Tel: 7676775624 | Mail: info@yellowandred.in

Language: EN KAN

    Follow us :


ಕಾಳೇಗೌಡ ನಾಗವಾರ ರ ಸರಳ ಮದುವೆಯ ಐವತ್ತರ ನೆನಪು:

Posted date: 10 Jun, 2022

Powered by:     Yellow and Red

ಕಾಳೇಗೌಡ ನಾಗವಾರ ರ ಸರಳ ಮದುವೆಯ ಐವತ್ತರ ನೆನಪು:

ರಾಮನಗರ: ಜಾನಪದ ಲೋಕದಲ್ಲಿ ಕೆಂಪಮ್ಮ ಅಬ್ಬೂರು–ಕಾಳೇಗೌಡ ನಾಗವಾರ ಅವರ ಸರಳ ಮದುವೆ ಐವತ್ತರ ನೆನಪಿನ ಕಾರ್ಯಕ್ರಮವನ್ನು ಶನಿವಾರ ಜಾನಪದ ಲೋಕದಲ್ಲಿ ಆಯೋಜನೆ ಮಾಡಲಾಗಿದೆ.

 ಕೆಂಪಮ್ಮ ಅಬ್ಬೂರು–ಕಾಳೇಗೌಡ ನಾಗವಾರ ಅವರ ಸರಳ ಮದುವೆ ಐವತ್ತರ ನೆನಪಿನ ಅಂಗವಾಗಿ ಜೂನ್ 11ರಂದು ಬೆಳಿಗ್ಗೆ 10.30ಕ್ಕೆ ಮೈಸೂರು-ಬೆಂಗಳೂರು ಹೆದ್ದಾರಿಯ ರಾಮನಗರದ ಜಾನಪದ ಲೋಕದಲ್ಲಿ ‘ಸರಳ ಮದುವೆಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವ’ ಒಂದು ಅವಲೋಕನ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಅಗ್ರಹಾರ ಕೃಷ್ಣಮೂರ್ತಿ, ಮಂಗಲಾ ಅಪ್ಪಾಜಿ ಕೊಪ್ಪ, ಗೀತಾ ಸ್ವಾಮಿ ಆನಂದ್, ರಾಜೇಂದ್ರಪ್ರಸಾದ್, ಎಚ್.ಎಸ್. ರೇಣುಕಾರಾಧ್ಯ, ಕೇಶವರೆಡ್ಡಿ ಹಂದ್ರಾಳ, ಜಗದೀಶ್ ಕೊಪ್ಪ, ಮಂಜುನಾಥ ಅದ್ದೆ, ಸಾದಿಕ್ ಪಾಷ, ವಿವೇಕ್ ಕಾರಿಯಪ್ಪ–ಜೂಲಿ ಕಾರಿಯಪ್ಪ, ಚುಕ್ಕಿ ನಂಜುಂಡಸ್ವಾಮಿ– ಲೂಕಾ ಮೊಂತನಾರಿ ಭಾಗವಹಿಸಲಿದ್ದಾರೆ.


*50ನೇ ವಸಂತದ ಸಂಭ್ರಮ:*

ಸಂಪ್ರದಾಯಗಳ ಕಟ್ಟುಪಾಡುಗಳನ್ನು ಮೀರಿ, ಮೂಢನಂಬಿಕೆ ಧಿಕ್ಕರಿಸಿ ಮತ್ತು ದಲಿತರೊಬ್ಬರ ಪೌರೋಹಿತ್ಯದಲ್ಲಿ ಸರಳವಾಗಿ ಮದುವೆಯಾದ ಹಾಲಿ ಮೈಸೂರಿನ ರಾಮಕೃಷ್ಣನಗರ ಕೆ. ಬ್ಲಾಕ್ ನ ಈ ದಂಪತಿ, ವೈವಾಹಿಕ ಜೀವನದ 50ನೇ ವಸಂತದ ಸಂಭ್ರಮದಲ್ಲಿದ್ದಾರೆ.

ಐದು ದಶಕಗಳ ಹಿಂದೆ ಅವರಿಟ್ಟ ಆದರ್ಶದ ಹೆಜ್ಜೆಯ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಪ್ರಗತಿಪರರು, ಯುವಜನರು ‘ಆ’ ಮದುವೆಯ ಚಿತ್ರಗಳನ್ನು ಹಂಚಿಕೊಂಡು ಮೆಚ್ಚು ಗೆಯ ಪೋಸ್ಟ್ ಗಳನ್ನು ಹಾಕಿದ್ದಾರೆ. ಆ ದಂಪತಿಯೇ ಕೆಂಪಮ್ಮ ಮತ್ತು ಲೋಹಿಯಾ ವಾದಿಯೂ ಆಗಿರುವ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ರವರು. ಅನಗತ್ಯ ಆಚರಣೆಗಳಿಂದ ವಿಮೋಚನೆ ಬಯಸಿ ಆ ಕಾಲದಲ್ಲೇ ಹೊಸ ಪ್ರಯೋಗದಿಂದ ಗಮನ ಸೆಳೆದವರು. ಅವರು ಹಚ್ಚಿದ್ದ ವೈಚಾರಿಕತೆಯ ಹಣತೆ ಸಾವಿರಾರು ಯುವಕ–ಯುವತಿಯರಿಗೆ ದಾರಿದೀಪವಾಯಿತು.


 ಈ ದಂಪತಿಯು ತಮ್ಮಿಬ್ಬರು ಪುತ್ರರು ಮತ್ತು ಪುತ್ರಿಯ ಮದುವೆಯನ್ನೂ ಸರಳ ಮತ್ತು ಜಾತಿಯ ಸಂಕೋಲೆಯಿಂದ ಹೊರತಂದು ನೆರವೇರಿಸಿದ್ದಾರೆ. ಆ ಮದುವೆಗಳೆಲ್ಲವನ್ನೂ ಮನೆಯಲ್ಲೇ ಮಾಡಿರುವುದು ವಿಶೇಷ.


*ಮೂಢಸಂಪ್ರದಾಯ ವಿರೋಧಿ ಸಮ್ಮೇಳನದಲ್ಲಿ ಮದುವೆ:*

ಮೌಢ್ಯ, ಆಡಂಬರದ ಮದುವೆಗೆ ಸಾಲ ಮಾಡುವುದು ಮೊದಲಾದ ಭಾರತೀಯ ಸುಡು ವಾಸ್ತವಗಳು ಗೊತ್ತಾಗಿತ್ತು. ಉಪನ್ಯಾಸಕನಾಗಿದ್ದ ನನಗೆ, ನಗರದ ಬದಲಿಗೆ ಹಳ್ಳಿಯಲ್ಲೇ ಕ್ರಾಂತಿ ಮಾಡಬೇಕು ಎನ್ನುವ ಹಂಬಲವಿತ್ತು. ಪೌರೋಹಿತ್ಯ ವಹಿಸಿಕೊಳ್ಳಲು ಒಪ್ಪಿದ್ದ ದಲಿತ ಅಧ್ಯಾಪಕ ಮಿತ್ರ ಸಿಂಗ್ರಯ್ಯ ಅವರನ್ನು ಕೆಲವರು ಹೆದರಿಸಿದ್ದರು. ನನ್ನನ್ನೂ ನಿಂದಿಸಿದ್ದರು. ಇದರಿಂದ ಅವರು ಹಿಂದೆ ಸರಿದರು. ಆಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಎಚ್. ರಂಗನಾಥ್ ಅವರೇ ಪೌರೋಹಿತ್ಯ ವಹಿಸಿದರು. ಚನ್ನಪಟ್ಟಣ ತಾಲ್ಲೂಕಿನ ನಮ್ಮೂರು ನಾಗವಾರದಲ್ಲಿ ನಡೆದ ‘ಮೂಢಸಂಪ್ರದಾಯ ವಿರೋಧಿ ಸಮ್ಮೇಳನ’ದಲ್ಲಿ ಮದುವೆಯಾದೆವು. ಯಾವ ಮುಹೂರ್ತವನ್ನೂ ನೋಡಲಿಲ್ಲ’ ಎಂದು ಮೆಲುಕು ಹಾಕಿದರು.

ದುಂದು ವೆಚ್ಚಕ್ಕೆ ಬದಲಾಗಿ ಜನೋಪಯೋಗಿ ಕಾರ್ಯಕ್ಕೆ ಹಣ ಕೊಡಬೇಕೆಂಬ ಧ್ಯೇಯ ಅನುಸರಿಸಿ ನಾಗವಾರದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ 500 ರೂ. ನೀಡಿದೆವು. ಮದುವೆ ನಂತರ ದೇವಸ್ಥಾನಕ್ಕೆ ಹೋಗಲಿಲ್ಲ ಎಂದು ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿದ್ದರು.


ಮೂಢ ನಂಬಿಕೆಗಳನ್ನು ವಿರೋಧಿಸಿ ಸರಳ ಮದುವೆಯನ್ನು ಮಾಡಿಕೊಂಡು, ಗೊಡ್ಡು ಸಂಪ್ರದಾಯಕ್ಕೆ ತೆರೆ ಎಳೆದ ನೆನಪಿಗೆ, ಯುವ ಜನತೆಗೆ ಕುವೆಂಪು ಮಂತ್ರಮಾಂಗಲ್ಯ ಹಾಗೂ ಸರಳ ಮದುವೆಯಾದರೆ ಆಗುವ ಆರ್ಥಿಕ ಲಾಭ. ಗೊಡ್ಡು ಸಂಪ್ರದಾಯದ ಬಗ್ಗೆ ಮುಕ್ತವಾಗಿ ಮಾತನಾಡಲು ಹಲವಾರು ಮುತ್ಸದ್ದಿಗಳು ಬರುತ್ತಿದ್ದಾರೆ. ತಾವೂ ಪಾಲ್ಗೊಂಡು ಅಂದು-ಇಂದು ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಲು ಸೇರಿಕೊಳ್ಳಿ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑