Tel: 7676775624 | Mail: info@yellowandred.in

Language: EN KAN

    Follow us :


ಶಾಲಾ ಕಾಲೇಜುಗಳಲ್ಲಿ ಶೇಕಡಾ ಐವತ್ತರಿಂದ ಎಂಭತ್ತರಷ್ಟು ಮಕ್ಕಳ ಹಾಜರಿ. ಮುಂದಿನ ಸೋಮವಾರದೊಳಗೆ ಶೇಕಡಾ ತೊಂಭತ್ತರಷ್ಟು ಹಾಜರಿ. ಬಿಇಓ ನಾಗರಾಜು

Posted date: 07 Jan, 2021

Powered by:     Yellow and Red

ಶಾಲಾ ಕಾಲೇಜುಗಳಲ್ಲಿ ಶೇಕಡಾ ಐವತ್ತರಿಂದ ಎಂಭತ್ತರಷ್ಟು ಮಕ್ಕಳ ಹಾಜರಿ. ಮುಂದಿನ ಸೋಮವಾರದೊಳಗೆ ಶೇಕಡಾ ತೊಂಭತ್ತರಷ್ಟು ಹಾಜರಿ. ಬಿಇಓ ನಾಗರಾಜು

ಚನ್ನಪಟ್ಟಣ:ಜ/07/21/ಗುರುವಾರ. ತಾಲೂಕಿನಲ್ಲಿ ನೂತನ ವರ್ಷದ ಪ್ರಾರಂಭದಲ್ಲೇ ಆರನೇ ತರಗತಿಯಿಂದ ಶಾಲೆಗಳು ಪ್ರಾರಂಭವಾಗಿದ್ದು, ಈಗ ಶೇಕಡಾ ಐವತ್ತರಷ್ಟು ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. ಮುಂದಿನ ಸೋಮವಾರ ದೊಳಗೆ ಶೇಕಡಾ ತೊಂಭತ್ತರಷ್ಟು ಮಕ್ಕಳು ಶಾಲೆಗೆ ಹಾಜರಾಗಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ರವರು ಪತ್ರಿಕೆಗೆ ಮಾಹಿತಿ ನೀಡಿದರು.


ಪ್ರಾರಂಭದಲ್ಲಿ ಶೇಕಡಾ ಹತ್ತರಷ್ಟು ಮಕ್ಕಳು ಭಯದಿಂದ ಹಾಜರಾಗಿದ್ದು, ದಿನೇದನೇ ಮಕ್ಕಳ ಹಾಜರಿ ಹೆಚ್ಚಾಗುತ್ತಿದೆ. ಪೋಷಕರು ಸಹ ಶಾಲೆಯ ಮುನ್ನೆಚ್ಚರಿಕೆ ಕ್ರಮಗಳನ್ನು ನೋಡಿ ಧೈರ್ಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಉಳಿದ ಮಕ್ಕಳ ಪೋಷಕರಿಗೆ ಶಾಲಾ ಸಿಬ್ಬಂದಿಗಳು, ಶಿಕ್ಷಕರು ಕರೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡುತ್ತಿದ್ದಾರೆ. ಇಸಿಓ ಮತ್ತು ಸಿ ಆರ್ ಪಿ ಗಳು ಸಹ ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕರೆತರಲು ಶ್ರಮವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.


ಸರ್ಕಾರದ ಆದೇಶದಂತೆ ನಾವು ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದೇವೆ. ಪ್ರತಿ ಸರ್ಕಾರಿ ಶಾಲೆಗಳನ್ನು ಸ್ಯಾನಿಟೈಸರ್ ಮಾಡಿಸಲಾಗಿದೆ. ಮಕ್ಕಳಿಗೆ ಕಡ್ಡಾಯ ಮಾಸ್ಕ್ ಮತ್ತು ಅಂತರ ಕಾಯ್ದುಕೊಳ್ಳುವಂತೆ, ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಖಾಸಗಿ ಶಾಲೆಗಳಿಗೂ ಸಹ, ಮಕ್ಕಳು ಮತ್ತು ಪೋಷಕರಿಗೆ ಯಾವುದೇ ಹೇರಿಕೆ ನೀಡದೆ ಧೈರ್ಯ ತುಂಬುವ ಮೂಲಕ ಮುಂಜಾಗ್ರತಾ ಕ್ರಮಗಳೊಂದಿಗೆ ಬೋಧಿಸಬೇಕು ಎಂದು ತಿಳಿಸಲಾಗಿದೆ ಎಂದು ಅವರು ಪತ್ರಿಕೆಗೆ ಮಾಹಿತಿ ನೀಡಿದರು.


ಸರ್ಕಾರಿ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪಾಠ ಆರಂಭ ಮಾಡಿದ್ದೇವೆ. ಶೇಕಡಾ ಎಂಭತ್ತರಷ್ಟು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಉಳಿದ ತರಗತಿಗಳನ್ನು ಆರಂಭಿಸಲು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸರ್ಕಾರದ ಆದೇಶದ ಮೇರೆಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ವಿದ್ಯಾರ್ಥಿಗಳು ಭಯಪಡದೆ ಕಾಲೇಜಿಗೆ ಬಂದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಪ್ರಾಂಶುಪಾಲ ವೆಂಕಟೇಶ್ ಕರೆ ನೀಡಿದರು.


ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಮಲಿಂಗಪ್ಪ ಮಾತನಾಡಿ ಶೇಕಡಾ ಎಪ್ಪತ್ತರಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದು, ಉಳಿದ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪಾಠ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲಾ ಮಕ್ಕಳನ್ನು ಭಯಪಡದೆ ಶಾಲೆಗೆ ಕಳುಹಿಸಲು ಪೋಷಕರಿಗೂ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.


ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ಪಾರ್ವತಮ್ಮ ಮಾತನಾಡಿ, ನಮ್ಮ ಶಾಲೆಯಲ್ಲಿ ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಒಂದು ಡೆಸ್ಕ್ ನಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳೆಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ವಿದ್ಯಾರ್ಥಿಗಳು ಮುಕ್ತವಾಗಿ ಬಂದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪೋಷಕರು ಕೈಜೋಡಿಸಬೇಕೆಂದು ಮನವಿ ಮಾಡಿದರು..


ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಾನಂದ ಮಾತನಾಡಿ. ನಮ್ಮ ಕಾಲೇಜಿನಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಮುಂದೆ ಅನುಕೂಲವಾಗಲಿದೆ. ಈಗಿರುವ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸರ್ ಮಾಡಿಸಿ ಅಂತರ ಕಾಪಾಡಿಕೊಂಡು ಪಾಠ ಮಾಡಲಾಗುತ್ತಿದೆ. ಶೇಕಡಾ ಹದಿನೈದರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗುತ್ತಿದ್ದು, ಭಯಪಡದೆ ಕಾಲೇಜಿಗೆ ಆಗಮಿಸಿ ಪಾಠದಲ್ಲಿ ಭಾಗವಹಿಸಬೇಕೆಂದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑