Tel: 7676775624 | Mail: info@yellowandred.in

Language: EN KAN

    Follow us :


ನಗರಕ್ಕೆ ಧಕ್ಕೆ ತರುತ್ತಿರುವ ನಗರೋತ್ಥಾನ ಯೋಜನೆ. ಕೈಚೆಲ್ಲಿ ಕುಳಿತ ನಗರಸಭೆ

Posted date: 18 Aug, 2020

Powered by:     Yellow and Red

ನಗರಕ್ಕೆ ಧಕ್ಕೆ ತರುತ್ತಿರುವ ನಗರೋತ್ಥಾನ ಯೋಜನೆ. ಕೈಚೆಲ್ಲಿ ಕುಳಿತ ನಗರಸಭೆ

ಚನ್ನಪಟ್ಟಣ:ಆ/18/20/ಮಂಗಳವಾರ.


ಹಿರಿಯ ಪತ್ರಕರ್ತ ಸು ತ ರಾಮೇಗೌಡ


ನಗರೋತ್ಥಾನ ಎಂಬ ಪದದ ಅರ್ಥ, ನಗರವನ್ನು ಹಲವು ಹತ್ತು ರೀತಿಯಲ್ಲಿ ಉನ್ನತೀಕರಿಸುವುದು ಎಂದು. ಆದರೆ ಈ ಯೋಜನೆಯು ನಗರದ ಜನರ ಆರೋಗ್ಯ ಕೆಡಿಸುತ್ತಿದೆ, ಅಲ್ಲಿನ ಜನರ ಗೌರವ ಕಳೆಯುತ್ತಿದೆ ಎಂದು ನಿಧಾನಕ್ಕೆ ಅರ್ಥವಾಗುತ್ತಿದೆ.

ನಗರಸಭೆಯು ನಗರೋತ್ಥಾನ ಎಂಬ ಯೋಜನೆಯ ಅಡಿಯಲ್ಲಿ ಸಿಮೆಂಟ್ ಬಾಕ್ಸ್ ಡ್ರೈನೇಜ್ ಗಳನ್ನು ಮಾಡುತ್ತಿದೆ, ಆದರೆ ಅದನ್ನು ಮುಚ್ಚುತ್ತಿಲ್ಲ.

ಹೀಗೆ ನೀವು ಮುಚ್ಚದೆ ಹಾಗೆ ಬಿಟ್ಟರೆ ಅಲ್ಲಿ ಸೊಳ್ಳೆಗಳ ಸಂತಾನವೃದ್ಧಿಯಾಗುತ್ತದೆ. ಆ ಮೋರಿಗಳಿಗೆ ಕಸ ಕಡ್ಡಿ ತುಂಬಿಕೊಂಡು ಕೊಳೆತು ಕೆಟ್ಟವಾಸನೆಯು ಬರುತ್ತದಲ್ಲ ಎಂದು ನಗರ ಸಭೆಯ ಆಯುಕ್ತರನ್ನು ಕೇಳಿದರೆ ಅವರಿಂದ ಸಮರ್ಪಕ ಉತ್ತರವಿಲ್ಲ.


ನಗರೋತ್ಥಾನ ಯೋಜ ನೆಯ ಅಡಿ ಬಾಕ್ಸ್ ಡ್ರೈನೇಜ್ ಮಾಡುವುದಕ್ಕೆ ಅವಕಾಶವಿದೆ, ಅದಕ್ಕೆ ಮೇಲ್ಗಡೆ ಸ್ಲಾಬ್ ಅಳವಡಿಸಲು ಅವಕಾಶವಿಲ್ಲ ಎಂದು ಹೇಳುತ್ತಾರೆ.

ಅಂದರೆ ಈ ಯೋಜನೆ ಯನ್ನು ಸಿದ್ದಪಡಿಸಿದವರಲ್ಲಿ ಚರಂಡಿಯಲ್ಲಿ ಕಸಕಡ್ಡಿ ತುಂಬಿದರೆ ಅಲ್ಲಿ ಗಬ್ಬುನಾತ ಬರುತ್ತದೆ ಎಂಬ ಕಲ್ಪನೆಯೇ ಇರಲಿಲ್ಲವೇ ಎಂದು ತಿಳಿಯದು.


ಚರಂಡಿಗೆ ಕಕ್ಕಸ್ಸು ನೀರು ಬಿಡುವ ಪರಿಕಲ್ಪನೆ ಇರಲಿಕ್ಕಿಲ್ಲ

ಬೇರೆ ನಗರಗಳಲ್ಲಿ ಒಳ ಚರಂಡಿ ವ್ಯವಸ್ಥೆಯು ಇರ ಬಹುದು, ಆದರೆ ಚನ್ನಪಟ್ಟಣ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಕಕ್ಕಸ್ ಬಾವಿಯನ್ನು ಉಳ್ಳವರು ಬೆರಳೆಣಿಕೆಯ ಸಂಖ್ಯೆಯಲ್ಲಿ ಇರಬಹುದು.

ಆದರೆ ಕಳೆದ 5 ವರ್ಷಗಳ ಹಿಂದೆಯೇ ಪ್ರತಿರಸ್ತೆಯಲ್ಲಿಯೂ ಸಹ ಒಳಚರಂಡಿ ಪೈಪ್ ಅಳವಡಿಸಿ, ನಿರ್ವಹಣಾ ಬಾವಿಗಳನ್ನೂ ಸಹ ನಿರ್ಮಿಸಲಾಯ್ತು.


ಈವರೆಗೂ ಸಹ ಆ ಬಾವಿಗಳಿಗೆ ಸಂಪರ್ಕ ನೀಡಿ ಒಳಚರಂಡಿಗೆ ಚಾಲನೆ ನೀಡಿ, ಆ ಕೊಳಕು ನೀರನ್ನು ಸೆಪ್‌ಟಿಕ್ ಟ್ಯಾಂಕ್ ಮಾಡಿ ಹರಿಸುವ ಗೋಜಿಗೇ ಹೋಗಲಿಲ್ಲ.

ಹೀಗಾಗಿ ಅದು ಅಲ್ಲಿಯೇ ಮುಲ್ಕಿ ಬಿದ್ದು, ಇಡೀ ಊರನ್ನೇ ಗಬ್ಬು ಏಳಿಸುವುದು ಕಂಡು ಬರುತ್ತಿದೆ. ಕೆಲವು ಕಡೆ ಕನ್ಸರ್‌ವೆನ್ಸಿಗಳು ಉಳಿದಿವೆ. ಅಲ್ಲಿನ ಪಕ್ಕದ ಮನೆಗಳಿಗೆ ವಾಸನೆ ಹಾಗೂ ಸಮೃದ್ಧವಾಗಿ ಸೊಳ್ಳೆಗಳು ಹೆಗಲು ಏರಿಕೊಂಡಿವೆ.


*ಕೆಲವು ಕಡೆ ಚರಂಡಿ ಗಳ ಮೇಲೆ ಸ್ಲಾಬ್*

ಎಂತಹ ವಿಚಿತ್ರವೆಂದರೆ ಅಂಚೆ ಕಛೇರಿ ರಸ್ತೆಯಲ್ಲಿ ಚರಂಡಿಗಳ ಮೇಲೆ ಸಿಮೆಂಟ್ ಚಪ್ಪಡಿಗಳನ್ನು ಹಾಕಿ ಮುಚ್ಚಲಾಗಿದೆ, ಆದರೆ ರೈಲ್ವೇ ಸ್ಟೇಷನ್ ರಸ್ತೆ, ಮೂರ್ತಿಮಹಲ್ ರಸ್ತೆಯ ಲ್ಲಿನ ಚರಂಡಿಗಳಿಗೆ ಸಿಮೆಂಟ್ ಚಪ್ಪಡಿ ಹಾಕಿಲ್ಲ.

ಹಾಕಿರುವುದು ಯಾವ ಯೋಜನೆ, ಹಾಕದೇ ಇರುವುದು ಯಾವ ಯೋಜನೆ ಎಂದೇ ತಿಳಿಯದು. ಯಾವುದೇ ಒಂದು ಯೋಜನೆ ರೂಪಿಸುವಾಗ ತೆರೆದ ಚರಂಡಿಗಳನ್ನು ಮುಚ್ಚದೇ ಹೋದರೆ ಎಂತಹ ಅನಾಹುತವಾಗುತ್ತದೆ ಎಂದು ತಿಳಿಯದೇ?.


ಅಂತೂ ನಗರವ್ಯಾಪ್ತಿ ಯಲ್ಲಿ ಅನೇಕ ಬೀದಿಗಳಲ್ಲಿ ತೆರೆದ ಚರಂಡಿಯನ್ನು ಮಾಡಿದ ನಂತರ, ಹಿಂದಿನ ಯೋಜನೆಯಂತೆ ಗಬ್ಬುವಾಸನೆಯನ್ನು ತಡೆಯಲಾ ಗದೆ, ಮನೆಯ ಮಾಲೀಕರೆ ಮೇಲ್ಗಡೆ ಕಲ್ಲು ಹಾಸು ಅಥವಾ ಸಿಮೆಂಟ್ ಹಾಸು ಗಳನ್ನು ಹಾಕಿಕೊಳ್ಳುತ್ತಿದ್ದಾರೆ.

ಆದರೆ ಅಷ್ಟೊಂದು ದುಬಾರಿ ಹಣವನ್ನು ತೆರಲು ಎಲ್ಲಾ ನಿವಾಸಿಗಳು ಸಿದ್ದರಿಲ್ಲ. ಸಿದ್ದರಾಗಿರುವವರು ಮಾಡಿಸಿಕೊಳ್ಳಬಹುದು, ಉಳಿದವರು ಖಾಲಿ ಬಿಟ್ಟು ಅದರಿಂದ ವಾಸನೆಯು ನಿರಂತರವಾಗಿ ಪಸರಿಸುತ್ತದೆ.

ಹಿಂದೆ ಕೇವಲ ನೀರು ಮಾತ್ರ ಹರಿಯುತ್ತಿತ್ತು, ಈಗ ಕಕ್ಕಸ್ಸು ಸಮೇತ ಹರಿಯುತ್ತಾ ವಾಸನೆಯ ಜೊತೆಗೆ ಅಸಹ್ಯ ದೃಷ್ಯ ವನ್ನೂ ಸಹ ಹೊರ ಹೊಮ್ಮಿಸುವ ಕೆಲಸವನ್ನು ಮಾಡುತ್ತಿದೆ.


ಇದಕ್ಕೆ ಬೇಗ ಪರಿಹಾರ ಕಂಡು ಹಿಡಿಯುವ ಕೆಲಸವನ್ನು ನಗರಸಭೆ ಅಥವಾ ತಾಲ್ಲೂಕು ಆಡಳಿತ ಗಮನಿಸಿ ಮಾಡಬೇಕಾಗಿದೆ. ಆ ಕೆಲಸ ಆದಷ್ಟು ಬೇಗ ಆಗಬೇಕು.

ಇಲ್ಲದೇ ಹೋದರೆ ಈ ನಗರ ವಾಸಿಗಳು ಬೇರೆ ಬೇರೆ ರೀತಿಯ ಸಮಸ್ಯೆ ಗಳಿಗೆ ಒಳಗಾಗಬೇಕಾದ ಸಂದರ್ಭ ಒದಗಿ ಬರಬಹುದಾಗಿದೆ. ಇದು ಬರದ ರೀತಿಯಲ್ಲಿ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.


ಈಗಾಗಲೇ ಮಾಧ್ಯಮಗಳು ಈ ನಗರ ವ್ಯಾಪ್ತಿಯಲ್ಲಿ ಇರುವ ಅನೇಕ ಸಮಸ್ಯೆಗಳನ್ನು ಬಿಡಿ ಬಿಡಿ ಯಾಗಿ ಚರ್ಚಿಸಿದ್ದು ಇದೆ, ಆದರೆ ಯಾವುದಕ್ಕೂ ಪರಿಹಾರ ದೊರೆತಿಲ್ಲ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑