Tel: 7676775624 | Mail: info@yellowandred.in

Language: EN KAN

    Follow us :


ಇನ್ನೂ ಪತ್ತೆಯಾಗಲಿಲ್ಲ ತಪ್ಪಿಸಿಕೊಂಡ ಬಾಲಕಿಯರು. ಬಾಲಮಂದಿರದ ಮಕ್ಕಳಿಗೆ ರಕ್ಷಣೆ ನೀಡದ ಇಲಾಖೆಯ ಅಧಿಕಾರಿಗಳು

Posted date: 23 Jun, 2020

Powered by:     Yellow and Red

ಇನ್ನೂ ಪತ್ತೆಯಾಗಲಿಲ್ಲ ತಪ್ಪಿಸಿಕೊಂಡ ಬಾಲಕಿಯರು. ಬಾಲಮಂದಿರದ ಮಕ್ಕಳಿಗೆ ರಕ್ಷಣೆ ನೀಡದ ಇಲಾಖೆಯ ಅಧಿಕಾರಿಗಳು

ರಾಮನಗರ:ಜೂ/೨೧/೨೦/ಭಾನುವಾರ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದ ಬಳಿ ಇರುವ ಮಾರುತಿ ವಿದ್ಯಾ ಸಂಸ್ಥೆಯ ಬಾಡಿಗೆ ಕಟ್ಟಡದ ಸರ್ಕಾರಿ ಬಾಲಮಂದಿರ ದಲ್ಲಿ ಶುಕ್ರವಾರ ರಾತ್ರಿ‌ ಸಿನಿಮೀಯ ರೀತಿಯಲ್ಲಿ ಇಬ್ಬರು ಬಾಲೆಯರು ತಪ್ಪಿಸಿಕೊಂಡಿದ್ದು, ಇಂದು ಭಾನುವಾರ ರಾತ್ರಿ ಯವರೆಗೂ ಸಿಗದಿರುವುದು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರಕ್ಷಕ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆಯಾದರೂ ಇದಕ್ಕೆ ಕಾರಣರಾರು !? ಎಂಬ ಪ್ರಶ್ನೆ ಉದ್ಭವಿಸಿದೆ.


ಕಳೆದ ಏಳೆಂಟು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ, ಸೂಕ್ತ ರಕ್ಷಣೆಯೂ ಇಲ್ಲದೆ ಬಾಲ ಮಂದಿರ ಕಾರ್ಯ ನಿರ್ವಹಿಸುತ್ತಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ ಜಿಲ್ಲಾ ನಿರ್ದೇಶಕರು ಮತ್ತು ಅಧೀಕ್ಷಕಿ ಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಪ್ರಭಾರಿಗಳಾದರೆ, ಹತ್ತು ಮಂದಿ ಸಿಬ್ಬಂದಿಗಳು ಇರಬೇಕಾಗಿದ್ದು, ಎಲ್ಲಾ ಹತ್ತು ಮಂದಿಯೂ ಹೊರ ಗುತ್ತಿಗೆ ಕಾರ್ಮಿಕರೇ ಇರುವುದು ಜಿಲ್ಲಾಡಳಿತ ಮತ್ತು ಸರ್ಕಾರದ ಬೇಜವಬ್ದಾರಿ ಎನ್ನಲಡ್ಡಿಯಿಲ್ಲ.


ಬಾಲ ಮಂದಿರ ಇರುವ ಮಾರುತಿ ವಿದ್ಯಾ ಮಂದಿರದ ಕಟ್ಟಡಕ್ಕೆ ಮೊದಲನೆಯದಾಗಿ ರಕ್ಷಣಾ ಗೋಡೆಯೇ ಇಲ್ಲ. ಬಾಲೆಯರು ಇರುವ ಯಾವ ಕೊಠಡಿಗೂ ಹೊಂದಾಣಿಕೆಯ ಶೌಚಾಲಯವೂ ಇಲ್ಲ. ಶೌಚಾಲಯಕ್ಕೆ ಮಲಗುವ ಕೊಠಡಿಯಿಂದ ಹೊರ ಬರಬೇಕಾಗಿರುವುದನ್ನೇ ಬಂಡವಾಳ ಮಾಡಿಕೊಂಡ ೧೭ ಮತ್ತು ೧೫ ವರ್ಷದ ಈರ್ವ ಅತಿ ಜಾಣ ಬಾಲೆಯರು ಪೂರ್ವ ಸಿದ್ದತೆ ಮಾಡಿಕೊಂಡೇ ತಪ್ಪಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.


ಕೊರೊನಾ (ಕೋವಿಡ್-೧೯) ಗೂ ಮೊದಲು ೫೭ ಬಾಲೆಯರು ಇದ್ದು, ಕೆಲ ಬಾಲೆಯರನ್ನು ಮುಂಜಾಗ್ರತಾ ಕ್ರಮವಾಗಿ ಪೋಷಕರ ಸುಪರ್ದಿಗೆ ಒಪ್ಪಿಸಿದ್ದು, ಉಳಿದ ಬಾಲೆಯರಿಗೆ ರಕ್ಷಣೆ ನೀಡಲಾಗಿತ್ತು. ಕೊರೊನಾ ಸಮಯದಲ್ಲಿ ಬಂದ ಬಾಲೆಯರಿಗೆ ಉಳಿದ ಬಾಲೆಯರ ಜೊತೆ ಬೆರೆಯಲು ಬಿಡದೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತಾದರೂ, ಶೌಚಾಲಯ ಹೊರಗೆ ಇರುವುದನ್ನೇ ನೆಪ ಮಾಡಿಕೊಂಡು ತಪ್ಪಿಸಿಕೊಂಡಿದ್ದು ಇವರ ಹಿಂದೆ ಬಾಲ ಮಂದಿರ ಸಿಬ್ಬಂದಿ ಅಥವಾ ಕಾಣದ ಯಾವ ಕೈ ಕೆಲಸ ಮಾಡಿದೆ ಎಂಬುದನ್ನು ಪತ್ತೆ ಹಚ್ಚಿದರೆ, ಈ ಹಿಂದೆಯೂ ತಪ್ಪಿಸಿಕೊಂಡಿದ್ದವರ ಜಾಡನ್ನು ಹಿಡಿದು ಜಾಲಾಡಿ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾದೀತು.


ಇದಕ್ಕೊಂದು ಮಕ್ಕಳ ಕಲ್ಯಾಣ ಸಮಿತಿ (ಸಿ ಡಬ್ಲ್ಯೂ ಸಿ) ಎಂಬ ಸಮಿತಿ ಯೂ ಇದ್ದು, ಐದು ಮಂದಿ ಸದಸ್ಯರು ಇದ್ದಾರೆ. ಅಲ್ಲೇ ಉಳಿದು ಕಾರ್ಯ ನಿರ್ವಹಿಸಬೇಕಾಗಿದ್ದ ಗುತ್ತಿಗೆ ಕಾರ್ಮಿಕರು ಸಹ ಪ್ರಭಾವಿಗಳ ಕಡೆಯಿಂದ ಕೆಲಸ ಗಿಟ್ಟಿಸಿದ್ದು ಹತ್ತು ಗಂಟೆಗೆ ಬಂದು ಐದು ಗಂಟೆಗೆ ಹೊರಟು ಹೋಗುತ್ತಾರೆ. ಅತ್ತ ಪೋಷಕರನ್ನು ಬಿಟ್ಟು, ಬಾಲ್ಯ ವಿವಾಹ ಮಾಡಿಕೊಂಡ ಗಂಡನನ್ನು ಬಿಟ್ಟು, ಆಪ್ತ ಸಮಾಲೋಚಕಿ, ಹೌಸ್ ಮದರ್ ರವರ ಸಾಂತ್ವನ ನುಡಿಯೂ ಇಲ್ಲದೆ ಆ ಬಾಲೆಯರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.



ನಮ್ಮ ಪೋಲೀಸರು ಆ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಸುಳಿವು ಸಿಕ್ಕಿದ್ದು ನಾಳೆ ಸಂಜೆಯೊಳಗೆ ತಪ್ಪಿಸಿಕೊಂಡಿರುವ ಬಾಲಕಿಯರು ಹಾಗೂ ತಪ್ಪಿಸಿಕೊಳ್ಳಲು ಕಾರಣಕರ್ತರಾದವರನ್ನು ಹುಡುಕಿ ಕರೆ ತರುತ್ತೇವೆ. ಒಂದು ವೇಳೆ ನಾಳೆಯೊಳಗೆ ಸಿಗದಿದ್ದರೆ ಜಿಲ್ಲಾ ಪೋಲಿಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡ ರಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

* ರಾಮರಾಜನ್. ಎಎಸ್ಪಿ. ಚನ್ನಪಟ್ಟಣ*

ಕೊರೊನಾ ಸಮಯದಲ್ಲಿ ಬಂದ ಬಾಲೆಯರನ್ನು ಅದೇ ಕಟ್ಟಡದ ಬೇರೆ ಕೊಠಡಿಯಲ್ಲಿ ಇರಲು ವ್ಯವಸ್ಥೆ ಮಾಡಲಾಗಿತ್ತು. ಅವರು ತಪ್ಪಿಸಿಕೊಳ್ಳಲು ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಅನುಮಾನವಿದೆ. ಶುಕ್ರವಾರ ಕಾರ್ಯನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದ ಮನೆಯ ಮಾತೆ (House Mother) ಶೀಲಾ, ಆಪ್ತ ಸಮಾಲೋಚಕಿ (Counseling) ರಮ್ಯ ಮತ್ತು ಭದ್ರತಾ ಸಿಬ್ಬಂದಿ (Home Guard) ಲಕ್ಷ್ಮಮ್ಮ ಎಲ್ಲರಿಗೂ ನೋಟಿಸ್ ನೀಡಿ ಕೆಲಸದಿಂದ ತೆಗೆದುಹಾಕಲು ಕ್ರಮ ಕೈಗೊಳ್ಳುತ್ತೇವೆ. ಶೀಘ್ರವಾಗಿ ಭದ್ರತೆಯುಳ್ಳ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸುತ್ತೇವೆ.

*ಸಿ ವಿ ರಾಮನ್. ಪ್ರಭಾರ ನಿರ್ದೇಶಕ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ*


ನಾನು ಆ ದಿನ ರಜೆಯ ಮೇಲೆ ತೆರಳಿದ್ದೆ. ಅಂದು ಅಲ್ಲೇ ಉಳಿದು ಕೆಲಸ ನಿರ್ವಹಿಸಬೇಕಾಗಿದ್ದ ಶೀಲಾ ಮತ್ತು ರಮ್ಯ ಇಬ್ಬರೂ ಸಹ ಸಂಜೆಯೇ ಹೊರಟುಹೋಗಿದ್ದಾರೆ. ಇನ್ನುಳಿದ ಹೋಂ ಗಾರ್ಡ್ ಲಕ್ಷ್ಮಿ ಮಾತ್ರ ಇರುವುದನ್ನು ಗಮನಿಸಿಯೇ ಬಾಲೆಯರು ತಪ್ಪಿಸಿಕೊಂಡಿದ್ದಾರೆ. ಈ ಕಟ್ಟಡಕ್ಕೆ ರಕ್ಷಣಾ ಗೋಡೆ ಇಲ್ಲ. ನೀರಿನ ಸಮಸ್ಯೆಯಂತು ಹೇಳತೀರದಾಗಿದೆ. ಬಾಡಿಗೆ ತೆಗೆದುಕೊಳ್ಳುವ ಆಡಳಿತ ವರ್ಗವೂ ಸ್ಪಂದಿಸುತ್ತಿಲ್ಲ. ಚನ್ನಪಟ್ಟಣದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಹುಡುಕಲಾಗುತ್ತಿದೆ.

*ಲೀಲಾವತಿ. ಪ್ರಭಾರ ಅಧೀಕ್ಷಕಿ. ಬಾಲಮಂದಿರ*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑