Tel: 7676775624 | Mail: info@yellowandred.in

Language: EN KAN

    Follow us :


ಸತ್ತ ಮೇಲೂ ಬದುಕಿರುವ ಎ.ವಿ. ಜಯಶಂಕರಯ್ಯ

Posted date: 30 Mar, 2018

Powered by:     Yellow and Red

ಸತ್ತ ಮೇಲೂ ಬದುಕಿರುವ ಎ.ವಿ. ಜಯಶಂಕರಯ್ಯ

ಶೈಕ್ಷಣಿಕ ಕ್ಷೇತ್ರದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಎ.ವಿ. ಜಯಶಂಕರಯ್ಯ ಅವರು ಸಮಾಜ ಮುಖಿ ಚಿಂತನೆಗಳನ್ನು ಹೊಂದಿದ್ದವರು. ಕುಣಿಗಲ್‌ ತಾಲ್ಲೂಕಿನ ಬೆಟ್ಟಹಳ್ಳಿ ಮಠದ ಶ್ರೀ ಉರಿಗದ್ದಿಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. 

 

ಗಣಿತ ವಿಷಯದ ಶಿಕ್ಷಕರಾಗಿದ್ದ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಇವರಿಗೆ ಕುಣಿಗಲ್ ತಾಲ್ಲೂಕು ಆಡಳಿತದ ವತಿಯಿಂದ ಉತ್ತಮ ಮುಖ್ಯಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇವರು ಮುಖ್ಯಶಿಕ್ಷಕರಾಗಿದ್ದ ಅವಧಿಯಲ್ಲಿ ಉರಿಗದ್ದಿಗೇಶ್ವರ ವಿದ್ಯಾಂಸ್ಥೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಎರಡು ಬಾರಿ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿತ್ತು.

 

ಗಣಿತ ವಿಷಯವನ್ನು ಇವರು ಸರಳವಾಗಿ ಬೋಧಿಸುತ್ತಿದ್ದ ವಿಧಾನ ಇಂದಿನ ಶಿಕ್ಷಕರಿಗೂ ಮಾದರಿಯಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದ,ಇವರು ಮಕ್ಕಳಲ್ಲಿ ಕಲಿಕೆಯ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದರು. 

 

ತಮ್ಮ ತಂದೆ ಪಟೇಲ್ ಎ.ಎಸ್. ವೀರಭದ್ರಯ್ಯ ಮತ್ತು ಹೊನ್ನಮ್ಮ ಅವರ ಹೆಸರಿನಲ್ಲಿ ಬೆಟ್ಟಹಳ್ಳಿ ಮಠದಲ್ಲಿ ಗಣಪತಿ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. 

 

ರಾಮನಗರದ ವೀರಶೈವ ರುದ್ರಭೂಮಿಯ ಜಾಗ ಎ.ವಿ. ಜಯಶಂಕರಯ್ಯ ಅವರ ಹೆಸರಿನಲ್ಲಿದೆ. ಇದರ ಜತೆಗೆ ಅರ್ಚಕರಹಳ್ಳಿಯಲ್ಲಿನ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ನಡೆದ ಪ್ರಕರಣದಲ್ಲಿಯೂ ನ್ಯಾಯಾಲದಯ ಮೆಟ್ಟಿಲೇರಿ ವಿಜಯಶಾಲಿಯಾಗಿದ್ದಾರೆ. ರಾಮನಗರ ತಾಲ್ಲೂಕಿನ ಹರೀಸಂದ್ರ ಗ್ರಾಮದಲ್ಲಿರುವ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದರು. ಸೋಮೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ಇವರು ವಹಿಸಿದ್ದರು. ಈ ದೇವಾಲಯದ ಬಳಿ ಛತ್ರವನ್ನು ನಿರ್ಮಾಣ ಮಾಡಬೇಕು ಎಂಬ ಗುರಿಯನ್ನು ಇವರು ಹೊಂದಿದ್ದರು.

 

ಆ ಕಾಲಕ್ಕೆ ಬಿಎಸ್ಸಿ ಬಿಇಡಿ ಪದವೀಧರರಾಗಿದ್ದ ಇವರು ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದರು. ತಮ್ಮ ಬಿಡುವಿನ ವೇಳೆಯನ್ನು ವ್ಯರ್ಥ ಮಾಡದೆ ಓದಿನಲ್ಲಿ ತಲ್ಲೀನರಾಗುತ್ತಿದ್ದರು. ಇವರ ಮನೆಯಲ್ಲಿ ಪುಟ್ಟ ಗ್ರಂಥಾಲಯವನ್ನು ನಿರ್ಮಾಣ ಮಾಡಿಕೊಂಡಿದ್ದರು.

 

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ, ಜೀವನವನ್ನು ರೂಪಿಸಿಕೊಳ್ಳುವಂತೆ ಜನರಿಗೆ, ಮಕ್ಕಳಿಗೆ ಸಲಹೆ ಸೂಚನೆ ನೀಡುತ್ತಿದ್ದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿದ್ದ ಜಯಶಂಕರಯ್ಯ ಅವರು ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಂಡಿದ್ದರು. ಶಿಸ್ತಿನ ಜೀವನವನ್ನು ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು. 

 

ಪ್ರಾಂಶುಪಾಲರಾಗಿ ನಿವೃತ್ತರಾದ ನಂತರ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಆಧುನಿಕ ಪದ್ಧತಿಯನ್ನು ವ್ಯವಸಾಯದಲ್ಲಿ ಅಳವಡಿಸಕೊಂಡು ಪ್ರಗತಿ ಸಾಧಿಸಿದ್ದರು. ತೆಂಗು, ಬಾಳೆ, ಅಡಿಕೆ, ಶುಂಠಿ, ಕಬ್ಬು, ರೇಷ್ಮೆ ಬೆಳೆದು ಲಾಭ ಗಳಿಸಿದ್ದರು. ಹಲವರು ನಿವೃತ್ತಿಯಾದ ನಂತರ ತಮ್ಮ ಜೀವನವೆ ಮುಗಿದು ಹೋಯಿತು ಎಂದು ಪೇಚಾಡುತ್ತಿರುತ್ತಾರೆ. ಆದರೆ ಜಯಶಂಕರಯ್ಯ ಅವರು ನಿವೃತ್ತಿಯ ನಂತರವೂ ಸಕ್ರಿಯವಾಗಿ ಎಲ್ಲಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದರು. 

 

ರಂಗರಾಯನದೊಡ್ಡಿ ಕೆರೆಯ ಮೇಲ್ವಿಚಾರಕಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಈ ಬಾರಿ ಉತ್ತಮ ಮಳೆಯಾದಾಗ ಕೆರೆ ಕೋಡಿ ಬಿದ್ದ ಸಮಯದಲ್ಲಿ ತಮ್ಮ ಪತ್ನಿ ಕೆ.ಎಸ್. ಪಾರ್ವತಮ್ಮ ಅವರ ಜೊತೆಗೂಡಿ ಕೆರೆಗೆ ಬಾಗಿನ ಅರ್ಪಿಸಿದ್ದರು.

 

ಸುಮಾರು 15 ವರ್ಷಗಳ ಕಾಲ ಅರ್ಚಕರಹಳ್ಳಿಯ ಸ್ಮಶಾನಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಿ ಮಾರ್ಚ್‌ ತಿಂಗಳಿನಲ್ಲಿ ಜಯಶೀಲರಾಗಿದ್ದರು. ಆದರೆ ಇದೇ ಮಾರ್ಚ್ 22ರ ಗುರುವಾರ ರಾತ್ರಿ ಇವರು ನಿಧನರಾಗಿದ್ದು, ನಿಜಕ್ಕೂ ಬೇಸರದ ಸಂಗತಿಯಾಗಿದೆ. ರಾಮನಗರದ ವೀರಶೈವ ರುದ್ರಭೂಮಿಗೆ ಇಲ್ಲವೆ ಅರ್ಚಕರಹಳ್ಳಿಯ ರುದ್ರಭೂಮಿಗೆ ಇವರ ಹೆಸರಿಡುವ ಕೆಲಸವನ್ನು ಮಾಡಬೇಕಿದೆ.

 

ಇವರ ಪತ್ನಿ ಕೆ.ಎಸ್. ಪಾರ್ವತಮ್ಮ ಅವರು. ಇವರಿಗೆ ಮೂರು ಮಂದಿ ಗಂಡು ಮಕ್ಕಳು. ಮೊದಲನೆಯವರು ಎ.ಜೆ. ಸುರೇಶ್, ಇವರು ಪಟೇಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ವೀರಶೈವ ಯುವಕ ಸಂಘದ ಅಧ್ಯಕ್ಷರಾಗಿ, ರೋಟರಿ ಸಿಲ್ಕ್‌ ಸಿಟಿ  ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಎರಡನೆ ಪುತ್ರ ಎ.ಜೆ. ಜಯಮೃತ್ಯುಂಜಯಸ್ವಾಮಿ ಅವರು ಪ್ರಗತಿ ಪರ ಕೃಷಿಕರಾಗಿದ್ದಾರೆ. ಇವರ ಮೂರನೆಯ ಪುತ್ರ ಎ.ಜೆ. ಚಿದಾನಂದಮೂರ್ತಿ, ಕೆಎಂಎಫ್‌ನಲ್ಲಿ ಟೆಕ್ನಿಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. 

 

ಶಿಕ್ಷಕರಾಗಿ ಬೋಧನೆಗೆ ಮಾತ್ರ ಸೀಮಿತವಾಗದೆ ಸಮಾಜಕ್ಕಾಗಿ ದುಡಿದ ಮಹನೀಯರಲ್ಲಿ ಎ.ವಿ. ಜಯಶಂಕರಯ್ಯ ಒಬ್ಬರಾಗಿದ್ದಾರೆ. ಸಮಾಜ ಮುಖಿ ಚಿಂತನೆ, ಸಮಾಜ ಮುಖಿ ಕೆಲಸಗಳನ್ನು ಮಾಡುವವರು ಸತ್ತ ಮೇಲೂ ಬದುಕಿರುತ್ತಾರೆ ಎಂಬುದಕ್ಕೆ ಎ.ವಿ. ಜಯಶಂಕರಯ್ಯ ಅವರು ಸಾಕ್ಷಿಯಾಗಿದ್ದಾರೆ. ಯಾವುದೇ ಸ್ವಾರ್ಥವಿಲ್ಲದೆ ಕುಟುಂಬದ ನಿರ್ವಹಣೆಯ ಜೊತೆಗೆ ಸಮಾಜಕ್ಕಾಗಿ ದುಡಿದ ಜಯಶಂಕರಯ್ಯ ಅವರ ಜೀವನ ಶೈಲಿ ಇತರರಿಗೆ ಮಾದರಿಯಾಗಿದೆ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑