Tel: 7676775624 | Mail: info@yellowandred.in

Language: EN KAN

    Follow us :


ಉಪನಿರ್ದೇಶಕರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ. ಬಾಲಕಿಯರ ಮಂದಿರದಿಂದ ೮ ಮಂದಿ ಬಾಲಕಿಯರು ಕಣ್ಮರೆ !?

Posted date: 15 Jul, 2020

Powered by:     Yellow and Red

ಉಪನಿರ್ದೇಶಕರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ. ಬಾಲಕಿಯರ ಮಂದಿರದಿಂದ ೮ ಮಂದಿ ಬಾಲಕಿಯರು ಕಣ್ಮರೆ !?

ರಾಮನಗರದ ಐಜೂರಿನಲ್ಲಿ‌ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಬಾಲಮಂದಿರ

ರಾಮನಗರ.:ಜು/೧೫/೨೦/ಬುಧವಾರ. ರಾಮನಗರ ಜಿಲ್ಲಾ ಬಾಲಕಿಯರ ಬಾಲ ಮಂದಿರದಿಂದ ೮ ಜನ ವಿದ್ಯಾರ್ಥಿನಿಯರು ನೆನ್ನೆ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಒಬ್ಬ ವಿದ್ಯಾರ್ಥಿನಿ ಸಿಕ್ಕಿದ್ದು ಇನ್ನು ೭ ಮಂದಿ ಬಾಲೆಯರು ನಾಪತ್ತೆಯಾಗಿದ್ದಾರೆ ಎಂದು  ಇದರ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿ.ವಿ ರಾಮನ್ ಹೇಳಿದ್ದಾರೆ.


ಈ ಹಿಂದೆ ಬಾಲ ಮಂದಿರವು ಚನ್ನಪಟ್ಟಣದ ವಂದಾರಗುಪ್ಪೆ ಬಳಿ ಇರುವ ಮಾರುತಿ ವಿದ್ಯಾ ಮಂದಿರದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತಿತ್ತು. ಅಲ್ಲಿಯೂ ಸಹ ವಿದ್ಯಾರ್ಥಿನಿಯರು ಆಗಿಂದಾಗ್ಗೆ ತಪ್ಪಿಸಿಕೊಂಡು ಹೋಗುತ್ತಿದ್ದ ಘಟನೆಗಳು ನಡೆದಿದ್ದವು. ಕಳೆದ ತಿಂಗಳು ಸಹ ಮೂರು ಮಂದಿ ಹುಡುಗಿಯರು ತಪ್ಪಿಸಿಕೊಂಡಿದ್ದರು. ಆದ್ದರಿಂದ ಇದು ಸುರಕ್ಷಿತ ಜಾಗವಲ್ಲ ಎಂದು, ಈಗ ಇರುವ ಜಾಗ ಸುರಕ್ಷಿತಾ ಜಾಗ ಎಂದು ರಾಮನಗರಕ್ಕೆ ಈ ವಿದ್ಯಾರ್ಥಿನಿಯರ ಬಾಲಮಂದಿರನ್ನು ಸಹಾಯಕ ನಿರ್ದೇಶಕ ಸಿ ವಿ ರಾಮನ್ (ಚಿಕ್ಕ ವೆಂಕಟ ರಾಮಪ್ಪ) ನವರು ವರ್ಗಾಯಿಸಿಕೊಂಡಿದ್ದರು.


ಇಂತಹ ಜಾಗದಲ್ಲೂ ಸಹ ೮ ಜನ ವಿದ್ಯಾರ್ಥಿನಿಯರು ಅದಾವ ರೀತಿಯಲ್ಲಿ ತಪ್ಪಿಸಿಕೊಂಡರು ಎಂದು ಡಿಡಿ ಅವರನ್ನು ಕೇಳಿದರೆ, ಅವರು ನಿಖರವಾದ ಉತ್ತರವನ್ನು ಕೊಡದೆ,

ಈ ಬಾಲಕಿಯರು ಹಿಂದುಗಡೆ ೧೫ ಅಡಿ ಗೋಡೆಯನ್ನು ಹತ್ತಿ ಅಲ್ಲಿಂದ ಪರಾರಿಯಾಗಿದ್ದಾರೆ. ಗೋಡೆಯ ಪಕ್ಕದಲ್ಲಿ ಪ್ಲಾಸ್ಟಿಕ್ ಬಕೆಟ್‌ಗಳನ್ನು ಇಟ್ಟು ಅದರ ಮೇಲೆ, ಪ್ಲಾಸ್ಟಿಕ್ ಪೈಪ್‌ ಅನ್ನು ಹಾಕಿ ಗೋಡೆಗೆ ಲಿಂಕ್ ಕಂಬಿಗಳನ್ನು ಅಳವಡಿಸಿದ್ದನ್ನು ಗಮನಿಸಿ ಅಲ್ಲಿಂದ ಧುಮುಕಿ ಸೀನಿಮೀಯ ರೀತಿಯಲ್ಲಿ ಹೊರಗೆ ಹೋಗಿದ್ದಾರೆ ಎಂದು ಕಾಗಕ್ಕ ಗೂಬಕ್ಕ ನ ಕಥೆ ಹೇಳುತ್ತಿರುವುದು ಇದರ ಹಿಂದೆ ಯಾರಿದ್ದಾರೆ ಎಂಬುದು ಪೋಲೀಸರ ತನಿಖೆಯಿಂದ ಹೊರ ಬರಬೇಕಾಗಿದೆ.


ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಂದಾರಗುಪ್ಪೆ ಬಳಿಯ ಬಾಲಕಿಯರ ಮಂದಿರ


ಇವರ ಪ್ರಕಾರ ಒಬ್ಬಳು ಅನುಭವಿಯಾಗಿದ್ದು, ಅವಳು ಉಳಿದ ೭ ಜನರಿಗೂ ದಿಕ್ಕು ತಪ್ಪಿಸಿ ಈ ಕೃತ್ಯ ಎಸಗಿದ್ದಾಳೆ. ಓರ್ವ ವಿದ್ಯಾರ್ಥಿನಿ ಸುಸ್ತಾಗಿ ಅಲ್ಲೇ ಎಲ್ಲೋ ಉಳಿದಿದ್ದರಿಂದ ಆಕೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.


ಇಲ್ಲಿನ ವ್ಯವಸ್ಥೆ, ಸಡಿಲ ವ್ಯವಸ್ಥೆ ಇರಬಹುದೇ ಎಂದು ಪ್ರಶ್ನಿಸಿದರೆ, ಇಲ್ಲ, ಇಲ್ಲಿ ಮೂರು ಕಡೆ ಗೇಟ್ವ ಡಿಸಿದ್ದು, ಹೊರಗೆ ಹೋಗಲು, ಅಥವಾ ಹೊರಗಿನಿಂದ ಬರಲು ಸಾಧ್ಯವಿಲ್ಲ. ಹಾಗಾಗಿ ಈ ತರಹದ ಒಂದು ಮಾರ್ಗ ವನ್ನು ಅವರು ಹಿಡಿದಿದ್ದಾರೆ ಎಂದು ಹೇಳುತ್ತಾರೆ.


 ಈ ಹಿಂದೆ ಲೀಲಾವತಿ ಎಂಬ ಸೂಪರ್ ವೈಸರ್ ಇದ್ದು, ಅವರನ್ನು ಮಾತೃ ಇಲಾಖೆಗೆ ಕಳುಹಿಸಿ ರಾಮನಗರದ ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಒಬ್ಬರನ್ನು ನಿಯೋಜಿಸಲಾಗಿದೆ. ಹೌಸ್ ಮದರ್‌ಳಾಗಿ ಕಾರ್ಯನಿರ್ವಹಿಸುತ್ತಿದ್ದ ಶೀಲಾಗೆ ಬದಲಾಗಿ ನಾಜಿಯಾ ಎಂಬುವವರನ್ನು ಹಾಕಲಾಗಿದೆ ಎಂದು ಡಿಡಿ ಅವರು ಹೇಳುತ್ತಾರೆ. ತಪ್ಪಿಸಿಕೊಂಡಿರುವವರ ಪತ್ತೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಸಹ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.


ಇಲ್ಲಿ ಈ ಮಂದಿರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ವಹಣೆ ಮಾಡುತ್ತಿದ್ದು, ರಾಮನಗರದ ಈ ಜಾಗ ಎಲ್ಲಾ ರೀತಿಯಲ್ಲಿಯೂ ಸುರಕ್ಷಿತ ಎಂದು ವರ್ಗಾಹಿಸಲಾಯಿತು. ಇಂತಹ ಜಾಗದಲ್ಲೂ ಸಹ ಅವರು ತಪ್ಪಿಸಿಕೊಂಡು ಹೋಗುತ್ತಾರೆ ಎಂದರೆ ಅವರು ಹಲವು ಹತ್ತು ರೀತಿಯಲ್ಲಿ ಅನುಭವವಿರುವ ಹುಡುಗಿಯರಾಗಿದ್ದಾರೆ, ಅಥವಾ ಇಲಾಖೆಯ ಲೋಪದೋಷಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜಾವಾಬ್ದಾರಿಯಿಂದಲೂ ಅವರು ತಪ್ಪಿಸಿಕೊಂಡಿರಬಹುದು. ಇಲ್ಲ ಅವರ ಜೊತೆಯಲ್ಲಿ ಸಿಬ್ಬಂದಿಗಳು ಶಾಮೀಲಾಗಿ ಪದೇಪದೇ ಈ ಕೃತ್ಯ ನಡೆಯುತ್ತಿದೆಯೇ ಎಂಬುದನ್ನು ಜಿಲ್ಲಾಡಳಿತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ.


ಈ ಮೊದಲು ಬಾಲಕಿಯರಿಗೆ ರಕ್ಷಣಾ ಗೋಡೆಯಿಲ್ಲದಿದ್ದರೂ, ದೊಡ್ಡದಾದ ಹೊರಾಂಗಣವಿದ್ದು ಸ್ವಲ್ಪ ಸಮಯ ಆಟದಲ್ಲಿ ಮಗ್ನರಾಗಿರುತ್ತಿದ್ದರು. ಈಗಿರುವ ಕಟ್ಟಡದಲ್ಲಿ ಆ ಆಟಕ್ಕೆ ಜಾಗ ಇಲ್ಲದಿರುವುದು ಸಹ ಅವರ ಖಿನ್ನತೆಗೆ ಕಾರಣವಾಗಿರಬಹುದು. ಇಂತಹ ಜಾಗದಲ್ಲಿ ಮತ್ತಷ್ಟು ಎಚ್ಚರಿಕೆ ಅಗತ್ಯವಿತ್ತು.  ಈ ರೀತಿ ಆಗಿಂದಾಗ್ಗೆ ತಪ್ಪಿಸಿಕೊಳ್ಳುತ್ತಿರುವುದನ್ನು ನೋಡಿದರೆ, ಇದು ಭದ್ರೆತೆಯ  ಲೋಪವೋ ಇಲ್ಲ, ಅವರಿಗೆ ಯಾರ ಸಹಾಯವಿದೆ, ಈ ಎಲ್ಲಾ ಪ್ರಶ್ನೆಗಳಿಗೂ ಜಿಲ್ಲಾಡಳಿತ ತನಿಖೆ ಕೈಗೊಂಡು ಉತ್ತರ ನೀಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑