Tel: 7676775624 | Mail: info@yellowandred.in

Language: EN KAN

    Follow us :


ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

Posted date: 12 Feb, 2024

Powered by:     Yellow and Red

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚುನಾವಣೆ ನಂತರ ಮಾತನಾಡುತ್ತೇನೆ ಎಂದು ಈ ಹಿಂದೆ ಮಾತನಾಡಿದ್ದ ಗ್ರೇಟ್ ಬೆಂಗಳೂರು ಜಿಲ್ಲಾ ಹೆಸರನ್ನು ಮತ್ತೇ ಮುನ್ನಲೆಗೆ ತಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ರಾಮನಗರ ಜಿಲ್ಲೆಗೆ ನೂತನ ಅಶ್ವಮೇಧ ಬಸ್‌ಗಳ ಸಂಚಾರ ಉದ್ಘಾಟನೆಯನ್ನು ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ನೆರವೇರಿಸಿ ಅವರು ಮಾತನಾಡಿದರು.


ಬಹುತೇಕ ರಾಮನಗರ ಜಿಲ್ಲೆಯವರಲ್ಲರೂ ಬೆಂಗಳೂರಿನವರೇ ಆಗಿದ್ದಾರೆ. ಕೆಂಗಲ್ ಹನುಮಂತಯ್ಯ, ಶ್ರೀ ಬಾಲಗಂಗಾಧರನಾಥ ಸ್ವಾಮಿಜಿಗಳು, ಶ್ರೀ ಶಿವಕುಮಾರ ಸ್ವಾಮೀಜಿಗಳು ಸೇರಿದಂತೆ ಹಲವಾರು ಗಣ್ಯರು, ತಜ್ಞರು, ರಾಜಕಾರಣಿಗಳು ಇದೇ ಜಿಲ್ಲೆಯವರು. ನಾವೆಲ್ಲರೂ ಬೆಂಗಳೂರಿನ ಒಂದು ಭಾಗ. ಈ ವಿಚಾರವಾಗಿ ಚುನಾವಣೆ ನಂತರ ಚರ್ಚೆ ಮಾಡಿ ರೂಪುರೇಷೆ ನೀಡಲಾಗುವುದು ಎಂದು ಡಿ.ಸಿ.ಎಂ. ಶಿವಕುಮಾರ ತಿಳಿಸಿದರು.


*ಸುದ್ದಿ ಮತ್ತು ಜಾಹಿರಾತಿಗಾಗಿ  ಸಂಪರ್ಕಿಸಿ:ಮೊ. ನಂ. 9742424949*


ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ


ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲು ಸಂಸದ ಡಿ.ಕೆ. ಸುರೇಶ್ ಅವರು ಸಂಕಲ್ಪ ಮಾಡಿದ್ದಾರೆ. ಅವರ ಯೋಜನೆಗಳನ್ನು ಜಾರಿಗೊಳಿಸಲು ಉಪಮುಖ್ಯಮಂತ್ರಿಯಾದ ನಾನು ಇಲ್ಲಿನ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತೇವೆ. ಬಿಡದಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಪರಿವರ್ತಿಸುತ್ತಿದ್ದೇವೆ. ಬಿಡದಿ ಹಾಗೂ ಆನೇಕಲ್ ವರೆಗೂ ಮೆಟ್ರೋ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ರಾಮನಗರ ಜಿಲ್ಲೆಗೆ ಯಾವ ಯಾವ ಇಲಾಖೆಗಳಲ್ಲಿ ಏನೆಲ್ಲಾ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದರು.


ತಮಿಳುನಾಡಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದ್ದರು. ನಮ್ಮ ಸರ್ಕಾರ ಶಕ್ತಿ ಯೋಜನೆ ಮೂಲಕ ಇಡೀ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಬರಿದಾಗುತ್ತವೆ ಎಂದು ಹೇಳುತ್ತಿದ್ದರು. ಈಗ ಪ್ರತಿ ತಿಂಗಳು ಮಹಿಳೆಯರ ಪ್ರಯಾಣದ ಹಣವನ್ನು ಸರ್ಕಾರ ಕಟ್ಟುತ್ತಿದೆ. ಬೆಳಗಾವಿ, ಹುಬ್ಬಳ್ಳಿ ಹಾಗೂ ಇತರೆ ಭಾಗದ ಜಿಲ್ಲೆಗಳಿಂದ ಬೆಂಗಳೂರಿಗೆ ಒಂದು ಬಾರಿ ಓಡಾಡಲು 1500-2000 ರೂಪಾಯಿ ಬೇಕಾಗುತ್ತದೆ. ಈ ಯೋಜನೆಯಿಂದ ಅವರಿಗೆ ಅಷ್ಟೂ ದುಡ್ಡು ಉಳಿಯುತ್ತದೆ. ಕೆಲಸಕ್ಕೆ ಓಡಾಡುವವರಿಗೂ ಈ ಯೋಜನೆ ಬಹಳ ಅನುಕೂಲವಾಗಿದೆ ಎಂದು ಹೇಳಿದರು.


ರಾಜ್ಯದಲ್ಲಿ ಬಸ್‌ಗಳ ಕೊರತೆ ನೀಗಿಸಲು 1 ಸಾವಿರ ನೂತನ ಬಸ್‌ಗಳ ನಿಯೋಜನೆ ಮಾಡಲಾಗುತ್ತಿದೆ. ನಮ್ಮ ಶಕ್ತಿ ಯೋಜನೆಯಿಂದ ದೇವಾಲಯಗಳಲ್ಲಿ ಹುಂಡಿಗಳು ತುಂಬುತ್ತಿವೆ. ಪ್ರವಾಸಿ ತಾಣಗಳಲ್ಲಿ ಹೋಟೆಲ್, ವ್ಯಾಪಾರೋದ್ಯಮಗಳಲ್ಲಿ ವ್ಯಾಪಾರ ಹೆಚ್ಚಾಗುತ್ತಿವೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರೂ ಈ ಯೋಜನೆಯನ್ನು ಶ್ಲಾಘಿಸಿದ್ದರು. ಮಹಿಳೆಯರು ನನ್ನ ಹಾಗೂ ಸಿದ್ದರಾಮಯ್ಯ ಅವರ ಹೆಸರಿನಲ್ಲೂ ಪೂಜೆ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದರು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.


ನಾವು ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ಐದಾರು ತಿಂಗಳಲ್ಲಿ ಈ ರೀತಿ ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ ಯಾವುದಾದರೂ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಸರ್ಕಾರವನ್ನು ಹೊಗಳಿದರು.

ರಾಮಲಿಂಗಾರೆಡ್ಡಿ ಅವರು ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಕೂಡ ತಮ್ಮ ಸಾಕ್ಷಿ ಗುಡ್ಡೆ ಬಿಟ್ಟುಹೋಗಲು ರಾಮನಗರಕ್ಕೆ 100 ನೂತನ ಅಶ್ವಮೇಧ ಬಸ್ ಗಳನ್ನು ಮಂಜೂರಾತಿ ಮಾಡಿದ್ದಾರೆ. ಇಂದು 25 ಬಸ್ ಗಳನ್ನು ಉದ್ಘಾಟನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಬಸ್ ಗಳನ್ನು ವ್ಯವಸ್ಥೆ ಮಾಡಲಾಗುವುದು. ಬೇರೆ ಬಸ್ ಗಳಿಗಿಂತ ಈ ಬಸ್ ಸ್ವಲ್ಪ ಎತ್ತರವಾಗಿದೆ. ಎಲ್ಲಾ ಪ್ರಯಾಣಿಕರಿಗೆ ಅನುಕೂಲವಾಗಲು ಅನೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ದೇಶದಲ್ಲಿ ನಮ್ಮ ರಾಜ್ಯದ ಸಾರಿಗೆ ವ್ಯವಸ್ಥೆ ಮಾದರಿಯಾಗಿದೆ ಎಂದರು.


ರಾಮಲಿಂಗಾ ರೆಡ್ಡಿ ಅವರು ಸಚಿವರಾಗಿ ಸಾರಿಗೆ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ, ಈ ಭಾಗದ ಶಾಸಕನಾಗಿ ಅವರಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ. ರಾಮಲಿಂಗಾ ರೆಡ್ಡಿ ಅವರ ಬಳಿ ಅತ್ಯುತ್ತಮ ಅಧಿಕಾರಿಗಳ ತಂಡವಿದೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಸಾರಿಗೆ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ. ಸುರೇಶ್, ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಎಸ್.ಆರ್. ಶ್ರೀನಿವಾಸ್ ಅವರು ಮಾತನಾಡಿದರು.


ಕಾರ್ಯಕ್ರಮದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಇಕ್ಬಾಲ್ ಹುಸೇನ್, ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಎಚ್.ಸಿ. ಬಾಲಕೃಷ್ಣ, ರಾಮನಗರ ನಗರಸಭೆಯ ಅಧ್ಯಕ್ಷರಾದ ವಿಜಯಕುಮಾರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. 


ಗೋ. ರಾ. ಶ್ರೀನಿವಾಸ...

ಮೊ. ನಂ.- 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑