Tel: 7676775624 | Mail: info@yellowandred.in

Language: EN KAN

    Follow us :


ಮಗಳಿಂದಲೇ ಬೀದಿಗೆ ಬಿದ್ದ ತಾಯಿ, ಒಡವೆ ಹಣ ಕಸಿದು ಮಗಳು ಹೊರದಬ್ಬಿದ್ದಾಳೆ ಎಂದು ದೂರು ನೀಡಿದ ವೃದ್ದೆ

Posted date: 14 Nov, 2020

Powered by:     Yellow and Red

ಮಗಳಿಂದಲೇ ಬೀದಿಗೆ ಬಿದ್ದ ತಾಯಿ, ಒಡವೆ ಹಣ ಕಸಿದು ಮಗಳು ಹೊರದಬ್ಬಿದ್ದಾಳೆ ಎಂದು ದೂರು ನೀಡಿದ ವೃದ್ದೆ

ಇದನ್ನು ಅವಿವೇಕ ಎನ್ನಬೇಕೋ ! ಅತಿಯಾದ ತಿಳುವಳಿಕೆಯೇ ಮುಳುವಾಯಿತೇ ಎನ್ನಬೇಕೋ ಅಥವಾ ಅಂದಿನಿಂದ ಇಂದಿನವರೆಗೂ ಬ್ರಾಹ್ಮಣ ಸಮುದಾಯವನ್ನು ಪೂಜಿಸಿಕೊಂಡು ಬಂದ ಆಚಾರವಂತರಿಗೆ ತಿರುಗೇಟು ನೀಡಲೆಂದೇ ಇಂತಹ ಕೆಲವು ಹುಳುಗಳು ಹುಟ್ಟಿವೇ ಎನ್ನಬೇಕೋ ತಿಳಿಯದು.

ಯಾಕೆಂದರೆ ಅಂದಿನಿಂದ ಇಂದಿನವರೆಗೂ ಶೂದ್ರರೂ, ಬ್ರಾಹ್ಮಣರನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲ ಕಮ್ಯುನಿಸ್ಟ್ ಮತ್ತು ವಿಚಾರವಂತರನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಜನಗಳು ಬ್ರಾಹ್ಮಣರ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಾರೆ. ಸಾಲ ಮಾಡಿ ಮದುವೆ ಮಾಡಿಕೊಳ್ಳುವವನು, ಸಾಲ ಮಾಡಿ ಮನೆ ಕಟ್ಟುವವನು ಅಷ್ಟೇ ಯಾಕೆ ವಾಂಛೆಯಿಂದಲೋ ಅಥವಾ ವಂಶೋದ್ಧಾರಕ್ಕಾಗಿಯೋ ಮಗು ಹುಟ್ಟಿಸುವವನೂ ಸಹ ಬ್ರಾಹ್ಮಣರ ಮಾತು (ಶಾಸ್ತ್ರ) ಕೇಳಿಯೇ ಮುಂದುವರೆಯುತ್ತಾನೆ ಎಂದರೆ ಅವರಲ್ಲಿನ ನಂಬಿಕೆ ಮತ್ತು ವಿಶ್ವಾಸ. ಅಂತಹ ಬ್ರಾಹ್ಮಣ ಸಮುದಾಯದಲ್ಲೂ ಸಹ ಕೆಲವು ಕೆಟ್ಟ ಹುಳುಗಳು ಇರುತ್ತಾವೆ ಎಂಬುದು ಇಂದು ವೇದ್ಯವಾಯಿತು. ನಗರದ ಕೋಟೆ ಪ್ರದೇಶದ ಶ್ರೀ ವರದರಾಜ ಸ್ವಾಮಿ ದೇವಾಲಯದ ಮುಖ್ಯ ರಸ್ತೆಯ ಮನೆಯೊಂದರಲ್ಲಿ ಜರುಗಿದ ಘಟನೆಯೇ ಸಾಕ್ಷಿಯಾಯಿತು.


ಒಂಬತ್ತು ತಿಂಗಳ ಕಾಲ ಹೆತ್ತು ಹೊತ್ತು ಸಾಕಿದ ಮಗಳೇ ತನ್ನ ವೃದ್ದ ತಾಯಿಗೆ ಚಿತ್ರಹಿಂಸೆ ನೀಡಿದ ಘಟನೆ ನಗರದ ಕೋಟೆಯ ವರದರಾಜಸ್ವಾಮಿ ದೇವಾಲಯದ ಬಳಿ ನಡೆದಿದೆ.

ಲೇಟ್ ಎಂ.ನಾರಾಯಣರವರ ಪತ್ನಿ ೭೯ ವರ್ಷದ ಸುಗುಣರವರೇ ಚಿತ್ರಹಿಂಸೆಗೊಳಗಾದ ವೃದ್ಧೆಯಾಗಿದ್ದು, ದಿನಂಪ್ರತಿ ಒಡವೆಗಳು ಹಾಗೂ ಆಸ್ತಿಯನ್ನು ತನಗೆ ನೀಡುವಂತೆ ಆಕೆಯ ಮಗಳಾದ ಮೀರಾ ಮಧ್ವಸ್ಥ ಹಾಗೂ ಅಳಿಯ ಆನಂದರಾಮ ಮಧ್ವಸ್ಥ ಚಿತ್ರಹಿಂದೆ ನೀಡುತ್ತಾರೆಂದು ಆರೋಪಿಸಿದರು.


ವೃದ್ದೆ ಸುಗುಣರವರಿಗೆ ಎನ್.ರವೀಂದ್ರ, ಎನ್.ಜಯಸಿಂಹ, ಎನ್.ಸುದೀಂದ್ರ, ಲಕ್ಷ್ಮಿ  ಮತ್ತು  ಮೀರಾ ಎಂಬ ಐವರು ಮಕ್ಕಳಿದ್ದು, ಇವರಲ್ಲಿ ಇಬ್ಬರು ಗಂಡು ಮಕ್ಕಳು ನಿಧನರಾಗಿದ್ದರೆ, ಮತ್ತೋರ್ವ ಪುತ್ರಿ ಲಕ್ಷ್ಮಿರವರಿಗೂ ಈ ಘಟನೆಗೂ ಸಂಬಂಧವಿಲ್ಲದಿದ್ದು, ಮೀರಾ ಮತ್ತು ಆಕೆಯ ಗಂಡ ತನ್ನ ತಾಯಿಗೆ ಚಿತ್ರಹಿಂಸೆ ನೀಡುತ್ತಿರುವುದಾಗಿ ಜಯಸಿಂಹ ದಂಪತಿಗಳು ಆರೋಪಿಸಿದ್ದಾರೆ.


 ಮೀರಾ ತನ್ನ ತಾಯಿಯಿಂದ  ಸುಮಾರು ೩೧೯.೪೧೦ ಗ್ರಾಂ ಒಡವೆ, ಸುಮಾರು ಎರಡು ಲಕ್ಷ ನಗದು, ದೊಡ್ಡಮಗಳು ಲಕ್ಷ್ಮಿಗೆ ಸೇರಿದ ೩ ಲಕ್ಷದ ಒಂದು ಬಾಂಡ್ ಮತ್ತು ಐದು ಲಕ್ಷದ ಬಾಂಡ್ ಹಾಗೂ ಆ ಬಾಂಡ್‌ ಗೆ ಬಡ್ಡಿಯಲ್ಲಿ ಹಾಕಿರುವ ಚೀಟಿಯು ಸುಮಾರು ರೂ.೨.೭೫ ಲಕ್ಷಗಳಾಗಿರುತ್ತದೆ. ಈ ಚೀಟಿಯಲ್ಲಿ  ಬರುವಂತಹ ಬಡ್ಡಿಯ ಹಣವನ್ನು ಕೊಡುತ್ತೇವೆಂದು ಹೇಳಿ ಮೀರಾ ಮಧ್ವಸ್ಥ ರ ಮಗಳ ಮದುವೆಯ ಸಮಯದಲ್ಲಿ ಅವರಿಗೆ ಚಿನ್ನ ಮತ್ತು ಬೆಳ್ಳಿಯ ಒಡವೆಗಳನ್ನು  ನನ್ನಿಂದ ಪಡೆದುಕೊಂಡಿರುತ್ತಾರೆಂದು ಆರೋಪಿಸಿರುವ ಅವರು,

ಹಣ ಮತ್ತು ಒಡವೆ ಆಸೆಗಾಗಿ ನಮ್ಮ ಮಗನ  ಜೊತೆ ನಾನು ನೆಮ್ಮದಿಯಾಗಿದ್ದೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆಂದು ಕರೆದುಕೊಂಡು ಬಂದು ನನಗೆ ಚಿತ್ರಹಿಂಸೆ ನೀಡುತ್ತಿದ್ದು,  ನನ್ನನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಅವಳಿಗೆ ಇಷ್ಟ ಬಂದಾಗ ಬಾಗಿಲು ತೆರೆದು ಆಸ್ತಿ ಪತ್ರಗಳಿಗೆ ರುಜು ಹಾಕಿಕೊಡುವಂತೆ ಜೀವ ಬೆದರಿಕೆ, ಮಾನಸಿಕವಾಗಿ ಹಿಂಸೆ, ಪೊರಕೆ ಚಪ್ಪಲಿ, ಪಾತ್ರೆಗಳಿಂದ ಹೊಡೆದು ಚಾಕುವಿನಿಂದ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾಳೆ ಎಂದು ಅವರು ಆರೋಪಿಸಿದರು.

ಇವಳ ಚಿತ್ರಹಿಂಸೆಯನ್ನು ತಾಳಲಾರದೆ ನಾನು ಬೇರೆಯವರ ಸಹಾಯದಿಂದ  ಬಸ್ ನಿಲ್ದಾಣದಿಂದ ನನ್ನ ಮಗನ ಮನೆಗೆ ತಲುಪಿದ್ದರೂ ಅಲ್ಲಿಗೆ ಬಂದು ಗಲಾಟೆ ಮಾಡಿ ನನ್ನನ್ನು ಬಲವಂತದಿಂದ ಕರೆದುಕೊಂಡು ಬಂದು ನನಗೆ ಚಿತ್ರಹಿಂಸೆ ನೀಡುತ್ತಿದ್ದಾಳೆಂದು ಆರೋಪಿಸಿದ್ದಾರೆ.


ವರದರಾಜ ಸ್ವಾಮಿ ಟೆಂಪಲ್ ಸ್ಟ್ರೀಟ್, ಗಣೇಶನ ಗುಡಿ ಎದುರು ೬೨ x ೧೦ ಈ ಅಳೆತೆಯ ಸ್ವತ್ತಿನಲ್ಲಿ ೧೪೯೬, ೧೪೯೭, ೧೪೯೮ ಆಗಿರುತ್ತದೆ. ಈ ಸ್ವತ್ತಿನಲ್ಲಿ   ಮೀರಾ ಮಧ್ವಸ್ಥಳಿಗೆ ಕಟ್ಟಿರುವ ಮನೆ ಮತ್ತು   ಖಾಲಿ ಜಾಗವನ್ನು ಕೊಟ್ಟಿರುತ್ತೇನೆ. ಲಕ್ಷ್ಮಿಗೆ ನೀಡಿರುವ ಸ್ವತ್ತನ್ನು ನಮಗೆ ಯಾರ ಸ್ವತ್ತು ಬೇಡ ಎಂದು ವಾಪಸ್ ನೀಡಿರುತ್ತಾರೆ. ತದ ನಂತರ ಉಳಿದ ಸ್ವತ್ತನ್ನು ಬೆಂಗಳೂರಿನ ಬಸವನಗುಡಿ ಸಬ್‌ರಿಜಿಸ್ಟರ್‌ನಲ್ಲಿ ಎನ್.ರವೀಂದ್ರ, ಎನ್.ಜಯಸಿಂಹ, ಎನ್.ಸುದೀಂದ್ರ ಇವರುಗಳಿಗೆ ದಾನ ಪತ್ರದ ಮುಖಾಂತರ ಕೊಟ್ಟಿರುತ್ತೇನೆ. ಹೀಗಿದ್ದರೂ  ನನ್ನ ಮೂರು ಜನ ಮಕ್ಕಳು ಹಾಗೂ ಸೊಸೆಯಂದಿರಿಗೆ ವಿನಾಕಾರಣ ತೊಂದರೆಯನ್ನು ಕೊಡುತ್ತಿದ್ದು  ನಿವೇಶನ ಅಷ್ಟೇ ಅಲ್ಲದೆ ಒಡವೆಗಳನ್ನು ನೀಡಿರುತ್ತೇನೆಂದು ತಿಳಿಸಿದ್ದಾರೆ.

ನನ್ನ ಕಡೆಯ ಮಗ ಎನ್.ಸುಧೀಂದ್ರಗೆ ಸೇರಿದ ಮನೆ ಬಾಡಿಗೆಯನ್ನು ಮೀರಾಳೇ ಪಡೆದುಕೊಳ್ಳುತ್ತಿದ್ದು, ಆ ಹಣ ಸುಮಾರು ೮೪ ರಿಂದ ೯೦ ಸಾವಿರಗಳಾಗಿರಬಹುದು, ಅದಲ್ಲದೆ ನನ್ನ ಹತ್ತಿರ ನಗದಾಗಿ ಕೂಡಿಟ್ಟ ಹಣದಿಂದ ೫೦ ಸಾವಿರ ರೂಗಳನ್ನು, ಆಕೆಯ ಮಗಳ ಮದುವೆಯಲ್ಲಿ ಪಡೆದಿದ್ದು, ಪೋಸ್ಟ್ ಆಫೀಸ್‌ನಲ್ಲಿ ಇಟ್ಟಿದ್ದ ಸುಮಾರು ೨೦.೦೦೦ರೂಗಳನ್ನು  ಬಲವಂತವಾಗಿ ಸಹಿ ಹಾಕಿಸಿಕೊಂಡು ಹಣವನ್ನು ತೆಗೆದುಕೊಂಡಿದ್ದಾರೆಂದು ಆರೋಪಿಸಿದ್ದಾರೆ.


ಪೊಲೀಸರ  ರಕ್ಷಣೆ:

ನಾನು ಅನೇಕ ಬಾರಿ ಪುರ ಪೊಲೀಸ್ ಠಾಣೆಗೆ ನನ್ನನ್ನು ನನ್ನ ಮಗಳಿಂದ ರಕ್ಷಣೆ ಮಾಡಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಅವರು ಗಮನ ನೀಡದೆ, ಪ್ರಕರಣ ದಾಖಲು ಮಾಡಲು ಹೋದರೆ ಬಾಯಿಗೆ ಬಂದಂತೆ ಬೈದು ಕಳುಹಿಸಿರುತ್ತಾರೆಂದು ಸುಗುಣ ತಿಳಿಸಿದ್ದಾರೆ. ಅಲ್ಲದೆ ನಿನ್ನೆ ದಿನ ಬೆನ್ನಿನ ಮೇಲೆ ಪೊರಕೆ ಮತ್ತು ಉಗುರುಗಳಿಂದ ರಕ್ತ ಬರುವಂತೆ ಗೀಚಿದ್ದು ಗಾಯಗಳಾಗುತ್ತಿವೆ ಎಂದು ತನ್ನ ಮನಸ್ಸಿನ ಮತ್ತು ದೇಹದ ಕಷ್ಟಗಳನ್ನು ಪತ್ರಕರ್ತರಿಗೆ ತೋರಿಸಿದ್ದು ಮಾತ್ರ ಎಂತಹ ಕಟುಕರಿಗೂ ಮನ ನೋಯುತ್ತಿತ್ತು.


ರಸ್ತೆಯ ಜನರಿಗೆಲ್ಲಾ ಬೈಗುಳ:

ಇನ್ನು ಈಕೆಯು ತಾಯಿಗೆ ನೀಡುವ ಚಿತ್ರಹಿಂಸೆಯನ್ನು ಸುತ್ತಮುತ್ತಲಿನ ಮನೆಯವರು ಪ್ರಶ್ನಿಸಲೋದರೆ ಅವರಿಗೆ ಬಾಯಿಗೆ ಬಂದಂತೆ ಬೈಯ್ಯತ್ತಾಳೆಂಬುದು ಅಕ್ಕಪಕ್ಕದ ನಿವಾಸಿಗಳ ಆರೋಪವಾಗಿದೆ. ಅಲ್ಲದೆ ಪತ್ರಕರ್ತರು ಮತ್ತು ಪೋಲೀಸರು ಜೊತೆಯಲ್ಲಿದ್ದಾಗಲೇ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಅವಾಚ್ಯ ಶಬ್ದಗಳನ್ನು ಉಪಯೋಗಿಸಿದ್ದೂ ಸಹ ಹೌದು. ಹೌದು ನಾನು ಕೆಟ್ಟದ್ದಾಗಿ ಮಾತನಾಡುತ್ತೇನೆ ಎಂದು ಆಕೆಯೇ ಒಪ್ಪಿಕೊಳ್ಳುತ್ತಾರೆ.


ಮಧ್ಯರಾತ್ರಿವರೆಗೂ ವೃದ್ದೆ ಸುಗುಣಾಗೆ ಊಟ ತಿಂಡಿ  ನೀಡದೆ ಕೈಗೆ ಸಿಕ್ಕಿದ್ದರಲ್ಲಿ ಹೊಡೆಯುವುದರಿಂದ ಆ ವೃದ್ದೆ ಮಹಿಳೆ  ಜೋರಾಗಿ ಕಿರುಚಾಟ ಮಾಡುವುದರಿಂದ ಅಕ್ಕಪಕ್ಕದಲ್ಲಿ ಇರಲು ಸಾಧ್ಯವಾಗಿಲ್ಲದಿದ್ದು, ಈ ಬಗ್ಗೆ ಅಲ್ಲಿನ ನಿವಾಸಿಗಳು ಪ್ರಶ್ನೆ ಮಾಡಿದರೆ  ನನ್ನ ಮನೆ ವಿಚಾರ ಮಾತನಾಡಲು ನೀನ್ಯಾರು ಎಂದು ಅವ್ಯಾಚ ಶಬ್ದಗಳನ್ನು ಬಳಸುವ ಈಕೆ,  ಅವರ ಮನೆಯಲ್ಲಿ ಬಾಡಿಗೆ ಇರುವವರಿಗೆ ಸುಖಾಸುಮ್ಮನೆ ಬೈಯ್ಯವುದು, ತೊಂದರೆ ನೀಡುವುದು ಮಾಡುತ್ತಿದ್ದು, ಪ್ರಶ್ನಿಸಿದರೆ ನನಗೆ ಎಲ್ಲರೂ ಗೊತ್ತು. ಸ್ಥಳೀಯ ಮುಖಂಡರುಗಳು ನನ್ನ ಬೆಂಬಲಕ್ಕಿದ್ದಾರೆ. ಯಾರು ಏನು ಮಾಡಲಾಗುವುದಿಲ್ಲವೆನ್ನುವ ಮಾತುಗಳನ್ನು ಆಡುತ್ತಾ ರಸ್ತೆಯಲ್ಲೇ ನಿಂತು ಬಾಯಿಗೆ ಬಂದಂತೆ ಮಾತನಾಡುಡುವ ಈಕೆಯ ವಿರುದ್ದ 

ಆರಕ್ಷಕರು  ಶಿಸ್ತು ಕ್ರಮ ಕೈಗೊಂಡು ಸುತ್ತಮುತ್ತ ನಿವಾಸಿಗಳಿಗೆ   ತೊಂದರೆ ತಪ್ಪಿಸಬೇಕಾಗಿದೆ ಎಂದು ಅಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.


ನಾನು ತಪ್ಪೇ ಮಾಡಿಲ್ಲ. ಅವರ ಹಣ ಒಡವೆ ಕಸಿದುಕೊಂಡಿಲ್ಲ. ನನಗೆ ನನ್ನ ತಾಯಿ, ಅಣ್ಣ ಅತ್ತಿಗೆ ಮತ್ತು ಈ ಬೀದಿಯ ಜನರು ತೊಂದರೆ ಕೊಡುತ್ತಿದ್ದಾರೆ. ಇವರೆಲ್ಲರನ್ನೂ ನನ್ನಣ್ಣನೇ ಎತ್ತಿಕೊಟ್ಟಿದ್ದಾನೆ. ನನ್ನ ತಾಯಿಯನ್ನು ನಾನೇ ಆರೈಕೆ ಮಾಡುತ್ತಿದ್ದೇನೆ. ಅವರ ತಲೆಗೆ ನನ್ನ ಬಗ್ಗೆ ಕೆಟ್ಟದಾಗಿ ಬಿಂಬಸುತ್ತಿರುವುದರಿಂದ ನನ್ನ ತಾಯಿ ಸುಳ್ಳು ಹೇಳುತಿದ್ದಾರೆ.

*ಮೀರಾ ಮಧ್ವಸ್ಥ*


ನಾನು ಯಾರ ಆಸ್ತಿಗೂ ಆಸೆ ಪಟ್ಟವನಲ್ಲ. ನನಗೆ ನನ್ನ ಪತ್ನಿಗೆ ಅವರಪ್ಪನ ಆಸ್ತಿಯಲ್ಲಿ ಮೋಸವಾಗಿದೆ. ಅವರು ಕೊಟ್ಟ ಮನೆಯ ಮೇಲೆ ಸಾಲ ಮಾಡಿ ಮೇಲಿನ ಮನೆಗಳನ್ನು ನಿರ್ಮಿಸಿಕೊಂಡಿದ್ದೇನೆ. ನನಗೆ ಆ ಮನೆಯಲ್ಲಿ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ.

* ಆನಂದರಾಮ ಮಧ್ವಸ್ಥ, ಸುಗುಣ ರವರ ಅಳಿಯ*


ನಮ್ಮ ಬೀದಿಯ ಎಲ್ಲಾ ಜನಾಂಗದವರೂ ಅನ್ಯೋನ್ಯವಾಗಿದ್ದೆವು. ಮೀರಾ ಎಂಬ ದಗಲ್ಬಾಜಿ ಹೆಣ್ಣಿನಿಂದ ನಮ್ಮ ಮನಸ್ಸುಗಳು ಒಡೆದುಹೋಗಿವೆ. ಮಾಟ ಮಂತ್ರ ಮಾಡಿಸುವುದು, ಮಣ್ಣೆರಚುವುದು, ಕೆಟ್ಟ ಶಬ್ದಗಳನ್ನು ಬಳಸುವುದು. ನನಗೆ ಎಲ್ಲರೂ ಗೊತ್ತಿದ್ದಾರೆ ಎನ್ನುವುದು, ಬಾಡಿಗೆ ಮನೆಯವರಿಗೆ ಕಿರುಕುಳ ನೀಡುವುದು, ೀದಿಯ ಗಂಡಸರನ್ನು ಅವಹೇಳನ ಮಾಡುವುದನ್ನು ಮಾಡುತ್ತಾರೆ. ಇಂತಹವರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಇವರಿಗೆ ಪೋಲಿಸರು ತಿಳುವಳಿಕೆ ನೀಡಬೇಕೆಂದು ಬೀದಿಯ ನಿವಾಸಿಗಳು ಮಾಧ್ಯಮ ಪ್ರತಿನಿಧಿಗಳ ಮೂಲಕ ಮನವಿ ಮಾಡಿದ್ದರು.


ನಾನು ಮಧ್ಯರಾತ್ರಿ ಗಸ್ತಿನಲ್ಲಿರುವಾಗ ಕೋಟೆ ಬೀದಿಯಲ್ಲಿ ಕೆಲವು ಮಹಿಳೆಯರು ಗುಂಪುಕಟ್ಟಿಕೊಂಡು ನಿಂತಿದ್ದರು. ವಿಚಾರಿಸಿದಾಗ ಮೀರಾ ಎಂಬ ಮಹಿಳೆ ತನ್ನ ತಾಯಿಗೆ ನೀಡಿರುವ ಕಿರುಕುಳ ಗೊತ್ತಾಯಿತು. ಇಂತಹವರನ್ನು ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂಬ ಉದ್ದೇಶದಿಂದ ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದೇನೆ.

*ಸರಸ್ವತಿ ಪಿಎಸ್ಐ ಅಕ್ಕೂರು ಪೋಲಿಸ್ ಠಾಣೆ*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑