Tel: 7676775624 | Mail: info@yellowandred.in

Language: EN KAN

    Follow us :


ತಹಶಿಲ್ದಾರ್ ರವರು ಮನಸ್ಸು ಮಾಡಿದ್ರೆ ಮಾತ್ರ ಒತ್ತುವರಿ ತೆರವು ಸಾಧ್ಯ

Posted date: 23 Jun, 2020

Powered by:     Yellow and Red

ತಹಶಿಲ್ದಾರ್ ರವರು ಮನಸ್ಸು ಮಾಡಿದ್ರೆ ಮಾತ್ರ ಒತ್ತುವರಿ ತೆರವು ಸಾಧ್ಯ



ಸು ತ ರಾಮೇಗೌಡ.

ಸಂಪಾದಕರು.

ಬಯಲುಸೀಮೆ ಸಂಜೆ ದಿನಪತ್ರಿಕೆ




ಇಂದು ಚನ್ನಪಟ್ಟಣ ತಾಲ್ಲೂಕಿನ ಹಲವು ಕೆರೆಗಳು ಒತ್ತುವರಿಯಾಗಿವೆ. *ಈ ಒತ್ತುವರಿಯಲ್ಲಿ ಪಟ್ಟಭದ್ರರ ಪಾತ್ರವೇ ಜಾಸ್ತಿ ಇದೆ.* ಸಣ್ಣಪುಟ್ಟವರನ್ನು ತೆರವುಗೊಳಿಸುವ ಪ್ರಯತ್ನ ಮಾಡಿದರೆ, ಮೊದಲು ಅವರದು ಬಿಡಿಸಿಕೊಂಡು ಬನ್ನಿ ನಾವು ನಾವೇ ತೆರವು ಮಾಡುತ್ತೇವೆ ಎಂದು ಜಾರಿಕೊಳ್ಳುತ್ತಾರೆ.

ದೊಡ್ಡವರು ಮಾಡಿರುವ ಒತ್ತುವರಿಯನ್ನು ತೆರವು ಗೊಳಿಸುವಂತಿಲ್ಲ, ಸಣ್ಣವರು ತೆರವಿಗೆ ಬಗ್ಗುವಂತಿಲ್ಲ. ಇಂತಹ ದುಸ್ಥಿತಿಯು ತಾಲ್ಲೂಕಿನ ಸರ್ಕಾರಿ ಜಾಗಕ್ಕೆ ಒದಗಿ ಬಂದಿದೆ.


ಹಿಂದೆ ಕೆಲವು ಗೋಕಟ್ಟೆಗಳನ್ನು ಮುಚ್ಚುವ ಕಾರ್ಯಕ್ಕೆ ಆಗಿನ ಶಾಸಕ ಸಿ.ಪಿ ಯೋಗೇಶ್ವರ್ ಪ್ರಯತ್ನ ಮಾಡಿ ಸಫಲರಾದರು.

ಅವುಗಳನ್ನು ಸಾರ್ವಜನಿಕ ಕೆಲಸಕ್ಕೆ ಹಾಗೂ ಶಾಲೆಗಳಿಗೆ, ಸಮುದಾಯ ಭವನಕ್ಕೆ ಬಳಸಿಕೊಳ್ಳುವ ಆಲೋಚನೆಯು ಇತ್ತು. ಆದರೆ ಅಂತಹ ಜಾಗವನ್ನೂ ಸಹ ಅವರ ಹಿಂಬಾಲಕರು ಹಿಡಿದಿದ್ದಾರೆ.

ಇದನ್ನು ಗಮನಿಸಿದ ಬೇರೆ ಪಕ್ಷಗಳ ಮುಖಂಡರು ಕೂಡ, ನಾವೇನು ಕಡಿಮೆ, ಅವರು ಒತ್ತುವರಿ ಮಾಡಿದರೆ ನಾವೂ ಮಾಡುತ್ತೇವೆ ಎಂದು ಅವರೂ ಸಹ ಒತ್ತುವರಿ ಮಾಡಿದ್ದಾರೆ.

ಇಂತಹ ಜಾಗಗಳೂ ಸಹ ಈಗ ಜಿದ್ದಿಗೆ ಬಿದ್ದಿವೆ. ಅವರದ್ದು ಬಿಡಿಸಿಕೊಂಡು ಬನ್ನಿ ಎಂದು ಇವರು, ಇವರದ್ದು ಬಿಡಿಸಿ ಎಂದು ಅವರು, ಈಗ ಜಂಗಿ ಕುಸ್ತಿಯೂ ಸಹ ನಡೆಯುತ್ತಿದೆ.


ಎಷ್ಟೋ ಕಡೆಗಳಲ್ಲಿ ಮುಖ್ಯರಸ್ತೆಗಳನ್ನು ಒತ್ತುವರಿ ಮಾಡಿ ಮನೆ ಕಟ್ಟುವುದು, ಬೇರೆ ಬೇರೆ ರೀತಿಯ ಉಪಯೋಗ ಮಾಡಿ ಕೊಳ್ಳುವುದು ನಡೆದಿದೆ, ಇದನ್ನು ಯಾರು ಸರಿಮಾಡಿಯಾರು?.

ಹೀಗೆ ಒಬ್ಬರ ಮೇಲೆ ಒಬ್ಬರು ರಂಪ ಮಾಡಿಕೊಂಡು ಅಂತಹ ಕೆಲಸವು ಹೇಗೋ ಹಾಗೆ ಮುಂದುವರಿದುಕೊಂಡು ಹೋಗಿವೆ. ಯಾವುದೂ ಸಹ ದಡ ಮುಟ್ಟದೆ ಹಾಗೆಯೇ ಉಳಿದು ಕೊಳಡಯುತ್ತಿವೆ.


ಈ ತಾಲ್ಲೂಕಿಗೆ ಶಿಸ್ತಿನ, ಯಾವುದು ನ್ಯಾಯ, ಯಾವುದು ಅನ್ಯಾಯ ಎಂದು ಪರಾಮರ್ಶೆ ಮಾಡಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬಲ್ಲ ಶಕ್ತಿ ಇರುವ ತಹಶೀಲ್ದಾರ್ ಬಂದಿಲ್ಲ ಎಂದೇನಿಲ್ಲ.

ಯಾರನ್ನು ಯಾವ ರೀತಿಯಲ್ಲಿ ದಿಗ್ಬಂಧಿಸಿ, ಇಲ್ಲಿಂದ ಅಟ್ಟಬಹುದೋ ಆ ಕೆಲಸವನ್ನು ಇಲ್ಲಿನ ಅಧಿಕಾರಾರೂಢರು ಮಾಡಿಕೊಂಡು ಬಂದಿದ್ದಾರೆ. ಅದು ಈಗಲೂ ಮುಂದುವರಿದಿದೆ.

ಚನ್ನಪಟ್ಟಣ,ತಹಶಿಲ್ದಾರ್

ಏನಾದರೂ ಮಾಡಬೇಕು ಎಂದರೆ ರಾಜಕೀಯ ಪ್ರವೇಶಿಸುತ್ತದೆ. ಆಗ ಯಾವುದೇ ಕೆಲಸವಾಗಲಿ ಸುಲಭವಾಗಿ ನಡೆಯಲು ಬಿಡುವುದಿಲ್ಲ. ಆ ರೀತಿಯ ಒಂದು ಸಮಸ್ಯೆಗಳು ಹುಟ್ಟುತ್ತವೆ.

ಇಂದು ಅಧಿಕಾರಶಾಹಿಯೂ ಸಹ ಹಣಕೊಟ್ಟು ಬರುವ ಸ್ಥಿತಿಯಿರುವುದರಿಂದ, ಭ್ರಷ್ಟರಾದವರೇ ಬರುತ್ತಾರೆ. ಅವರು ಅದಾವ ರೀತಿಯಲ್ಲಿ ನ್ಯಾಯ ನೀತಿ ಅನುಸರಿಸಲು ಸಾಧ್ಯವಾದೀತು.


ಎಲ್ಲರೂ ಸಹ ಆರಂಭಕ್ಕೆ ಅಗಸ ಎತ್ತಿ ಎತ್ತಿ ಹೊಗೆದ ರೀತಿಯಲ್ಲಿ ಮಾಡಿ, ಆಮೇಲೆ ಎಲ್ಲಾ ರೀತಿಯ ಅಕ್ರಮ ಮಾರ್ಗವನ್ನೂ ಸಹ ಹಿಡಿದು ಎಲ್ಲರಂತೆ ಇವನೂ ಸಹ ಎನ್ನುವ ಹಂತಕ್ಕೆ ಹೋಗಿ ಬಿಡುತ್ತಾನೆ. ಅಂತಹವರಲ್ಲಿ ಕ್ರಿಯೆ ಎಲ್ಲಿ ಇರಲು ಸಾಧ್ಯ?.

ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸರ್ಕಾರ ಬಂದು, ಏನೋ ಸುಧಾರಣೆ ಮಾಡುತ್ತೇನೆ ಎಂದು ಹೇಳಿದರೂ ಸಹ ಅದು ಊರ್ಜಿತವಾಗುವುದಿಲ್ಲ. ಎಲ್ಲವೂ ಸಹ ಬರಹದಲ್ಲಿ ಇರುತ್ತವೆಯೇ ಹೊರತಾಗಿ ಕಾರ್ಯಗತವಾಗುವುದಿಲ್ಲ.


ಇದು ಹಿಂದೆಯೂ ನಡೆದು ಬಂದಿದೆ, ಈಗಲೂ ನಡೆಯುತ್ತಿದೆ, ಮುಂದೆಯೂ ಸಹ ನಡೆಯುವಂತಹದ್ದೇ. ಹಾಗಾಗಿ ಅದು ಯಾವ ಬದಲಾವಣೆಯೂ ಆಗದೆ ಹಾಗೇ ನಡೆಯುತ್ತಲೇ ಹೋಗುತ್ತದೆ.

ಹಲವು ಬಾರಿ ಇಂತಹವುಗಳನ್ನು ಸುಧಾರಿಸುತ್ತೇನೆ ಎಂದು ಹೇಳುವವನೇ ಸೋತುಹೋಗಿ, ಇಲ್ಲಿನ ಸಹವಾಸವೇ ಬೇಡ ಇಲ್ಲಿ ಮಾಡಿಕೊಂಡಿದ್ದೇ ಸಾಕು ಎಂದು ಜಾಗ ಖಾಲಿ ಮಾಡುವ ಕಡೆಗೆ  ಮುಂದಾಗುತ್ತಾರೆ. ಇದಕ್ಕೆ ಯಾರು ಏನು ಮಾಡಲು ಸಾಧ್ಯ?.


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑