Tel: 7676775624 | Mail: info@yellowandred.in

Language: EN KAN

    Follow us :


ಮಾದರಿಯಾಗಬೇಕಿದ್ದ ಶಿಕ್ಷಕರಲ್ಲಿಲ್ಲ ಹೊಂದಾಣಿಕೆ. ಶಿಕ್ಷಕರ ದಿನಾಚರಣೆಯಲ್ಲಿ ಬಹಿರಂಗಗೊಂಡ ಅಸಮಧಾನ

Posted date: 05 Sep, 2020

Powered by:     Yellow and Red

ಮಾದರಿಯಾಗಬೇಕಿದ್ದ ಶಿಕ್ಷಕರಲ್ಲಿಲ್ಲ ಹೊಂದಾಣಿಕೆ. ಶಿಕ್ಷಕರ ದಿನಾಚರಣೆಯಲ್ಲಿ ಬಹಿರಂಗಗೊಂಡ ಅಸಮಧಾನ

ಚನ್ನಪಟ್ಟಣ:ಸೆ/05/20/ಶನಿವಾರ. ಶಿಕ್ಷಕರು ಎಂದರೆ ಸರ್ವರಿಗೂ ಮಾದರಿಯಾಗುವ ಮಂದಿ ಎಂಬುದು ಜಗತ್ತಿನಾದ್ಯಂತ ಜನಜನಿತವಾಗಿದೆ. ತಾಲ್ಲೂಕಿನ ಸರ್ಕಾರಿ ಶಾಲಾ ಶಿಕ್ಷಕರಲ್ಲೂ ಬಹಳ ಮಂದಿ ಸಂಭಾವಿತರಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಅವರದೇ ಹೆಸರಿನ ದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಕೆಲವರು ಭಾಗವಹಿಸಿದರೆ, ಮತ್ತೆ ಕೆಲವರು ಭಾಗವಹಿಸಿದ್ದು ಅರ್ಧ ಕಾರ್ಯಕ್ರಮಕ್ಕೆ ಎದ್ದು ಹೋದರೆ, ಇನ್ನೂ ಕೆಲವರು ನಮಗೆ ಸ್ಥಾನಮಾನವಿಲ್ಲ, ಆಹ್ವಾನ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ ನಮ್ಮಲ್ಲಿ ಒಗ್ಗಟ್ಟಿಲ್ಲಾ ಎಂಬುದನ್ನು ಸಾಬೀತು ಪಡಿಸಿಕೊಂಡರು.


ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆ ಎಂಬುದು ಒಂದು ಮೈಲಿಗಲ್ಲು.

ಈ ದಿನ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಮಹತ್ತರವಾದ ದಿನ. ಕೊರೊನಾ ಸಂಕಷ್ಟ ಎದುರಾಗಿರುವುದರಿಂದ ಎಲ್ಲಾ ಶಾಲೆಗಳಲ್ಲೂ ಅದ್ದೂರಿಯಾಗಿ ಆಚರಿಸಬೇಕಾದ ಈ ದಿನವನ್ನು ಕೆಲ ಶಾಲೆಗಳಲ್ಲಿ ಸರಳವಾಗಿ ಆಚರಣೆ ಮಾಡಿರುವುದು ಸ್ತುತ್ಯರ್ಹ.


ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಂದರೆ ಬಿಇಓ ಕಛೇರಿಯಲ್ಲಿ ಅದ್ದೂರಿ ಆಚರಣೆಯಲ್ಲದಿದ್ದರೂ ಮಿತಿಯಾಗಿ, ಸಾರ್ವಜನಿಕರು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಆಚರಿಸಬಹುದಾಗಿತ್ತಾದರೂ, ಬಿಇಓ ಮತ್ತು ಕಛೇರಿಯ ಸಿಬ್ಬಂದಿಗಳು ಅದನ್ನು ಮಾಡದೆ, ರಾಧಾಕೃಷ್ಣನ್ ರವರ ಮೂರ್ತಿಗೆ ಒಂದು ಹೂವಿನ ಹಾರ ಮತ್ತು ಎರಡು ಊದುಗಡ್ಡಿ ಹಚ್ಚಿ, ಬೆರಳೆಣಿಕೆಯ ಮಂದಿಯಷ್ಟೇ ಕಾರ್ಯಕ್ರಮ ಮಾಡಿ ಮುಗಿಸಿರುವುದು ಅಗೌರವ ಎನ್ನಲಡ್ಡಿಯಿಲ್ಲ.


ಶಿಕ್ಷಕರ ಸಂಘವು ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆಂದು ತಿಳಿದುಬಂದಿದೆ. ಆದರೆ ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಕರೆಯುವುದಿರಲಿ, ಸಂಘಟನಾ ಪದಾಧಿಕಾರಿಗಳನ್ನು ಕರೆಯದಿರುವುದು, ಕೆಲವರಿಗೆ ಮಾತ್ರ ಮಣೆ‌ ಹಾಕಿರುವುದನ್ನು ಮನಗಂಡ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸದೆ ಹೊರಗಡೆ ಬಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.


ಒಂದು ಕಾರ್ಯಕ್ರಮ ನಡೆದರೆ ಅದನ್ನು ಜನರಿಗೆ ತಲುಪಿಸುವುದೇ ಮಾಧ್ಯಮ. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಅಧ್ಯಕ್ಷರು, ದಂಡಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಂತವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಮಾಧ್ಯಮದವರನ್ನು ದೂರವಿಟ್ಟಿದ್ದು ಯಾಕೆ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಸಂಘಟನೆಯವರು ಬಹಿರಂಗಪಡಿಸಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑