Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಗಾಂಧಿಭವನ ಪುನರ್ ನಿರ್ಮಿಸಲು ಜಿಲ್ಲಾಧಿಕಾರಿ ಗೆ ಮನವಿ

Posted date: 16 Mar, 2021

Powered by:     Yellow and Red

ಚನ್ನಪಟ್ಟಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಗಾಂಧಿಭವನ ಪುನರ್ ನಿರ್ಮಿಸಲು ಜಿಲ್ಲಾಧಿಕಾರಿ ಗೆ ಮನವಿ

ಚನ್ನಪಟ್ಟಣದಲ್ಲಿ ಸುಮಾರು 73 ವರ್ಷಗಳ ಹಿಂದೆ ನಿರ್ಮಾಣಗೊಂಡ ಗಾಂಧಿ ಭವನ ಶಿಥಿಲಾವಸ್ಥೆಯಲ್ಲಿದ್ದು,  ಅದರ ಪುನರ್ ನಿರ್ಮಾಣಕ್ಕೆ ಗಮನಹರಿಸುವಂತೆ ಚನ್ನಪಟ್ಟಣ ಜಾಗೃತ ಸಮುದಾಯ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.


ಚನ್ನಪಟ್ಟಣ ದ ಹೃದಯ ಭಾಗದಲ್ಲಿರುವ ಗಾಂಧಿ ಭವನವು ಶಿಥಿಲಗೊಂಡಿದ್ದು, ಅದರ ಜಾಗದ ಬಗ್ಗೆ ಗೊಂದಲವಿದೆ. ನಗರಸಭೆ ಮತ್ತು ತಾಲೂಕು ಕಚೇರಿ ಹಾಗೂ ಟ್ರಸ್ಟ್ ವತಿಯಿಂದ ಮಾಹಿತಿ ಪಡೆದು ಜಾಗವನ್ನು ವಶಕ್ಕೆ ಪಡೆದು, ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ 3 ಕೋಟಿ ರೂಪಾಯಿಗಳನ್ನು ಬಳಸಿಕೊಂಡು ನೂತನ ಭವನ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.


ಚನ್ನಪಟ್ಟಣಕ್ಕೆ  ಮಹಾತ್ಮಗಾಂಧಿಯವರು 1928 ರಲ್ಲಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರು ಒಂದು ಗುಡಿಸಲು ಇರುವ ಜಾಗವನ್ನು ರಾತ್ರಿ ವಾಸ್ತವ್ಯಕ್ಕೆ ಬಯಸುತ್ತಾರೆ. ಆ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿದ್ದ ಸೂಕ್ತ


ಎನ್ನಿಸಿದ ಜಾಗ ಈಗ ಗಾಂಧಿಭವನ ಇರುವ ಜಾಗ. ಆಗ ಆರ್ಯಮೂರ್ತಿ ಎಂಬ ಕರಕುಶಲ ತರಬೇತಿ ಕೇಂದ್ರದ ನೌಕರ ಅಲ್ಲಿ ವಾಸವಾಗಿದ್ದರು. ಆ ಸಂದರ್ಭದಲ್ಲಿ ಸಂಘಟಕರು ಅವರನ್ನು ಕೋರಿ ಕೊಂಡಾಗ ಅವರು ಹೆಮ್ಮೆಯಿಂದ ಆ ಗುಡಿಸಲನ್ನು ಬಿಟ್ಟುಕೊಟ್ಟರು.

ಆದಾದ ಕೆಲವು ತಿಂಗಳುಗಳ ನಂತರ ಗಾಂಧಿಯವರ ವಿಚಾರಧಾರೆಗೆ ಮನಸೋತ ಅವರು, ಈ ಜಾಗವನ್ನು ಗಾಂಧಿಯವರ ಹೆಸರಿನಲ್ಲಿ ಸದುಪಯೋಗ ಪಡಿಸಿಕೊಳ್ಳಿ ಎಂದು ಆಗಿನ ಸ್ವಾತಂತ್ರ್ಯ ಹೋರಾಟದ

ಮುನ್ನೆಲೆಯಲ್ಲಿದ್ದ ವಿ.ವೆಂಕಟಪ್ಪನವರ ವಶಕ್ಕೆ ಬಿಟ್ಟುಕೊಟ್ಟರು.


ಆದಾದ ನಂತರ ವಿ.ವೆಂಕಟಪ್ಪನವರು ಹಾಗೂ ಅವರ ಸಹವರ್ತಿಗಳ ಪರಿಶ್ರಮದಿಂದ ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಚೆಂಗಲ ರಾಯರೆಡ್ಡಿಯವರು 29-04-1950 ರಲ್ಲಿ ಅಲ್ಲಿ ಭವನ ಕಟ್ಟಲು ಅಸ್ಥಿಭಾರ ಹಾಕಿದರು.

30-10-1954ರಲ್ಲಿ ಆಗಿನ ಮಹಾರಾಜರಾಗಿದ್ದ  ಶ್ರೀ ಜಯರಾಮರಾಜೇಂದ್ರ ಒಡೆಯರ್ ಅವರು ಅದನ್ನು ಉದ್ಘಾಟಿಸಿದರು.ಈಗ ಆ ಭವನಕ್ಕೆ ಸರಿ ಸುಮಾರು 70 ವರ್ಷಗಳಾಗಿವೆ.


ಕಳೆದ 3 ವರ್ಷಗಳಿಂದಲೂ ಆ ಜಾಗದಲ್ಲಿ ಅನೇಕ ಕಾರ್ಯಕ್ರಮಗಳು ನಿಗದಿಯಾಗಿ, ಕಾರ್ಯಕ್ರಮ ಮಾಡಲು ಅದರ ಈಗಿನ ನಿರ್ವಹಣೆ ಮಾಡುವವರಿಂದ ಅವಕಾಶ ಸಿಕ್ಕಿಲ್ಲ.

ಈ ಭವನಕ್ಕೆ ಕಾಯಕಲ್ಪ ಆಗಬೇಕು, ಅದು ಸದ್ಯಕ್ಕೆ ಯಾರ ವಶದಲ್ಲಿ ಇದೆ ಬಯಲಾಗಲಿ ಎಂದು ಮಾಧ್ಯಮಗಳು ಬರೆದಿದ್ದೂ ಉಂಟು. ಕಳೆದ ವರ್ಷ ಈ ಭವನ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಗಾಂಧಿ ಜಯಂತಿಯ ಸಂದರ್ಭದಲ್ಲಿ ಜಾಗೃತ ನಾಗರೀಕರು ಸತ್ಯಾಗ್ರಹ ಮಾಡಿದ್ದೂ ಸಹ ಉಂಟು.

ಕೆಲವರನ್ನು ಕೇಳಿದರೆ ಇದು ಬೆಂಗಳೂರಿನ ಗೋಖಲೆ ಟ್ರಸ್ಟ್ ವಶದಲ್ಲಿದೆ ಎಂದು ಹೇಳುತ್ತಾರೆ, ಮತ್ತೆ ಕೆಲವರು ವಿ.ವೆಂಕಟಪ್ಪನವರ ಕಾಲದಲ್ಲಿ ಒಂದು ಸ್ಥಳೀಯ ಟ್ರಸ್ಟ್ ಮಾಡಿದ್ದರು ಎಂದು ಹೇಳುತ್ತಾರೆ. ಆದರೆ ಟ್ರಸ್ಟಿಗಳಲ್ಲಿ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಕಾಲವಶವಾಗಿದ್ದಾರೆ. ಈ ಸಂಬಂಧ ಶಾಸಕ ಕುಮಾರಸ್ವಾಮಿಯವರು, ಜಿಲ್ಲಕಾರಿಗಳ ಗಮನಕ್ಕೆ ತಂದು, ಅದರ ಮಾಹಿತಿಯನ್ನು ಸಂಗ್ರಹ ಮಾಡಿ ಎಂದು ಹೇಳಿದ್ದು ಉಂಟು.


ಜಿಲ್ಲಾಧಿಕಾರಿಗಳು ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿ, ಅದರ ಮಾಹಿತಿ ತೆಗೆಯಲು ಹೇಳಿದ್ದರು. ಆಮೇಲೆ ಸಹಾಯಕ ನಿರ್ದೇಶಕರು ಇದಕ್ಕೆ 3 ಕೋಟಿ ಹಣ ನಿಗದಿ ಪಡಿಸಿಕೊಂಡಿರುವುದಾಗಿಯೂ, ಸುಂದರವಾದ 2 ಅಂತಸ್ತಿನ  ಕಟ್ಟಡ ಕಟ್ಟುವುದಾಗಿಯೂ ಹೇಳಿದ್ದರು. ಅದಾದ ನಂತರ ಯಾವುದು ಏನಾಯಿತು ಎಂದು ತಿಳಿಯುತ್ತಿಲ್ಲ. ಹಲವು ಬಾರಿ ಜಿಲ್ಲಾಕಾರಿಗಳ ಗಮನಕ್ಕೆ ತಂದು, ಅವರು ಹಲವು ಬಾರಿ ಸಭೆ ನಡೆಸುವ ದಿನಾಂಕ ನಿಗದಿ ಮಾಡಿದ್ದೂ ಉಂಟು. ಆದರೆ ಸಭೆ ನಡೆಯಲಿಲ್ಲ. ಈಗ ನೀವು ಈ ವಿಷಯವನ್ನು ಕೈಗೆತ್ತಿಕೊಂಡು ಗಾಂಧಿಭವನವನ್ನು ಪುನರ್  ನಿರ್ಮಾಣ ಮಾಡುವುದರ ಮೂಲಕ ಗಾಂಧಿಗೆ ಗೌರವ ತಂದು ಕೊಡುವಂತೆ ಪದಾಧಿಕಾರಿಗಳು ಮನವಿ ಮಾಡಿದರು.


ಈ ವೇಳೆ ಗಾಂಧಿ ಅಧ್ಯಯನ ಕೇಂದ್ರ ಪ್ರೊ.ಅಬಿದಾ ಬೇಗಂ, ಪತ್ರಕರ್ತರಾದ ಗೋ.ರಾ.ಶ್ರೀನಿವಾಸ್ , ಮಹೇಶ್ ಮೆಂಗಳ್ಳಿ ಮತ್ತಿತರರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑