Tel: 7676775624 | Mail: info@yellowandred.in

Language: EN KAN

    Follow us :


ತಾರಕಕ್ಕೇರಿದ ಸಿಪಿವೈ ಹೇಳಿಕೆ, ನಾವು ರಿಟೈರ್ಡ್ ಹಾರ್ಸ್ ಅಲ್ಲ, ಅಶ್ವಮೇಧ ಕುದುರೆ ಕಾಂಗ್ರೆಸ್ ಮುಖಂಡರು

Posted date: 27 Jul, 2020

Powered by:     Yellow and Red

ತಾರಕಕ್ಕೇರಿದ ಸಿಪಿವೈ ಹೇಳಿಕೆ, ನಾವು ರಿಟೈರ್ಡ್ ಹಾರ್ಸ್ ಅಲ್ಲ, ಅಶ್ವಮೇಧ ಕುದುರೆ ಕಾಂಗ್ರೆಸ್ ಮುಖಂಡರು

ಚನ್ನಪಟ್ಟಣ:ಜು/೨೭/೨೦/ಸೋಮವಾರ. ನಮ್ಮ ನಾಯಕರು ರಿಟೈರ್ಡ್ ಕುದುರೆಗಳಲ್ಲ, ಅವರು ಅಶ್ವಮೇಧ ಕುದುರೆ, 2023 ರ ಚುನಾವಣೆಯಲ್ಲಿ ನಮ್ಮ ಕುದುರೆಯನ್ನು ಕಟ್ಟಿ ಹಾಕಲಿ ನೋಡೋಣಾ ! ಎಂದು ತಾಲ್ಲೂಕು ಕಾಂಗ್ರೆಸ್ ನ ಮುಖಂಡರು ಇಂದು ನೂತನ ಮೇಲ್ಮನೆ ಸದಸ್ಯ ಸಿ ಪಿ ಯೋಗೇಶ್ವರ್ ಗೆ ಸವಾಲೆಸೆದರು. ಮೇಲ್ಮನೆ ಸದಸ್ಯರಾಗಿ ನಾಮ ನಿರ್ದೇಶಿತರಾದ ನಂತರ ಸಿಪಿವೈ ರವರು ಡಿ ಕೆ ಮತ್ತು ಹೆಚ್ಡಿಕೆ ರಿಟೈರ್ಡ್ ಹಾರ್ಸ್ ಎಂದು ಹೇಳಿಕೆ ನೀಡಿದ್ದರ ವಿರುದ್ದ ಅವರು ನಗರದ ತಾಲ್ಲೂಕು ಕಾಂಗ್ರೆಸ್ ಕಛೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.


ಬಿಜೆಪಿ ಸರ್ಕಾರ ಬಂದು ಒಂದು ವರ್ಷವಾಗಿದೆ, ಹದಿನೆಂಟು ವರ್ಷ ಅಧಿಕಾರ ಅನುಭವಿಸಿದ್ದಾರೆ, ಇಷ್ಟೆಲ್ಲಾ ಅಧಿಕಾರ ಉಂಡರೂ ತಾಲ್ಲೂಕಿಗೆ ಅವರ ಕೊಡುಗೆ ಏನು ? ಹೆಚ್ಡಿಕೆ ಮತ್ತು ಡಿಕೆ ಪ್ರಬುದ್ಧ ರಾಜಕಾಣಿಗಳು, ರಿಟೈರ್ಡ್ ಹಾರ್ಸ್ ಗಳಲ್ಲ. ಡಿಕೆ ಅಶ್ವಮೇಧ ಕುದುರೆ, ಯೋಗೇಶ್ವರ್ ಹುಚ್ಚು ಕುದುರೆ. ತಾಲ್ಲೂಕಿನಲ್ಲಿ ಇವರನ್ನು ರಾಜಕೀಯವಾಗಿ ಸಮಾಧಿ ಮಾಡುತ್ತಾರೆ. ಇದಕ್ಕೆ ಮತದಾರರು ಕೈಜೋಡಿಸುತ್ತಾರೆ ಎಂದು ಹೇಳುವ ಮೂಲಕ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ ಸಿ ವೀರೇಗೌಡ ಹರಿಹಾಯ್ದರು.


ಸತ್ತೇಗಾಲ ನೀರಾವರಿ ಯೋಜನೆ ತರುವ ಮೂಲಕ ಇಡೀ ಜಿಲ್ಲೆಗೆ ಶಾಶ್ವತ ನೀರಾವರಿ ಮಾಡಿದ್ದಾರ. ೧೮ ಸಾವಿರ ಟಿಸಿ ಕೊಟ್ಟಿದ್ದಾರೆ, ಇಪ್ಪತ್ತು ವರ್ಷ ಅಧಿಕಾರದಲ್ಲಿದ್ದ ಇವರ ಕೊಡುಗೆ ಏನು ? 2023 ಕ್ಕೆ ನಮ್ಮ ಅಶ್ವಮೇಧ ದ ಕುದುರೆಯ ಮಹತ್ವ ಅರಿವಾಗಲಿದೆ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಡಿ ಕೆ ಶಿವಕುಮಾರ್ ಮುಖ್ಯ ಮಂತ್ರಿ ಆಗುತ್ತಾರೆ. ಆದರೆ ಇವರು ಯಾವ ಪಕ್ಷದಲ್ಲೂ ಹೆಸರು ಉಳಿಸಿಕೊಂಡಿಲ್ಲ.

ಕಾಂಗ್ರೆಸ್, ಸಮಾಜವಾದಿ ಪಕ್ಷ ಇರಲಿ, ಬಿಜೆಪಿ ಪಕ್ಷದಲ್ಲೂ ಹೆಸರು ಉಳಿಸಿಕೊಳ್ಳಲಿಲ್ಲ. ಆರೆಸ್ಸೆಸ್ ಗೆ ಬಕೆಟ್ ಹಿಡಿದು ಎಂಎಲ್ಸಿ ಗಿಟ್ಟಿಸಿಕೊಂಡಿದ್ದಾರೆ. ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಅವರು ಯೋಗೇಶ್ವರ್ ಗೆ ಟಾಂಗ್ ನೀಡಿದರು.


ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಶಿವಮಾದು ಮಾತನಾಡಿ ಪ್ರಮಾಣ ವಚನ ಸ್ವೀಕಾರಕ್ಕಿಂತ ಮೊದಲೇ, ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನು ಕೂರಿಸಿಕೊಂಡು ಸಭೆ ನಡೆಸಿದ್ದು ಇವರ ಮೊದಲ ತಪ್ಪು. ಇವರಿಗೆ ಎಂಎಲ್ಸಿ ಸ್ಥಾನ ಘೋಷಣೆ ಆಗಿತ್ತೇ ವಿನಹ ಇನ್ನೂ ಪ್ರಮಾಣ ವಚನವನ್ನು ಸ್ವೀಕರಿಸಿದೆ ಹೇಗೆ ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಕರೆಯುತ್ತಾರೆ.

ಡಿ ಕೆ ಶಿವಕುಮಾರ್ ರವರು ೫೪೦ ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಮಾಡಿದ್ದಾರೆ, ಯೋಗೇಶ್ವರ್ ದಂಧೆಗೋಸ್ಕರ ಅಧಿಕಾರಕ್ಕೆ ಜೋತು ಬಿದ್ದಿದ್ದಾರೆ. ಎರಡು ವರ್ಷಗಳ ಕಾಲ ಅಜ್ಞಾನ ವಾಸದಲ್ಲಿದ್ದೆ ಎನ್ನುತ್ತಾರೆ. ಯಾವ ಕಾಡಿನಲ್ಲಿದ್ದರು ಎಂದು ಪ್ರಶ್ನಿಸಿದರು. ಡಿ ಕೆ ವಿರುದ್ಧ ಮಾತನಾಡುವ ಹಕ್ಕು ಸಿಪಿವೈ ಗೆ ಇಲ್ಲ. ಅಧಿಕಾರ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಮಾಡಲಿ, ಅದು ಬಿಟ್ಟು ಟೀಕಿಸುವ ಭರದಲ್ಲಿ ಮಾತು ಸರಿಯಾಗಿರಲಿ ಎಂದು ಎಚ್ಚರಿಕೆ ನೀಡಿದರು.


ತಾಲ್ಲೂಕಿಗೆ ಮತ್ತೊಂದು ಅಧಿಕಾರ ಸಿಕ್ಕಿದೆ. ಅಧಿಕಾರವನ್ನು ಬಳಸಿಕೊಂಡು ಅಭಿವೃದ್ಧಿ ಬಗ್ಗೆ ಗಮನ ನೀಡಬೇಕೇ ವಿನಹ ಮಾತಿನಲ್ಲಿ ಮುಳುಗುವುದಲ್ಲ. ಎಂದು ನಗರಸಭಾ ಮಾಜಿ ಉಪಾಧ್ಯಕ್ಷ ಮುದ್ದುಕೃಷ್ಣ ಹೇಳಿದರು.


ಹೆಚ್ಡಿಕೆ ತಾಲ್ಲೂಕಿನಿಂದ ಮುಖ್ಯಮಂತ್ರಿ ಆಗಿದ್ದರು, ಡಿ ಕೆ ಶಿವಕುಮಾರ್ ಉಸ್ತುವಾರಿ ಆಗಿದ್ರು, ನಾನೇ ಸರ್ಕಾರ ಕೆಡವಿದ್ದು ಎಂದು ಬೀಗುತ್ತಿರುವುದು ನಮ್ಮೆಲ್ಲರ ದುರಂತ ಎಂದು ಕಾಂಗ್ರೆಸ್ ಮುಖಂಡ ಶರತ್ ಚಂದ್ರ ಬೇಸರ ವ್ಯಕ್ತಪಡಿಸಿದರು. ಅವರಿಗೆ ಸಿನಿಮಾ ಕ್ಷೇತ್ರದಿಂದ ಗಂಜಿ ಕೇಂದ್ರ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಯಾವ ಪ್ರಶಸ್ತಿ ತಗೊಂಡಿದ್ದಾರೆ. ಅಧಿಕಾರಕ್ಕಾಗಿ ಬಟ್ಟೆ ಬದಲಿಸುವಂತೆ ಪಕ್ಷ ಬದಲಿಸುವ ಅವರಿಂದ ಏನು ನಿರೀಕ್ಷಿಸಲು ಸಾಧ್ಯ. ತಾಲ್ಲೂಕು ಅಭಿವೃದ್ಧಿ ಆಗಲಿ ಅಥವಾ ಕಾರ್ಯಕರ್ತರ ಅಭಿವೃದ್ಧಿಯನ್ನಾಗಲಿ‌ ಅವರು ಮಾಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.


ಅವರು ಕೇವಲ ತಾಲ್ಲೂಕಿಗೆ ಸೀಮಿತ, ಅಬ್ಬಬ್ಬಾ ಅಂದ್ರೆ ಮಂತ್ರಿ ಆಗಬಹುದು, ರಾಜ್ಯದ ನಾಯಕರಾಗಲು ಸಾಧ್ಯವಿಲ್ಲ ಆದರೆ ನಮ್ಮ ಡಿಕೆಶಿ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಡಿ ಕೆ ಕಾಂತರಾಜು ಗುಡುಗಿದರು.


ಸಿ ಪಿ ಯೋಗೇಶ್ವರ್ ಬಣ್ಣದ ನಾಯಕನೇ ಹೊರತು ಅಭಿವೃದ್ಧಿ ಪರ ರಾಜಕಾರಣಿ ಅಲ್ಲ. ಆತ ಶೋಕಿಗಾಗಿ, ಅಧಿಕಾರಕ್ಕಾಗಿ ಹಂಬಲಿಸುವ ವ್ಯಕ್ತಿ, ಬಿಜೆಪಿಯಲ್ಲೂ ಸಹ ಅತ್ತೂ ಕರೆದು ಅಥವಾ ಬೇರೊಂದು ಪಕ್ಷಕ್ಕೆ ಹಾರುತ್ತೇನೆ ಎಂದು ಬೆದರಿಸಿ ಎಂಎಲ್ಸಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನ ಕೋಕಿಲಾ ರವರು ಅಭಿಪ್ರಾಯಪಟ್ಟರು.


ಪತ್ರಿಕಾಗೋಷ್ಠಿಯಲ್ಲಿ ವಕೀಲ ಗಿರೀಶ್, ಬೋರ್ವೆಲ್ ರಂಗನಾಥ, ವಾಸೀಲ್ ಅಲಿಖಾನ್, ಪಿ ಡಿ ರಾಜು. ಸಂಕಲಗೆರೆ ಕಿಟ್ಟಿ, ಅಕ್ಕೂರು ಶೇಖರ್, ಕೆ ಟಿ ಲಕ್ಷ್ಮಮ್ಮ ಮುಂತಾದವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑