Tel: 7676775624 | Mail: info@yellowandred.in

Language: EN KAN

    Follow us :


ಕಾಂಗೈ ಜೆಡಿಎಸ್ ನ ಅತೃಪ್ತರನ್ನು ಸೆಳೆಯಲು ಸಿಪಿವೈ ಸಂಚು !

Posted date: 11 Aug, 2020

Powered by:     Yellow and Red

ಕಾಂಗೈ ಜೆಡಿಎಸ್ ನ ಅತೃಪ್ತರನ್ನು ಸೆಳೆಯಲು ಸಿಪಿವೈ ಸಂಚು !

ಬಯಲುಸೀಮೆ ಸಂಪಾದಕ ಸು ತ ರಾಮೇಗೌಡ

ಚನ್ನಪಟ್ಟಣ:ಆ/11/20/ಮಂಗಳವಾರ. ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ, ಹಾಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಪಿ ಯೋಗೇಶ್ವರ್‌ಗೆ ಎರಡು ಮುಖವಿದೆ. ಬಾಹ್ಯವಾಗಿ ತೋರಿಸುವುದೇ ಒಂದು ಮುಖ, ಆಂತರಿಕವಾಗಿ ನಡೆಯುವುದೇ ಮತ್ತೊಂದು ಮುಖ.

ಈಗಾಗಲೇ ಆ ರೀತಿಯಲ್ಲಿ ಪ್ರಯೋಗ ಮಾಡಿ ಸಾಕಷ್ಟು ಪಳಗಿದ್ದಾರೆ. ಆಮೇಲೆ ಸಮಯಕ್ಕೆ ಒಂದು ಕಥೆ ಹೆಣೆಯುವುದು ಅವರಿಗೆ ರಕ್ತಗತವಾಗಿ ಬಂದಿರುವ ಗುಣ.

ಈಗ ಅವರು ಒಂದು ಕಡೆ ಕಾಂಗ್ರೆಸ್ ನಾಯಕರನ್ನು, ಮತ್ತೊಂದು ಕಡೆ ಜೆಡಿಎಸ್ ನಾಯಕರನ್ನು ವಿರೋಧ ಕಟ್ಟಿಕೊಂಡು ಆಗಿದೆ. ಅದರಿಂದ ಅವರು ಉಳಿಯಲು ಬೇರೆ ಬೇರೆ ತಂತ್ರ ಮಾಡಲೇಬೇಕು.

ಆ ದಿಕ್ಕಿನಲ್ಲಿ ಅವರು ಈಗ ಸಾಕಷ್ಟು ವೇಗವಾಗಲಿದ್ದಾರೆ. ಭವಿಷ್ಯದ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಲ್ಲಿ ಯಾರ‍್ಯಾರು ಅಸಹನೆಯನ್ನು ಹೊಂದಿದ್ದಾರೆ, ಅವರನ್ನು ತನ್ನತ್ತ ಸೆಳೆಯುವ ಒಂದು ಗುರಿಯನ್ನು ಹೊಂದಿದ್ದಾರೆ.


ಯಾವ ಯಾವ ಪಕ್ಷ ದಲ್ಲಿ ಅತೃಪ್ತರು ಇದ್ದಾರೆ, ಅವರಿಗೆ ಯಾವ ರೀತಿಯಲ್ಲಿ ಬಲೆ ಹಾಕಿ ತನ್ನ ಕಡೆಗೆ ಸೆಳೆಯಬೇಕು ಅದಕ್ಕೆ ಪೂರ್ವಭಾವಿ ತಯಾರಿ ಏನು ಮಾಡಬೇಕು ಎಂಬುದೆಲ್ಲವನ್ನೂ ಚಿಂತಿ ಸಿದ್ದಾರೆ.

ಈ ಸಾರಿ ಮಾಡುವ ಪ್ರಯೋಗವು ತಮಗೆ ಯಾವ ರೀತಿಯಲ್ಲಿ ಒಲಿಯಬೇಕು ಎಂಬುದನ್ನು ಈಗಿನಿಂದಲೇ ಕೂಡಿ ಕಳೆಯುವ ಒಂದು ದಾರಿಯಲ್ಲಿ ಅವರು ಇದ್ದಾರೆ ಎಂಬುದು ಗಮನಾರ್ಹ.


*ನೇರಚುನಾವಣೆಯ ಕಡೆಗೆ ಒಲವು*

ಇಲ್ಲದ್ದಕ್ಕೆ ಹಲ್ಲು ಬೀರನೇ ಗಂಡ ಎಂದು ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯಗಿರಿಯನ್ನು ಎರಡೂವರೆ ವರ್ಷ ಕಟ್ಟಿ ಕೊಂಡಿರಬಹುದು, ಆನಂತರದಲ್ಲಿ ನೇರ ಚುನಾವಣೆಯ ಕಡೆಗೆ ಮುಖ ಮಾಡುವ ಲೆಕ್ಕ ಹೊಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಯೋಗೇಶ್ವರ್ ವಿಧಾನ ಪರಿಷತ್ ಸ್ಥಾನದಿಂದ, ಕ್ಷೇತ್ರದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲಿರುವುದು ಈಗಿನ ಅವರ ಗುಪ್ತ ವಿಷಯ ಸೂಚಿಯಾಗಿದೆ.

ಈ ರೀತಿಯ ಪ್ರಯೋ ಗದಿಂದ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿಯನ್ನು ಈ ಕ್ಷೇತ್ರದಲ್ಲಿ ಕಟ್ಟಿ ಹಾಕುವ ಒಂದು ತಂತ್ರವೂ ಸಹ ಇದೆ.


ಡಿ.ಕೆ.ಶಿ ಇಲ್ಲದಿದ್ದರೂ ಡಿ.ಕೆ ಸುರೇಶ್ ಅವರನ್ನು ಕಟ್ಟಿ ಹಾಕಿ ಅವರು ಮೈ ಪರಚಿಕೊಳ್ಳುವ ರೀತಿಯಲ್ಲಿ ಮಾಡುವ ಒಂದು ಪ್ರಯೋಗವು ಇದರ ಹಿಂದೆ ಅಡಗಿರುವುದು ಗುಟ್ಟಿನ ವಿಷಯವಲ್ಲ.

ಕಳೆದ ೨೦ ವರ್ಷಗಳಿಂದಲೂ ಇದೇ ಒಂದು ತಂತ್ರವನ್ನು ಬಳಸಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಿಗೆ ಟಾಂಗ್ ಕೊಡುತ್ತಲೇ ಬರುತ್ತಿದ್ದಾರೆ. ಒಂದೆರಡು ಸಾರಿ ವಿಫಲವಾಗಿದ್ದೂ ಸಹ  ಉಂಟು.

ಆದರೆ ಈ ಸಾರಿ ಆ ರೀತಿಯಲ್ಲಿ ಆಗದಂತೆ ನೋಡಿಕೊಳ್ಳುವ ಒಂದು ದಿಕ್ಕಿನಲ್ಲಿ ಅವರು ವೇಗವಾಗಬಹುದಾದ ಎಲ್ಲಾ ಸೂಚನೆಗಳು ಇವೆ. ಅದು ಯಾವ ರೀತಿಯದ್ದು ಎಂದು ಪರದೆಯ ಮೇಲೆ ನೋಡಬೇಕು.


*ಗೌರವ ಉಳಿಸಿಕೊಳ್ಳಬೇಕಾದ ಸಂದಿಗ್ಧತೆ:*

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಾಗ ಯಡವಟ್ಟು ಆಗಿರುವುದು ನಿಜ. ಆದರೆ ಈ ಸಾರಿ ಎರಡೂವರೆ ವರ್ಷ ಕಾಲ ತನ್ನದೇ ಆದ ಪ್ರಯೋ ಗದಲ್ಲಿ ನಿರತರಾಗಿ ಯಶಗಳಿಸಬಹುದು.

ಈ ಒಂದು ಲೆಕ್ಕಾಚಾರ ದಲ್ಲಿ ಅವರು ಯಾವ ಯಾವ ರೀತಿಯಲ್ಲಿ ಪ್ರಯೋಗ ಮಾಡಬಹುದೋ ಆ ಎಲ್ಲಾ ರೀತಿಯಲ್ಲಿಯೂ ಪ್ರಯೋಗ ಮಾಡುತ್ತಿರುವುದು ಕಂಡು ಬರುತ್ತಿದೆ.

ಅದನ್ನು ಸಾಧಿಸಿ ತೋರಿಸುವ ಹಿನ್ನೆಲೆಯಲ್ಲಿ ಅವರು ಯಾವುದೇ ರೀತಿಯಲ್ಲಿ ಬೇಕಾದರೂ ಅರ್ಪಿಸಿಕೊಳ್ಳುವ ಲೆಕ್ಕದಲ್ಲಿ ಇರುವುದು ಗೋಚರಿಸುತ್ತಿದೆ.

ಅದರ ಹಿನ್ನೆಲೆಯಲ್ಲಿ ಈಗ ಅವರು ತಮ್ಮ ಹೊಸ ಹೊಸ ಪ್ರಯೋಗ ಗಳನ್ನು ಹೇಗೆ ಮಾಡಬಹುದು ಎಂಬುದನ್ನು ಪರದೆಯ ಮೇಲೆಯೇ ನೋಡಬೇಕು. ಅದು ಯಾವ ರೂಪದಲ್ಲಿ ಘಟಿಸುತ್ತದೆ ಎಂದು ಕಾದು ನೋಡ ಬೇಕಾಗಿದೆ.


ಯೋಗೇಶ್ವರ್ ಅವರೂ ಸಹ ಸಮಯ ನೋಡಿ ಹುಳುಮೆ ಮಾಡುವ ಗಿರಾಕಿ. ಅದನ್ನು ಕ್ರಮಬದ್ಧ ವಾಗಿ ಮಾಡಿ ತಮ್ಮ ದಾರಿಯನ್ನು ಹಸನು ಮಾಡಿ ಕೊಳ್ಳುವ ಕೆಲಸವನ್ನು ಅವರು ಕ್ರಮಬದ್ಧವಾಗಿ ಮಾಡಬಲ್ಲರು. ಇದೇ ವಿಷಯವನ್ನು ಈಗ ಜನರೂ ಸಹ ಹೇಳುವ ಕೆಲಸವನ್ನು ಮಾಡುತ್ತಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑