Tel: 7676775624 | Mail: info@yellowandred.in

Language: EN KAN

    Follow us :


ಇಪ್ಪತ್ತೈದು ಕೋಟಿ ಮೌಲ್ಯದ ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ದ್ವಿ ದರ್ಜೆ ಸಹಾಯಕ ಭೈರಾಪಟ್ಟಣ ಹರೀಶಕುಮಾರ್ ಆರೆಸ್ಟ್

Posted date: 03 Jun, 2022

Powered by:     Yellow and Red

ಇಪ್ಪತ್ತೈದು ಕೋಟಿ ಮೌಲ್ಯದ ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ  ದ್ವಿ ದರ್ಜೆ ಸಹಾಯಕ ಭೈರಾಪಟ್ಟಣ ಹರೀಶಕುಮಾರ್ ಆರೆಸ್ಟ್

ಚನ್ನಪಟ್ಟಣ: ತಾಲ್ಲೂಕಿನ ಕೋಲೂರು ಗ್ರಾಮದ ಬಳಿ ಇರುವ ಸರ್ವೇ ನಂಬರ್ 118 ರಲ್ಲಿ 192 ಎಕರೆ ಗೋಮಾಳ ಜಮೀನು ಇದ್ದು, ಇದು ಬೆಂಗಳೂರು ಮೈಸೂರು ಹೆದ್ದಾರಿಗೆ ಹೊಂದಿಕೊಂಡಿದೆ. ಭವಿಷ್ಯದಲ್ಲಿ ಉದ್ಯೋಗಗಳಿಗಾಗಿ ಸರ್ಕಾರವು, ಈ ಸರ್ವೇ ನಂಬರಿನ ಎರಡು ಎಕರೆ ಭೂಮಿಯನ್ನು, ಸರ್ಕಾರಿ ಐಟಿಐ ಕಾಲೇಜಿಗಾಗಿ 2018 ನೇ ಇಸವಿಯಲ್ಲಿ ಮಂಜೂರು ಮಾಡಿದೆ. ಅಲ್ಲಿ ಕಟ್ಟಡ ಕಟ್ಟುವುದಕ್ಕಾಗಿ ಕಂದಾಯ ಇಲಾಖೆಯವರು ಪೋಲೀಸರ ಬೆಂಬಲ ಪಡೆದು ಜಾಗವನ್ನು ಗುರುತಿಸುವಾಗ, ಕೋಲೂರು ಗ್ರಾಮದ ಕೆಲವರು ನಮ್ಮ ಬಳಿ ದಾಖಲೆ ಇವೆ ಎಂದು ಹೇಳಿಕೊಂಡು ತಡೆಯಲು ಮುಂದಾಗಿದ್ದು, ತಹಶಿಲ್ದಾರ್ ಹರ್ಷವರ್ಧನ್ ರವರು

ಈ ಜಾಗವನ್ನು ಸರ್ಕಾರವೇ ಮಂಜೂರು ಮಾಡಿರುವುದರಿಂದ ಇದು ನಿಮ್ಮದಾಗುವುದಿಲ್ಲಾ ಎಂದು ತಿಳಿಹೇಳಿದ್ದಾರೆ.


ಭೈರಾಪಟ್ಟಣ ಗ್ರಾಮದ ಹರೀಶ್ ಕುಮಾರ್ ಎಂಬ ವ್ಯಕ್ತಿಯು ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದು ಈತನ ಸಹಾಯ ಪಡೆದ ಕೋಲೂರು ಗ್ರಾಮದ ಲೋಕೇಶ್ ಎಂಬುವವನಿಗೆ ಸರ್ವೇ ನಂಬರ್ 118 ರ ಜಮೀನಿಗೆ ಸಂಬಂಧಿಸಿದಂತೆ ಆತನಿಗೆ 2 ಎಕರೆ 38 ಗುಂಟೆ ಜಮೀನು ಸೇರಿದಂತೆ ಆರು ಮಂದಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಲು ಸ್ಕೆಚ್ ಮಾಡಿಕೊಂಡು ಇದಕ್ಕೆ ಸಹಕಾರಿಯಾಗಲು ರಾಮನಗರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಸಿದ್ದಯ್ಯ ಎಂಬ ವ್ಯಕ್ತಿಯ ಸಹಾಯ ಪಡೆದಿದ್ದಾರೆ.


27/05/22 ರ ಶುಕ್ರವಾರ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ ಎಂಬ ಕಾರ್ಯಕ್ರಮವು ತಾಲ್ಲೂಕಿನ ಹೊಡಿಕೆಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದು, ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಹರೀಶ್ ಕುಮಾರ್ ಅಭಿಲೇಖಾಲಯ (ರೆಕಾರ್ಡ್ ರೂಂ) ನ ವಿಷಯ ನಿರ್ವಾಹಕ ನಾಗರಾಜು ರವರನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೋಲೂರು ಗ್ರಾಮದ ಸರ್ವೇ ನಂಬರ್ 118ರ ಫೈಲ್ ಕೇಳಿದ್ದಾರೆ. ಫೈಲ್ ಕೊಡಿ ಎಂದಾಗ ಅವರು ಸಂಬಂಧಿಸಿದ ಅಧಿಕಾರಿಗಳ ಪತ್ರ ಇಲ್ಲದೆ ಕೊಡುವುದಿಲ್ಲಾ ಎಂದಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಹರೀಶ್ ಕುಮಾರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಸಿದ್ದಯ್ಯ ರಿಗೆ ಕರೆ ಮಾಡಿ ಅವರ ಮೂಲಕ ಹೇಳಿಸಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.


ನಾಗರಾಜು ರವರು ಗ್ರೇಡ್ 2 ತಹಶಿಲ್ದಾರ್ ಲಕ್ಷ್ಮಿದೇವಮ್ಮ ರವರಿಗೆ ಈ ಬಗ್ಗೆ ಮಾಹಿತಿ ನೀಡಿದಾಗ,  ರಿಜಿಸ್ಟರ್ ಗೆ ಸಹಿ ಮಾಡಿಸಿಕೊಂಡು ರೆಕಾರ್ಡ್ ಗೆ ಕಪ್ಪು ಪೆನ್ನಿನಲ್ಲಿ ಕ್ರಮಸಂಖ್ಯೆ ನಮೂದಿಸಿ ಕೊಡಲು ತಿಳಿಸಿದ್ದು ಅದರಂತೆ ನೀಡಿದ್ದಾರೆ. ಆದರೆ ರಿಜಿಸ್ಟರ್ ಗೆ ಹರೀಶ್ ಸಹಿ ಮಾಡಿರುವುದಿಲ್ಲಾ. ಸದರಿ ಫೈಲನ್ನು 30/05/22ರಂದು ಹಿಂದಿರುಗಿಸಿದ್ದಾರೆ. ಲಕ್ಷ್ಮಿದೇವಮ್ಮ ರವರು ಸಹಿ ಪಡೆಯದೆ ಯಾಕೆ ಫೈಲ್ ನೀಡಿದ್ದೀರೆಂದು ನಾಗರಾಜು ರವರನ್ನು ಕೇಳಿದಾಗ, ಬೇಜಾವಬ್ದಾರಿ ಉತ್ತರ ನೀಡಿದ್ದು, ಅನುಮಾನಗೊಂಡ ಅವರು ಫೈಲ್ ಗಮನಿಸಿ, ಕ್ರಮಸಂಖ್ಯೆಗಳು ಕಪ್ಪು ಶಾಯಿ ಅಲ್ಲದೆ ಕೆಂಪು ಶಾಯಿಯಲ್ಲಿ ನಕಲಿ ಸಂಖ್ಯೆಗಳನ್ನು ನಮೂದಿಸಿರುವುದನ್ನು ನೋಡಿ ಹುಡುಕಾಡಿದಾಗ ಐವತ್ತು ಪುಟಗಳನ್ನು ನಕಲಿ ಮಾಡಿರುವುದು ಬೆಳಕಿಗೆ ಬಂದಿದ್ದು ತಹಶಿಲ್ದಾರ್ ಹರ್ಷವರ್ಧನ್ ರವರ ಗಮನಕ್ಕೆ ತಂದಿದ್ದಾರೆ.


ಕ್ರಮವಾಗಿ ಅರ್ಜಿ, ಹುಕುಂ ಪ್ರತಿ, ಸಾಗುವಳಿ ಚೀಟಿ, ಸರ್ಕಾರಕ್ಕೆ ಮಾಹಿತಿ ಪತ್ರ ಮತ್ತು ನೋಟೀಸ್ ಜಾರಿ ಮಾಡಿರುವ ನಕಲನ್ನು ಸೃಷ್ಟಿಸಿದ್ದಾನೆ. 5,6,7,7,8 ಚಿಕ್ಕಯ್ಯ ಬಿನ್ ದಾಸಯ್ಯ 13,14,15,17,16 ಹೇಮಗಿರಿ ಬಿನ್ ಬೋರಯ್ಯ. 22,23,24,25,26 ಯಶೋಧಮ್ಮ ಬಿನ್ ಸಿದ್ದಯ್ಯ. 31,32,33,34,35 ಜಯಮ್ಮ ಕೋಂ ಚಿಕ್ಕಲಿಂಗಯ್ಯ. 40,41,42,43,44 ಮಾದಮ್ಮ ಕೋಂ ಹೊನ್ನಯ್ಯ. 49,50,51,52,53 ಬೋರಯ್ಯ ಬಿನ್ ಚಿಕ್ಕಬೋರಯ್ಯ, 54 ರಲ್ಲಿ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರ. 55 ರಲ್ಲಿ ಕಂದಾಯ ನಿರೀಕ್ಷಕರಿಗೆ (ಆರ್ ಐ) ವರದಿ ನೀಡಿರುವ ಪತ್ರ. 56-57 ಕಛೇರಿ ಟಿಪ್ಪಣಿ. 58 ಅಧಿಕೃತ ಜ್ಞಾಪನ ಪತ್ರ ಸ್ಪೆಷಲ್ ಡೆಪ್ಯೂಟಿ ಕಮಿಷನರ್ ಬೆಂಗಳೂರು. 59 ರಲ್ಲಿ ಅಧಿಕಾರ ಜ್ಞಾಪನ ಪತ್ರ ಅಸಿಸ್ಟೆಂಟ್ ಕಮೀಷನರ್ ರಾಮನಗರ ಮತ್ತು 60 ರಲ್ಲಿ ಅಧಿಕೃತ ಜ್ಞಾಪನ ಪತ್ರ ತಹಶಿಲ್ದಾರ್ ಚನ್ನಪಟ್ಟಣ ಇಷ್ಟು ದಾಖಲೆಗಳನ್ನು ನಕಲಿ ಮಾಡಿ, ತಹಶಿಲ್ದಾರ್, ಉಪ ವಿಭಾಗಾಧಿಕಾರಿ, ಮತ್ತು ಸ್ಪೆಷಲ್ ಕಮೀಷನರ್ ಸಹಿಗಳನ್ನು ಸಹ ನಕಲಿ ಮಾಡಿದ್ದಾನೆ.


ಇದನ್ನೆಲ್ಲಾ ಕೂಲಂಕಷವಾಗಿ ಪರಿಶೀಲಿಸಿದ ತಹಶಿಲ್ದಾರ್ ಹರ್ಷವರ್ಧನ್ ರವರು ಕಛೇರಿಯಲ್ಲೇ ವಿಚಾರಣೆ ನಡೆಸಿದ್ದಾರೆ. ಒಪ್ಪಿಕೊಳ್ಳದಿದ್ದಾಗ ಪೋಲೀಸರಿಗೆ ದೂರು ನೀಡುವುದಾಗಿ ತಿಳಿಸಿದ ನಂತರ ತಪ್ಪು ಒಪ್ಪಿಕೊಂಡಿದ್ದು, ಇದರಲ್ಲಿ ಯಾರ ಕೈವಾಡವೂ ಇಲ್ಲಾ ನಾನೊಬ್ಬನೆ ಮಾಡಿದ್ದೇನೆ ಎಂಬುದಾಗಿ ಬಾಯಿಬಿಟ್ಟಿದ್ದು, ಹರ್ಷವರ್ಧನ್ ರವರು ಮೇಲಾಧಿಕಾರಿಗಳ ಗಮನಕ್ಕೆ ತಂದು ಗ್ರೇಡ್ 2 ತಹಶಿಲ್ದಾರ್ ಲಕ್ಷ್ಮಿದೇವಮ್ಮ ಹೆಸರಿನಲ್ಲಿ ಪುರ ಪೋಲೀಸ್ ಠಾಣೆಗೆ ಹರೀಶ್ ಕುಮಾರ್, ನಾಗರಾಜು ಮತ್ತು ಚಿಕ್ಕಸಿದ್ದಯ್ಯ ಎಂಬುವವರು ಸರ್ಕಾರಿ ನೌಕರರಾಗಿದ್ದು, ನಕಲಿ ಫಲಾನುಭವಿಗಳಿಗೆ ಅನುಕೂಲವಾಗುವಂತೆ ದಾಖಲೆ ಸೃಷ್ಟಿಸಿ, ಹಣದ ಆಸೆಗಾಗಿ ಅಪರಾಧಿಕ ನಂಬಿಕೆ ದ್ರೋಹ ಮಾಡಿ, ಸರ್ಕಾರಕ್ಕೆ "ಮೋಸ" ಮಾಡಿದ್ದಾರೆ ಎಂದು ದೂರು ನೀಡಿಸಿದ್ದಾರೆ.


ಪುರ ಪೋಲೀಸ್ ಠಾಣೆಯ ಪಿಎಸ್ಐ ಹರೀಶ್ ರವರು ಠಾಣಾ ಮೊಕದ್ದಮೆ 50/2022 ಕಲಂ 408,409,417,465,466,467,468,471,120B ಮತ್ತು 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹರೀಶ್ ಕುಮಾರ್ ರವರನ್ನು ರಾಮನಗರದ ಸಿಇಎನ್ ಪೋಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇಬ್ಬರ ಮೊಬೈಲ್ ಗಳನ್ನು ಕಾಲ್ ಡೀಟೇಲ್ಸ್ ಗಾಗಿ ಕಳುಹಿಸಲಾಗಿದೆ. ಚಿಕ್ಕಸಿದ್ದಯ್ಯ ಮತ್ತು ನಾಗರಾಜು ರವರನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ಸಿಇಎನ್ ಠಾಣೆಯಿಂದ ಪುರ ಪೋಲೀಸ್ ಠಾಣೆಗೆ ವಿಚಾರಣೆಗೆ ನೀಡುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾಧಿಕಾರಿ ರಾಜೇಂದ್ರ ಮೆನನ್ ರವರು ಹರೀಶ್ ಕುಮಾರ್ ರವರನ್ನು ವರ್ಗಾವಣೆ ಮತ್ತು ವಜಾ ಮಾಡಿ ಮಾಗಡಿಗೆ ಜಾಗ ತೋರಿಸಲಾಗಿದೆ ಎಂದು ನಂಬಲರ್ಹ ಮೂಲಗಳು ಮಾಹಿತಿ ನೀಡಿವೆ.


ಈ ಹಿಂದೆಯೂ ಸಹ ಇದೇ ಕೋಲೂರು ಗ್ರಾಮದ 118 ಸರ್ವೇ ನಂಬರ್ ಗೆ ಸಂಬಂಧಿಸಿದ ಗೋಮಾಳದ ಸ್ವಲ್ಪ ಜಮೀನನ್ನು ಮೂರ್ನಾಲ್ಕು ಮಂದಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ತಯಾರಿ ಮಾಡಿಕೊಂಡಿದ್ದು, ಕೆಲ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟಗೊಂಡ ನಂತರ ತಟಸ್ಥವಾಗಿತ್ತು. ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಒಗ್ಗೂಡಿ ಸರ್ಕಾರದ ಆಸ್ತಿಗಳನ್ನು ಹದ್ದುಬಸ್ತು ಮಾಡಿ ಬೇಲಿ ಹಾಕಲಿಲ್ಲಾ ಎಂದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಹಣದ ಆಸೆಗಾಗಿ ಕೆಲ ಅಧಿಕಾರಿ ಶಾಹಿ ನೌಕರರೇ ನುಂಗು ಹಾಕುವುದರಲ್ಲಿ ಅನುಮಾನವೇ ಇಲ್ಲ. ಈಗಲಾದರೂ ತಹಶಿಲ್ದಾರ್ ಹರ್ಷವರ್ಧನ್ ರವರು ಎಚ್ಚರಿಕೆ ವಹಿಸಿ ಇಂದಿನ ಧೈರ್ಯವನ್ನೇ ಮುಂದುವರೆಸಿ ಸರ್ಕಾರದ ಆಸ್ತಿ ಉಳಿಸಲು ಪ್ರಯತ್ನಿಸುತ್ತಾರಾ ಎಂದು ಕಾದುನೋಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑