Tel: 7676775624 | Mail: info@yellowandred.in

Language: EN KAN

    Follow us :


ಎಸಿಬಿ ಬಲೆಗೆ ಬಿದ್ದ ಪಿಡಿಓ ಮಂಜುಳಾ ವಿರುದ್ಧ ಮಾಕಳಿ ಗ್ರಾ.ಪಂ ಉಪಾಧ್ಯಕ್ಷೆ ವರಲಕ್ಷ್ಮಮ್ಮ ರಿಂದ ದೂರುಗಳ ಸುರಿಮಳೆ

Posted Date: 09 Jan, 2020

ಎಸಿಬಿ ಬಲೆಗೆ ಬಿದ್ದ ಪಿಡಿಓ ಮಂಜುಳಾ ವಿರುದ್ಧ ಮಾಕಳಿ ಗ್ರಾ.ಪಂ ಉಪಾಧ್ಯಕ್ಷೆ ವರಲಕ್ಷ್ಮಮ್ಮ ರಿಂದ ದೂರುಗಳ ಸುರಿಮಳೆ

ಚನ್ನಪಟ್ಟಣ:ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದ ಮುದಗೆರೆ ಪಿಡಿಓ ಮಂಜುಳಾರವರು ಈ ಹಿಂದೆ  ಮಾಕಳಿಯಲ್ಲಿ ಪಿಡಿಓ ಆಗಿದ್ದ ಮೂರು ವರ್ಷಗಳಲ್ಲಿ ಅನೇಕ ರೀತಿಯ ಅಕ್ರಮ ಹಾಗೂ ಹಣ ದುರುಪಯೋಗ ಪಡಿಸಿಕೊಂಡಿದ್ದು ಇದರ ಬಗ್ಗೆ ದಾಖಲೆ ಸಮೇತ ಮೇಲಿನ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಪಿಡಿಓ ಪರ ನಿಂತಿರುವುದರಿಂದ ಸಂಬಂಧಿಸಿದ ಅವರ ಮೇಲಾಧಿಕಾರಿಗಳು ತನಿಖೆ ಕೈಗೊಂಡು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಮಾಕಳಿ ಗ್ರಾಮ ಪಂಚಾ ಯತಿ ಉಪಾಧ್ಯಕ್ಷೆ ವರಲಕ್ಷ್ಮಮ್ಮ ಎನ್.ಜಿ ಮತ್ತು ಅವರ ಪತಿ ಲೋಕೇಶ್ ಇಂದು ಆಗ್ರಹಿಸಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.


ಮಂಜುಳಾ ಬಂದ ಮೇಲೆ ಪ್ರತಿ ತಿಂಗಳಲ್ಲಿ ಏಳರಿಂದ ಹದಿನೈದು ದಿನಗಳು ಮಾತ್ರ ಕಛೇರಿಗೆ ಬರುತ್ತಿದ್ದರು. ಆದರೆ ಹಾಜರಾತಿ ಪುಸ್ತಕದಲ್ಲಿ ಸಂಪೂರ್ಣ ಹಾಜರಾತಿ ಹಾಕಿಕೊಂಡಿದ್ದಾರೆ. ನರೇಗಾ ಕಾಮಗಾರಿಗಳನ್ನು ಅವರಿಗೆ ಇಷ್ಟ ಬಂದವರಿಗೆ ಕೊಟ್ಟು ಬಿಲ್ ಮಾಡಿಕೊಂಡಿರುವುದಲ್ಲದೆ ಸರ್ಕಾರದಿಂದ ಅನುಷ್ಟಾನಗೊಂಡಿರುವ ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿ ಸುವಲ್ಲಿ ವಿಫಲರಾಗಿದ್ದರು.

ಗ್ರಾಮ ಪಂಚಾಯತಿ ಸದಸ್ಯರಿಗೆ ನೀಡಬೇಕಾಗಿದ್ದ ಗೌರವಧನವನ್ನು ನೀಡದೆ ಅದನ್ನು ದುರುಪಯೋಗ ಮಾಡಿ ಕೊಂಡಿದ್ದಾರೆ.


೨೦೧೫-೧೬ ನೇ ಸಾಲಿನ ಕಂದಾಯ ವಸೂಲಿ ಹಣ ವನ್ನು  ಅಂದಂದೇ ಜಮಾ ಮಾಡದೆ ತಿಂಗಳ ನಂತರ ಸ್ವಲ್ಪ ಸ್ವಲ್ಪವೇ ಜಮಾ ಮಾಡಿದ್ದಾರೆ, ಉಪಕರಗಳನ್ನು ಮಾತ್ರ ಜಮೆ ಮಾಡಿರುವುದಿಲ್ಲ.  ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯು  ಕಛೇರಿಯಲ್ಲಿ ಲಭ್ಯವಾಗದಂತೆ ನೋಡಿಕೊಂಡಿದ್ದಾರೆ. ನರೇಗಾ ಕೂಲಿದಾರರಿಗೂ  ಸಕಾಲದಲ್ಲಿ ಹಣ ನೀಡಿಲ್ಲ, ಕೆಲ ಕಾಮಗಾರಿಗಳನ್ನು ಅಂದಿನ ಶಾಸಕರ ಅಣತಿಯಂತೆ ಮಾಡಿದ್ದಾರೆ.

ವಸತಿ ಫಲಾನುಭವಿಗಳಿಗೆ ಹಣ ಬಿಡುಗಡೆ, ಗ್ರಾಮ ಸಭೆ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ವಾಷಿ೯ಕ ಸಭೆ, ಅಜೆಂಡಾ, ಕರಪತ್ರ ಸಿಡಿಗಳನ್ನು ಮಾಡಲಾಗಿದ್ದು, ಇದರಲ್ಲಿ ಯಾವುದನ್ನೂ ಸಹ ಸರಿಯಾದ ಕ್ರಮದಲ್ಲಿ ಮಾಡಿರುವುದಿಲ್ಲ.  ೧೩ ಮತ್ತು ೧೪ ಹಣಕಾಸು ಯೋಜನೆ, ವರ್ಗವಾರು ಮತ್ತು ಅಂಗವಿಕಲರಿಗೆ ಮೀಸಲಾತಿ ನೀಡಿಲ್ಲ, ನಡಾವಳಿ ನಿಯಮಗಳನ್ನು ದಾಖಲಿಸಿಲ್ಲ, ಹೀಗೆ ಅನೇಕ ರೀತಿಯ ಅದ್ವಾನ್ಹ ಮಾಡಿದ್ದು, ಮುಖ್ಯಮಂತ್ರಿ ಗಳವರೆಗೆ ಎಲ್ಲರಿಗೂ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಪಿಡಿಓ ಪರ ನಿಂತಿದ್ದಾರೆ. ಈಗಲೂ ಕ್ರಮ ಕೈಗೊಳ್ಳದಿ ದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಲೋಕೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನವಾದಿ ಮಹಿಳಾ ಸಂಘ ಟನೆಯ ಪ್ರಮೀಳಾ, ಸಿದ್ದೇ ಗೌಡ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಫೆಬ್ರವರಿ ೦೯ ಕ್ಕೆ ಮತ್ತೀಕೆರೆ ತಾಲ್ಲೂಕು ಪಂಚಾಯತಿ ಚುನಾವಣೆ ನಿಗದಿ
ಫೆಬ್ರವರಿ ೦೯ ಕ್ಕೆ ಮತ್ತೀಕೆರೆ ತಾಲ್ಲೂಕು ಪಂಚಾಯತಿ ಚುನಾವಣೆ ನಿಗದಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ರಾಜ್ಯ ಚುನಾವಣಾ ಆಯೋಗ ಮುಂದಿನ ತಿಂಗಳು ೦೯ ರಂದು ಚುನಾವಣೆನ್ನು ಘೋಷಿಸಿ

ಭ್ರಷ್ಟಾಚಾರ ನಿಗ್ರಹ ದಳ ಸಭೆ, ದೂರುದಾರರ ನಿರಾಸಕ್ತಿ
ಭ್ರಷ್ಟಾಚಾರ ನಿಗ್ರಹ ದಳ ಸಭೆ, ದೂರುದಾರರ ನಿರಾಸಕ್ತಿ

ಚನ್ನಪಟ್ಟಣ: ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ, ಕೆಲಸ ಮಾಡಲು ಸತಾಯಿಸುತ್ತಿದ್ದರೆ, ಸಕಾರಣ ನೀಡದೆ ಅಲೆದಾಡಿಸುತ್ತಿದ್ದರೆ ಇನ್ನಿತರ ಯಾವುದೇ ರ

ಅಮಾನವೀಯ ಕೃತ್ಯ, ಕಣ್ಣಿದ್ದು ಕುರುಡಾದ ಜನ.
ಅಮಾನವೀಯ ಕೃತ್ಯ, ಕಣ್ಣಿದ್ದು ಕುರುಡಾದ ಜನ.

ಚನ್ನಪಟ್ಟಣ: ಕೆಲವರ ಮನಸ್ಥಿತಿಯೇ ಹಾಗೇ ! ‌ಜನರಿಗೆ ಕಿರಿಕಿರಿ ಅನುಭವಿಸುವಲು ಏನೇನು ದುಸ್ಕೃತ್ಯಗಳನ್ನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತಾರೆ, ಅದ

ಕಳೆಗಟ್ಟುತ್ತಿರುವ ಅಯ್ಯನಗುಡಿ ಜಾತ್ರೆ
ಕಳೆಗಟ್ಟುತ್ತಿರುವ ಅಯ್ಯನಗುಡಿ ಜಾತ್ರೆ

ಚನ್ನಪಟ್ಟಣ: ತಾಲ್ಲೂಕಿನ ಸುಪ್ರಸಿದ್ಧ ಅಯ್ಯನಗುಡಿ (ಕೆಂಗಲ್) ಜಾತ್ರೆಗೆ ಸಂಕ್ರಾಂತಿ ಹಬ್ಬದ ಹಿಂದಿನ ದಿನದಿಂದಲೇ ದೂರದೂರುಗಳಿಂದ ಜಾನುವಾರುಗಳು ಆಗಮಿಸುತ್ತಿ

ಎಲ್ಲೆಡೆ ವಿಜೃಂಭಣೆಯಿಂದ ಜರುಗಿದ ರಾಸುಗಳ ಹಬ್ಬ ಸಂಕ್ರಾಂತಿ
ಎಲ್ಲೆಡೆ ವಿಜೃಂಭಣೆಯಿಂದ ಜರುಗಿದ ರಾಸುಗಳ ಹಬ್ಬ ಸಂಕ್ರಾಂತಿ

ಚನ್ನಪಟ್ಟಣ: ಸಂಕ್ರಾಂತಿ ಹಬ್ಬ ಎಂದರೆ ರೈತನಿಗೆ ಸಡಗರವೋ ಸಡಗರ, ವರ್ಷಕ್ಕೊಮ್ಮೆ ಬರುವ ಈ ಸುಗ್ಗಿ ಹಬ್ಬದಲ್ಲಿ ರೈತ ಮತ್ತು ರೈತ ಕುಟುಂಬವಲ್ಲದೆ ತಾನು ಸಾಕಿರು

ಅನಧಿಕೃತ ಧಾರ್ಮಿಕ ಕಟ್ಟಡ ದ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ
ಅನಧಿಕೃತ ಧಾರ್ಮಿಕ ಕಟ್ಟಡ ದ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ

ರಾಮನಗರ: ಹೈಕೋರ್ಟ್ ನಿರ್ದೇಶನದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಟ್ಟಿರುವ ಧಾರ್ಮಿಕ ಕಟ್ಟಡಗಳನ್ನು ಗುರುತಿಸಿ, ಸರ್ವೆ ಕಾರ್ಯ ನಡೆಸ

ಸಂಕ್ರಾಂತಿಯಂದು ಅಯ್ಯನಗುಡಿ (ಕೆಂಗಲ್) ಜಾತ್ರೆ, ಸಮಿತಿಯಿಂದ ಸಕಲ ಸಿದ್ದತೆ
ಸಂಕ್ರಾಂತಿಯಂದು ಅಯ್ಯನಗುಡಿ (ಕೆಂಗಲ್) ಜಾತ್ರೆ, ಸಮಿತಿಯಿಂದ ಸಕಲ ಸಿದ್ದತೆ

ಚನ್ನಪಟ್ಟಣ: ಇದೇ ತಿಂಗಳ ಸಂಕ್ರಾಂತಿ ಹಬ್ಬದ ಸಡಗರ ದೊಂದಿಗೆ ನಡೆಯಲಿರುವ ಈ ಬಾರಿಯ ಅಯ್ಯನಗುಡಿ (ಕೆಂಗಲ್) ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ

ಶಿವಪ್ಪನ ಮಠದಲ್ಲಿ ಅದ್ದೂರಿ ಚಂದ್ರಮಂಡಲೋತ್ಸವ
ಶಿವಪ್ಪನ ಮಠದಲ್ಲಿ ಅದ್ದೂರಿ ಚಂದ್ರಮಂಡಲೋತ್ಸವ

ಚನ್ನಪಟ್ಟಣ: ನಗರದ ಹೊರವಲಯದಲ್ಲಿರುವ ಶಿವಪ್ಪನಮಠ (ಲಕ್ಷ್ಮೀಪುರ) ದ ಶ್ರೀ ಮಂಟೇಸ್ವಾಮಿ (ಈಶ್ವರ ದೇವಾಲಯ ಎಂದು ಹೇಳುತ್ತಾರೆ) ದೇವಾಲಯದಲ್ಲಿ ನಿನ್

ಎಸಿಬಿ ಬಲೆಗೆ ಬಿದ್ದ ಪಿಡಿಓ ಮಂಜುಳಾ ವಿರುದ್ಧ ಮಾಕಳಿ ಗ್ರಾ.ಪಂ ಉಪಾಧ್ಯಕ್ಷೆ ವರಲಕ್ಷ್ಮಮ್ಮ ರಿಂದ ದೂರುಗಳ ಸುರಿಮಳೆ
ಎಸಿಬಿ ಬಲೆಗೆ ಬಿದ್ದ ಪಿಡಿಓ ಮಂಜುಳಾ ವಿರುದ್ಧ ಮಾಕಳಿ ಗ್ರಾ.ಪಂ ಉಪಾಧ್ಯಕ್ಷೆ ವರಲಕ್ಷ್ಮಮ್ಮ ರಿಂದ ದೂರುಗಳ ಸುರಿಮಳೆ

ಚನ್ನಪಟ್ಟಣ:ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದ ಮುದಗೆರೆ ಪಿಡಿಓ ಮಂಜುಳಾರವರು ಈ ಹಿಂದೆ  ಮಾಕ

ಸಿಎಎ, ಎನ್ಆರ್ಸಿ, ಎನ್ಆರ್ಪಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ ಪ್ರಗತಿಪರ ಸಂಘಟನೆಗಳ ಒಕ್ಕೂಟ
ಸಿಎಎ, ಎನ್ಆರ್ಸಿ, ಎನ್ಆರ್ಪಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ ಪ್ರಗತಿಪರ ಸಂಘಟನೆಗಳ ಒಕ್ಕೂಟ

ಚನ್ನಪಟ್ಟಣ: ನಗರದ ಮದೀನ ಚೌಕ್‌ನ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿ ಯನ್ನು ಕರೆದಿದ್ದ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಪೌರತ್ವ ತಿ

Top Stories »  


Top ↑