Tel: 7676775624 | Mail: info@yellowandred.in

Language: EN KAN

    Follow us :


ಜಾನಪದ ಲೋಕದ ವತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

Posted date: 30 May, 2020

Powered by:     Yellow and Red

ಜಾನಪದ ಲೋಕದ ವತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

ರಾಮನಗರ:ಮೇ/೩೦/೨೦/ಶನಿವಾರ. ಜಾನಪದ ಲೋಕದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ೧೧೦ ಜಾನಪದ ಕಲಾವಿದರಿಗೆ ದಿನಸಿ ಕಿಟ್‌ಗಳನ್ನು ಇಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಅವರು ಕೊರೊನಾ ಲಾಕ್‌ಡೌನ್ ನಿಂದ ನಮ್ಮ ಬಡ ಜಾನ ಪದ ಕಲಾವಿದರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೋ ತಿಳಿಯದು. ಲಾಕ್ಡೌನ್ ಘೋಷಣೆ ಯಾದ ದಿನದಿಂದ ನನ್ನ ಮನಸ್ಸಿನಲ್ಲಿ ಅವರ ಬಗ್ಗೆಯೇ ಚಿಂತೆ ಮೂಡಿತ್ತು. ತಕ್ಷಣ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿಯವರನ್ನು ಸಂಪರ್ಕಿಸಿ ಜಾನಪದ ಕಲಾವಿದರಿಗೆ ಸಹಾಯ ಹಸ್ತ ನೀಡಬೇಕು ಎಂದು ತಿಳಿಸಿದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.


ನಾನು ಟಿ ಎಸ್ ನಾಗಾಭರಣ ಮತ್ತು ಕಪ್ಪಣ್ಣ ಹಾಗೂ ಇತರೆ ಪ್ರಮುಖರು ಅವರನ್ನು ಭೇಟಿ ಮಾಡಿ, ಜಾನಪದ ಕಲಾವಿದರು ಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯ ಮಾಡಬೇಕು, ಕನಿಷ್ಠ ಅವರಿಗೆ ಎರಡು ಸಾವಿರ ರೂ ಹಣ ಕೊಡಬೇಕು ಎಂದು ಹೇಳಿದಾಗ, ಅವರು ನಮ್ಮನ್ನು ಮುಖ್ಯಮಂತ್ರಿ ಗಳ ಬಳಿ ಕರೆದುಕೊಂಡು ಹೋಗಿ ನಿವೇದನೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರು.

ಆಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಕಲಾವಿದರ ಸಮಸ್ಯೆಯನ್ನು ಗಮನಿಸಿ, ನಾವು ಕೊಟ್ಟ ಕೋರಿಕೆ ಪತ್ರದ ಮೇಲೆ ಎರಡು ಕೋಟಿಗೆ ಮಂಜೂರಾತಿ ನೀಡಿದರು. ಅದು ಹಣಕಾಸು ಇಲಾಖೆ ಯಲ್ಲಿ ಇನ್ನೂ ತೊಯ್ದಾಡುತ್ತಿದೆ. ಶೀಘ್ರದಲ್ಲಿಯೇ ಅದು ಕಾರ್ಯಗತವಾಗುವ ಭರವಸೆ ಇದೆ ಎಂದರು.


ದಾನಿಗಳಿಂದ ಈ ದಿನಸಿ ಕಿಟ್ ತಕ್ಷಣ ನನ್ನ ಮನಸ್ಸಿಗೆ ಬಂದಿದ್ದು, ಜಾನಪದ ಪರಿಷತ್ತಿನ ರೂವಾರಿ ಹೆಚ್. ಎಲ್ ನಾಗೇಗೌಡರ ಮಗಳು, ಶಾಂತಮ್ಮ ಚಿನ್ನಸ್ವಾಮಿ. ಅವರು ನಮ್ಮ ಮನವಿಗೆ ಸ್ಪಂದಿಸಿ ಬಡ ಜಾನಪದ ಕಲಾವಿದರಿಗೆ ಸಹಾಯ ಮಾಡಲು ೫೦ ಸಾವಿರ ರೂ ಧನ ಸಹಾಯ ಮಾಡಿದರು. ಆಮೇಲೆ ಆದಿ ಚುಂಚನಗಿರಿ ಮಠಾಧೀಶ ರಾದ ಶ್ರೀ ನಿರ್ಮಲಾನಂದ ನಾಥಸ್ವಾಮೀಜಿಯವರಿಗೆ ಕೋರಿಕೆ ಮಂಡಿಸಿದಾಗ ಅವರು ಸಹಕಾರ ಹಸ್ತ ನೀಡಿದರು. ಜಾನಪದ ಪರಿಷತ್ತಿನಿಂದ ಒಂದಷ್ಟು ಹಣ ಹಾಕಿ ಇಂದು ಈ ೧೧೦ ಜನರಿಗೆ ದಿನಸಿ ಕಿಟ್ ಕೊಡುತ್ತಿದ್ದೇವೆ ಎಂದರು.


ಜಾನಪದ ಕಲಾವಿದರ ನೋವು, ಜಾನಪದ ಪರಿಷತ್ತಿನ ನೋವು ಎಂದು ತಿಳಿದು ಈ ಕೆಲಸ ಮಾಡಲಾಗಿದೆ. ಇದರಿಂದ ಈ ಲೋಕ ಕಟ್ಟಿದ ಹೆಚ್.ಎಲ್ ನಾಗೇಗೌಡರ ಆತ್ಮಕ್ಕೆ ತೃಪ್ತಿಯಾಗಿದೆ. ಜಾನಪದ ಕಲಾವಿದರ ನೋವುಗಳಿಗೆ ನಾಗೇಗೌಡರು ಮಮ್ಮಲ ಮರುಗುತ್ತಿದ್ದರು. ಹಾಗಾಗಿ ಈ ಕೆಲಸ ಸಾರ್ಥಕವಾಗಿದೆ ಎಂದು ಅವರು ಹೇಳಿದರು. ಸಂದರ್ಭದಲ್ಲಿ ಅವರು ಕಲಾವಿದರಿಗೆ ದಿನಸಿ ಕಿಟ್ ವಿತರಿಸಿದರು.


ಇದೇ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜಾನಪದ ಕಲಾವಿರಿಗೂ ದಿನಸಿ ಕಿಟ್ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ  ಇದರಿಂದ ಅವರಿಗೆ ಕೆಲವು ದಿವಸಗಳು ತೊಂದರೆ ಇಲ್ಲದೆ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಆದಷ್ಟು ಆಹಾರ ಪದಾರ್ಥವನ್ನು ಮಿತವಾಗಿ ಬಳಸಿ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಶಾಂತಮ್ಮ ಚಿನ್ನಸ್ವಾಮಿ ಯವರು, ನಮ್ಮ ತಂದೆ ನಾಗೇಗೌಡರು ಜಾನಪದ ಕಲಾವಿದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಅವರು ಕಟ್ಟಿದ ಈ ಲೋಕದಲ್ಲಿ  ಇಂತಹ ಒಂದು ಸಾರ್ಥಕ ಕೆಲಸ ಆಗುತ್ತಿರುವುದು ನನಗೆ ಹೆಮ್ಮೆ ತಂದಿದೆ. ಕಲಾವಿದರುಗಳಾದ ನೀವು ಆರೋಗ್ಯದ ಕಡೆ ಹೆಚ್ಚು ಒತ್ತು ಕೊಡಿ ಎಂದು ಶುಭ ಹಾರೈಸಿದರು.

ಸಂದರ್ಭದಲ್ಲಿ ರಾಮನಗರ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸು.ತ ರಾಮೇಗೌಡ ಉಪ  ಸ್ಥಿತರಿದ್ದರು.ಜಾನಪದ ಲೋಕದ ಮುಖ್ಯ ಆಡಳಿ ತಾಧಿಕಾರಿ ಸಿ.ಎನ್ ರುದ್ರಪ್ಪ ಅವರು ಸ್ವಾಗತ ಬಯಸಿದರು. ಕಲಾವಿದರಾದ ಪ್ರತಾಪ್ ಅವರು ನಿರೂಪಣೆ ಮಾಡಿದರು. ಲೋಕದ ಸಿಬ್ಬಂದಿ ಚೈತ್ರ ಅವರು ಸ್ವಾಗತ ಬಯಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕರಾರಸಾ ನಿಗಮದಿಂದ ಕಾವೇರಿ ತಟದಲ್ಲಿ ಮುತ್ತತ್ತಿರಾಯನ ದರ್ಶನ. ವಿಶೇಷ ಟೂರ್ ಪ್ಯಾಕೇಜ್
ಕರಾರಸಾ ನಿಗಮದಿಂದ ಕಾವೇರಿ ತಟದಲ್ಲಿ ಮುತ್ತತ್ತಿರಾಯನ ದರ್ಶನ. ವಿಶೇಷ ಟೂರ್ ಪ್ಯಾಕೇಜ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ವಿಭಾಗವು ಕಾವೇರಿ ತಟದಲ್ಲಿ ಮತ್ತತ್ತಿರಾಯನ ದರ್ಶನ ಎಂಬ ಹೆಸರಿನಲ್ಲಿ ವಿಶೇಷ ಟೂರ್ ಪ್ಯಾಕೇಜ್‍ನಡಿ ಸಾರಿಗೆ ಬಸ್ ಕಾರ್ಯಾಚರಣೆ ಪ್ರಾರಂಭಿಸಿದೆ.<

ಜನಸಾಮಾನ್ಯರಿಗಾಗಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತದೆ. ಎಂ ಕೆ ನಿಂಗಪ್ಪ
ಜನಸಾಮಾನ್ಯರಿಗಾಗಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತದೆ. ಎಂ ಕೆ ನಿಂಗಪ್ಪ

ರೋಟರಿ ಕ್ಲಬ್ ಎಂದಾಕ್ಷಣ ಅದು ಕೇವಲ ಪದಾಧಿಕಾರಿಗಳ ಆಸ್ತಿ ಎಂಬುದು ಜನರ ಭಾವನೆಯಾಗಿದೆ. ಕ್ಲ

ದಶವಾರ ಗ್ರಾಮದ ಪ್ರೌಢಶಾಲೆಯಲ್ಲಿ ಕಳವು. ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ದೂರು
ದಶವಾರ ಗ್ರಾಮದ ಪ್ರೌಢಶಾಲೆಯಲ್ಲಿ ಕಳವು. ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ದೂರು

ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇತ್ತೀಚೆಗೆ ಕಳ್ಳತನಗಳು ಹೆಚ್ಚಾಗುತ್ತಿದ್ದು, ಮನೆಗಳ್ಳತನಗಳ ಜೊತೆಗೆ ಶಾಲೆಗಳನ್ನು ದೋಚುತ್ತಿದ್ದು, ಈಗ ದಶವಾರ ಗ್ರಾಮದ ಪ್ರೌಢಶಾಲೆ ಕಳ್ಳತನವಾಗಿದೆ.

<

ರೆಡ್ ಕ್ರಾಸ್ ರಕ್ತನಿಧಿಗೆ ಕಂದಾಯ ಭವನದಲ್ಲಿ ಜಾಗ ನೀಡಲು ಮನವಿ
ರೆಡ್ ಕ್ರಾಸ್ ರಕ್ತನಿಧಿಗೆ ಕಂದಾಯ ಭವನದಲ್ಲಿ ಜಾಗ ನೀಡಲು ಮನವಿ

ರಾಮನಗರ: ಇಲ್ಲಿನ ಕಂದಾಯ ಭವನದಲ್ಲಿ ರೆಡ್ ಕ್ರಾಸ್ ರಕ್ತನಿಧಿಗೆ ಸ್ಥಳಾವಕಾಶ ಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಇದು ಸಾಧ್ಯವಾದರೆ ರೆಡ್ ಕ್ರಾಸ್‍ವತಿಯಿಂದಲೇ ರಕ್ತನಿಧಿಯನ್ನು ನಿರ್ವಹಣೆ ಮ

ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನ
ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನ

ಚನ್ನಪಟ್ಟಣ.ಜು.29: ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನವಾಗಿದ್ದು, ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಸರ್ವ

ಮರ ಕಡಿಯುವಾಗ ಮೇಲೆ ಬಿದ್ದು, ಸಂಕಲಗೆರೆ ಗ್ರಾಮದ ಯುವಕ ಸಾವು
ಮರ ಕಡಿಯುವಾಗ ಮೇಲೆ ಬಿದ್ದು, ಸಂಕಲಗೆರೆ ಗ್ರಾಮದ ಯುವಕ ಸಾವು

ಚನ್ನಪಟ್ಟಣ, ಜು.೨೭: ತಾನೇ ಕಡಿದ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸ್ಥಳೀಯ ರಾಜಕಾರಣಿಗಳು, ಪತ್ರಕರ್ತರು, ರೈತಸಂಘ ಮತ್ತು ಸಾರ್ವಜನಿಕರಿಂದ ಎಂ ರಾಮು ರವರಿಗೆ ಶ್ರದ್ಧಾಂಜಲಿ
ಸ್ಥಳೀಯ ರಾಜಕಾರಣಿಗಳು, ಪತ್ರಕರ್ತರು, ರೈತಸಂಘ ಮತ್ತು ಸಾರ್ವಜನಿಕರಿಂದ ಎಂ ರಾಮು ರವರಿಗೆ ಶ್ರದ್ಧಾಂಜಲಿ

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾಗಿದ್ದ ಮೊಗೇನಹಳ್ಳಿ ಎಂ ರಾಮು ರವರಿಗೆ ಇಂದು ಬೆಳಿಗ್ಗೆ ಗಾಂಧಿಭವನದ ಮುಂಭಾಗ ಜಿಲ್ಲಾ ಮತ್ತು ತಾಲ್ಲೂಕಿನ ವಿವಿಧ ಸಂಘಸಂಸ್ಥೆಗಳ, ಹಲವಾರು ಮುಖಂಡರು ಅವರ ಭಾವಚಿತ್ರಕ್ಕ

ಎರಡು ಕಿಡ್ನಿ ಇಲ್ಲದ ಎಲೆಕೇರಿ ಸುಮಾ ಗೆ ನೆರವಾಗುವಂತೆ ದಾನಿಗಳಿಗೆ ಮೊರೆ
ಎರಡು ಕಿಡ್ನಿ ಇಲ್ಲದ ಎಲೆಕೇರಿ ಸುಮಾ ಗೆ ನೆರವಾಗುವಂತೆ ದಾನಿಗಳಿಗೆ ಮೊರೆ

ನಗರದ ಎಲೆಕೇರಿ ಗ್ರಾಮದ ಹರೀಶ್ ಎಂಬುವವರ ಪತ್ನಿ ಸುಮಾ (25) ರವರಿಗೆ ಎರಡು ಕಿಡ್ನಿ ಯೂ ಫೇಲ್ ಆಗಿದ್ದು, ಆಕೆ ಜೀವನ್ಮರಣದ ಹೋರಾಟದಲ್ಲಿದ್ದಾರೆ.


ಕಡುಬಡವರಾದ ಇವರು ಕೂಲಿ ಮಾ

ಮಂಡ್ಯದಲ್ಲಿ ಹನಿಟ್ರ್ಯಾಪ್ ದಂಧೆ. ಮಹಿಳೆ ಮತ್ತು ಚನ್ನಪಟ್ಟಣ ದ ಯುವಕ ಸೇರಿ ಐದು ಮಂದಿ ಪೋಲೀಸರ ಅತಿಥಿ
ಮಂಡ್ಯದಲ್ಲಿ ಹನಿಟ್ರ್ಯಾಪ್ ದಂಧೆ. ಮಹಿಳೆ ಮತ್ತು ಚನ್ನಪಟ್ಟಣ ದ ಯುವಕ ಸೇರಿ ಐದು ಮಂದಿ ಪೋಲೀಸರ ಅತಿಥಿ

ಮಂಡ್ಯ ನಗರದಲ್ಲಿ ನಡೆಯುತ್ತಿದ್ದ ಹನಿಟ್ರಾಪ್ ದಂಧೆಯನ್ನು ಕ್ಷಣಾರ್ಧದಲ್ಲಿ ಭೇಧಿಸುವಲ್ಲಿ ಮಂಡ್ಯ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ದಂಧೆಯಲ್ಲಿ ತೊಡಗಿದ್ದ ಓರ್ವ ಮಹಿಳೆ ಹಾಗೂ

ಮಕ್ಕಳ ಅಕ್ರಮ ದತ್ತು, ತಾಲ್ಲೂಕಿನಲ್ಲಿ ನಡೆಯುತ್ತಿದೆ ಮಕ್ಕಳ ಮಾರಾಟ! ಜಾಲ ಭೇದಿಸ ಬೇಕಿದೆ ಪೋಲೀಸರು
ಮಕ್ಕಳ ಅಕ್ರಮ ದತ್ತು, ತಾಲ್ಲೂಕಿನಲ್ಲಿ ನಡೆಯುತ್ತಿದೆ ಮಕ್ಕಳ ಮಾರಾಟ! ಜಾಲ ಭೇದಿಸ ಬೇಕಿದೆ ಪೋಲೀಸರು

ಚನ್ನಪಟ್ಟಣ ತಾಲ್ಲೂಕಿನಲ್ಲಿ ಮಕ್ಕಳ ಮಾರಾಟವಾಗುತ್ತಿದೆಯೇ ? ಆಸ್ಪತ್ರೆ ಮತ್ತಿತರ ಕಡೆ ಮಕ್ಕಳು ಕಾಣೆಯಾಗುತ್ತಿದ್ದಾರೆಯೇ ? ಆಸ್ತಿಗಾಗಿ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುತ್ತಿದ್ದಾರೆಯೇ ! ಮಕ್ಕಳು

Top Stories »  


Top ↑