Tel: 7676775624 | Mail: info@yellowandred.in

Language: EN KAN

    Follow us :


ಸಾರ್ವಜನಿಕರ ತೆರಿಗೆ ಹಣವನ್ನು ಜ್ಞಾನಾರ್ಜನೆಗೆ ಬಳಸಬೇಕು ಪ್ರೊ ಕಾಳೇಗೌಡ ನಾಗವಾರ.

Posted date: 01 Aug, 2023

Powered by:     Yellow and Red

ಸಾರ್ವಜನಿಕರ ತೆರಿಗೆ ಹಣವನ್ನು ಜ್ಞಾನಾರ್ಜನೆಗೆ ಬಳಸಬೇಕು ಪ್ರೊ ಕಾಳೇಗೌಡ ನಾಗವಾರ.

ಚನ್ನಪಟ್ಟಣ: ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರಗಳು ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ, ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹಾಗೂ ಅಭಿವೃದ್ಧಿಗಾಗಿ ಬಳಸಬೇಕೆ ವಿನಹ ಯಾವುದೇ ಧರ್ಮದ ದೇವಾಲಯಗಳಿಗೆ ಬಳಸಬಾರದು ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು, ವಿಶ್ರಾಂತ ಪ್ರಾಧ್ಯಾಪಕರು, ಜಾನಪದ ವಿದ್ವಾಂಸರು ಆದ ಡಾ ಕಾಳೇಗೌಡ ನಾಗವಾರ ರವರು ತಿಳಿಸಿದರು. ಅವರು ಸೋಮವಾರ ವಂದಾರಗುಪ್ಪೆ ಗ್ರಾಮದ ಬಳಿ ಇರುವ ಹೊಂಬೇಗೌಡ ಶಿಕ್ಷಣ ಸಂಸ್ಥೆಯ ಕುವೆಂಪು ಪ್ರಥಮ ದರ್ಜೆ ಕಾಲೇಜು ಮತ್ತು ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.


ಡಾ ಬಿ ಆರ್ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಇಂದು ನಾವೆಲ್ಲಾ ಜೀವಿಸುತ್ತಿದ್ದೇವೆ ಸಾರ್ವಜನಿಕರ ತೆರಿಗೆ ಹಣದಿಂದ ದೇವಾಲಯ ಕಟ್ಟಬಾರದು, ಜ್ಞಾನಾರ್ಜನೆಗಾಗಿ ಶಾಲೆಗಳನ್ನು ಕಟ್ಟಬೇಕು, ಆಸ್ಪತ್ರೆಗಳನ್ನು ನಿರ್ಮಿಸಬೇಕು, ಜನರ ಮತ್ತು ರಾಜ್ಯ ರಾಷ್ಟ್ರದ ಅಭಿವೃದ್ಧಿಗಾಗಿ ಬಳಸಬೇಕು. ರಾಷ್ಟ್ರಪತಿ, ಕುಲಪತಿ ಎನ್ನುವುದು ಅವಿವೇಕತನ, ಈ ಪದಗಳು ಗಂಡಸರಿಗೆ ಮಾತ್ರ ಅನ್ವಯವಾಗುತ್ತವೆ, ರಾಷ್ಟ್ರಾಧ್ಯಕ್ಷ ಎನ್ನುವುದು ಸೂಕ್ತ ಪದ, ನಾವು ದೇವಾಲಯದ ಮುಂದೆ ಕ್ಯೂ ನಿಲ್ಲುವುದಲ್ಲಾ, ಗ್ರಂಥಾಲಯದ ಮುಂದೆ ನಿಲ್ಲಬೇಕು ಎಂದರು.


ವಿದ್ಯಾರ್ಥಿಗಳು ಎಲ್ಲಾ ಪ್ರಾಕಾರಗಳನ್ನು ಓದಿಕೊಳ್ಳಬೇಕು ಅಸ್ಪೃಶ್ಯತೆ ಆಚರಣೆ ಮಾಡಬಾರದು. ಅಂಬೇಡ್ಕರ್, ಲೋಹಿಯಾ, ಕರಿಯಪ್ಪ, ಬಸವಲಿಂಗಪ್ಪ ರವಂತವರು ಹುಟ್ಟಬೇಕು. ಕುವೆಂಪು ಮತ್ತು ತೇಜಸ್ವಿ ಯವರ ಕೃತಿಗಳನ್ನು ಓದಬೇಕು.

ಏಕಲವ್ಯ ನ ಬೆರಳು ಕತ್ತರಿಸಿದ ಗುರು, ಸೀತೆ, ದ್ರೌಪದಿ ನಡೆಸಿಕೊಂಡು ಬಂದಂತಹ ಧರ್ಮ ಗ್ರಂಥಗಳು ನಮಗೆ ಬೇಕಾ ಎಂದು ಪ್ರಶ್ನೆ ಮಾಡಿದರು. ಹೆಸರು ಮುಖ್ಯವಲ್ಲ, ಕೆಲಸ ಮುಖ್ಯವಾಗಬೇಕು. ಸಾಹಿತ್ಯ ಎನ್ನುವುದು ಸಮಗ್ರವಾಗಿರಬೇಕು. ಸಾಹಿತ್ಯ ಮತ್ತು ಸಂಸ್ಕೃತಿಗಳ ನಡುವಿನ ಅರ್ಥವನ್ನು ತಿಳಿದುಕೊಳ್ಳಬೇಕು,  ವಿದ್ಯಾರ್ಥಿಗಳು ಸಮಾಜವನ್ನು ಅರಿಯಬೇಕು ಎಂದು ಅರುಹಿದರು.


ನಾವೆಲ್ಲರೂ ಶ್ರಮಜೀವಿಗಳ ಋಣಿಯ ಮಕ್ಕಳು ಎಂದರು. ನೇಗಿಲಯೋಗಿ, ಶೂದ್ರ ತಪಸ್ವಿ ಎಂಬುದರ ವಿಶಾಲ ಅರ್ಥವನ್ನು ತಿಳಿಯಬೇಕು.

ಅಕ್ಕಾ ಮಹಾದೇವಿ ವಚನ ಇಡೀ ವಿಶ್ವದಲ್ಲೇ ಇಲ್ಲ. ಬಸವಣ್ಣ ದಲಿತ ಕೇರಿಗೆ ಹೋಗಿ ಬಂದಾಗ ಬ್ರಾಹ್ಮಣರು ಕುಲಗೆಟ್ಟು ಬಂದಿದ್ದಾನೆಂದು ಬೊಬ್ಬಿಟ್ಟಾಗ ನಾನು ಪುಣ್ಯಾತ್ಮರ ಕೇರಿಗೆ ಹೋಗಿ ಪವಿತ್ರನಾಗಿ ಬಂದಿದ್ದೇನೆ ಎಂದು ಹೇಳಿದರ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿ ಸೆಕೆಂಡುಗಳೂ ಸಹ ಒಳ್ಳೆಯದೇ ಆಗಿವೆ, ಕೆಟ್ಟ ಕಾಲ ಎಂಬುದಿಲ್ಲ, ರಾಹುಕಾಲ ಎಂಬುವುದನ್ನು ನಂಬದೆ ತೋಳ್ಬಲ ಮತ್ತು ತಮ್ಮ ಮನೋಬಲ ನಂಬಿ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಅಂತರರಾಷ್ಟ್ರೀಯ ಜಾನಪದ ಗಾಯಕರಾದ ಅಪ್ಪಗೆರೆ ತಿಮ್ಮರಾಜು ರವರು ಮೂಲ ಜಾನಪದ ಗೀತೆಗಳನ್ನು ವಿಭಿನ್ನವಾಗಿ ಪ್ರಸ್ತುತ ಪಡಿಸಿದರು. ವೇದಿಕೆಯಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ರುದ್ರಪ್ಪ, ಸಂಗ್ರಾಮ ಟಿವಿ ಯ ಪ್ರಧಾನ ಸಂಪಾದಕ ಗೋ ರಾ ಶ್ರೀನಿವಾಸ, ಪ್ರಾಂಶುಪಾಲ ಡಾ ದೊಡ್ಡಸಿದ್ದಯ್ಯ, ಐಟಿಐ ಪ್ರಾಂಶುಪಾಲ ಶಂಕರಲಿಂಗೇಗೌಡ, ಅಧೀಕ್ಷಕ ಜಯರಾಮು, ಉಪನ್ಯಾಸಕರಾದ ಡಾ ರವೀಂದ್ರ, ಡಾ ತೇಜಾವತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಸಂಸ್ಕೃತಿ ಎನ್ನುವುದೇ ನಡವಳಿಕೆ ಡಾ ಬಿ ಟಿ ನೇತ್ರಾವತಿಗೌಡ
ಸಂಸ್ಕೃತಿ ಎನ್ನುವುದೇ ನಡವಳಿಕೆ ಡಾ ಬಿ ಟಿ ನೇತ್ರಾವತಿಗೌಡ

ಚನ್ನಪಟ್ಟಣ: ಸಂಸ್ಕೃತಿ ಎಂಬುದೇ ನಡವಳಿಕೆ, ಆ ನಡವಳಿಕೆ ಎಂಬುದು ನಮ್ಮ ಮನೆಯಲ್ಲೇ ಆರಂಭವಾಗಬೇಕು, ನಾವು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಹೇಗೆ ವರ್ತಿಸಬೇಕು, ಯ

೨೯ರಂದು ಕರ್ನಾಟಕ ಬಂದ್, ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಒಗ್ಗೂಡಿ ಚನ್ನಪಟ್ಟಣ ಬಂದ್ ಗೆ ಕರೆ
೨೯ರಂದು ಕರ್ನಾಟಕ ಬಂದ್, ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಒಗ್ಗೂಡಿ ಚನ್ನಪಟ್ಟಣ ಬಂದ್ ಗೆ ಕರೆ

ಚನ್ನಪಟ್ಟಣ: ಮಂಗಳವಾರ ಅಥವಾ ಗುರುವಾರದಂದು ಚನ್ನಪಟ್ಟಣ ಬಂದ್ ಗೆ ಕರೆ ನೀಡಲು ಉದ್ದೇಶಿಸಲಾಗಿದ್ದು, ೨೯ನೇ ತಾರೀಖಿನ ಶುಕ್ರವಾರ ಕರ್ನಾಟಕ ಬಂದ್ ಆಚ

ಸೆ.30 ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಣೆ
ಸೆ.30 ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಣೆ

ಬೆಂಗಳೂರು:ಸೆ.22: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ ( Valuation Committee) 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾ

ಅಮೇರಿಕಾದ ಖ್ಯಾತ ವೈದ್ಯ ಡಾ ಹೆಚ್ ಕೆ ಮರಿಯಪ್ಪ ರವರಿಗೆ ಗುರುವಾರ ಅಭಿನಂದನೆ
ಅಮೇರಿಕಾದ ಖ್ಯಾತ ವೈದ್ಯ ಡಾ ಹೆಚ್ ಕೆ ಮರಿಯಪ್ಪ ರವರಿಗೆ ಗುರುವಾರ ಅಭಿನಂದನೆ

ಚನ್ನಪಟ್ಟಣ: ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಕೆ ವೀರಣ್ಣಗೌಡ ರ ಸಹೋದರ ಡಾ.ಎಚ್.ಕೆ. ಮರಿಯಪ್ಪ ಅಭಿನಂದನಾ ಸಮಿತ

ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಿ:
ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಿ:

ರಾಮನಗರ; ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗೆ ಸಂಬಂಧಪಟ್ಟ ಉಪ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು

ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ
ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ

ಚನ್ನಪಟ್ಟಣ: ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆಯೊಬ್ಬರು ಅವರದೇ ಹೊಲದ ಪೈಪು ಹೂಳಲು ತೆಗೆದಿದ್ದ ಕಾಲುವೆಯಲ್ಲಿ ಶವವಾಗಿ

ಆಹಾರ ಇಲ್ಲದೆ ಎರಡು ದಿನ ಬದುಕಬಹುದು, ನೀರಿಲ್ಲದೆ ಬದುಕುವುದು ಕಷ್ಟ, ತಾಪಂ ಇಓ
ಆಹಾರ ಇಲ್ಲದೆ ಎರಡು ದಿನ ಬದುಕಬಹುದು, ನೀರಿಲ್ಲದೆ ಬದುಕುವುದು ಕಷ್ಟ, ತಾಪಂ ಇಓ

 ಚನ್ನಪಟ್ಟಣ: ಒಂದೆರಡು ದಿನ ಆಹಾರವಿಲ್ಲದಿದ್ದರೂ ಮನುಷ್ಯ ಬದುಕುತ್ತಾನೆ ಆದರೆ, ನೀರಿಲ್ಲದೇ ಬದುಕಲಾರ. ಆದ್ದರಿಂದ ಜನರಿಗೆ ಶುದ್ಧನೀರು ಪೂರೈಕೆ ಮಾಡುವುದು ನ

ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಮಾರಮ್ಮನ ಹಬ್ಬ
ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಮಾರಮ್ಮನ ಹಬ್ಬ

ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಮಾರಮ್ಮನ ಹಬ್ಬ ಭಕ್ತಿಭಾವದಿಂದ ನೆರವೇರಿತು.

<

ರೋಟರಿ ಕ್ಲಬ್ ವತಿಯಿಂದ ಚಾರಣ
ರೋಟರಿ ಕ್ಲಬ್ ವತಿಯಿಂದ ಚಾರಣ

ಚನ್ನಪಟ್ಟಣ : ಜಂಜಾಟದ ಬದುಕಿನಲ್ಲಿ ಮನಷ್ಯರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡು ಬಹು ಪ್ರಮುಖವಾಗಿದ್ದು ಇವುಗಳನ್ನು ಕಾಪಾಡಿಕೊಳ್ಳುವುದು ಕೋಟಿ ಸಂಪಾದನೆ

ಸೇವೆಯ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಿ ನಿವೃತ್ತ ಶಿಕ್ಷಕ ವಸಂತ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ  ಪ್ರೊ. ಜಯಪ್ರಕಾಶ್ ಗೌಡ ಅಭಿಮತ
ಸೇವೆಯ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಿ ನಿವೃತ್ತ ಶಿಕ್ಷಕ ವಸಂತ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಪ್ರೊ. ಜಯಪ್ರಕಾಶ್ ಗೌಡ ಅಭಿಮತ

ಚನ್ನಪಟ್ಟಣ: ಜನ ಮೆಚ್ಚುವಂತಹ ಹಾಗೂ ಶಾಶ್ವತವಾಗಿ ಉಳಿಯುವಂತಹ ಒಳ್ಳೆಯ ಸೇವಾ ಕೆಲಸಗಳನ್ನು ಮಾಡಿ ನಮ್ಮ ಜೀವನವನ್ನು   ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮಂಡ್ಯ

Top Stories »  


Top ↑