Tel: 7676775624 | Mail: info@yellowandred.in

Language: EN KAN

    Follow us :


ಮುಖ್ಯಮಂತ್ರಿ ತವರಲ್ಲಿ ಮೂಲಭೂತ ಸೌಕರ್ಯವಿಲ್ಲದ

Posted date: 31 Aug, 2018

Powered by:     Yellow and Red

ಮುಖ್ಯಮಂತ್ರಿ ತವರಲ್ಲಿ ಮೂಲಭೂತ ಸೌಕರ್ಯವಿಲ್ಲದ

ಸಾರ್ವಜನಿಕ ಆಸ್ಪತ್ರೆ ಮುಖ್ಯಮಂತ್ರಿ ತವರು ಚನ್ನಪಟ್ಟಣದಲ್ಲಿ ಸಾರ್ವ ಜನಿಕ ಆಸ್ಪತ್ರೆ ಸಿಬ್ಬಂದಿ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ. ಸದ್ಯ ಎಲ್ಲಾ ಹುದ್ದೆಗಳು ಸೇರಿ ತೊಂಭತ್ತೆ ರಡು ಹುದ್ದೆಗಳಿರಬೇಕಾಗಿತ್ತು, ಆದರೆ ಇರುವುದು ಕೇವಲ ಅರವತ್ಮೂರು ಹುದ್ದೆ ಮಾತ್ರ ಇನ್ನು
ಇಪ್ಪ ತ್ತೊಂಭತ್ತು ಹುದ್ದೆಗಳು ಖಾಲಿ ಇವೆ.

ಎಲ್ಲಾ ಔಷಧಗಳು ದೊರೆಯುವುದಿಲ್ಲ ಜನೌಷಧ ಮಳಿಗೆಯು ಸೇರಿ ಎರಡು ಮೆಡಿಕಲ್ ಅಂಗಡಿಗಳಿದ್ದರು ಇದ್ದರೂ ಸಹ ಎಲ್ಲಾ ಔಷಧಗಳು ಇಲ್ಲಿ ದೊರೆಯುವುದಿಲ್ಲ. ಬಹುತೇಕ ರೋಗಿಗಳಿಗೆ ಆಸ್ಪತ್ರೆಯ ಆವರಣದಲ್ಲೇ ಇರುವ ಖಾಸಗಿ ಮೆಡಿಕಲ್ ಅಂಗಡಿಗೆ ಚೀಟಿ ಬರೆದುಕೊಡುವ ಪರಿಪಾಠ ಹಲವು ವೈದ್ಯರುಗಳಿಗೆ ನಿತ್ಯ ಕಾಯಕವಾಗಿದೆ.

ಕಸ ಎತ್ತದ ಗುತ್ತಿಗೆದಾರ ಆಸ್ಪತ್ರೆಯ ಆವರಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯೇ ಬಿದ್ದಿದ್ದು ಅದನ್ನು ನಗರಸಭೆಗೆ ತಲುಪಿಸುವ ಸಲುವಾಗಿಯೆ ಆಸ್ಪತ್ರೆ ವತಿಯಿಂದ ಗುತ್ತಿಗೆದಾರರೊ ಬ್ಬರಿಗೆ ಗುತ್ತಿಗೆ ನೀಡಲಾಗಿದೆಯಾದರು ಅದನ್ನು ವ್ಯವಸ್ಥಿ ತವಾಗಿ ವಿಲೇವಾರಿ ಮಾಡದೆ ಆಸ್ಪತ್ರೆಯ ಸುತ್ತಲು ಅಲ್ಲಲ್ಲಿ ರಾಶಿಯಾಗಿ ಹಾಕಿದ್ದು ನಾಯಿಗಳು ಕೆರೆದು ಮತ್ತಷ್ಟು ಗಬ್ಬೆಬ್ಬಿಸುತ್ತಿವೆ.

ಬೆಳದು ನಿಂತ ಗಿಡಗಳು ಆಸ್ಪತ್ರೆಯ ಆವರಣದ ಸುತ್ತ ಎಲ್ಲೆಲ್ಲಿ ಸಂದಿಗೊಂದಿ ಗಳು, ಕಾಂಪೌಂಡ್ ಮತ್ತು ಕಟ್ಟಡದ ತಳಪಾಯವೂ
ಸೇರಿದಂತೆಅಲ್ಲೆಲ್ಲಾ ಕಸದ ರಾಶಿಯ ಜೊತೆಗೆ ಗಿಡಗಂಟೆಗಳು ಬೆಳೆದು ನಿಂತಿದ್ದು ಸಂಜೆಗತ್ತಲಲ್ಲಿರೋಗಿಗಳಲ್ಲದೆ ಸಿಬ್ಬಂದಿಯು ಸಹ ತಿರುಗಾಡಲು ಹಿಂಜರಿಯುವಷ್ಟು ಗಿಡಗಳು ಬೆಳೆದು ನಿಂತಿವೆ.
ವಸತಿಗಳ ಬಳಿ ಗಬ್ಬು ನಾರುತ್ತಿರುವ ಕಸ ಆಸ್ಪತ್ರೆಯ ಆವರಣದಲ್ಲೆ ಇರುವ ಸಿಬ್ಬಂದಿ ವಸತಿ ಗೃಹಗಳ ಬಳಿಯಂತು, ಉಂಡು ಬಿಸಾಡಿದ ತಟ್ಟೆಗಳು, ಪ್ಲಾಸ್ಟಿಕ್ ಲೋಟಗಳು, ಮರದಿಂದ ಉದುರಿದ ಎಲೆ ಗಳು ಸೇರಿದಂತೆ ಗಿಡಗಳು ಬೆಳೆದು ನಿಂತಿದ್ದು, ಅಲ್ಲಿ ವಾಸಿಸುವ
ಸಿಬ್ಬಂದಿಯು ಸಹ ಮೌನಕ್ಕೆ ಶರಣಾಗಿರುವುದು ಗುತ್ತಿಗೆದಾರ ಮತ್ತು ಅಧಿಕಾರಿಗಳ ಗೌಪ್ಯ ಒಡಂಬಡಿ ಕೆಯೇನಾದರು ಇದೆಯೇ ಎಂಬ ಅನುಮಾನ ಕಾಡುತ್ತಿದೆ.
ಆಸ್ಪತ್ರೆಯ ಮುಂದಿನ ಚರಂಡಿ ದುಸ್ಥಿತಿ ಆಸ್ಪತ್ರೆಯ ಮುಂದೆ ತೆರೆದ ಚರಂಡಿಯಿದ್ದು ಕಸ ಕಡ್ಡಿ ತುಂಬಿ ಕೊಳೆತು ನಾರುತ್ತಿರುವುದರಿಂದ ಅಲ್ಲಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿ ಸೊಳ್ಳೆಗಳ ಆವಾಸ ಸ್ಥಾನವಾಗಿ ರೋಗ ವಾಸಿಯಾಗುವ ಜಾಗದಲ್ಲಿ ರೋಗಿಗಳಷ್ಟೆ ಅಲ್ಲದೆ
ಅವರ ಜೊತೆ ಬರುವ ಪೋಷಕರಿಗೂ ರೋಗ ಹರಡು ವಂತಾಗಿದೆ.

ಆಸ್ಪತ್ರೆಯ ಶೌಚಾಲಯ ಅಬ್ಬಾ..! ಆಸ್ಪತ್ರೆಯ ಒಳಗಿನ ಯಾವ ವಾರ್ಡಗಳ ಶೌಚಾಲ ಯಕ್ಕೆ ಹೋದರು, ಗಬ್ಬೆದ್ದು ನಾರುತ್ತಿರುವುದು ಕಣ್ಣು
ಮತ್ತು ಮೂಗಿಗೆ ರಾಚುತ್ತದೆ. ರೋಗಿಗಳಿರಲಿ, ಆರೋಗ್ಯ ವಂತ ವ್ಯಕ್ತಿಗಳು ಹೋದರೂ ಸಹ ಅಂದೇ ರೋಗಿಯಾಗುವು ದರಲ್ಲಿ ಅನುಮಾನವೇ ಇಲ್ಲ. ಪ್ರತಿಯೊಂದು ಶೌಚಾ ಲಯಗಳಲ್ಲೂ ಕಂಡುಬರುವ ಸಾಮಾನ್ಯ ದೃಶ್ಯವೆಂದರೆ ಅರ್ದಂಬರ್ದ ಬಾಗಿಲುಗಳು, ನೀರು
ನಿಂತು ಕೊಳೆ ಕಟ್ಟಿ ಕಿತ್ತೋಗಿರುವ ಟೈಲ್ಸ್‍ಗಳು, ಸದಾ ನೀರು ಸೋರುವ ನಲ್ಲಿಗಳು, ಮುರಿದು ಹೋಗಿರುವ ಕಕ್ಕಸ್ಸು ಗುಂಡಿಯ ಮುಚ್ಚಳಗಳು ಹೀಗೆ ಹತ್ತುಹಲವು ರೋಗ ಹರಡುವ ಕೊಳಕು ಸಾಮಗ್ರಿಗಳು ಆಸ್ಪತ್ರೆಯ ಒಳಗೆ ಇರುವುದು ಆರೋಗ್ಯ ಇಲಾಖೆಗೆ ಹಿಡಿದ ಕೈಗನ್ನಡಿ.
ಅಧೀಕ್ಷಕರೇ ಮೊದಲು ಇದನ್ನು ಸರಿಪಡಿಸಿ. ಬಹುತೇಕ ವೈದ್ಯರು, ಬರುವ ರೋಗಿಗಳಿಗೆ ಇಲ್ಲಿ ವ್ಯವಸ್ಥೆ ಸರಿಯಿಲ್ಲ, ನೀವು ಇಷ್ಟು ಟೈಂ ಗೆ ಇಂತಹ ಆಸ್ಪತ್ರೆಗೆ ಬನ್ನಿ (ಬಹುತೇಕ ರೋಗಿಗಳ ದೂರು) ಎಂದು ಹೇಳಿ. ಖಾಸಗಿ ಆಸ್ಪತ್ರೆಯಲ್ಲಿ ಹಣ ಕೀಳುವ ದಂಧೆಗೆ ದಯವಿಟ್ಟು ಕಡಿವಾಣ ಹಾಕಿರಿ, ಆಸ್ಪತ್ರೆಯಲ್ಲಿ ಕೊರತೆಯಿದ್ದರೆ ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ವೈವಸ್ಥೆ ಸರಿಪಡಿಸಿಕೊಳ್ಳಬೇಕೆ ವಿನಹ ಬಡ ರೋಗಿಗಳ ಸುಲಿಗೆ ಮಾಡದಂತೆ ಇನ್ನಾದರು ಎಚ್ಚರವಹಿಸಿ.

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಿ ಸದ್ಯ ಈಗ ಬೇಕಾಗಿರುವ ಒಟ್ಟು ಹುದ್ದೆಗಳು ತೊಂಭ ತ್ತೆರಡು, ಈಗಿರುವ ಒಟ್ಟು ಹುದ್ದೆಗಳು ಅರವತ್ಮೂರು ಅಂದರೆ ಇಪ್ಪತೊಂಭತ್ತು ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಹಿರಿಯ ತಜ್ಞರು ಒಂದು, ದ್ವಿತೀಯ ದರ್ಜೆ
ಸಹಾಯಕರು ಒಂದು. ದ್ವಿತೀಯ ದರ್ಜೆ ಸಹಾಯಕ ಬೆರಳಚ್ಚುಗಾರರು ಒಂದು. ಹಿರಿಯ ಫಾರ್ಮಾಸಿಸ್ಟ್ ಒಂದು ಹುದ್ದೆ. ಶುಶ್ರೂಷಕ ಅಧೀಕ್ಷಕರು ದರ್ಜೆ 1 ದರ್ಜೆ 2 ಒಟ್ಟು ಎರಡು. ಶುಶ್ರೂಷಕ ದಾದಿಯರು ಮೂರು ಹುದ್ದೆ. ವಾಹನ ಚಾಲಕರ ಹುದ್ದೆ ಒಂದು. ಗ್ರೂಪ್ ಡಿ ಅಡುಗೆ
ಸಹಾಯಕರು ಸೇರಿದಂತೆ ಹದಿನೇಳು. ಇಸಿಜಿ ತಜ್ಞರ ಹುದ್ದೆ ಒಂದು. ಮತ್ತು ಅಡುಗೆಯವರು ಒಂದು. ಈ ಹುದ್ದೆಗಳನ್ನು ಮುಖ್ಯಮಂತ್ರಿ ಗಳ ಗಮನಕ್ಕೆ ತಂದು ಭರ್ತಿ ಮಾಡುವ ಮೂಲಕ ಆಸ್ಪತ್ರೆಗೆ ಕಾಯಕಲ್ಪ ಕೊಟ್ಟರೆ ಖಾಸಗಿ ಆಸ್ಪತ್ರೆಗಳಿಗೆ ಈ ಆಸ್ಪತ್ರೆ ಪೈಪೋಟಿ ನೀಡುವುದಲ್ಲದೆ ತಾಲ್ಲೂಕಿನಲ್ಲಿ ಒಳ್ಳೆಯ ಹೆಸರುಗಳಿಸಬಹುದು. 

ಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳಾದ ಕೃಷ್ಣಪ್ಪ ನವರು ಈ ಕಡೆ ವಿಶೇಷ ಗಮನ ಹರಿಸಿದರೆ ಬಹುತೇಕ ಕೆಲಸಗಳು ಸುಗಮವಾಗುದರಲ್ಲಿ ಅನುಮಾನವಿಲ್ಲ.

ಗೋ ರಾ ಶ್ರೀನಿವಾಸ...

ಮೊ: 9845856139.

 

ಪ್ರತಿಕ್ರಿಯೆಗಳು1 comments

  • Riyol Correa wrote:
    04 Sep, 2018 09:58 pm

    We have problem for waste disposal. But the officers are not providing a better solution for this problem. Above mentioned that we the residents of quartres are not rising our voice againt this but we are sailent coz no one is bothering abt thz prob

  • Riyol Correa wrote:
    04 Sep, 2018 10:06 pm

    We have problem for waste disposal. But the officers are not providing a better solution for this problem. Above mentioned that we the residents of quartres are not rising our voice againt this but we are sailent coz no one is bothering abt thz prob

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑