಗಳಿಲ್ಲದೆ ಕೇಸು ಬಿದ್ದುಹೋಗುವುದು.


*ದೃಶ್ಯ-೮. ದೇವಾಲಯ.*

ಕುಡಿತ, ಜೂಜಾಟ ಮತ್ತು ವ್ಯಭಿಚಾರ ಎಲ್ಲವನ್ನೂ ಬಿಡುತ್ತೇನೆಂದು ದೇವರು ಮತ್ತು ಮಕ್ಕಳ ಮೇಲೆ ಭಿಮನ ಪ್ರಮಾಣ.


*ದೃಶ್ಯ-೯. ಊರಿನ ಶಾಲೆ.*

ಡಾ ಬಿ ಆರ್ ಅಂಬೇಡ್ಕರ್ ದಿನಾಚರಣೆಯಂದು ಊರಿನ ಜನರೆಲ್ಲರೂ ಶಾಲೆಯ ಮುಂದೆ ಶಿಕ್ಷಕರು ಮತ್ತು ಮಕ್ಕಳ ಮುಂದೆ ನಾವುಗಳು ಕೆಟ್ಟದ್ದನ್ನೆಲ್ಲವನ್ನೂ ತ್ಯಜಿಸಿ, ಮಕ್ಕಳನ್ನು ಓದಿಸಿ, ವಿದ್ಯಾವಂತರನ್ನಾಗಿ ಮಾಡುತ್ತೇವೆ. ಊರಿನ ನೈರ್ಮಲ್ಯವನ್ನು ಕಾಪಾಡುತ್ತೇವೆ ಎಂದು ಅಂಬೇಡ್ಕರ್ ಭಾವಚಿತ್ರ ಮುಟ್ಟಿ ಪ್ರಮಾಣ ಮಾಡುವರು.


*(ದೃಶ್ಯ ೪ ರಿಂದ ದೃಶ್ಯ ೯ ರ ತನಕ ಆಯಾಯ ಪಾತ್ರಗಳು ಮತ್ತು ದೃಶ್ಯ ಗಳನ್ನು ನಿರ್ದೇಶಕರ ವಿವೇಚನೆಗೆ ತಕ್ಕನಾಗಿ ಬಳಸಿಕೊಳ್ಳಬಹುದು.)*


*(ನಮ್ಮ ತಾಲ್ಲೂಕಿನ ಸಮಾಜ‌ ವೈದ್ಯ ಎಂದೇ ಗುರುತಿಸಿಕೊಂಡಿದ್ದ ದಿವಂಗತ ಡಾ ಸಿ ಗುರುವಪ್ಪನವರು ರಚಿಸಿದ ಕಿರು ನಾಟಕ ಕುಡಿತದ ಫಲಾಫಲ. ಅವರ ಸ್ಮರಣೆಗಾಗಿ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದೇವೆ. ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವುದರ ಜೊತೆಗೆ ಆಸಕ್ತ ಕಲಾವಿದರು ಕಲಿತು ಪ್ರದರ್ಶನ ನೀಡಿ ಶ್ರೀಯುತ ಶ್ರೀಮಾನ್‌ ಗುರುವಪ್ಪ ನವರ ಹೆಸರನ್ನು ಅಜರಾಮರಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಸಾಧ್ಯವಾದರೇ ಅವರೇ ರಚಿಸಿರುವ ಕಿರುಗವನಗಳು ಮತ್ತು ಚುಟುಕುಗಳನ್ನು ಬಳಸಿಕೊಳ್ಳಬಹುದು.)*


*ನಾಟಕವನ್ನು ಪ್ರಸ್ತುತಪಡಿಸಲಿಚ್ಚಿಸುವ ಆಸಕ್ತ ಕಲಾವಿದರು ಅಥವಾ ನಿರ್ದೇಶಕರು "ಸಮಾಜ ವೈದ್ಯ ಡಾ ಸಿ ಗುರುವಪ್ಪ" ನವರ ಜೀವನ ಮತ್ತು ಸಾಧನೆ ಎಂಬ ಪುಸ್ತಕದ ಕತೃ ಹಾಗೂ ಗುರುವಪ್ಪ ನವರ ಸುಪುತ್ರಿ ಡಾ ಎನ್ ಜಿ ಅಭಿನಂದಿನಿ ಅಥವಾ ಅವರ ಪುತ್ರ ಡಾ ಲೋಕಾನಂದ ರವರ ಅನುಮತಿ ಪಡೆಯತಕ್ಕದ್ದು.*


*ಸಂಗ್ರಹ*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑