Tel: 7676775624 | Mail: info@yellowandred.in

Language: EN KAN

    Follow us :


ಸರ್ಕಾರ ಹಣ ಕೊಟ್ಟರೂ ಬಳಸಿಕೊಳ್ಳದ ಅಧಿಕಾರಿಗಳು, ಕೆಲಸ ಮಾಡಿ, ಇಲ್ಲ ಮನೆಗೆ ಹೋಗಿ ಎಂದ ಕುಮಾರಸ್ವಾಮಿ

Posted date: 03 Sep, 2020

Powered by:     Yellow and Red

ಸರ್ಕಾರ ಹಣ ಕೊಟ್ಟರೂ ಬಳಸಿಕೊಳ್ಳದ ಅಧಿಕಾರಿಗಳು, ಕೆಲಸ ಮಾಡಿ, ಇಲ್ಲ ಮನೆಗೆ ಹೋಗಿ ಎಂದ ಕುಮಾರಸ್ವಾಮಿ

ಚನ್ನಪಟ್ಟಣ:‌ಸೆ/03/20/ಬುಧವಾರ. ತನ್ನ ಸ್ವ ಕ್ಷೇತ್ರಕ್ಕೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಒಂದು ವರ್ಷ ಕಳೆದರೂ ಬಳಸಿಕೊಳ್ಳದ ಅಧಿಕಾರಿಗಳಿಗೆ ಮಾಜಿ ಸಿಎಂ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ಬೆವರಿಳಿಸಿದ ಘಟನೆ ಬುಧವಾರ ನಡೆಯಿತು.


ನಗರದ ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ಸಮಾಜಕಲ್ಯಾಣ ಇಲಾಖೆ, ಕೆಆರ್‌ಡಿಐಎಲ್ ಹಾಗೂ ಕಾವೇರಿ ನಿಗಮಕ್ಕೆ ತಲಾ ೧೦ ಕೋಟಿ ರೂ. ನಂತೆ ೩೦ ಕೋಟಿ ಅನುದಾನ ಬಿಡುಗಡೆಗೊಳಿಸಿ, ಹಣಕಾಸು ಇಲಾಖೆಯಿಂದಲೂ ಅನುಮತಿ ಕೊಡಿಸಲಾಗಿದೆ. ವರ್ಷ ಕಳೆದರೂ ನೀವು ಕ್ರಿಯಾಯೋಜನೆ ರೂಪಿಸಿಲ್ಲ ಯಾಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.


ಅಧಿಕಾರಿಗಳು ಜನಪರವಾಗಿ ಕೆಲಸ ಮಾಡುವುದಿದ್ದರೆ ಮಾಡಿ, ಇಲ್ಲವಾದಲ್ಲಿ ನಾನು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ನೆಲಮಂಗಲಕ್ಕೆ ಬಿಡುಗಡೆ ಮಾಡಿದ್ದ ೩೦ ಕೋಟಿ ರೂ. ಅನುದಾನವನ್ನು ಬೆಂಗಳೂರು ನಗರಕ್ಕೆ ವರ್ಗಾಹಿಸಿದ ಇಬ್ಬರು ಅದೀನ ಕಾರ್ಯದರ್ಶಿಗಳನ್ನು ಅಮಾನತ್ತುಗೊಳಿಸಲಾಗಿದೆ. ಸರಿಯಾಗದೇ ಇದ್ದರೆ ನಿಮಗೂ ಇದೇ ಶಾಸ್ತಿಯಾಗಲಿದೆ ಎಂದು ಎಚ್ಚರಿಸಿದರು.


*ಮಾವು ಸಂಸ್ಕರಣಾ ಘಟಕ ಸ್ಥಾಪನೆಯಾಗಲೇ ಬೇಕು:*


ಕಣ್ವ ಬಳಿ ನಿರ್ಮಾಣಗೊಳ್ಳುತ್ತಿರುವ ಮಾವು ಸಂಸ್ಕರಣಾ ಘಟಕಕ್ಕೆ ೧೫ ಎಕರೆ ಭೂಮಿಯ ಅವಶ್ಯಕತೆ ಇದ್ದು, ನಮಗೆ ಕೇವಲ ೭.೫ ಎಕರೆ ಮಾತ್ರ ರೇಷ್ಮೆ ಇಲಾಖೆಯಿಂದ ದೊರೆತಿದೆ. ಉಳಿದಿದ್ದು ಪಿಡಬ್ಲುಡಿ ಇಲಾಖೆ ವ್ಯಾಪ್ತಿಯಲ್ಲಿ ಇದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದಾಗ ಈ ಸಂಬಂಧ ಜಿಲ್ಲಾಧಿಕಾರಿ ಜತೆ ಮಾತನಾಡುತ್ತೇನೆ. ಈ ಜಾಗದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಯಾಗಲೇಬೇಕು. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.


*ಕೆಲಸಕ್ಕೆ ಕರೆಯಿರಿ ಪ್ರಚಾರಕ್ಕಲ್ಲ:*


ತಾಲೂಕಿನ ದೊಡ್ಡಮಳೂರು ಬಳಿ ನಿರ್ಮಾಣಗೊಂಡಿರುವ ಪಶುಆಸ್ಪತ್ರೆಯ ಕಟ್ಟಡ ಆರಂಭ ಗೊಳ್ಳದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಎಚ್‌ಡಿಕೆ, ನನ್ನ ದಿನಾಂಕಕ್ಕಾಗಿ ಕಾಯ್ದು ಕೊಂಡು ಕಟ್ಟಡ ಹಾಗೇ ಉಳಿಸಬೇಡಿ, ನಾನು ಪೋಟೋಗೆ ಪೋಸ್ ನೀಡಬೇಕು ಎಂದು ಬಯಸುವುದಿಲ್ಲ. ಕೆಲಸ ಮಾಡಲು ಮಾತ್ರ ನನ್ನನ್ನು ಕರೆಯಿರಿ, ಕಟ್ಟಡವನ್ನು ನೀವೇ ಉದ್ಘಾಟನೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.


*ಕೆಲಸ ಮಾಡಲು ನಿಮಗೇನು ಸಮಸ್ಯೆ?:*


ಕೆಲ ಕ್ಷೇತ್ರದ ಶಾಸಕರು ಅನುದಾನ ಇಲ್ಲ ಎಂದು ಅಳುತ್ತಿದ್ದಾರೆ. ಆದರೆ ನಾನು ನಮ್ಮ ಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕಾದರು ತರಲು ಸಿದ್ದನಿದ್ದೇನೆ. ನೂರಾರು ಕೋಟಿ ರೂ. ಅನುದಾನ ತಂದಿದ್ದೇನೆ. ಮುಂದೆ ಎಷ್ಟು ಅನುದಾನ ಬೇಕಾದರೂ ತರುತ್ತೇನೆ. ಅದನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪುವಂತೆ ಮಾಡಿ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಿಮ್ಮ ಜತೆಗೆ ನಾನು ಸದಾ ನಿಲ್ಲುತ್ತೇನೆ. ಇಷ್ಟಿದ್ದರೂ ಕೆಲಸ ಮಾಡಲು ನಿಮಗೆ ಸಮಸ್ಯೆ ಏನು ಎಂದು ಪ್ರಶ್ನಿಸಿದರು.


*೨ ತಿಂಗಳಲ್ಲಿ ಅಂಬೇಡ್ಕರ್ ಭವನ ಪೂರ್ಣ ಗೊಳಿಸಿ:*


೨ ಕೋಟಿ ರೂ. ಅನುದಾನ ನೀಡಿದ್ದರೂ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಪೂರ್ಣ ಗೊಳಿಸದಿರುವುದು ಯಾಕೆ ಎಂದು ಪ್ರಶ್ನಿಸಿದ ಎಚ್‌ಡಿಕೆ., ೧೨ ವರ್ಷಗಳಿಂದ ಭವನ ಪ್ರಯೋಜನಕ್ಕೆ ಬಾರದೆ ಹಾಗೇ ಉಳಿದಿದೆ. ವಿನಾಕಾರಣ ಕಾಮಗಾರಿ ಬಾಕಿ ಉಳಿಸಿಕೊಳ್ಳುತ್ತಿರುವುದು ಯಾಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಭವನದ ಕಾಮಗಾರಿಯನ್ನು  ಎರಡು ತಿಂಗಳಲ್ಲಿ ಪೂರ್ಣ ಗೊಳಿಸಿ, ಇನ್ನೂ ಹೆಚ್ಚು ಅನುದಾನ ಬೇಕಿದ್ದರೆ ನನ್ನನ್ನು ಕೇಳಿ ನಾನು ಕೊಡಿಸುತ್ತೇನೆ ಎಂದು ಸಲಹೆ ನೀಡಿದರು.


*ಕಸದ ಸಮಸ್ಯೆಗೆ ಪರಿಹಾರ:*


ನಗರದಲ್ಲಿ ಎದುರಾಗಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕಣ್ವ ಬಳಿ ನೀಡಲಾಗಿದ್ದ ಡಂಪಿಂಗ್ ಯಾರ್ಡ್ ಮತ್ತೆ ಕೊಡಿಸಿ ಕೊಡಬೇಕು ಎಂದು ಪೌರಾಯುಕ್ತರು ಮನವಿ ಮಾಡಿದರು. ಈ ಸಂಬಂಧ ಜಿಲ್ಲಾಧಿಕಾರಿ ಜತೆ ದೂರವಾಣಿ ಮೂಲಕ ಚರ್ಚಿಸಿದ ಎಚ್‌ಡಿಕೆ, ತಾತ್ಕಾಲಿಕವಾಗಿ ಹಾಕುತ್ತಿರುವ ಸ್ಥಳದಲ್ಲೇ ಹಾಕಿ, ಈ ಬಗ್ಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.


*ಅಕ್ರಮ ಖಾತೆಗೆ ಕಡಿವಾಣ ಹಾಕಿ:*


ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಖಾತೆಗಳಿಗೆ ಕಡಿವಾಣ ಹಾಕುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ತಾಪಂ ಅಧ್ಯಕ್ಷ ಎಚ್.ರಾಜಣ್ಣ, ತಾಲೂಕಿನಲ್ಲಿ ರೆವಿನ್ಯೂ ಭೂಮಿಯನ್ನು ಗುಂಟೆ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾರಾಟ ಮಾಡಲಾದ ಜಾಗಕ್ಕೆ ಖಾತೆ ನೀಡಿದೆ ಮುಂದೆ ಮನೆ ಕಟ್ಟಿಕೊಂಡು ಮೂಲ ಸೌಕರ್ಯ ನೀಡಿ ಎಂದರೆ ರಸ್ತೆ ಚರಂಡಿ ಎಲ್ಲಿಂದ ನಿರ್ಮಿಸುವುದು, ಈ ರೀತಿಯ ಬಡಾವಣೆಗಳಿಂದಾಗಿ ನಗರದಲ್ಲಿ ಸಮಸ್ಯೆಯಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಅಕ್ರಮ ಖಾತೆಗಳನ್ನು ರದ್ದು ಪಡಿಸಲು ಶಾಸಕರು ಕ್ರಮ ಕೈಗೊಳ್ಳ ಬೇಕು ಎಂದರು.


 *ಸುಳ್ಳು ಕೇಸು ದಾಖಲಿಸ ಬೇಡಿ:*


ಪೊಲೀಸರು ವಿನಾಕಾರಣ ಅಮಾಯಕರ ಮೇಲೆ ಪ್ರಕರಣ ದಾಖಲಿಸುವುದು ಬೇಕಿಲ್ಲ, ನನಗೆ ಮೂರು ಪಕ್ಷಗಳು ಒಂದೇ, ಚುನಾವಣೆಯ ಸಮಯದಲ್ಲಿ ರಾಜಕೀಯ ಮಾಡೋಣ, ಪೊಲೀಸರನ್ನು ಬಳಸಿ ಕೊಂಡು ನಾನು ರಾಜಕೀಯ ಮಾಡುವುದಿಲ್ಲ. ಬಿಜೆಪಿ-ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರೆಂದು ಬೇದ ತೋರದೆ ಸಣ್ಣ ಪುಟ್ಟ ಗಲಾಟೆಗಳನ್ನು ರಾಜಿ ಸಂಧಾನದಲ್ಲಿ ಮುಗಿಸಿ ಎಂದು ತಾಕೀತು ಮಾಡಿದರು.


ಸಭೆಯಲ್ಲಿ ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಎನ್.ಸುರೇಶ್, ತಹಸೀಲ್ದಾರ್ ನಾಗೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಚಂದ್ರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


*ಯೋಗೇಶ್ವರ್‌ಗೆ ಟಾಂಗ್ ನೀಡಿದ ಎಚ್‌ಡಿಕೆ:*


ಅವರು ಕಲಾವಿದ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ, ಕಲಾವಿದರ ಸೇವೆ ಮಾಡುತ್ತಾರೆ. ನಾನು ಜನರಿಂದ ಆಯ್ಕೆಯಾಗಿದ್ದೇನೆ.., ಜನರ ಕೆಲಸ ಮಾಡುತ್ತೇನೆ ಎಂದು  ಹೇಳುವ ಮೂಲಕ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಎಚ್‌ಡಿಕೆ ಟಾಂಗ್ ನೀಡಿದರು.


ಕೆಲ ದಿನಗಳ ಹಿಂದೆ ಯೋಗೇಶ್ವರ್ ತಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು, ಈ ವಿಷಯವನ್ನು ಪರೋಕ್ಷವಾಗಿ ಪ್ರಸ್ಥಾಪಿಸಿದ ಕುಮಾರಸ್ವಾಮಿ, ಅವರು ಕಲಾವಿದರ ರಕ್ಷಣೆಗೆ ನಿಲ್ಲಲಿ, ನಾನು ನನ್ನನ್ನು ಆಯ್ಕೆಮಾಡಿರುವ ಜನರ ರಕ್ಷಣೆಗೆ ನಿಲ್ಲುತ್ತೇನೆ ಎಂದು ಹೇಳಿ ಯೋಗೇಶ್ವರ್ ಸಭೆ ನಡೆಸಿದ್ದನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.


ಕಲಾವಿದರ ಕೋಟಾದಲ್ಲಿ ನಾಮಕರಣ ಗೊಂಡವರು ಈ ಕ್ಷೇತ್ರದಲ್ಲಿ ಹೊಸ ರಾಜಕೀಯ ಆಟ ಆರಂಭಿಸಿದ್ದಾರೆ. ಆದರೆ ಈ ಆಟ ನಡೆಯೋಲ್ಲ. ಅಧಿಕಾರಿಗಳು ಅವರಿವರ ಮಾತನ್ನು ನಂಬಿ ಹಣ ಕೊಟ್ಟು ಕೊಂಡು ಕೂತರೆ ಹಾಗೋಲ್ಲ, ನಾನು ನಿಮ್ಮ ಬಳಿ ಯಾವುದೇ ಹಣ ಕೇಳುವುದಿಲ್ಲ, ನೀವು ಜನರಿಂದ ಹಣ ತೆಗೆದು ಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.


ಈ ಕ್ಷೇತ್ರದಿಂದ ಗೆದ್ದಿರುವವನು ನಾನು, ಇನ್ಯಾರಿಗೋ ಹಣ ಕೊಟ್ಟು ರಕ್ಷಣೆ ಮಾಡುತ್ತಾರೆ ಎಂದು ಕೊಳ್ಳಬೇಡಿ, ಸರ್ಕಾರದಲ್ಲಿ ನನಗೆ ಗೌರವ ಇದೆ. ನೀವು ಇಲ್ಲಿ ಉಳಿದು ಕೊಳ್ಳಲು ಯಾರಿಗೋ ಹಣ ನೀಡಿ, ಆ ಹಣವನ್ನು ಜನರಿಂದ ವಸೂಲಿ ಮಾಡಿಕೊಳ್ಳುವುದಕ್ಕೆ ಮುಂದಾದರೆ ನಾನು ಸುಮ್ಮನಿರುವುದಿಲ್ಲ. ಹಣ ಕೊಡಲೂ ಬೇಡಿ, ಜನರ ಬಳಿ ಕೇಳಲೂ ಬೇಡಿ ಎಂದು ಅಧಿಕಾರಿಗಳಿಗೆ ಹೇಳುವ ಮೂಲಕ ಪರೋಕ್ಷವಾಗಿ ಯೋಗೇಶ್ವರ್ ಕಾಲೆಳೆದರು.


*ಎಫ್‌ಐಆರ್ ಹಾಕಲು ೧೦ ಸಾವಿರ ಲಂಚ:*


ವಿದ್ಯುತ್ ಅವಘಡದಿಂದ ಬಾಲಕ ಕಾಲು ಕಳೆದು ಕೊಂಡಿರುವ ಬಗ್ಗೆ ದೂರು ನೀಡಲು ಮುಂದಾದರೆ ಅವರ ಪೋಷಕರ ಬಳಿ ಅಕ್ಕೂರು ಠಾಣೆ ಪಿಎಸ್‌ಐ ಎಫ್‌ಐಆರ್ ದಾಖಲಿಸಲು ೧೦ ಸಾವಿರ ರೂ. ಲಂಚ ಕೇಳುತ್ತಾರೆ. ಪೊಲೀಸರು ಈ ರೀತಿಯಾದರೆ ಬಡವರು ಏನು ಮಾಡುವುದು ಎಂದು ಎಚ್‌ಡಿಕೆ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು.

ಎಫ್‌ಐಆರ್ ದಾಖಲಿಸಲೂ ಹಣ ಕೊಡಬೇಕು ಎಂಬುದನ್ನು ನಾನು ಇಲ್ಲೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಅವರು ಇಲ್ಲೇ ಉಳಿದು ಕೊಳ್ಳಲು ೪ ಲಕ್ಷ ರೂ. ಹಣವನ್ನು ಯಾರಿಗೋ ನೀಡಿದ್ದಾರೆ. ಆ ಹಣವನ್ನು ಸಂಪಾದಿಸಲು ಈ ರೀತಿ ಜನರಿಂದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑