Tel: 7676775624 | Mail: info@yellowandred.in

Language: EN KAN

    Follow us :


ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ

Posted date: 13 Feb, 2020

Powered by:     Yellow and Red

ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ

ಮಾಜದಲ್ಲಿಂದು ಸ್ವಾರ್ಥ  ಮೇರೆ ಮೀರಿದೆ. ನಾಗರಿಕತೆ ಮರೆಯಾಗಿ ಸದಾಚಾರ ಸಂಸ್ಕೃತಿ ನೀತಿ ನಡವಳಿಕೆಗಳು ಮಾಯವಾಗಿವೆ. ಮನುಷ್ಯತ್ವ ಇಲ್ಲವಾಗಿ ಮೃಗತ್ವ ವಿಜೃಂಭಿಸುತ್ತಿದೆ, ಸಜ್ಜನರಿಗಿಂತ ದುರ್ಜನರು ಮೆರೆಯುತ್ತಿದ್ದಾರೆ,.ಎಲ್ಲರಿಗಾಗಿ ನಾನು ಎಂಬ ಭಾವ ಕೊನೆಯಾಗಿ ನನಗಾಗಿ ನಾನು ಎಂಬ ಮಂತ್ರವೇ ಮೇಲಾಗಿದೆ. ಒಟ್ಟಾರೆ ಮನುಷ್ಯತ್ವವೇ ಮರೆಯಾಗಿದೆ.


ಹುಲ್ಲಾಗು  ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ'

ಎಂಬ ಡಿ.ವಿ.ಜಿ.ಯವರ ನುಡಿ ಮಾಣಿಕ್ಯದಂತೆ ಇಂದು ಬಡವರ, ದೀನದುರ್ಬಲರ, ಅಸಹಾಯಕರ ಪರವಾಗಿ ಮಿಡಿಯುವ ಮನಸ್ಸುಗಳು ಬೇಕಾಗಿವೆ. ಸಾಮಾಜಿಕ ಕಳಕಳಿ, ದಯೆ, ಅನುಕಂಪ, ಕರುಣೆ, ತ್ಯಾಗ, ಸಹಾನುಭೂತಿ, ಪರೋಪಕಾರದಂತಹ ಮಾನವೀಯ ಮೌಲ್ಯಗಳುಳ್ಳ ಸಂವೇದನಾಶೀಲ ವ್ಯಕ್ತಿಗಳು ಈ ಸಮಾಜಕ್ಕೆ ಬೇಕಾಗಿದ್ದಾರೆ.



'ಸರ್ವೇ ಜನೋ ಸುಖಿನೋ ಭವಂತು' ಎಂಬ ತತ್ವವನ್ನು ಕೇವಲ ಬಾಯಿಯಲ್ಲಿ ಪಠಿಸುವವರಿಗಿಂತ ಆಚರಣೆಯಲ್ಲಿ ಪಾಲಿಸುವವರು ಬೇಕಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ  ಅಪರೂಪದ ಮಾನವೀಯ ಮೌಲ್ಯಗಳುಳ್ಳ ಸಾಂಸ್ಕೃತಿಕ ಅಭಿರುಚಿಯ ಸಾಮಾಜಿಕ ಚಿಂತಕರಾಗಿ, ಸಮಾಜಮುಖಿ ಕೆಲಸಗಳಲ್ಲಿ ದುಡಿಯುತ್ತಿರುವ ವ್ಯಕ್ತಿಗಳಲ್ಲಿ ರಾಮನಗರದ ಎಸ್. ರುದ್ರೇಶ್ವರ ಅವರು ಪ್ರಮುಖರು. ಪತ್ರಕರ್ತರಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ ಸಂಘಟಕರಾಗಿ, ಜನಪದ ಕಲಾವಿದರ ಆಶಾಕಿರಣವಾಗಿ, ನವ ಯುವಪ್ರತಿಭೆಗಳ ನೈತಿಕ ಸ್ತಂಭವಾಗಿ, ಸಾಮಾಜಿಕ  ಹೋರಾಟಗಾರರ ಬೆಂಬಲಿಗರಾಗಿ, ಸ್ವತಃ ಲೇಖಕರಾಗಿ, ಅಂಕಣಕಾರರಾಗಿ, ಅದ್ಯಯನಶೀಲ ವಿದ್ಯಾರ್ಥಿಯಾಗಿ ಹೀಗೆ ಹತ್ತು ಹಲವು ರಂಗಗಳಲ್ಲಿ ಬಹುಮುಖ ಪ್ರತಿಳೆಯುಳ್ಳ ಸಹೃದಯಿ.
      ಜಾತ್ಯಾತೀತ ಮನೋಧರ್ಮ, ಸಾಮಾಜಿಕ ಕಳಕಳಿ ಮತ್ತು ಸಾಂಸ್ಕೃತಿಕ ಅಭಿರುಚಿಯ ಸಮ್ಮಿಳಿತದ ವ್ಯಕ್ತಿತ್ವ ಹೊಂದಿರುವ ಎಸ್. ರುದ್ರೇಶ್ವರ ಅವರು ರೇಷ್ಮೆ ನಾಡು ರಾಮನಗರದಲ್ಲಿ 03-02-1983 ಜನಿಸಿದವರು. ಇವರ ತಂದೆ ಕೆ.ಎಸ್. ಶಿವಮೂರ್ತಿ, ತಾಯಿ ಸುಮಿತ್ರ, ಕಡುಬಡತನದ ಕುಟುಂಬದಲ್ಲಿ ಜನಿಸಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲವನ್ನು ಬಾಲ್ಯದಲ್ಲೇ ಹೊಂದಿದವರು. ತಮ್ಮ ಪ್ರಾಥಮಿಕ ಹಂತದಿಂದ ಪದವಿವರೆಗಿನ ಶಿಕ್ಷಣವನ್ನು ರಾಮನಗರದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮುಗಿಸಿ,  ಕನ್ನಡ ಭಾಷಾ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಚನ್ನಪಟ್ಟಣದ ಕೆಂಗಲ್ ನ ಕುವೆಂಪು ಮಹಾವಿದ್ಯಾಲಯದಲ್ಲಿ ಮುಗಿಸಿದರು. ಕನ್ನಡ ಸಾಹಿತ್ಯದಲ್ಲಿ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ``ರಾಮನಗರ ಜಿಲ್ಲೆಯ ಸ್ಥಳನಾಮಗಳು'' ಎಂಬ ವಿಯಷದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿ ಆಂದ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಈಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ``ರಾಮನಗರ ಜಿಲ್ಲೆಯ ಬುಡಕಟ್ಟುಗಳ ಸಾಂಸ್ಕೃತಿಕ ಸ್ಥಿತ್ಯಂತರಗಳು'' ಎಂಬ ವಿಷಯವನ್ನು ಕುರಿತು ಸಂಶೋಧನೆ (ಪಿಎಚ್.ಡಿ) ಕೈಗೊಂಡಿದ್ದಾರೆ. ಶಿಕ್ಷಕಿ ಡಿ.ಆರ್. ನೀಲಾಂಬಿಕ ಇವರ ಪತ್ನಿಯಾಗಿದ್ದು, ಆರ್. ಯಶಿಕಾ (ನೀರು) ಎಂಬ ಮಗಳಿದ್ದಾಳೆ. ಸುಂದರ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ.



ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿಯುಳ್ಳ ವ್ಯಕ್ತಿ :
ಶೈಕ್ಷಣಿಕ ಸಾಧನೆಯ ಜೊತೆಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ  ತೊಡಗಿಸಿಕೊಂಡಿರುವ ಎಸ್. ರುದ್ರೇಶ್ವರ ಅವರು ವಿದ್ಯಾಭ್ಯಾಸದ ದಿನಗಳಿಂದಲೇ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಕ ಅಭಿರುಚಿಯನ್ನು ಬೆಳೆಸಿಕೊಂಡಿರುವ ಸಹೃದಯ  ವ್ಯಕ್ತಿ. ನಾಡಿನ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದರ ಜೊತೆಗೆ ಕಥೆ ಕವಿತೆಗಳನ್ನು ಕಟ್ಟುತ್ತಾ ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ವಿಚಾರ ಗೋಷ್ಠಿಗಳು ಕಾವ್ಯ ಕಮ್ಮಟಗಳು ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ನಾಡಿನ ವಿವಿಧ ಕಡೆಗಳಲ್ಲಿ ನಡೆಯುವ ರಾಜ್ಯ ಮಟ್ಟದ ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಸಾಮಾಜಿಕ ಕಳಕಳಿ ಜಾತ್ಯತೀತ ಮನೋಧರ್ಮದ ವ್ಯಕ್ತಿತ್ವವನ್ನು ರೂಢಿಸಿಕೊಂಡು ತಮ್ಮ ಸಂವೇದನೆಗಳನ್ನು ಸಾಹಿತ್ಯದ ಮೂಲಕ ಸಮರ್ಥವಾಗಿ ಪ್ರತಿಬಿಂಬಿಸುತ್ತಾ ಬಂದಿದ್ದಾರೆ. ಆ ಮೂಲಕ ರಾಮನಗರ ಜಿಲ್ಲೆಯ ಜನಮಾನಸದಲ್ಲಿ ಸಾಹಿತ್ಯ ವಲಯದಲ್ಲಿ  ವಿಶಿಷ್ಟ ಸ್ಥಾನಗಳಿಸಿದ್ದಾರೆ.



ಸಾಮಾಜಿಕ ಕಳಕಳಿಯುಳ್ಳ ಭರವಸೆಯ ಪತ್ರಕರ್ತನಾಗಿ ರುದ್ರೇಶ್ವರ :
ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ  ಎಸ್. ರುದ್ರೇಶ್ವರ ಅವರು ಪ್ರಾರಂಭದಲ್ಲಿ ಸ್ವತಃ `ಸನ್ಮಿತ್ರ' ದಿನಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಂಜೆ ಸಮಾಚಾರ, ಬೆಂಗಳೂರು ಖಡ್ಗ, ವಾರ್ತಾಭಾರತಿ ದಿನಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ಮೂಲಕ  ಸಮಾಜವನ್ನು ತಿದ್ದುವ  ಅರಿತವಾದ ಲೇಖನಗಳನ್ನು ಬರೆದು ಉದಯೋನ್ಮುಖ ಪತ್ರಕರ್ತರಾಗಿ ಹೊರಹೊಮ್ಮಿದ್ದಾರೆ . ತಮ್ಮದೇ ವಿಶಿಷ್ಟ  ಬರವಣಿಗೆಯ ಶೈಲಿಯ ಮೂಲಕ ಸಮಾಜದ ಅಸಮಾನತೆಯ ಕಿಡಿಯಾಗಿ, ದೀನ ದುರ್ಬಲರ ನೋವು ಸಂಕಟಗಳಿಗೆ ದನಿಯಾಗಿ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುತ್ತಾ , ದಲಿತರು ಮತ್ತು ಶೋಷಿತರ ಪರವಾಗಿ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.
ಸಾಮಾಜಿಕ ಸಮಾನತೆ, ಧರ್ಮ ಸಾಮರಸ್ಯಗಳು ಕುರಿತಂತೆ ತಮ್ಮ ಬರಹಗಳಲ್ಲಿ ಪ್ರಭುತ್ವವಾಗಿ ಚಿಂತಿಸಿದ್ದಾರೆ. ಜಾತೀಯತೆ ಅಳಿಯಬೇಕು, ಶೋಷಣೆ ಕೊನೆಯಾಗಬೇಕು, ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂಬ ನಿಲುವುಗಳನ್ನು ನಿರ್ಭಯವಾಗಿ ಪ್ರಕಟಿಸುತ್ತಾ ಬಂದಿದ್ದಾರೆ .ಅಷ್ಟೇ ಅಲ್ಲದೆ ಪತ್ರಕರ್ತನಾಗಿ ತಮ್ಮ ಲೇಖನಗಳ ಮೂಲಕ ರಾಮನಗರ ಜಿಲ್ಲೆಯ ಸಾಧಕರನ್ನು, ಸಮಾಜಮುಖಿ ಚಿಂತಕರನ್ನು, ರಂಗಭೂಮಿ ಕಲಾವಿದರನ್ನು, ಜನಪದ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಬುಡಕಟ್ಟು ಜನರ ದೀನ ದಲಿತರ ನೋವುಗಳನ್ನು ಸಂಕಟಗಳನ್ನು ಸಮಾಜದ ಮುಂದೆ  ತೆರೆದಿಡುವ ಮೂಲಕ ಅವರಿಗೆ ಪರಿಹಾರಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮೌಲ್ಯಯುತವಾದ ಲೇಖನಗಳ ಮೂಲಕ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ, ನಾಗರಿಕರ ಸಮಸ್ಯೆಗಳ ಬಗ್ಗೆ, ಸಾಧಕರ ಪ್ರತಿಭಾವಂತಿಕೆಯ ಬಗ್ಗೆ, ಸಂಘ ಸಂಸ್ಥೆಗಳ ಕ್ರಿಯಾಶೀಲತೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಬರವಣಿಗೆಯನ್ನೇ ಬದುಕನ್ನಾಗಿ ಸ್ವೀಕರಿಸಿರುವ ರಾಮನಗರ ಜಿಲ್ಲೆಯ ಹಲವಾರು ವಿಷಯಗಳ ಬಗ್ಗೆ ಚೆನ್ನಾಗಿ ಬಲ್ಲ ವಿಷಯ ತಜ್ಞರಾಗಿದ್ದಾರೆ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಇವರೊಬ್ಬ ಪತ್ರಿಕೋದ್ಯಮವನ್ನು ಸಾಂಸ್ಕೃತಿಕ ನೆಲೆಯಲ್ಲಿ ಶ್ರೀಮಂತ ಗೊಳಿಸುತ್ತಿರುವ ಅಪ್ರತಿಮ ಬರಹಗಾರರಾಗಿದ್ದಾರೆ.



ಜನಪರ ಕಾಳಜಿಯುಳ್ಳ ಸಾಮಾಜಿಕ ಚಿಕಿತ್ಸಕ :
'ಪರ ಹಿತಾರ್ಥಕಿದಂ ಶರೀರಂ' ಎಂಬ ನುಡಿಮುತ್ತನ್ನು ತಮ್ಮ ಜೀವನದಲ್ಲಿ  ಆಚರಿಸಿಕೊಂಡು ಬರುತ್ತಿರುವ ಎಸ್. ರುದ್ರೇಶ್ವರ ತಮ್ಮ ಅಜ್ಜಿ ತಾತಂದಿರಾದ 'ಪಾರ್ವತಮ್ಮ ಮತ್ತು ಸಿದ್ಧವೀರಯ್ಯ' 'ಜಯಮ್ಮ ಮತ್ತು ಶಾಂತಯ್ಯ' ಅವರ ನೆನಪಿನಲ್ಲಿ ಇಲ್ಲದವರಿಗೆ, ಬಡವರಿಗೆ, ನಿರ್ಗತಿಕರಿಗೆ ತಮ್ಮ ಶಕ್ತಾನುಸಾರ ನೆರವು ನೀಡುತ್ತಾ ಬರುತ್ತಿದ್ದಾರೆ. ಕಳೆದ ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಸಿಬ್ಬಂದಿಗಳಿಗೆ ತಮ್ಮ ಸ್ವಂತ ದುಡಿಮೆಯ ಹಣದಿಂದ ಸ್ವೆಟರ್ ಖರೀದಿಸಿ ಹಂಚಿದ್ದಾರೆ. ಕೈಲಾಂಚ ಹೋಬಳಿಯ ಹಲವು ಗ್ರಾಮಗಳಲ್ಲಿ ಮತದಾನದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಮಗಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಹಿಂದುಳಿದ ವರ್ಗದ ಮಹಿಳೆಯರನ್ನು ಗೌರಿ ಹಬ್ಬಕ್ಕೆಂದು ತಮ್ಮ ಮನೆಗೆ ಆಹ್ವಾನಿಸಿ ಬಾಗಿನ ಅರ್ಪಿಸುತ್ತಾ ಬಂದಿದ್ದಾರೆ.


ರಾಮನಗರದ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬ್ಯಾಂಡ್ ಸೆಟ್ ವಿತರಿಸಿದ್ದಾರೆ. ರಾಮನಗರದ ಕೆ.ಪಿ ದೊಡ್ಡಿಯಲ್ಲಿರುವ 'ದಾರಿದೀಪ' ವೃದ್ದಾಶ್ರಮದಲ್ಲಿ ಹಿರಿಯ ಜನಪದ ಕಲಾವಿದರಿಗೆ ಸನ್ಮಾನ ಮಾಡುವ ಮೂಲಕ ವೃದ್ಧರೊಂದಿಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸಿಕೊಂಡಿದ್ದಾರೆ. ಹಲವಾರು  ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ  ರಾಮನಗರದ ಕೂಟಗಲ್ ಗ್ರಾಮದ ಈರುಳಿಗರ ಸಮುದಾಯದ  ಬಡಕುಟುಂಬಗಳಿಗೆ  ಸ್ವೆಟರ್ ಹಂಚಿದ್ದಾರೆ.


ಇರುಳಿಗರು ನಿವೇಶನ ಸೇರಿದಂತೆ ಹಲವು ಮೂಲಭೂತ ಅವಶ್ಯಕತೆಗಳಿಗಾಗಿ ನಡೆಸುತ್ತಿರುವ ನಿರಂತರ ಹೋರಾಟ ಸುಮಾರು  ಒಂದು ತಿಂಗಳು ಮುಂದುವರಿದಾಗ ಇರುಳಿಗ ಬುಡಕಟ್ಟು ಜನರ ಸಂಕಷ್ಟಕ್ಕೆ ನೆರವಾದ ಸಾಮಾಜಿಕ ಕಾರ್ಯಕರ್ತರಾಗಿರುವ ಎಸ್. ರುದ್ರೇಶ್ವರ  ನೆರವಾಗಿದ್ದಾರೆ. ಇವೆಲ್ಲದರ ಜೊತೆಗೆ ಸಮಾಜದ ಅಸಮಾನತೆ ವಿರುದ್ಧ ಸಮರ ಸಾರುವ ಹೋರಾಟಗಾರರಿಗೆ ಬೆನ್ನೆಲುಬಾಗಿ  ನಿಲ್ಲುತ್ತಾ ದೀನದುರ್ಬಲರ ನೋವು, ಸಂಕಟಗಳಿಗೆ ಪ್ರಾಮಾಣಿಕ ದನಿಯಾಗಿದ್ದಾರೆ.


ನವ ಯುವ ಪ್ರತಿಭೆಗಳ ನೈತಿಕ ಸ್ತಂಭವಾಗಿ ರುದ್ರೇಶ್ವರ :
    ತಾನೊಬ್ಬನೆ ಬೆಳೆದರೆ ಸಾಲದು ತನ್ನೊಟ್ಟಿಗೆ ಇರುವ ತನ್ನ ಸಮಕಾಲೀನ ಎಲ್ಲ ಯುವಕರು ಸಾಮಾಜಿಕವಾಗಿ ಮುಂದೆ ಬರಬೇಕು ಎಂಬ  ಸದಾಶಯ ಉಳ್ಳವರು  ಎಸ್. ರುದ್ರೇಶ್ವರ. ಅದಕ್ಕಾಗಿ ಅವರು ಉದಯೋನ್ಮುಖ ಬರಹಗಾರರಿಗೆ, ಚಳುವಳಿಗಾರರಿಗೆ, ಹೋರಾಟಗಾರರಿಗೆ, ಸಾಮಾಜಿಕ ಕಳಕಳಿ ಇರುವವರಿಗೆ ಸ್ಪೂರ್ತಿ ತುಂಬುತ್ತಾ, ಜನರಲ್ಲಿ ಸಾಮಾಜಿಕ ಕಳಕಳಿಯ ಹಾಗೂ ಸಾಹಿತ್ಯ ಪ್ರಜ್ಞೆಯನ್ನು ಹೆಚ್ಚಿಸುವುದರಲ್ಲಿ ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ.  ಇವರ ಪ್ರೇರಣೆಯಿಂದ ಅದೆಷ್ಟೋ ಯುವ ಸಮುದಾಯ ತಮ್ಮ ಹುಟ್ಟುಹಬ್ಬಗಳನ್ನು ತಮ್ಮ ಮನೆಯ ಸಮಾರಂಭಗಳನ್ನು ಅರ್ಥಪೂರ್ಣವಾಗಿ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಸಮಾಜಮುಖಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ ಎಸ್. ರುದ್ರೇಶ್ವರ  ಯುವ ಸಮುದಾಯವನ್ನು  ಸಾಮಾಜಿಕ ಕೆಲಸಗಳ ಕಡೆ ಸೆಳೆಯುವ ಸ್ಫೂರ್ತಿಯ ಸೆಲೆಯಾಗಿದ್ದಾರೆ.  ಇವೆಲ್ಲದರ ಜೊತೆಗೆ ಸಮಾಜದ ಅಸಮಾನತೆ ವಿರುದ್ಧ ಸಮರ ಸಾರುವುದರ ಮೂಲಕವಾಗಿ ದೀನದುರ್ಬಲರ ನೋವು, ಸಂಕಟಗಳಿಗೆ ಪ್ರಾಮಾಣಿಕ ದನಿಯಾಗಿದ್ದಾರೆ.


ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಎಸ್. ರುದ್ರೇಶ್ವರ:
ವಿಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವದೊಂದಿಗೆ ವೈಚಾರಿಕ ಚಿಂತನೆಯನ್ನು ಹೊಂದಿರುವ ಎಸ್. ರುದ್ರೇಶ್ವರ ತಮ್ಮ ಚಿಂತನೆಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರಲು ಹಾಗೂ ಸಾಮಾಜಿಕವಾಗಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಸದುದ್ದೇಶದಿಂದ  ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾ ಲೇಖಕರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ, ನಾಗರಿಕ ವೇದಿಕೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಒಳ್ಳೆಯ ಸಾಹಿತ್ಯ  ಸಂಘಟಕರು , ಸಂಸ್ಕೃತಿಯ ಪರಿಚಾರಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಎಲ್ಲರ ಒಳಿತಿಗೆ ಮಿಡಿಯುವ ಹೃದಯವಂತ :
ಇಷ್ಟೊಂದು ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲರ ಒಳಿತಿಗಾಗಿ ಮಿಡಿಯುತ್ತಿರುವ ಎಸ್. ರುದ್ರೇಶ್ವರ ಅವರು  ಶ್ರೀಮಂತ ವ್ಯಕ್ತಿಯೇನೂ ಅಲ್ಲ, ಅವರು ಕೌಟುಂಬಿಕವಾಗಿ, ವೈಯಕ್ತಿಕವಾಗಿ ಸಾಕಷ್ಟು ಆರ್ಥಿಕ ಸಮಸ್ಯೆಯನ್ನು  ಎದುರಿಸುತ್ತಿದ್ದಾರೆ. ತನ್ನ ಕಷ್ಟವನ್ನು ಯಾರೊಂದಿಗೂ ಹಂಚಿಕೊಂಡವರಲ್ಲ, ನನ್ನ ಕಷ್ಟವೇ ಬೆಟ್ಟದಷ್ಟು ಊರ ಉಸಾಬರಿ ನನಗೇಕೆ ಎಂದು ತನ್ನ ಸುತ್ತಾ ಬೇಲಿ ಹಾಕಿಕೊಂಡವರಲ್ಲ, ಮೈಯನ್ನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು  ಎಂಬ ನುಡಿಮುತ್ತಿಗೆ  ಅನುಗುಣವಾಗಿ ತನ್ನ ಕಷ್ಟಗಳು ಎಷ್ಟೇ ಇದ್ದರೂ ಅದನ್ನು ಮರೆತು  ತನ್ನ ಸುತ್ತಮುತ್ತಲಿರುವ ಎಲ್ಲಾ ಜನರು ಸಮಾನತೆಯಿಂದ ಸಂತೋಷದಿಂದ ಇರಬೇಕು ಎಂಬುದು ಅವರ ಅಭಿಲಾಷೆ. ಅದಕ್ಕಾಗಿ ತಾವು ದುಡಿದಿದ್ದರಲ್ಲಿ  ಸಮಾಜಕ್ಕೆ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ, ಅವರ ಗುಣಕ್ಕೆ ಅವರೇ ಸಾಟಿ.
ನಲ್ಮೆಯ ಎಸ್. ರುದ್ರೇಶ್ವರರವರೇ  ನೀವು ಒಬ್ಬ ಪತ್ರಕರ್ತರಾಗಿ ಮಾತ್ರವಲ್ಲದೆ, ಮಾನವೀಯ ಅಂತಃಕರಣವುಳ್ಳ ಮನುಷ್ಯರಾಗಿ ಸಮಾಜಮುಖಿ ಚಿಂತಕರಾಗಿ ಸಾಂಸ್ಕೃತಿಕ ಸಂಘಟಕರಾಗಿ,  ಕಲಾವಿದರ ಆಶಾಕಿರಣವಾಗಿ, ಯುವಪ್ರತಿಭೆಗಳ ಮಾರ್ಗದರ್ಶಕರಾಗಿ, ಸಾಮಾಜಿಕ  ಹೋರಾಟಗಾರರರಾಗಿ, ಲೇಖಕರಾಗಿ, ಅಂಕಣಕಾರರಾಗಿ, ಅಧ್ಯಯನಶೀಲ ವಿದ್ಯಾರ್ಥಿಯಾಗಿ ಹೀಗೆ ಹತ್ತು ಹಲವು ರಂಗಗಳಲ್ಲಿ ರಾಮನಗರ ಜಿಲ್ಲೆಯ  ಬಹುಮುಖ ಪ್ರತಿಭೆಯುಳ್ಳ ಸಹೃದಯಿ ಸಂಪನ್ಮೂಲ ವ್ಯಕ್ತಿ ಹಾಗೂ ಶಕ್ತಿಯಾಗಿ ಹೆಜ್ಜೆ ಇಡುತ್ತಿದ್ದೀರಿ, ನಿಮ್ಮ ಬಹುಮುಖ ಪ್ರತಿಭೆ ವಿಸ್ತರಿಸುವಂತಾಗಲಿ. ನಿಮ್ಮ ಆಲೋಚನೆಗಳು, ಆದರ್ಶಗಳು , ಚಿಂತನೆಗಳು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಲಿ,  ನಿಮ್ಮಿಂದ ಸ್ವಲ್ಪ ಮಟ್ಟಿಗಾದರೂ ಬಡವರು ನಿರ್ಗತಿಕರು ದೀನ ದುರ್ಬಲರ ಬಾಳಿಗೆ ಬೆಳಕು ಬರುವಂತಾಗಲಿ, ಸಮ ಸಮಾಜದ ಕಲ್ಪನೆ ಸಾಕಾರವಾಗಲಿ ಎಂದು ಶುಭ ಹಾರೈಸುತ್ತೇನೆ.



-ಯೋಗೇಶ್ ಚಕ್ಕೆರೆ,

ಸಾಹಿತಿ, ಕನ್ನಡ ಅಧ್ಯಾಪಕರು, ಚನ್ನಪಟ್ಟಣ.

ಮೊ: 9620479970

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑