Tel: 7676775624 | Mail: info@yellowandred.in

Language: EN KAN

    Follow us :


ಕರೋನಾ ವೈರಸ್ ಗೂ ಕೋಳಿ ಮಾಂಸ ಮತ್ತು ಕುರಿ ಮೇಕೆ ಮಾಂಸಕ್ಕೂ ಸಂಬಂಧವಿಲ್ಲ:ಡಾ ಜಯರಾಮು

Posted date: 13 Mar, 2020

Powered by:     Yellow and Red

ಕರೋನಾ ವೈರಸ್ ಗೂ ಕೋಳಿ ಮಾಂಸ ಮತ್ತು ಕುರಿ ಮೇಕೆ ಮಾಂಸಕ್ಕೂ ಸಂಬಂಧವಿಲ್ಲ:ಡಾ ಜಯರಾಮು

೨೦೧೯/೨೦ ನೇ ಸಾಲಿನ ತಾಲ್ಲೂಕು ಪಂಚಾಯತಿಯ ಕೊನೆಯ ಸಾಮಾನ್ಯ ಸಭೆಯು ಇಂದೂ ಸಹ ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿ ಹಾಗೂ ಬೆರಳೆಣಿಕೆಯ ಸದಸ್ಯರು ಮತ್ತು ಅಷ್ಟೇ ಸಂಖ್ಯೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ತಮ್ಮ ತಮ್ಮ ಇಲಾಖೆಗೆ ಬಂದಿರುವ ಅನುದಾನ, ಖರ್ಚು ಮಾಡಲಾದ ಅನುದಾನ ಮತ್ತು ಸರ್ಕಾರಕ್ಕೆ ವಾಪಸು ಹೋದ ಅನುದಾನ ದ ಕುರಿತು ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಹಿತಿ ನೀಡಿದರು.


ಪ್ರಪಂಚದಾದ್ಯಂತ ಕರೋನಾ ವೈರಸ್ ಹರಡಿದ್ದು ತಾಲ್ಲೂಕಿನಲ್ಲಿ ಅಂತಹ ಯಾವುದೇ ಪ್ರಕರಣಗಳ ಪತ್ತೆಯಾಗಿಲ್ಲ. ವಿದೇಶಕ್ಕೆ ಆರು ಮಂದಿ ಹೋಗಿ ಬಂದಿದ್ದು ಇವರ ಮೇಲೆ ನಿಗಾವಹಿಸಲಾಗಿದ್ದು ಯಾರಿಗೂ ಸೋಂಕು ತಗುಲಿಲ್ಲ. ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಸಿಗೆ ಮತ್ತು ಔಷಧ ದಾಸ್ತಾನು ಇದೆ. ಸತತ ಕೆಮ್ಮು ಇರುವವರು ಮಾತ್ರ ಗವಸು ಉಪಯೋಗಿಸಬೇಕೇ ವಿನಹ ಎಲ್ಲರೂ ವೃಥಾ ಧರಿಸುವುದು ಬೇಡ. ಸಾಮಾನ್ಯವಾಗಿ ಎರಡು ಗಂಟೆಗೊಮ್ಮೆ ಕೈ ಶುಚಿಗೊಳಿಸುವುದು ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿದರೂ ಸಹ ಕರೋನಾ ವೈರಸ್ ತಡೆಗಟ್ಟಬಹುದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ಮಾಹಿತಿ ನೀಡಿದರು. ಹಾಗೂ ತಾಲ್ಲೂಕಿಗೆ ಇದುವರೆವಿಗೂ ಬಂದಿರುವ ಅನುದಾನ ಅಭಿವೃದ್ಧಿಗಾಗಿ ಸಂಪೂರ್ಣ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


ಬೈವೋಲ್ಟೇಜ್ ಗೂಡು ಬೆಳೆಯಲು ರೈತರಿಗೆ ಉತ್ತೇಜನ ನೀಡುತ್ತಿದ್ದು, ರೈತರು ಸಹ ಅಳವಡಿಸಿಕೊಂಡು ಲಾಭ ಪಡೆದುಕೊಳ್ಳುತ್ತಿದ್ದಾರೆ. ರೇಷ್ಮೆ ಕಡ್ಡಿ ನಾಟಿ ಮಾಡಿ ರೈತರಿಗೆ ಕೊಡುವ ಕಾರ್ಯವು ನಡೆಯುತ್ತಿದೆ ಎಂದು ರೇಷ್ಮೆ ಇಲಾಖೆಯ ಅಧಿಕಾರಿ ಮಂಜುನಾಥ ವಿವರಿಸಿದರು. ಮರಕಡ್ಡಿ ಬಿತ್ತನೆ ಮಾಡಲು ರೈತರಿಗೆ ಉತ್ತೇಜನ ನೀಡುವಂತೆ ಸೂಚಿಸಿದರು. ನಮ್ಮ ಇಲಾಖೆಯಲ್ಲೂ ಸಹ ಸಂಪೂರ್ಣ ಅನುದಾನವನ್ನು ಉಪಯೋಗಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.


ನಮ್ಮ ಇಲಾಖೆಗೆ ಅನುದಾನದ ಕೊರತೆಯಾಗಿದ್ದು ವಿವಿಧ ಯೋಜನೆಗಳಿಗೆ ವಿನಿಯೋಗಿಸಲಾಗಿದೆ. ಅಣಬೆ ಬೇಸಾಯ, ಹಣ್ಣು ಮತ್ತು ತರಕಾರಿ, ಮನೆಯಂಗಳದಲ್ಲಿ ಕೈತೋಟ ಸೇರಿದಂತೆ ಹಲವಾರು ತರಬೇತಿ ಗಳನ್ನು ಹಮ್ಮಿಕೊಂಡಿದ್ದೆವು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ವಿವೇಕ್ ಮಾಹಿತಿ ನೀಡಿದರು. ಇದೇ ವೇಳೆ ಅಧ್ಯಕ್ಷ ರಾಜಣ್ಣ ನವರು ಜೇನು ಕೃಷಿ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಿ, ತೆಂಗಿನ ಸಸಿಗಳನ್ನು ಆದ್ಯತೆ ಮೇರೆಗೆ ರೈತರಿಗೆ ನೀಡಿ ಹಾಗೂ ಬಾಳೆ ಮಾರುಕಟ್ಟೆ ಗೆ ನಮ್ಮ ಭೈರಾಪಟ್ಟಣದ ಬಳಿ ಜಾಗ ನೀಡಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಿ ಎಂದು ಸೂಚಿಸಿದರು. ಕಾರ್ಯನಿರ್ವಹಣಾಧಿಕಾರಿ ಚಂದ್ರುರವರು ಸಹ ರಕ್ಷಣಾ ಗೋಡೆಯಿರುವ ಶಾಲೆ ಮತ್ತು ಅಂಗನವಾಡಿಗಳಿಗೆ ಹಣ್ಣು ಮತ್ತು ತರಕಾರಿ ಗಿಡಗಳನ್ನು ಉಚಿತವಾಗಿ ನೀಡುವುದರ ಜೊತೆಗೆ ಗ್ರಾಮದ ಅಂಗವಿಕಲರೊಬ್ಬರಿಗೆ ದಿನಗೂಲಿ ನೀಡಿ ಪೋಷಿಸುವಂತೆ ಮಾಡಿ ಎಂದು ಸಲಹೆ ನೀಡಿದರು.


ಕರೋನಾ ವೈರಸ್ ಗೂ ಕೋಳಿ ಮಾಂಸ ಮತ್ತು ಕುರಿ ಮೇಕೆ ಮಾಂಸಕ್ಕೂ ಸಂಬಂಧವಿಲ್ಲ, ಕೋಳಿ ಮಾಂಸ ಪೌಷ್ಟಿಕಾಂಶ ಹೊಂದಿರುವ ಮಾಂಸವಾಗಿದ್ದು ವೈರಸ್ ಹರಡುವುದಿಲ್ಲ ಎಂದು ಪಶುವೈದ್ಯಾಧಿಕಾರಿ ಡಾ ಜಯರಾಮು ರವರು ಸಭೆಗೆ ತಿಳಿಸಿದರು.

ಹಿತ್ತಲ ಕೋಳಿ ಸಾಕಾಣಿಕೆ ಯೋಜನೆಯಲ್ಲಿ ನರೇಗಾ ಯೋಜನೆಯನ್ನು ಅಳವಡಿಸಿಕೊಂಡು ಕನಿಷ್ಠ ಐವತ್ತು ಕೋಳಿಗಳನ್ನು ನೀಡಿ ಅವರ ಆದಾಯದ ಮೂಲವನ್ನು ಹೆಚ್ಚಿಸಿ, ಹಾಗೂ ಬೇಸಿಗೆ ಆಗಮಿಸುತ್ತಿದ್ದು ಜಾನುವಾರುಗಳಿಗೆ ಮೇವು ಮತ್ತು ರೋಗ ಹರಡದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಿ ಎಂದು ಅಧ್ಯಕ್ಷ ರಾಜಣ್ಣ ಪಶುವೈದ್ಯಾಧಿಕಾರಿಗಳಿಗೆ ಸೂಚಿಸಿದರು.


ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲ ಅನುದಾನ ಉಳಿಕೆಯಾಗಿದ್ದು ಆ ಹಣವನ್ನು ಬೇರೆ ಯಾವುದಕ್ಕೂ ಉಪಯೋಗಿಸಲು ಆಗದಿರುವುದರಿಂದ ವಾಪಸು ಹೋಗಿದೆ. ೩೧  ಜೋಡಿ ಅಂತರ್ಜಾತಿ ವಿವಾಹಗಳಿಗೆ ಮತ್ತು ಪ್ರೈಮರಿಯಿಂದ ಕಾನೂನು ವಿದ್ಯಾರ್ಥಿಗಳ ತನಕ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಆಲಿಸಿದ ಅಧ್ಯಕ್ಷರು ಮುಂದಿನ ಸಭೆಯೊಳಗೆ ಮೂವತ್ತೊಂದು ಅಂತರ್ಜಾತಿ ಜೋಡಿಗಳು ಮತ್ತು ಕಾನೂನು ವಿದ್ಯಾರ್ಥಿಗಳನ್ನು ತಾಲ್ಲೂಕು ಪಂಚಾಯತಿಗೆ ಕರೆತಂದು ಮಾಧ್ಯಮದವರಿಗೆ ಮಾಹಿತಿ ನೀಡಿ, ಇದು ಬೇರೆಯವರಿಗೂ ಮಾದರಿಯಾಗಲಿ ಎಂದು ಆದೇಶಿಸಿದರು.


ಹಲವಾರು ಹೊಸ ಶಾಲೆಗಳು ಹಳೆಯ ಶಾಲೆಗಳ ಕಾಮಗಾರಿಗೆ ಕೆಆರ್ಡಿಎಲ್ ಸಂಸ್ಥೆಗೆ ವಹಿಸಿದ್ದು ಸರಿಯಾಗಿ ನಿರ್ವಹಿಸುತ್ತಿಲ್ಲ ಮತ್ತು ವಿಳಂಬವಾಗುತ್ತಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ ಸಂಬಂಧಿಸಿದವರನ್ನು ಕರೆದು ಕ್ರಮಕೈಗೊಳ್ಳುತ್ತೇನೆ ಎಂದು ಅಧ್ಯಕ್ಷ ರಾಜಣ್ಣ ಶಿಕ್ಷಣ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಹತ್ತನೇ ತರಗತಿಯ ಪರೀಕ್ಷೆ ಬರೆಯವ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ಎಂದು ಸೂಚಿಸಿದರು.


ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮೀನುಗಾರಿಕೆ, ಪಂಚಾಯತ್ ರಾಜ್, ಅಕ್ಷರ ದಾಸೋಹ, ಹಿಂದುಳಿದ ವರ್ಗ, ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ ಚಂದ್ರು, ಉಪ ಕಾರ್ಯನಿರ್ವಹಣಾಧಿಕಾರಿ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರಾದ ಸುರೇಶ್, ಪ್ರಕಾಶ್, ಸಿದ್ದರಾಮು, ಲಕ್ಷ್ಮಿ, ಲೀಲಾವತಿ ಮತ್ತಿತರರು ಹಾಜರಿದ್ದರು.


ಇದೇ ವೇಳೆ ಇತ್ತೀಚೆಗೆ ನಿಧನರಾದ ಸೋಗಾಲ ಪಿಡಿಓ ಶಿವಲಿಂಯ್ಯ ನವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಅಧ್ಯಕ್ಷ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಚಂದ್ರಶೇಖರ್ ರವರು ಐದು ಸಾವಿರ ರೂಪಾಯಿಗಳ ಚೆಕ್ ನ್ನು ತಾಲ್ಲೂಕು ಪಂಚಾಯತಿ ಅಧ್ಯಕ್ಷರಿಗೆ ನೀಡಲಾಯಿತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑