Tel: 7676775624 | Mail: info@yellowandred.in

Language: EN KAN

    Follow us :


ಸರ್ಕಾರವೇ ಮನೆಯ ಬಾಗಿಲಿಗೆ ಬಂದು ಸೇವೆ ಸಲ್ಲಿಸಲಿದೆ ಜಿಲ್ಲಾಧಿಕಾರಿ ಅರ್ಚನಾ

Posted date: 11 Mar, 2020

Powered by:     Yellow and Red

ಸರ್ಕಾರವೇ ಮನೆಯ ಬಾಗಿಲಿಗೆ ಬಂದು ಸೇವೆ ಸಲ್ಲಿಸಲಿದೆ ಜಿಲ್ಲಾಧಿಕಾರಿ ಅರ್ಚನಾ

ಚನ್ನಪಟ್ಟಣ: ಸರ್ಕಾರದ ಅಧಿಕಾರಿಗಳೇ ತಮ್ಮ ಮನೆಯ ಬಾಗಿಲಿಗೆ ಬಂದು ಕಾನೂನು ಚೌಕಟ್ಟಿನೊಳಗಿರುವ ಸಮಸ್ಯೆಗಳನ್ನು ಪರಿಹರಿಸಿಲು ತೀರ್ಮಾನಿಸಿದ್ದು ಮೊದಲ ಹಂತವಾಗಿ ಇಗ್ಗಲೂರು ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದು ಇಂದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಹೆಚ್ಚು ಸಮಸ್ಯೆಗಳಿರುವ ಗ್ರಾಮಗಳಲ್ಲಿ  ಸಂಪರ್ಕ ಸಭೆಗಳನ್ನು ಏರ್ಪಡಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಇಂದು ಅವರು ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿಯ ಇಗ್ಗಲೂರು ಗ್ರಾಮದಲ್ಲಿ ಕಂದಾಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಅರ್ಜಿದಾರರ ಸಮಸ್ಯೆಗಳನ್ನು ಪರಿಹರಿಸಿ ಮಾತನಾಡಿದರು.


೧೯೮೩ ರಲ್ಲಿ ಸೀ ಪಾಯಿಂಟ್ ೧ ಮತ್ತು ೨ ರಲ್ಲಿ ಕಾಲುವೆ ತೆಗೆದಿದ್ದು ಕಾಲುವೆಗೆ ನಮ್ಮ ಒಂದೂವರೆ ಎಕರೆ ಜಮೀನು ವಶಪಡಿಸಿಕೊಂಡಿದ್ದು, ಕಾಲುವೆಗೂ ನೀರು ಬಂದಿಲ್ಲ. ನಮಗೆ ಪರಿಹಾರದ ಹಣವೂ ಬಂದಿಲ್ಲ.

ಅರುಣಪ್ರಭಾ ತಹಶಿಲ್ದಾರ್ ಇದ್ದಾಗ ನಲವತ್ತು ವರ್ಷಗಳ ಹಿಂದೆ ಕ್ರಯಕ್ಕೆ ತೆಗೆದುಕೊಂಡಿದ್ದ ಜಮೀನನ್ನು ಬೇರೆಯವರ ಹೆಸರಿಗೆ ಮಾಡಿಕೊಟ್ಟಿದ್ದಾರೆ. ದೊಡ್ಡತಾಯಮ್ಮ ಮತ್ತು ಪುಟ್ಟರಾಮೇಗೌಡ ಎಂಬಿಬ್ಬರ ಹೆಸರಿನಲ್ಲಿಯೂ ಪಹಣಿ ಮತ್ತು ಎಂಆರ್ ನಲ್ಲಿ ಬರುತ್ತಿದೆ ಎಂದು ಇಗ್ಗಲೂರು ಪುಟ್ಟರಾಮೇಗೌಡ ಅರ್ಜಿ ಸಲ್ಲಿಸಿದರು.



ಸ್ಮಶಾನಕ್ಕೂ ಗ್ರಾಮಕ್ಕೂ ತುಂಬಾ ದೂರ ಇದ್ದು ಹತ್ತಿರದಲ್ಲಿ ಸ್ಮಶಾನಕ್ಕೆ ಜಾಗ ಕೊಡುವಂತೆ ಕೆಲವರು ಮನವಿ ಅರ್ಜಿ ಸಲ್ಲಿಸಿದರು.

ಮಾರೆಗೌಡನದೊಡ್ಡಿಯ ಸರ್ಕಾರಿ ಶಾಲೆಯ ೦೨.೦೭ ಎಕರೆ ಒತ್ತುವರಿಯಾಗಿದ್ದು ತಹಶಿಲ್ದಾರ್ ನ್ಯಾಯಾಲಯದಲ್ಲಿ ದಾವೇ ಹೂಡಿದ್ದು ೦೭/೦೩/೨೦೧೮ ರಲ್ಲಿ ಶಾಲೆಯ ಜಮೀನು ಎಂದು ಆದೇಶ ಬಂದಿದ್ದರೂ ಸಹ ಇದುವರೆಗೆ ವಶಪಡಿಸಿಕೊಂಡಿಲ್ಲ ಎಂಬ ದೂರಿನ ಮೇರೆಗೆ ಶಿಕ್ಷಣ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವಂತೆ ಸಿಇಓ ಇಕ್ರಂ ರವರು ಸ್ಥಳದಲ್ಲಿ ಹಾಜರಿದ್ದ ಇಸಿಓ ತಮ್ಮಣ್ಣ ರವರಿಗೆ ಅದೇಶಿಸಿದರು. ಸರಗೂರಿನ ಅರ್ಜಿದಾರರೊಬ್ಬರು ನಲವತ್ತು ವರ್ಷಗಳಿಂದ ಪೌತಿ ಖಾತೆಯಾಗಿಲ್ಲ ಎಂಬ ದೂರಿಗೆ ದಾಖಲೆಯನ್ನು ತೆಗೆದುಕೊಂಡು ತಹಶಿಲ್ದಾರ್ ಸಂಪರ್ಕಿಸುವಂತೆ ಅಧಕಾರಿ ದಾಕ್ಷಾಯಣಿ ರವರು ಸೂಚಿಸಿದರು.


ಪಂಚಾಯತಿ ವ್ಯಾಪ್ತಿಯಲ್ಲಿ ನಕಾಸೆ ರಸ್ತೆ ಒತ್ತುವರಿ ಪ್ರಕರಣಗಳು ಹೆಚ್ಚಾಗಿದ್ದು ತಹಶಿಲ್ದಾರ್ ಖುದ್ದು ಭೇಟಿ ನೀಡಿ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಸಿಮೆಂಟ್ ಹಾಲೋಬ್ರಿಕ್ಸ್ ಕಾರ್ಖಾನೆಯೊಂದು ಭೂಪರಿವರ್ತನೆ  ಆಗದೆ ನಡೆಯುತ್ತಿದ್ದು ಅದನ್ನು ನಿಲ್ಲಿಸುವಂತೆ ಗ್ರಾಮದ ಮುಖಂಡರಾದ ಇ ತಿ‌ ಶ್ರೀನಿವಾಸ ಮತ್ತಿತರರು ಮನವಿ ಸಲ್ಲಿಸಿದರು. ತಕ್ಷಣವೇ ಕಾರ್ಖಾನೆಯನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳಜ ಪಿಡಿಓ ಗೆ ಆದೇಶ ನೀಡಿದರು. ಸ್ಥಳದಲ್ಲಿಯೇ ಇದ್ದ ದೂರುದಾರರನ್ನು ಉಲ್ಲೇಖಿಸಿ ಒತ್ತುವರಿ ಸೇರಿದಂತೆ ಮತ್ತಿತರರು ದೂರು ನೀಡಲು ಸಾಮೂಹಿಕವಾಗಿ ಬಂದ ಗ್ರಾಮದ ಮುಖಂಡರನ್ನು ಡಿಸಿ ಯವರು ತರಾಟೆಗೆ ತೆಗೆದುಕೊಂಡರು. ವಿಎ ಮತ್ತು ಆರ್ ಐ ಒಬ್ಬೊಬ್ಬರೇ ಇರುತ್ತಾರೆ, ಅವರು ಹೋಗಿ ತೆರವುಗೊಳಿಸಲು ಮುಂದಾದಾಗ ದೂರುದಾರರು ದೂರ ನಿಂತಿರುತ್ತೀರಿ, ನೀವು ಸಾಥ್ ನೀಡಿದರೆ ಕೆಲಸ ಆಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.


ವೃದ್ಯಾಪ್ಯ ವೇತನದ ಮಂಜೂರಾತಿ ಪತ್ರವನ್ನು ಹಲವಾರು ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ವಿತರಿಸಿದರು.

ನಂತರ ಜಿಲ್ಲಾಧಿಕಾರಿಯವರು ಮಾತನಾಡಿ, ಪಹಣಿ, ಖಾತೆ, ಪೋಡಿ ಗೆ ಹೆಚ್ಚು ಅರ್ಜಿಗಳು ಬಂದಿವೆ, ಕೆರೆ ಒತ್ತುವರಿ ಮತ್ತು ನಕಾಶೆ ರಸ್ತೆ ಒತ್ತುವರಿಗೂ ಅರ್ಜಿಗಳು ಬಂದಿದ್ದು, ಅವುಗಳನ್ನು ತಹಶಿಲ್ದಾರ್ ಇತ್ಯರ್ಥಪಡಿಸುತ್ತಾರೆ. ಮಿಕ್ಕ ಅರ್ಜಿಗಳನ್ನು ಆಯಾಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದು ಶೀಘ್ರವಾಗಿ ಪರಿಹರಿಸುವಂತೆ ಸೂಚಿಸಲಾಗಿದೆ ಎಂದರು. ಆಧಾರ ಕಾಡ್೯ ಮಾಡಿಸಲು ಇಂದು ಏರ್ಪಾಡು ಮಾಡಿದ್ದು ಸದುಪಯೋಗ ಪಡಿಸಿಕೊಳ್ಳಲು ಸೂಚನೆ ನೀಡಿದರು. ಆಯುಷ್ಮಾನ್ ಭಾರತ ಕಾಡ್೯ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.

ಈ ಮೊದಲೇ ಸಲ್ಲಿಸಿದ್ದ ೩೬ ಅರ್ಜಿ ಈಗ ಸಲ್ಲಿಕೆಯಾದ ೪೦ ಅರ್ಜಿಗಳು ಸೇರಿ ಒಟ್ಟು ೭೬ ಅರ್ಜಿಗಳ ಪೈಕಿ ೨೧ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಯಿತು.                                      ಕಾರ್ಯಕ್ರಮದಲ್ಲಿ

ಜಿ ಅರ್ಚನಾ, ಸಿಇಓ, ಇಕ್ರಂ, ಅಪರ ಜಿಲ್ಲಾಧಿಕಾರಿ ವಿಜಯ್, ಉಪವಿಭಾಗಾಧಿಕಾರಿ ಡಾ ದಾಕ್ಷಾಯಣಿ, ಉಮೇಶ್, ತಹಶಿಲ್ದಾರ್ ಸುದರ್ಶನ್, ಇಓ ಚಂದ್ರು, ಇಸಿಓ ತಮ್ಮಣ್ಣ, ರೇಷ್ಮೆ ಇಲಾಖೆಯ ಮಂಜುನಾಥ, ಡಾ ರಾಜು, ಸಿಡಿಪಿಓ ಕಾಂತರಾಜು, ತೋಟಗಾರಿಕೆ ಇಲಾಖೆಯ ವಿವೇಕ್, ಅಕ್ಷರ ದಾಸೋಹದ ಸಿದ್ದರಾಜು, ಜಿಲ್ಲಾ ಪಂಚಾಯತಿ ಎಇಇ ಚನ್ನಪ್ಪ, ಅಕ್ಕೂರು  ಪಿಎಸ್ಐ ಭಾಸ್ಕರ್, ಸಾಮಾಜಿಕ ಅರಣ್ಯ ಇಲಾಖೆಯ ಚೈತ್ರಾ, ಕೃಷಿ ಅಧಿಕಾರಿ ಅಪರ್ಣಾ, ಅಬಕಾರಿ ಅಧಿಕಾರಿ ಸುನಿಲ್ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಇಗ್ಗಲೂರು ಗ್ರಾಮ ಪಂ ಪಿಡಿಓ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑