Tel: 7676775624 | Mail: info@yellowandred.in

Language: EN KAN

    Follow us :


ನಿರಂತರ ಮರಳು ದಂಧೆ ಕಣ್ಮುಚ್ಚಿ ಕುಳಿತ ಸ್ಥಳಿಯಾಡಳಿತ

Posted date: 10 Sep, 2018

Powered by:     Yellow and Red

ನಿರಂತರ ಮರಳು ದಂಧೆ ಕಣ್ಮುಚ್ಚಿ ಕುಳಿತ ಸ್ಥಳಿಯಾಡಳಿತ

"ನಿಷೇಧವಿದ್ದರೂ ನಿರಂತರ"

ನದಿ ದಂಡೆಯಲ್ಲಿ ಮರಳೆತ್ತುವುದನ್ನು ನಿಷೇಧಿಸಿದರೂ ಸಹ ಸ್ಥಳಿಯ ಆಡಳಿತ ಮತ್ತು ಪೋಲಿಸರ ಜಾಣ ಕುರುಡತನದಿಂದ ಅಥವಾ ಅವರ ಬೆಂಬಲದೊಂದಿಗೆ ನದಿ ದಡದ ಮರಳು ದಂಧೆ ಪ್ರತಿನಿತ್ಯವೂ ರಾಜಾರೋಷವಾಗಿ ನಡೆಯುತ್ತಿದೆ.

ಇದನ್ನು ಕಂಡು ಕಾಣದಂತಿರುವ ಅಧಿಕಾರಿಗಳು ಯಾವ ಉದ್ದೇಶಕ್ಕಾಗಿ ಅಥವಾ ಯಾರ ಅನುಮತಿ ಮೇರೆಗೆ ನದಿ ದಂಡೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆಯನ್ನು ತಡೆಗಟ್ಟಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಸ್ಪಷ್ಟವಾಗಬೇಕಾಗಿದೆ.

"ಕಣ್ವದಿಂದ ಸಾಮಂದಿಪುರದವರೆಗೆ"

ಕಣ್ವ ಜಲಾಶಯದಿಂದ ನಗರ ಪ್ರದೇಶವಾದ ಮಳೂರಿನವರೆಗೆ ಬಹುತೇಕ ಕಡಿಮೆ ಅಥವಾ ಮನೆ ಕಟ್ಟಲು ಅಗತ್ಯವಿರುವವರು ಮಾತ್ರ ಬಳಸಿದರೆ ಮಳೂರು ಗ್ರಾಮದ ಸೇತುವೆಯಿಂದ ಮೊದಲ್ಗೊಂಡು ವಾಲೇತೋಪು, ಕೂಡ್ಲೂರು, ಮೊಗಳ್ಳಿದೊಡ್ಡಿ, ಸೋಮನಾಥಪುರ, ಮಂಗಾಡಹಳ್ಳಿ, ಅಂಬಾಡಹಳ್ಳಿ, ಮಾದಾಪುರ, ಎಲೆತೋಟದಹಳ್ಳಿ, ಕಾಡಂಕನಹಳ್ಳಿ, ಗೀಜಗನದಾಸನದೊಡ್ಡಿ ಹೀಗೆ ಎಲ್ಲಾ ಗ್ರಾಮಗಳ ಆಸುಪಾಸಿನ ಎಲ್ಲಾ ನದಿ ದಂಡೆಯಲ್ಲಿ ನಿರಂತರವಾಗಿ ಮರಳು ಲೂಟಿ ನಡೆಯುತ್ತಿದೆ.

"ಫಿಲ್ಟರ್ ಮರಳು ದಂಧೆ"

ಗೀಜಗನದಾಸನದೊಡ್ಡಿ ಮತ್ತು ಕಾಡಂಕನಹಳ್ಳಿಯ ಜೊತೆಗೆ ಹಲವಾರು ಕಡೆ ಕದ್ದುಮುಚ್ಚಿ ಫಿಲ್ಟರ್ ದಂಧೆ ನಡೆಯುತ್ತಿದ್ದರೆ ಕೆಲವು ಜಮೀನುಗಳ ಮಾಲೀಕರು ರಾಜಾರೋಷವಾಗಿ ನಡೆಸುತ್ತಿದ್ದಾರೆ. ಇದನ್ನು ಹತ್ತಿಕ್ಕದ ಹೊರತು ನದಿ ದಂಡೆಯ ಗ್ರಾಮಗಳು ಮತ್ತು ಕೃಷಿ ಭೂಮಿಗೆ ಮಾರಕವಾಗುವುದರ ಜೊತೆಗೆ ಆ ಮರಳಿನಿಂದ ಕಟ್ಟಿದ ಕಟ್ಟಡಗಳು ಸಹ ಕುಸಿಯುವ ಹಂತಕ್ಕೆ ತಲುಪುತ್ತವೆ, ಇದರಿಂದ ಆರ್ಥಿಕ ನಷ್ಟವಲ್ಲದೆ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ.

"ಕೆರೆ ಮತ್ತು ಸೇತುವೆ ಎರಡಕ್ಕೂ ಅಪಾಯ"

ಮಳೂರುಪಟ್ಟಣ ಮತ್ತು ಕೂಡ್ಲೂರು ನಡುವೆ ದೊಡ್ಡ ಸೇತುವೆ ಇದ್ದು ಮರಳು ಮಾಫಿಯಾದಿಂದ ಸೇತುವೆ ಬುಡದವರೆಗೂ ಮರಳೆತ್ತಿರುವುದರಿಂದ ಎರಡು ತುದಿಯ ಸೇತುವೆಯ ಕಂಬಗಳು ಬಿರುಕುಬಿಡುವ ಹಂತಕ್ಕೆ ತಲುಪುತ್ತಿವೆ.

ಇನ್ನೂ ಸೇತುವೆಯ ಮತ್ತೊಂದು ಭಾಗಕ್ಕೆ ಮಳೂರುಪಟ್ಟಣದ ಕೆರೆ ಹೊಂದಿಕೊಂಡಿದ್ದು ಕೆರೆ ಏರಿಗೆ ಸಂಬಂಧಿಸಿದಂತೆ ನದಿಯ ಒಡಲು ಈಗಾಗಲೇ ಏರಿಯ ಬುಡದವರೆಗೂ ತಲುಪಿದ್ದು ಸೇತುವೆಗೇನಾದರೂ ಹೆಚ್ಚುಕಡಿಮೆ ಆದರೆ ಕೆರೆ ಏರಿ ಒಡೆದು ನದಿಯ ಪಾಲಾಗುವುದರಲ್ಲಿ ಅನುಮಾನವಿಲ್ಲ.

"ಅಂತರ್ಜಲ ಕುಸಿತ"

ಮರಳು ಮಾಫಿಯಾದಿಂದ ಪ್ರತಿನಿತ್ಯ ಟನ್ ಗಟ್ಟಲೆ ಮರಳು ಸಾಗಿಸುತ್ತಿರುವುದರಿಂದ ಅಂತರ್ಜಲ ಕುಸಿಯುತ್ತಿದೆ, ಸದ್ಯ ಕೆಲವು ಕೆರೆಗಳು ತುಂಬಿರುವುದರಿಂದ ರೈತರಿಗೆ ಆ ಬಿಸಿ ಮುಟ್ಟಿಲ್ಲ.

ಒಂದು ವೇಳೆ ಕೆರೆಯ ನೀರು ಬತ್ತಿಹೋದ ನಂತರ ಈ ನದಿಯ ದಂಡೆಯಲ್ಲಿರುವ ಎಲ್ಲಾ ಕೊಳವೆಬಾವಿಗಳು ಸಂಪೂರ್ಣ ಬತ್ತಿಹೋಗುತ್ತವೆ, ಯಾವಾಗ ನದಿಯ ಒಡಲಿನ ಮರಳು ಕಡಿಮೆಯಾದಂತೆಲ್ಲ ಅಂತರ್ಜಲ ಕುಸಿದು ರೈತನ ಜೊತೆಗೆ ಜನ ಜಾನುವಾರುಗಳು ನೀರಿಲ್ಲದೆ ಪರಿತಪಿಸಬೇಕಾಗುತ್ತದೆ.

"ಟ್ರಾಕ್ಟರ್ ಗಳ ಹಾವಳಿಯಿಂದ ಹಾಳಾದ ರಸ್ತೆಗಳ ಜೊತೆ ಸ್ಥಳೀಯರ ನಿದ್ರೆಗೂ ಭಂಗ"

ರಾತ್ರಿ ವೇಳೆಯಲ್ಲಿ ಮಾತ್ರ ಟ್ರ್ಯಾಕ್ಟರ್ ನಲ್ಲಿ ಮರಳು ಸಾಗಿಸುವ ದಂಧೇಕೋರರು ದಣಿದು ಬಂದು ಮಲಗಿದ ಗ್ರಾಮಸ್ಥರ ನಿದ್ರೆಗೂ ಭಂಗ ತರುತ್ತಾರೆ, ಜೊತೆಗೆ ಇವರು ಸಂಚರಿಸುವ ರಸ್ತೆಗಳು ಸಾಮಾನ್ಯ ವಾಹನ ಸವಾರರು ಓಡಾಡಲಾಗದಷ್ಟು ಹಾಳಾಗಿಹೋಗಿವೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.

"ಕಳೆದು ಹೋಗುತ್ತಿದೆ ಕೃಷಿ ಭೂಮಿ"

ಮರಳು ಮಾಫಿಯಾದ ಸೆಳೆತಕ್ಕೆ ಸಿಲುಕಿರುವ ನದಿ ದಂಡೆಯ ಅನೇಕ ರೈತರು ತಮ್ಮ ಕೃಷಿ ಭೂಮಿಯನ್ನು ಈಗಾಗಲೇ ಕಳೆದುಕೊಂಡಿದ್ದಾರೆ.

ಒಂದರ ಹಿಂದೆ ಮತ್ತೊಂದು ಎನ್ನುವಂತೆ ನದಿ ಒಡಲು ದೊಡ್ಡದಾಗಿ ಕೃಷಿ ಭೂಮಿ ಕಿರಿದಾಗುತ್ತಾ ಹೋಗುತ್ತಿದೆ.

ಈಗಾಗಲೇ ನದಿಯ ದಂಡೆಯಲ್ಲಿದ್ದ ತೆಂಗಿನ ಮರಗಳು ಕುಸಿದು ಗೆದ್ದಲು ಹಿಡಿಯುತ್ತಿವೆ, ಪಕ್ಕದ ಜಮೀನು ಮಾಲೀಕ ಮಾಡಿದ ತಪ್ಪಿಗೆ ಮೊಗಳ್ಳಿದೊಡ್ಡಿಯ ಅನೇಕ ವೀಳ್ಯದೆಲೆಯ ತೋಟಗಳ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.

"ನದಿದಂಡೆಯ ಗ್ರಾಮಗಳು ಮುಳುಗಡೆ"

ಅತಿ ಹೆಚ್ಚು ಮಳೆ ಬಂದರೆ ಇಲ್ಲಾ ಕಣ್ವ ನದಿ ಉಕ್ಕಿ ಹರಿದರೆ ನದಿ ದಂಡೆಯಲ್ಲಿರುವ ಬಹುತೇಕ ಗ್ರಾಮಗಳು ಮುಳುಗಡೆಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ, ಕೃಷಿ ಭೂಮಿ ಯಲ್ಲೂ ಮರಳು ಎತ್ತಿರುವುದರಿಂದ ಹತ್ತಿರತ್ತಿರ ಮನೆಯ ಬುಡದವರೆಗೂ ಕಂದಕಗಳು ಉಂಟಾಗಿ ನದಿ ದೊಡ್ಡದಾಗಿದೆ, ಕೂಡ್ಲೂರು ಬಹುತೇಕ ಸೋಮನಾಥಪುರ ಸಂಪೂರ್ಣ ಹಾಗೂ ನದಿ ದಂಡೆಯಲ್ಲಿರುವ ಅನೇಕ ಗ್ರಾಮಗಳು ಅಸುರಕ್ಷಿತವಾಗಿವೆ.

"ರೈತರ ಹೆಸರಲ್ಲಿ ದಂಧೆ ಆರಂಭಿಸಿದ ಲೂಟಿಕೋರರು"

ಹಿಂದೊಮ್ಮೆ ಮರಳು ಮಾಫಿಯಾದ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಯಾದ ನಂತರ ಸ್ಥಳೀಯ ಆಡಳಿತ ಕಠಿಣ ಕ್ರಮ ಕೈಗೊಂಡಿತ್ತಾದರೂ

ರೈತರು ತಮ್ಮ ಜೀವನೋಪಾಯಕ್ಕಾಗಿ ಎತ್ತಿನ ಗಾಡಿಗಳಲ್ಲಿ ಮರಳು ಸಾಗಣೆಮಾಡಿಕೊಳ್ಳಲೆಂದು ಕೆಲವು ರೈತಮುಖಂಡರ ಮನವಿಮೇರೆಗೆ ಅಲಿಖಿತ ನಿಯಮವನ್ನು ಅಧಿಕಾರಿಗಳು ಮಾಡಿಕೊಟ್ಟರು.

ಅದನ್ನೇ ಬಂಡವಾಳ ಮಾಡಿಕೊಂಡ ರೈತರಲ್ಲದ ಅನೇಕರು ಇಂದು ಎತ್ತಿನ ಗಾಡಿಗಳ ಮೂಲಕ ಯಥೇಚ್ಛವಾಗಿ ಮರಳು ದಂಧೆಯಲ್ಲಿ ತೊಡಗಿಕೊಂಡಿದ್ದಾರೆ, ಪ್ರತಿನಿತ್ಯ ರಸ್ತೆಗಳಲ್ಲಿ ನಿಧಾನವಾಗಿ ಸಾಗುವ ಎತ್ತಿನಗಾಡಿಗಳು ಟ್ರಾಫಿಕ್ ಜಾಮ್ ಆಗುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

"ಕಣ್ಮುಚ್ಚಿ ಕುಳಿತ ಪೋಲಿಸರು ಮತ್ತು ಸ್ಥಳೀಯ ಆಡಳಿತ "

ಟ್ರಾಫಿಕ್ ಗೆ ಸಂಬಂಧಿಸಿದ ಪೋಲಿಸರಾಗಲಿ, ಜಲಸಂಪನ್ಮೂಲ ಇಲಾಖೆಯಾಗಲಿ ಅಥವಾ ಕಂದಾಯ ಇಲಾಖೆಯಾಗಲಿ ಇದುವರೆಗೂ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿಲ್ಲ, ಈಗಾಗಲೇ ಮರಳು ತುಂಬುವ ಸಮಯದಲ್ಲಿ ದಿಬ್ಬ ಕುಸಿದು ಅನೇಕ ಜೀವಗಳು ಬಲಿಯಾಗಿ ಹೋಗಿವೆ, ಇಂತಹ ಪ್ರಕರಣಗಳು ಪೋಲಿಸ್ ಠಾಣೆ ಮೆಟ್ಟಲೇರುವುದು ತುಂಬಾ ಕಡಿಮೆ. ಪತ್ರಿಕೆಗಳಲ್ಲಿ ವರದಿಯಾದಗಲಷ್ಟೇ ಎರಡು ದಿನದ ಮಟ್ಟಿಗೆ ಕ್ರಮ ಕೈಗೊಳ್ಲುವ ಅಧಿಕಾರಿಗಳು ನಂತರ ಅದೆ ಜಾಣನಿದ್ರೆಗೆ ಜಾರಿಬಿಡುತ್ತಾರೆ.

"ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ, ದಂಡಾಧಿಕಾರಿ ಮತ್ತು ಡಿವೈಎಸ್ಪಿ ಚಾಟಿ ಬೀಸಲಿ"

ನದಿ ಮರಳಿಗೆ ಸಂಬಂಧಿಸಿದಂತೆ ಬಹುದೊಡ್ಡ ದಂಧೆಯೆ ನಡೆಯುತ್ತಿದ್ದು ಇದರ ಹಿಂದಿರುವ ಕಾಣದ ಕೈಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಾಗಿದೆ, ಅದು ಸಾಧ್ಯವಿಲ್ಲ ಎಂದಾದರೆ ಅಧಿಕಾರಗಳೇ ಶಾಮೀಲಾಗಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ, ನದಿ, ನೀರು, ಜನಜಾನುವಾರುಗಳು ಸುರಕ್ಷಿತವಾಗಿರಬೇಕೆಂದರೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳಲಿ.

 

ಗೋ ರಾ ಶ್ರೀನಿವಾಸ...

ಮೊ: 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑