Tel: 7676775624 | Mail: info@yellowandred.in

Language: EN KAN

    Follow us :


ತೌಟನಹಳ್ಳಿ ಬಳಿ ಹತ್ತಾರು ಎಕರೆ ಸರ್ಕಾರಿ ಗುಡ್ಡೆ, ದಲಿತರ ಜಮೀನು ಒತ್ತುವರಿ ಮಾಡಿದ ಬಿಜೆಪಿ ಮುಖಂಡ, ಕ್ರಮಕ್ಕೆ ಆಗ್ರಹ

Posted date: 07 Nov, 2023

Powered by:     Yellow and Red

ತೌಟನಹಳ್ಳಿ ಬಳಿ ಹತ್ತಾರು ಎಕರೆ ಸರ್ಕಾರಿ ಗುಡ್ಡೆ, ದಲಿತರ ಜಮೀನು ಒತ್ತುವರಿ ಮಾಡಿದ ಬಿಜೆಪಿ ಮುಖಂಡ, ಕ್ರಮಕ್ಕೆ ಆಗ್ರಹ

ಚನ್ನಪಟ್ಟಣ: ತಾಲ್ಲೂಕಿನ ಮಳೂರು ಹೋಬಳಿ ಯ ತೌಟನಹಳ್ಳಿ ಗ್ರಾಮದ ಸರ್ವೇ ನಂಬರ್ ೭೪ ರಲ್ಲಿ ೧೭೦ ಎಕರೆ ಸರ್ಕಾರಿ ಜಮೀನು ಇದ್ದು, ಸ್ಥಳೀಯ ರೈತರ ಜಾನುವಾರುಗಳಿಗೆ ಹಾಗೂ ಕಾಡು ಪ್ರಾಣಿಗಳಿಗೆ ಆಶ್ರಯ ತಾಣವಾಗಿತ್ತು. ಜೊತೆಗೆ ಸಮೃದ್ಧವಾಗಿ ಬೆಳೆದು ನಿಂತಿದ್ದ ವಿವಿಧ ಜಾತಿಯ ಗಿಡ-ಮರಗಳಿಂದ ವಾತಾವರಣಕ್ಕೂ ಪೂರಕವಾಗಿತ್ತು. ಇಂತಹ ಸರ್ಕಾರಿ ಗುಡ್ಡೆಯನ್ನು ಹಾಗೂ ಸ್ಥಳೀಯ ದಲಿತರ ಜಮೀನುಗಳನ್ನು ತೌಟನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಪ್ರಶಾಂತ್ ಟಿ ಪಿ ಎಂಬ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದಾನೆ ಎಂದು ಭೂಮಿ ಕಳೆದುಕೊಂಡ ದಲಿತರು ಹಾಗೂ ಗ್ರಾಮದ ಕೆಲ ಮುಖಂಡರು ದೂರಿದ್ದಾರೆ.


ತೌಟನಹಳ್ಳಿ, ಕನ್ನಸಂದ್ರ ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೇ ನಂಬರ್ ೭೪ ರಲ್ಲಿ ೧೭೦ ಎಕರೆ ಭೂಮಿ ಇದ್ದು, ೧೩೮/೧ ರಲ್ಲಿ ೨೬ ಗುಂಟೆ ೧೩೮/೨ ರಲ್ಲಿ ೨೭ ಗುಂಟೆ, ೧೩೯/೩ ರಲ್ಲಿ ೨೭ ಗುಂಟೆ ಮತ್ತು ೧೩೯ ರ ಸರ್ವೇ ನಂಬರ್ ನಲ್ಲಿ ೨ ಎಕರೆ ಜಮೀನನ್ನು ತೌಟನಹಳ್ಳಿ ಗ್ರಾಮದ ದಲಿತರಿಗೆ ೧೯೬೪ ರಲ್ಲಿ ಮಂಜೂರಾಗಿದೆ. ಅದೇ ಭೂಮಿಯಲ್ಲಿ ಸಯ್ಯದ್ ಅಬಾಜ್ ಎಂಬುವವರಿಗೆ ಸೇರಿದ ಸರ್ವೇ ನಂಬರ್ ೧೩೯ ರಲ್ಲಿ ೩೦ ಗುಂಟೆ ಜಮೀನು ಇದ್ದು ಆ ಜಮೀನನ್ನು ಪ್ರಶಾಂತ್ ಟಿ ಪಿ ರವರು ಈ ವರ್ಷದ ಆರಂಭದಲ್ಲಿ ಖರೀದಿಸಿದ್ದು, ಈ ಮೇಲಿನ ದಲಿತರ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು, ೭೪ ರ ಸರ್ವೇ ನಂಬರಿನಲ್ಲಿರುವ ಸರ್ಕಾರಿ ಗುಡ್ಡೆಯಲ್ಲಿ ಹತ್ತಕ್ಕೂ ಹೆಚ್ಚು ಎಕರೆ ಜಮೀನನ್ನು ಜೆಸಿಬಿ ಮೂಲಕ ಗಿಡಮರಗಳನ್ನು ಉರುಳಿಸಿ, ಮಟ್ಟ ಮಾಡಿಕೊಂಡಿದ್ದಾರೆ.


ದಲಿತರಾದ ಕುನ್ನಯ್ಯ, ವೆಂಕಟಯ್ಯ ಮತ್ತು ಮರಿದಾಸಯ್ಯ ಎಂಬುವವರ ತಂದೆಯವರಾದ ಕರಿಯಯ್ಯ ರವರಿಗೆ ಹಾಗೂ ತಿಮ್ಮಯ್ಯ ರವರಿಗೆ ಸರ್ಕಾರದಿಂದ ಮಂಜೂರಾದ ಭೂಮಿಯಾಗಿದ್ದು, ವ್ಯವಸಾಯ ಮಾಡಿಕೊಂಡಿದ್ದರು. ಮಾವಿನ ಮರಗಳು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಬೆಳೆಸಲಾಗಿತ್ತು. ಕೇವಲ ೩೦ ಗುಂಟೆ ಜಮೀನನ್ನು ವರ್ಷದ ಆರಂಭದಲ್ಲಿ ಖರೀದಿ ಮಾಡಿದ್ದು, ದಲಿತರ ಜಮೀನು ಒತ್ತುವರಿ ಜೊತೆಗೆ ಸರ್ಕಾರಿ ಗುಡ್ಡೆಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾನೆ. ವಿಚಿತ್ರವೆಂದರೆ ಮೂಲತಃ ಸರ್ವೇ ನಂಬರ್ ೭೪ ರಿಂದ ೧೩೮ ಮತ್ತು ೧೩೯ ಆಗಿದ್ದು, ಪ್ರಶಾಂತ್ ಟಿ ಪಿ ಖರೀದಿಸಿರುವ ೩೦ ಗುಂಟೆ ಜಮೀನಿಗೆ ೧೫೮ ಆಗಿರುವುದು ಸಖೇದಾಶ್ಚರ್ಯವಾಗಿದೆ. ಕಾರಣ ೧೫೮ ರ ಸರ್ವೇ ನಂಬರ್ ಹೊನ್ನನಾಯಕನಹಳ್ಳಿ ಗ್ರಾಮದ ಸರ್ವೇ ನಂಬರ್ ಆಗಿದೆ. ಅಲ್ಲಿಯ ಸರ್ವೇ ನಂಬರ್ ಭೂಮಿಯನ್ನು ಇಲ್ಲಿ ಎಂದು ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.


ಈ ಸಂಬಂಧ ತಮ್ಮ ಜಮೀನಿನಲ್ಲೇ ಹೇಳಿಕೆ ನೀಡಿದ ದಲಿತರು, ಐದಾರು ದಶಕಗಳಿಂದ ನಮ್ಮ ಪೂರ್ವಜರು, ನಾವುಗಳು ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಸರ್ಕಾರಕ್ಕೂ ಅರ್ಜಿ ನೀಡಿದ್ದೇವೆ. ಪ್ರಶಾಂತ್ ಟಿ ಪಿ ರವರು ದರ್ಪದಿಂದ ನಮ್ಮೆಲ್ಲರಿಗೂ ಬೆದರಿಕೆ ಹಾಕಿ, ನಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜೊತೆಗೆ ಹತ್ತು ಎಕರೆಗೂ ಹೆಚ್ಚು ಸರ್ಕಾರಿ ಗುಡ್ಡೆಯಲ್ಲಿದ್ದ ಗಿಡ-ಮರಗಳನ್ನು ಮಾರಣಹೋಮ ಮಾಡಿ, ಜಮೀನು ಕಬಳಿಸಿದ್ದಾರೆ. ಕೇಳಿದರೆ ಕೊಟ್ಟಷ್ಟು ತೆಗೆದುಕೊಂಡು ಸಹಿ ಮಾಡಿ, ಇಲ್ಲದಿದ್ದರೆ ಯಾವುದೋ ಪ್ರಾಣಿ ತಿಂದು ಹಾಕಿದೆ ಎನ್ನುವಂತೆ ಮಾಡಿಬಿಡುತ್ತೇನೆ ಎಂದು ಧಮಕಿ ಹಾಕುತ್ತಾರೆ. ಗುಡ್ಡೆ ಒತ್ತುವರಿ ಮಾಡಿರುವುದರಿಂದ ಚಿರತೆಗಳು ಗ್ರಾಮದೊಳಗೆ ಬರುತ್ತಿವೆ. ಜೀವಜಲ, ಪ್ರಾಣಿ, ಪಕ್ಷಿ ಸಂಕುಲಗಳಿಗೆ ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಪರಿಶೀಲನೆ ನಡೆಸಿ, ನಮ್ಮ ಜಮೀನನ್ನು ನಮಗೆ ಕೊಡಿಸಬೇಕು. ಸರ್ಕಾರಿ ಗುಡ್ಡೆ ಒತ್ತುವರಿ ಮಾಡಿರುವ ಪ್ರಶಾಂತ್ ಟಿ ಪಿ ರವರಿಗೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಬೇಕು, ಪಹಣಿ ಜಮೀನಿನಲ್ಲಿ, ಅವನಿಗೆ ಅನುಕೂಲವಾಗುವಂತೆ ನರೇಗಾ ಕಾಮಗಾರಿಯಲ್ಲಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಇದರ ಬಗ್ಗೆಯೂ ಸಂಬಂಧಿಸಿದ ಅಧಿಕಾರಿಗಳ ವಿಚಾರಣೆ ನಡೆಸಬೇಕು. ಈಗಾಗಲೇ ಜನತಾ ದರ್ಶನ ದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕರಾದ ಹೆಚ್ ಡಿ ಕುಮಾರಸ್ವಾಮಿ ಯವರಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದು ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.


*ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ, ತಹಶಿಲ್ದಾರ್*

ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಈಗಾಗಲೇ ಸೂಚನೆ ನೀಡಿದ್ದಾರೆ. ದಾಖಲೆಗಳನ್ನು ಪರಿಶೀಲನೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶೀಘ್ರವಾಗಿ ನಾನೇ ತೆರಳಿ, ಪರಿಶೀಲನೆ ನಡೆಸಿ, ತಪ್ಪಿತಸ್ಥರೆಂದು ಕಂಡುಬಂದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸುತ್ತೇನೆ.

*ಮಹೇಂದ್ರ, ತಹಶಿಲ್ದಾರ್ ಚನ್ನಪಟ್ಟಣ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆ ಬಹಳ ಉಪಯುಕ್ತ ಕೂಡಲೇ ನೋಂದಾಯಿಸಿಕೊಳ್ಳಿ

ರಾಮನಗರ: ಕರ್ನಾಟಕ ಸರ್ಕಾರವು ಸಹಕಾರ ಸಂಘಗಳ ನೌಕರರು, ಖಾಸಗಿ ನೌಕರರು ಹಾಗೂ 30 ಸಾವಿರ ಹಾಗೂ ಅದಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಸಹಕಾರ ಸಂಘ

ಶಿಕ್ಷಣ ಪಡೆದರೆ ಜೀತ ಪದ್ಧತಿ ಅಳಿಸಲು ಸಾಧ್ಯ : ನ್ಯಾಯಾಧೀಶೆ ಅನಿತಾ ಎನ್. ಪಿ.
ಶಿಕ್ಷಣ ಪಡೆದರೆ ಜೀತ ಪದ್ಧತಿ ಅಳಿಸಲು ಸಾಧ್ಯ : ನ್ಯಾಯಾಧೀಶೆ ಅನಿತಾ ಎನ್. ಪಿ.

ರಾಮನಗರ: ಉದ್ದೇಶ ಪೂರ್ವಕವಾಗಿ ಹಾಗೂ ವ್ಯಕ್ತಿಯೋರ್ವರನ್ನು ತಮ್ಮ ಅವಶ್ಯಕತೆಗನುಗುಣವಾಗಿ ಬಳಸಿಕೊಳ್ಳಲು ಸಾಲ ಕೊಡುವುದು ಅಥವಾ ಜೀತದಾಳಾಗಿ ದುಡಿಮೆ ಮಾಡಲು ಇರ

ಫೆ. 11 ರಂದು ಎಲೇಕೇರಿ ಶ್ರಿ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವ
ಫೆ. 11 ರಂದು ಎಲೇಕೇರಿ ಶ್ರಿ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವ

ರಾಮನಗರ:ಚನ್ನಪಟ್ಟಣ; ಚನ್ನಪಟ್ಟಣ ನಗರದ ಎಲೇಕೇರಿ (ಗೆಂಡೆಮಡು)ಯಲ್ಲಿನ  ಶ್ರೀ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವವು ಫೆ.10 ಮತ್ತು

Top Stories »  


Top ↑