Tel: 7676775624 | Mail: info@yellowandred.in

Language: EN KAN

    Follow us :


ಹಂದಿ ನೋಡಿ ಕರಡಿ ಎಂದು ಹೆದರಿದ ಮಂದಿ

Posted date: 27 Jun, 2020

Powered by:     Yellow and Red

ಹಂದಿ ನೋಡಿ ಕರಡಿ ಎಂದು ಹೆದರಿದ ಮಂದಿ

ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ಚನ್ನಪಟ್ಟಣದ ನಗರಿಗರಿಗೆ ಕರಡಿ ಯ ಭಯ ಇನ್ನೂ ಹೋಗಿಲ್ಲಾ ಎನ್ನುವುದಕ್ಕೆ ಇಂದು ಕುವೆಂಪು ನಗರದ ಎರಡನೇ ತಿರುವಿನ ಕೊನೆಯ, ಮಾರುತಿ ದೇವಾಲಯದ ಹಿಂಭಾಗದ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಳ ನಡುವೆ ಕಂಡ ಹಂದಿಯನ್ನು ನೋಡಿ ಭಯಭೀತರಾಗಿ, ಗುಂಪು ಸೇರಿದ್ದರು.


ಇತ್ತೀಚೆಗೆ ನಗರದ ರೈಲ್ವೇ ನಿಲ್ದಾಣದ ಬಳಿ ಮಾವಿನ ಹಣ್ಣಿನ ರುಚಿಗೆ ಎಪಿಎಂಸಿ ಬಳಿ ಬಂದು ನಂತರ ರೈಲ್ವೆ ನಿಲ್ದಾಣದ ಹತ್ತಿರ ಬಂದ ಸಂದರ್ಭದಲ್ಲಿ ಜನರನ್ನು ನೋಡಿ ಭಯಭೀತರಾಗಿ ಮಾಜಿ ನಗರಸಭಾ ಸದಸ್ಯೆಯೊಬ್ಬರ ಮನೆಯ ಕಾಂಪೌಂಡ್ ಒಳಗೆ ಅವಿತಿದ್ದು, ಬೆಳಗಿನ ಜಾವ ಅವರ ಮೇಲೆ ಏಕಾಏಕಿ ದಾಳಿ ಮಾಡಿ ಇಡೀ ಮುಖವನ್ನು ವಿರೂಪಗೊಳಿಸಿತ್ತು.


ಅದಾದ ಹದಿನೈದು ದಿನಗಳ ತನಕ ಇಡೀ ನಗರದ ಜನತೆ ಭಯಭೀತರಾಗಿದ್ದಲ್ಲದೆ, ಕಪ್ಪು ಬಣ್ಣದ ನಾಯಿ, ಹಂದಿ ಕಂಡರೂ ಸಹ ಕರಡಿಯನ್ನೇ ನೋಡಿದೆ ಎಂದೇ ಹೇಳುವ ಮಟ್ಟಿಗೆ ಭಯ ಹುಟ್ಟಿಸಿಕೊಂಡಿದ್ದರು. ಇಂದು ಸಹ ಅಂತಹದೇ ಘಟನೆ ನಡೆದಿದ್ದು, ಯಾರೋ ಅನಾಮಧೇಯರು ಗಾಳಿ ಸುದ್ದಿ ಹಬ್ಬಿಸಿ ಆ ರಸ್ತೆಯ ಜನರನ್ನು ಭಯಗೊಳಿಸಿದ್ದು ಜನರು ಸಂದಿಗೊಂದಿಗಳನ್ನು ಹುಡುಕುವಂತೆ ಮಾಡಿದ್ದು ಹಾಸ್ಯಾಸ್ಪದ ವಾದರೂ ಸತ್ಯ.


ಅದೇ ಬೀದಿಯಲ್ಲಿ ವಾಸ ಮಾಡುತ್ತಿರುವ ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ ಮಾತನಾಡಿ ಯಾರೋ ತಿಳಿಗೇಡಿಗಳು ಜನರನ್ನು ಭಯ ಬೀಳಿಸಲು ಮಾಡಿರುವ ಕುತಂತ್ರವಿದು. ಕರಡಿ ಯಾವ ಕಾರಣಕ್ಕು ಜನನಿಬಿಡ ಪ್ರದೇಶಗಳಿಗೆ ಅದರಲ್ಲೂ ಬೆಳಕಿನ ಸಮಯದಲ್ಲಿ ಬರುವುದಿಲ್ಲ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪೋಲಿಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


ಮತ್ತೋರ್ವ ಪತ್ರಕರ್ತ ಲಕ್ಷ್ಮಿಪತಿ ಮಾತನಾಡಿ ನಗರಾದದ್ಯಂತ ಅನೇಕ ಖಾಲಿ‌ ನಿವೇಶನಗಳಿದ್ದು, ಅದರಲ್ಲಿ ಕಾಲಿಡಲು ಸಾಧ್ಯವಾಗದಂತೆ ಗಿಡಮರಗಳು ಬೆಳೆದು ನಿಂತಿವೆ. ನಗರದ ಮಂದಿ ತಮ್ಮ ಮನೆಯ ಕಸವನ್ನು ತಂದು ಅಲ್ಲಿಯೇ ಸುರಿಯುವುದರಿಂದ ಗಬ್ಬು ವಾಸನೆಯ ಜೊತೆಗೆ ಹಂದಿಗಳು ಮತ್ತು ನಾಯಿಗಳ ಕಾಟ ಹೆಚ್ಚಾಗಿದೆ. ನಗರಸಭೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಉಪಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ
ಉಪಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

ಚನ್ನಪಟ್ಟಣ:ನ/26/20/ಗುರುವಾರ. ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಸಿಎನ್ ಅಶ್ವಥ್ ನಾರಾಯಣ ಅವರು ಇಂದು ಮಾಗಡಿ ತಾಲ್ಲ

ಮಾಗಡಿ ತಾಲೂಕಿನಲ್ಲಿ ಡಿಸಿಎಂ ರೌಂಡ್ಸ್;‌ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಅಡಿಗಲ್ಲು
ಮಾಗಡಿ ತಾಲೂಕಿನಲ್ಲಿ ಡಿಸಿಎಂ ರೌಂಡ್ಸ್;‌ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಅಡಿಗಲ್ಲು

ರಾಮನಗರ:ನ/26/20/ಗುರುವಾರ. ರಾಮನಗರ: ಜಿಲ್ಲಾ ಉಸುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರದಂದು ಜಿಲ್ಲೆಯ ವಿವ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ

ರಾಮನಗರ:ನ/26/20/ಗುರುವಾರ. ಮಾಗಡಿ ತಾಲ್ಲೂಕಿನಲ್ಲಿ 3.99 ಕೋಟಿ ರೂ ವೆಚ್ಚದಲ್ಲಿ ಹಮ್ಮಿಕೊಂಡಿರುವ ಚಕ್ರಬಾವಿ ಹಾಗೂ ಇತರೆ 12 ಗ್ರಾಮಗಳಿಗೆ ಬಹುಗ

ಉಪಮುಖ್ಯಮಂತ್ರಿಗಳಿಂದ  ಹಕ್ಕುಪತ್ರ ವಿತರಣೆ
ಉಪಮುಖ್ಯಮಂತ್ರಿಗಳಿಂದ ಹಕ್ಕುಪತ್ರ ವಿತರಣೆ

ರಾಮನಗರ:ನ/26/20/ಗುರುವಾರ. ಮಾಗಡಿ ತಾಲ್ಲೂಕಿನ ಜೇನುಕಲ್ಲುಪಾಳ್ಯದ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಹಾಡಿ ಜನರು ಸರ್ಕಾರಿ ಜಮೀನಿನಲ್ಲಿ ವಾಸವಾಗ

ಕೈಗಾರಿಕಾ ತರಬೇತಿ ಸಂಸ್ಥೆಗೆ ಶಂಕುಸ್ಥಾಪನೆ
ಕೈಗಾರಿಕಾ ತರಬೇತಿ ಸಂಸ್ಥೆಗೆ ಶಂಕುಸ್ಥಾಪನೆ

 ರಾಮನಗರ:ನ/26/20/ಗುರುವಾರ. ಮಾಗಡಿ ತಾಲ್ಲೂಕಿನ ಮಾಡಬಾಳ್ ಹೋಬಳಿ ಮೇಲಹಳ್ಳಿ ಗ್ರಾಮದಲ್ಲಿ 4.15 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರ

ಜಿಲ್ಲಾ ಸರ್ಕಾರಿ ವಕೀಲರಾಗಿ ತಾಲೂಕಿನ ಹಿರಿಯ ವಕೀಲ ಎಂ.ಕೆ.ನಿಂಗಪ್ಪ ರವರು ನೇಮಕಗೊಂಡಿದ್ದಾರೆ.
ಜಿಲ್ಲಾ ಸರ್ಕಾರಿ ವಕೀಲರಾಗಿ ತಾಲೂಕಿನ ಹಿರಿಯ ವಕೀಲ ಎಂ.ಕೆ.ನಿಂಗಪ್ಪ ರವರು ನೇಮಕಗೊಂಡಿದ್ದಾರೆ.

ಚನ್ನಪಟ್ಟಣ:ನ:25/20/ಬುಧವಾರ. ಜಿಲ್ಲಾ ಸರ್ಕಾರಿ ವಕೀಲರಾಗಿ ತಾಲ್ಲೂಕಿನ ಹಿರಿಯ ವಕೀಲರಾದ ಎಂ ಕೆ ನಿಂಗಪ್ಪ ರವರನ್ನು ನೇಮಿಸಿ ಆದೇಶ ಹೊರಡಿಸಲಾಗಿದ

ನ. 26 ರಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ರವರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ
ನ. 26 ರಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ರವರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ

ರಾಮನಗರ:ನ/25/20/ಬುಧವಾರ. ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರು ನ. 26ರಂದು ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ದ್ವೇಷ ಬಿತ್ತುವ ಕೆಲಸ ನಿಲ್ಲಿಸಬೇಕು : ಡಾ. ಬೈರಮಂಗಲ ರಾಮೇಗೌಡ
ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ದ್ವೇಷ ಬಿತ್ತುವ ಕೆಲಸ ನಿಲ್ಲಿಸಬೇಕು : ಡಾ. ಬೈರಮಂಗಲ ರಾಮೇಗೌಡ

ರಾಮನಗರ : ಜನಾಂಗ ಜನಾಂಗಗಳ ನಡುವೆ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿವೆ. ಇದು ನಿಲ್ಲಬೇಕು ಎಂದು ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ತಿಳಿಸಿದರು.

ನಗರದ ಶಾಂತಲಾ ಕಲಾಕೇಂದ್ರದ ದರ್ಪಣ ಸಭಾಂಗಣದಲ್ಲ

ಡಿಸಿ ಹೆಸರಲ್ಲಿ ನಕಲಿ ಇ-ಮೇಲ್ ಖಾತೆ : ಕಾನೂನು ಕ್ರಮದ ಎಚ್ಚರಿಕೆ
ಡಿಸಿ ಹೆಸರಲ್ಲಿ ನಕಲಿ ಇ-ಮೇಲ್ ಖಾತೆ : ಕಾನೂನು ಕ್ರಮದ ಎಚ್ಚರಿಕೆ

ರಾಮನಗರ, ನ. 23 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ ಮತ್ತೋಂದು ನಕಲಿ ಐಡಿಯಿಂದ ಇ-ಮೇಲ್ ಕಳುಹಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ

ಕೋವಿಡ್-19 ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ವಸತಿ ಸಚಿವ ವಿ. ಸೋಮಣ್ಣ ಅವರಿಂದ ಚಾಲನೆ
ಕೋವಿಡ್-19 ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ವಸತಿ ಸಚಿವ ವಿ. ಸೋಮಣ್ಣ ಅವರಿಂದ ಚಾಲನೆ

ರಾಮನಗರ:ನ/21/20/ಶನಿವಾರ. : ಕೋವಿಡ್-19 ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಳ್ಳಬೇಕಾದ  ಮುಂಜಾಗೃತಾ ಸುರಕ್ಷತಾ ಕ್ರಮಗಳ ಕುರಿತು ಜ

Top Stories »  


Top ↑