Tel: 7676775624 | Mail: info@yellowandred.in

Language: EN KAN

    Follow us :


ಪರಿಸರ ಒಂದು ದಿನದ ಆಚರಣೆ ಸಲ್ಲ; ಅದು ನಿತ್ಯ ಕರ್ಮವಾಗಬೇಕು. ಮಂಜುನಾಥ ಎಂ ಕೆ

Posted date: 05 Jun, 2020

Powered by:     Yellow and Red

ಪರಿಸರ ಒಂದು ದಿನದ ಆಚರಣೆ ಸಲ್ಲ; ಅದು ನಿತ್ಯ ಕರ್ಮವಾಗಬೇಕು. ಮಂಜುನಾಥ ಎಂ ಕೆ

ಈ ಲೇಖನದ ಕತೃ: ಮಂಜುನಾಥ ಎಂ ಕೆ. ಸಹಾಯಕ ಪ್ರಾಧ್ಯಾಪಕರು. ಸ ಪ್ರ ದ ಕಾಲೇಜು. ಚನ್ನಪಟ್ಟಣ.


ಮಾಲಿನ್ಯದ ಪರಿಣಾಮಗಳು ಮತ್ತು ಆರೋಗ್ಯ


ಬರ್ಮಿಂಗ್ ಹ್ಯಾಮ್ ವಿಶ್ವ ವಿದ್ಯಾಲಯದ ಸಂಶೋಧನೆ ಪ್ರಕಾರ ಪ್ರತಿವರ್ಷ ಸರಿಸುಮಾರು ಸಹಜ ವಾಯುಮಾಲಿನ್ಯದಿಂದಾಗಿ ೨೪ ಲಕ್ಷ ಜನ ಮೃತಪಟ್ಟರೆ, ಒಳಾಗಣ ವಾಯುಮಾಲಿನ್ಯದಿಂದಾಗಿ ೧೫ ಲಕ್ಷ ಸಾವನ್ನಪ್ಪುತ್ತಿದ್ದಾರೆ. ಸೂಕ್ಷ್ಮ ಕಣಗಳಿಂದಾಗಿ ಉಸಿರಾಟ ಸಂಬಂದಿ ಕಾಯಿಲೆಗಳು ಸಂಭವಿಸಿ ಪ್ರತಿವರ್ಷವೂ ೫ ಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ವಾಯುಮಾಲಿನ್ಯದಿಂದಾಗಿ ಹೃದಯಸಂಬಂದಿ ಕಾಯಿಲೆ, ಅಸ್ತಮಾ ಮತ್ತು ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಯಿಂದಾಗಿ ಪ್ರತಿವರ್ಷ ಲಕ್ಷಾಂತರ ಜನ ಆಸ್ಪತ್ರೆಗಳಿಗೆ ದಾಖಲಾತ್ತಿದ್ದರೆಂದು ಯು ಎಸ್ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಸರ್ವೆಯಿಂದ ತಿಳಿದು ಬಂದಿದೆ.. ಭಾರತದಲ್ಲೂ ೧೯೮೪ ರಲ್ಲಿ ನಡೆದ ಭೋಪಾಲ ಅನಿಲ ದುರಂತವು ಮಾನವ ಸಮಾಜದ ವಾಯುಮಾಲಿನ್ಯಕ್ಕೆ ಸಾಕ್ಷಿಯಾಗಿದೆ.


ಯೂನಿಯನ್ ಕಾರ್ಬೈಡ್ ಪ್ಯಾಕ್ಟರಿ ಹೊರಸೂಸಿದ ಅನಿಲದಿಂದಾಗಿ ಸುಮಾರು ೨,೦೦೦ ಸಾವಿರಕ್ಕೂ ಹೆಚ್ಚಿನ ಜನ ಸಾವನ್ನಪ್ಪಿದ್ದಾರೆ ಮತ್ತು ಮಾಲಿನ್ಯದ ಘೋರ ಪರಿಣಾಮವನ್ನು ಈಗಲೂ ಅನುಭಸುತ್ತಿದ್ದಾರೆ. ಪರಿಸರ ಮಾಲಿನ್ಯದ ನೇರ ಪರಿಣಾಮವು ಎಲ್ಲಾ ವಯೋಮಾನದ ಮನುಷ್ಯ ರಲ್ಲೂ ಉಸಿರಾಟದ ತೊಂದರೆ ಉಂಟುಮಾಡುತ್ತದೆ..ಹಾಗೂ ಜನಸಂಖ್ಯೆ ಹೆಚ್ಚಿರುವಲ್ಲಿ ಮತ್ತಷ್ಟು ಭೀಕರ ಪರಿಣಾಮ ಎಸಗುತ್ತದೆ.


ಪರಿಸರ ಶಿಕ್ಷಣ ದ ಅಗತ್ಯ


ಪರಿಸರ ಶಿಕ್ಷಣದ ಬಗೆಗಿನ ಮೊದಲ ಪರಿಕಲ್ಪನೆ ಮೂಡಿಬಂದದ್ದು ೧೯೭೨ ರಲ್ಲಿ ಇತ್ತೀಚಿನ ದಿನಗಳಲ್ಲಿ ಪರಿಸರ ಶಿಕ್ಷಣ ದ ಅಗತ್ಯತೆ ಹೆಚ್ಚು ತಲೆದೋರುತ್ತಿರುವುದು ನಮ್ಮಗಳ ದುರ್ದೈವವೇ ಸರಿ. ಪ್ರಕೃತಿಯನ್ನು ದೇವರೆಂದು ಅರಾಧಿಸುವ ನಮ್ಮ ದೇಶದಲ್ಲಿ ಪರಿಸರ ಶಿಕ್ಷಣದ ಅಗತ್ಯ ತಲೆದೋರಿದೆ ಅಂದರೆ ನಾವೆಷ್ಟರ ಮಟ್ಟಿಗೆ ಪರಿಸರದ ಬಗೆಗೆ ಕಾಳಜಿ ತೋರಿಸುತ್ತಿವೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಜೊತೆಗೆ ಎಷ್ಟರ ಮಟ್ಟಿನ ತಾತ್ಸರ ಮನೋಭಾವ ಈಗ ನಮ್ಮದಾಗಿದೆ ಎನ್ನುವುದೇ ಯಕ್ಷ ಪ್ರಶ್ನೆ.

ಪರಿಸರ ಶಿಕ್ಷಣ ಎಂದರೆ ಜೈವಿಕ ಪರಿಸರದಲ್ಲಿ ಮನುಜ ಹೇಗೆ ವ್ಯವಹರಿಸಬೇಕು, ನಿಸರ್ಗದ ಕಾರ್ಯಗಳೇನು ಅದರ ನಿರ್ವಹಣೆ ಹೇಗಿದೆ ಎನ್ನುವುದರ ಬಗ್ಗೆ ಬೆಳಕು ಚೆಲ್ಲುವ ಸಂಘಟಿತ ಪ್ರಯತ್ನವನ್ನು ಪರಿಸರ ಶಿಕ್ಷಣ ಎನ್ನಲಾಗುತ್ತದೆ.


ಪರಿಸರ ಶಿಕ್ಷಣದ ಅಗತ್ಯ


ಸುಸ್ಥಿರ ಅಭಿವೃದ್ಧಿ ಮತ್ತು ನಿರಂತರ ಬೆಳವಣಿಗೆ ಸಾಧಿಸಲು ಮನುಷ್ಯನು ಪ್ರಕೃತಿಯೊಂದಿಗಿನ ಹೊಂದಾಣಿಕೆ ಮಾಡಿ ಬದುಕುವುದು ಅನಿವಾರ್ಯ. ಇದರಿಂದಾಗಿ ಸಾಮಾಜಿಕ ಜೀವನ ಸುಧಾರಣೆ ಯಾಗಿ, ಬಡತನವ ಮೂಲೋಚ್ಚಾಟನೆ ಮಾಡಿ ಸುಸ್ಥಿರ ಅಭಿವೃದ್ಧಿ ಹೊಂದಲು ಸಹಕರಿಯಾಗಿರುವುದು.


ಪರಿಸರದ ರಕ್ಷಣೆ ಮತ್ತು ಸಾಮಾನ್ಯ

ಪರಿಸರ ಸಂರಕ್ಷಣೆಯಲ್ಲಿ ಸಾಮಾನ್ಯನು ಕೂಡ ಗುರುತರವಾದ ಜವಾಬ್ದಾರಿ ಹೊಂದಿದ್ದು, ಈ ನಿಟ್ಟಿನಲ್ಲಿ ಕುಡಿಯುವ ನೀರು, ತಿನ್ನುವ ಅಹಾರ, ಕೆಲಸ ಕಾರ್ಯಗಳಲ್ಲೂ ದೈನಂದಿನ ಜೀವನದ ಪ್ರತಿ ಘಟ್ಟದಲ್ಲಿಯೂ ನಿಸರ್ಗದ ಮೇಲೆ ತೀವ್ರತರದ ಹಾನಿಮಾಡದೇ ಪರಿಸರದ ಜೊತೆಗೆ ಸಾಮರಸ್ಯದಿಂದ ಬದುಕುವುದು ಬಹು ಮುಖ್ಯವಾಗಿರುತ್ತದೆ.


ಪರಿಸರದ ಸಂರಕ್ಷಣೆ ಗೆ ನಾವೇನು ಮಾಡಬಹುದು

ನಿಸರ್ಗ ಮನುಷ್ಯನ ಅಸ್ತಿತ್ವಕ್ಕೆ ಎಲ್ಲವನ್ನು ನೀಡಿ ಪೋಷಿಸುತ್ತದೆ. ಅದರೂ ಸ್ವಾರ್ಥಿ ಮನುಜ ತನ್ನ ಸ್ವ ಸಾಧನೆಗೆ ನಿರಂತರ ಕ್ರೌರ್ಯ ಮರೆಯುತ್ತಲೇ ಬಂದಿದ್ದು ಇಂತಹ ಪರಿಸ್ಥಿತಿ ಮುಂದುವರಿದುದ್ದೇ ಆದರೆ ಮನುಕುಲದ ಸರ್ವನಾಶ ನಮ್ಮೆದುರಲ್ಲೇ ಆದರೂ ಅಚ್ಚರಿ ಇಲ್ಲ. ನಿಸರ್ಗದ ಜೊತೆ ಜೊತೆಗೆ ಬೆರೆತು ಬಾಳುವುದರ ಮೂಲಕ ಪರಿಸರದ ಉಳಿವಿಗೆ ಪೂರಕವಾದ ವಿಷಯಗಳ ಕಡೆಗೆ ಗಮನ ಹರಿಸುವುದು.


ಸರ್ವನಾಶ ಮಾಡುವ ಅಗತ್ಯ ಮೀರಿದ ಅವಿಸ್ಕಾರಗಳನ್ನು ಮಾಡದಿರುವಿದು

ಬಸವಳಿದ ಪರಿಸರ ದ ಉಳಿವಿಗೆ ಟೊಂಕ ಕಟ್ಟಿ ನಿಲ್ಲುವುದು. ವನ ಸಂವರ್ಧನೆ ಕೈಗೊಳ್ಳುವುದು  ಪರಿಸರದ ಬಗೆಗೆ ಸಹಜ ಕಾಳಜಿ ಉದ್ದೇಶದಿಂದ ಕ್ರಮ ವಹಿಸುವುದು. ಜನಸಂಖ್ಯೆ ಹೆಚ್ಚಳ ನಿಯಂತ್ರಿಸುವ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವುದು. ಪ್ರಕೃತಿಯ ಮೇಲಿನ ಬೇಡಿಕೆ ತಗ್ಗಿಸುವುದು, ಕೃಷಿ ಮತ್ತು ಆಹಾರ ಉತ್ಪಾದನೆಯಲ್ಲಿ ಕೀಟನಾಶಕ ಪ್ರಮಾಣ ತಗ್ಗಿಸುವುದು. ಸಾವಯವ ಕೃಷಿ ಕೈಗೊಳ್ಳುವುದು, ತಾಜ್ಯ ಸಂಸ್ಕರಣೆ ವಿಲೇವಾರಿಯನ್ನು ಪರಿಸರ ಸ್ನೇಹಿಯಾಗಿಸುವುದು.ಮಳೆ ನೀರು ಕೊಯ್ಲು ಮಾಡುವುದನ್ನು ರೂಢಿಸಿಕೊಂಡರೆ ನಮಗೆ ಜೀವ ಮತ್ತು ಜೀವನ ನೀಡಿರುವ ಪರಿಸರಕ್ಕೆ ಒಂದು ಅಣುವಿನಷ್ಟು ಕೊಡುಗೆ ನೀಡಬಹುದು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑