Tel: 7676775624 | Mail: info@yellowandred.in

Language: EN KAN

    Follow us :


ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ನಿವಾರಿಸುವ ಮೂಲಕ ದೇಶಕ್ಕೆ ಕೀರ್ತಿ ತಂದ ವ್ಯಾಸರಾಜರು

Posted date: 15 Mar, 2020

Powered by:     Yellow and Red

ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ನಿವಾರಿಸುವ ಮೂಲಕ ದೇಶಕ್ಕೆ ಕೀರ್ತಿ ತಂದ ವ್ಯಾಸರಾಜರು

ಚನ್ನಪಟ್ಟಣ: ಪುರಂದರದಾಸರು ಮತ್ತು ಕನಕದಾಸರಿಗೆ ದಾಸದೀಕ್ಷೆ ನೀಡಿ ಅಂಕಿತನಾಮವನ್ನು ಕರುಣಿಸುವ ಜೊತೆಗೆ, ಸಾಮಾಜಿಕ ಕಾರ್ಯಗಳನ್ನು, ರಾಜಕೀಯ ಬಿಕ್ಕಟ್ಟಗಳನ್ನು ನಿವಾರಿಸುವ ಮೂಲಕ ದೇಶಕ್ಕೆ ಮಹಾನ್ ಕೊಡುಗೆ ನೀಡಿದ ಶ್ರೀವ್ಯಾಸರಾಜರು ಮಹಾನ್ ಯತಿಗಳು ಎಂದು ಮಂಡ್ಯದ ವಿದ್ವಾಂಸರಾದ ವರಾಹ ಹರಿ ವಿಠಲ ದಾಸರು 

ಅಭಿಪ್ರಾಯಪಟ್ಟರು.


ನಗರದ ಕೋಟೆಯಲ್ಲಿರುವ ಶ್ರೀ ರಾಘವೇಂದ್ರ 

ಮಠದಲ್ಲಿ ಶ್ರೀರಾಘವೇಂದ್ರ ಗುರುಗಳ ಬೃಂದಾವನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀವ್ಯಾಸರಾಜ ಗುರುಗಳ ಆರಾಧನಾ ಮಹೋತ್ಸವಲ್ಲಿ ಪ್ರವಚನ ನೀಡಿದ ಅವರು, ಶ್ರೀವ್ಯಾಸರಾಜರು ಚನ್ನಪಟ್ಟಣದ ಅಬ್ಬೂರು ಗ್ರಾಮದ ಶ್ರೀ ಬ್ರಹ್ಮಣ್ಯ ತೀರ್ಥರ ಶಿಷ್ಯರಾಗಿ 

ಸನ್ಯಾಸಾಶ್ರಮ ಸ್ವೀಕರಿಸಿದರು ಎಂದು ತಿಳಿಸಿದರು.


ಮಹಾಮಹಿಮರಾದ ಯತಿಶ್ರೇಷ್ಠರು ತಮ್ಮ 

ಸೇವೆಯನ್ನು ಕೇವಲ ಆಧ್ಯಾತ್ಮಿಕ ಮತ್ತು ವೇದಾಂತ ಕ್ಷೇತ್ರಕ್ಕೆ ಮೀಸಲಿರಿಸದೆ ಶ್ರೀಸಾಮಾನ್ಯರ ಕಷ್ಟಕಾರ್ಪಣ್ಯಗಳನ್ನು ನಿವಾರಿಸಲು ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡರು. ಇದರ ಪರಿಣಾಮ ಬರಪೀಡಿತ ಪ್ರದೇಶಗಳಲ್ಲಿ 

ಕೆರೆಗಳನ್ನು ನಿರ್ಮಿಸಿ ರೈತರಿಗೆ ಬೇಸಾಯ ಮಾಡಲು 

ನೆರವು ಮಾಡಿಕೊಟ್ಟರು. ಇಂದಿಗೂ ಇವರು ನಿರ್ಮಿಸಿದ ಕೆರೆಗಳು ರೈತರಿಗೆಅನುಕೂಲಕಾರಿಯಾಗಿವೆ ಎಂದು ವಿವರಿಸಿದರು.


ತಿರುಪತಿ ಶ್ರೀನಿವಾಸನಿಗೆ ಪೂಜೆ:

ತಿರುಪತಿಯ ತಿರುಮಲ ದೇವಾಲಯದಲ್ಲಿ 

ಕಾರಣಾಂತರದಿಂದ ಪೂಜಾಕೈಂಕರ್ಯ ಗಳು 

ಸ್ಥಗಿತಗೊಂಡಿದ್ದಾಗ ೧೪ ವರ್ಷಗಳ ಕಾಲ ತಾವೇ 

ಪೂಜೆ ನೆರವೇರಿಸಿ, ನಂತರ ದೇವಾಲಯದ ಮೂಲ

ಅರ್ಚಕ ಸಂತತಿಯವರಿಗೆ ಪೂಜಾಕೈಂಕರ್ಯದ 

ಕೆಲಸವನ್ನು ವಹಿಸಿದರು. ಭಕ್ತರು ಹಸಿದು 

ಹೋಗಬಾರದು ಎಂದು ಇವರು ಪ್ರಸಾದ 

ವಿನಿಯೋಗವನ್ನು ಆರಂಭಿಸಿದರು.

ತಿರುಪತಿ ದೇವಾಲಯಕ್ಕೆ ಧನ-ಕನಕಗಳನ್ನು 

ದಾನವಾಗಿ ನೀಡಿದ್ದ ವ್ಯಾಸರಾಜರು, ತಾವು ನೀಡಿದ ದಾನದ ಹಣದಲ್ಲಿ ದೇವಾಲಯದ ಮೂಲಕ ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು 

ಕೈಗೊಳ್ಳುವಂತೆ ಸೂಚಿಸಿದ್ದು ಇಂದಿಗೂ ತಿರುಮಲ 

ಶಾಸನದಲ್ಲಿ ಉಲ್ಲೇಖವಾಗಿದೆ. ತಿರುಪತಿ ದೇವಾಲಯದ ಉತ್ಸವಗಳನ್ನು ನಿರ್ಧರಿಸಿದ್ದ ಯತಿವರೇಣ್ಯರು ನೈವೇದ್ಯದ ಪಾಲು ಯಾರುಯಾರಿಗೆ ಸಲ್ಲಬೇಕು 

ಎಂಬುದನ್ನು ನಿರ್ಧರಸಿದರು. ಅರ್ಚಕರಿಂದ ಹಿಡಿದು ದೇವಾಲಯದಲ್ಲಿ ಹೂವು ಕಟ್ಟುವ ಸಾಮಾನ್ಯ 

ಕೆಲಸಗಾರರ ವರೆಗೆ ಮೀಸಲಿರಿಸಿದರು. 

ಇವರಿಂದಲೇ ತಿರುಪತಿ ದೇವಾಲಯಲ್ಲಿ ಭಕ್ತರಿಗೆ 

ಉಚಿತ ಪ್ರಸಾದ ವಿನಿಯೋಗ ಆರಂಭ ಗೊಂಡಿದ್ದು 

ಎಂದು ಅಭಿಪ್ರಾಯಪಟ್ಟರು.


ಸಾಹಿತ್ಯ ಸಂಗೀತಕ್ಕೂ ಅನನ್ಯ ಕೊಡುಗೆ

ವ್ಯಾಸರಾಜ ತೀರ್ಥರು ಸಾಹಿತ್ಯ ಮತ್ತು ಸಂಗೀತ 

ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕರ್ನಾಟಕ 

ಶಾಸ್ತ್ರೀಯ ಸಂಗೀತದ ಪಿತಾಮಹಾ ಎನಿಸಿದ 

ಪುರಂದರದಾಸರಿಗೆ ದೀಕ್ಷೆ ನೀಡಿದ್ದು, ಶ್ರೇಷ್ಠ 

ಭಕ್ತ ಎನಿಸಿದ ಕನಕದಾಸರಿಗೂ ದೀಕ್ಷೆ ನೀಡಿದ್ದು 

ಇವರೇ. ಇವರ ಕಾಲದಲ್ಲಿ ಹರಿದಾಸ ಸಾಹಿತ್ಯ 

ಮುಂಚೂಣಿಗೆ ಬಂದಿತು. ಇನ್ನು ಶ್ರೀ 

ಮಧ್ವಾಚಾರ್ಯರ ಸಂದೇಶಗಳನ್ನು ದಾಸಸಾಹಿತ್ಯ 

ಮೂಲಕ ಕನ್ನಡದಲ್ಲಿ ಎಲ್ಲರಿಗೂ ತಲುಪುವಂತೆ 

ಮಾಡಿದ್ದು ಯತಿಗಳ ಕೊಡುಗೆಯಾಗಿದೆ ಎಂದು 

ವಿವರಿಸಿದರು.


ವಿಜಯನಗರ ಅರಸರ ರಾಜಗುರು:

ವಿಜಯನಗರ ಸಂಸ್ಥಾನದ ಮಹಾನ್ ಚಕ್ರವರ್ತಿ 

ಎನಿಸಿದ ಶ್ರೀಕೃಷ್ಣದೇವರಾಯ ಸೇರಿದಂತೆ ೬ ಮಂದಿ ಅರಸರಿಗೆ ಶ್ರೀವ್ಯಾಸರಾಜರು ರಾಜಗುರುಗಳಾಗಿದ್ದರು. 

ಶ್ರೀಕೃಷ್ಣದೇವರಾಯನಿಗೆ ಕುಹ ಯೋಗ ಬಂದು 

ಸಿಂಹಾಸನದ ಮೇಲೆ ಕುಳಿತರೆ ಮೃತ್ಯಬಾಧೆ 

ಕಾಡಿದಾಗ ತಾವು ಸಿಂಹಾಸನಾರೂಢರಾಗಿ 

ಕುಹಯೋಗವನ್ನು ತಮ್ಮ ತಪಶಕ್ತಿಯಿಂದ 

ನಿವಾಸಿದರು. ಇಂತಹ ಮಾಹಾಮಹಿಮರನ್ನು ಸ್ಮರಿಸಿ ಅವರು ತೋರಿಸಿದ ಹಾದಿಯಲ್ಲಿ ಸಾಗಿ ನಮ್ಮನ್ನು ನಾವು ಉದ್ದರಿಸಿಕೊಳ್ಳ ಬೇಕು ಎಂದು ಅವರು ಕರೆನೀಡಿದರು.


ಮೂರು ಮಹನೀಯರ ಆರಾಧನೆ:

ಕಾರ್ಯಕ್ರಮದಲ್ಲಿ ಮಾತನಾಡಿದ ಗುರುರಾಘವೇಂದ್ರ ಬೃಂದಾವನ ಸಮಿತಿಯ ಉಪಾಧ್ಯಕ್ಷ ಎನ್.ಎಸ್.ರಾಮಕೃಷ್ಣ, ಕಳೆದ ೩೬ ವರ್ಷಗಳಿಂದ ನಮ್ಮ ಸಮಿತಿ ತಾಲೂಕಿನಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಇದಕ್ಕೆಲ್ಲ ಭಕ್ತರ ಸಹಕಾರ ಮುಖ್ಯ. ಕಳೆದ ಮೂರು ದಿನಗಳಿಂದ ಶ್ರೀ ಸುಧೀಂದ್ರ ತೀರ್ಥರು, ಶ್ರೀ ರಘುಮಾನ್ಯ ತೀರ್ಥರು, ಶ್ರೀ ವಾದಿರಾಜರ ಆರಾಧನೆಯನ್ನು ಮಾಡಲಾಗಿದ್ದು, ಇಂದು ಶ್ರೀವ್ಯಾಸರಾಜತೀರ್ಥರ ಆರಾಧನೆಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ನೆಲ ಶ್ರಿವ್ಯಾಸರಾಜತೀರ್ಥರು ಸನ್ಯಾಸ ಸ್ವೀಕರಿಸಿದ, ಅವರ ಗುರು ಶ್ರೀಬ್ರಹ್ಮಣ್ಯತೀರ್ಥರು ಮತ್ತು ಶ್ರೀವ್ಯಾಸರಾಜತೀರ್ಥರು ನಡೆದಾಡಿದ ಪುಣ್ಯ ಭೂಮಿ. ನಮ್ಮಲ್ಲಿ ಈ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಪುಣ್ಯದ ಕೆಲಸವಾಗಿದ್ದು. ಮುಂದಿನ ದಿನಗಳಲ್ಲಿ ಇನ್ನೂ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಶ್ರೀಮಠದ ಬೃಂದಾವನಕ್ಕೆ 

ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮತ್ತು 

ಪೂಜೆ ಕೈಗೊಳ್ಳಲಾಗಿತ್ತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಗುರುಗಳ ಬೃಂದಾವನ ಸಮಿತಿಯ ಅಧ್ಯಕ್ಷ 

ಸಿ.ಎಲ್.ನರಸಿಂಹಮೂರ್ತಿ, ಕಾರ್ಯದರ್ಶಿ 

ಎಂ.ಎಸ್.ಚಂದ್ರಶೇಖರ, ಜಂಟಿ ಕಾರ್ಯದರ್ಶಿ 

ಪಿ.ಹೊಯ್ಸಳ, ಖಜಾಂಚಿ ಸತೀಶ್‍ಕುಮಾರ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಎನ್.ರಾಮಪ್ರಸಾದ್, ಕಾರ್ಯದರ್ಶಿ ರಾಘವೇಂದ್ರ ಮಯ್ಯ, ಸಂಘಟನಾಕಾರ್ಯದರ್ಶಿಡಾ.ಮಧುಸೂದನಾಚಾರ್ಯ ಜೋಷಿ, ಜಂಟಿಕಾರ್ಯದರ್ಶಿ ಡಿ.ವೆಂಕಟೇಶ್‍ಮೂರ್ತಿ, 

ನಿರ್ದೇಶಕರಾದ ಕೆ.ವಿ.ಮಧುಸೂದನ್, ಎಸ್.ಮಧು 

ಸೂದನ್, ಎನ್.ಮೋಹನ್ ಇನ್ನೂ ಮುಂತಾದವರು 

ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑