Tel: 7676775624 | Mail: info@yellowandred.in

Language: EN KAN

    Follow us :


ದೀಪದಡಿಯಲ್ಲೇ ಕತ್ತಲು ಎಂಬಂತೆ ಕತ್ತಲಲ್ಲೇ ಮುಳುಗಿದ ನಗರಸಭೆ ! ಸುಂದರನಗರಿ ನಿರ್ಮಾಣಕ್ಕೆ ಬದ್ಧ ಪೌರಾಯುಕ್ತ?

Posted date: 22 Oct, 2018

Powered by:     Yellow and Red

ದೀಪದಡಿಯಲ್ಲೇ ಕತ್ತಲು ಎಂಬಂತೆ ಕತ್ತಲಲ್ಲೇ ಮುಳುಗಿದ ನಗರಸಭೆ ! ಸುಂದರನಗರಿ ನಿರ್ಮಾಣಕ್ಕೆ ಬದ್ಧ ಪೌರಾಯುಕ್ತ?

ವಿಶ್ವ ವಿಖ್ಯಾತ ಗೊಂಬೆಗಳ ನಗರಿ, ಇತಿಹಾಸ ಪುಟದಲ್ಲಿ ದಾಖಲಾಗಿರುವ ಹಲವಾರು ರಾಜರು ಮತ್ತು ಪಾಳೇಗಾರರ ರಾಜಧಾನಿ ಕೇಂದ್ರ, ಪುರಾತನ ದೇವಾಲಯಗಳ ಪಟ್ಟಣ, ಬ್ರಿಟೀಷರ ಕಾಲದ ಪೋಲಿಸ್ ಠಾಣೆಯ ಕಟ್ಟಡ, ಮಹಾತ್ಮ ಗಾಂಧಿ, ಮತ್ತು ಜಯಚಾಮರಾಜೇಂದ್ರ ಒಡೆಯರ್ ರಸ್ತೆಗಳು, ಸಣ್ಣಪುಟ್ಟ ದೇಶಗಳಿಂದ ಅಮೇರಿಕಾದ ವೈಟ್ ಹೌಸ್ ನ ವರೆಗೂ ಗೊಂಬೆಗಳಿಗೆ ಪ್ರಸಿದ್ಧಿ ಪಡೆದ ಚನ್ನಪಟ್ಟಣ ಇಂದು ಕಸದ ಸಮಸ್ಯೆಯಿಂದ ಗಬ್ಬೆದ್ದು ನಾರುತ್ತಿದೆ. ಇಂತಹ ಇತಿಹಾಸ ಹಾಗೂ ಪುರಾಣಪ್ರಸಿದ್ದ ನಗರವನ್ನು ಕಸದ ಕೊಂಪೆಯಾಗಿಸುವಲ್ಲಿ ನಗರಸಭೆಯೇ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ, ಹಾಗಾಗಿ ನಗರ ಸ್ವಚ್ಚತೆ ಮತ್ತು ಮೇಲ್ದರ್ಜೆಗೇರಿಸುವಲ್ಲಿ ಪೌರಾಯುಕ್ತರ ಪಾತ್ರ ಮಹತ್ವದ್ದು, ಇದರ ಬಗ್ಗೆ ಪೌರಾಯುಕ್ತರನ್ನು ಸಂದರ್ಶಿಸಿದ ಮಾಹಿತಿ ಓದುಗರಾದ ತಮ್ಮ ಮುಂದೆ....

 

ನಗರಸಭೆಯ ಬಗ್ಗೆ ಒಂದಿಷ್ಟು

ನಗರಸಭೆಯಲ್ಲಿ ಮೇಲ್ದರ್ಜೆಯ ಕೆಲವು ಹುದ್ದೆಗಳಿಗೆ ಅಧಿಕಾರಿಗಳು ಇಲ್ಲಾ ಎಂಬುದನ್ನು ಹೊರತುಪಡಿಸಿದರೆ ಮಿಕ್ಕೆಲ್ಲವು ಇಲ್ಲಿ ಲಭ್ಯ, ಸ್ವಂತ ಕಟ್ಟಡ, ಸಾಕಷ್ಟು ಬಾಡಿಗೆ ಬರುವ ವಾಣಿಜ್ಯ ಮಳಿಗೆಗಳು, ಅಧ್ಯಕ್ಷರು ಮತ್ತು ಅಧಿಕಾರಿಗಳು ಓಡಾಡಲು ಹವಾನಿಯಂತ್ರಿತ ಕಾರುಗಳು, ಕಸವಿಲೇವಾರಿಗೆ ವಾಹನಗಳು, ಅದಕ್ಕೆ ತಕ್ಕಂತೆ ಪೌರಕಾರ್ಮಿಕರು ಮತ್ತು ಅನುದಾನ ಬರುತಿದ್ದೆಯಾದರೂ ದಿನೇದಿನೆ ನಗರ ಕಳೆಗುಂದುತ್ತಿದೆ.

ವಾಣಿಜ್ಯ ಮಳಿಗೆಗಳ ತಿಂಗಳ ಆದಾಯ

ನಗರಸಭೆಯ ಕಛೇರಿಯ ಆವರಣ ಮತ್ತು ಕರಬಲ ಮೈದಾನದಲ್ಲಿರುವ ಒಟ್ಟು ನೂರಾ ಐವತ್ತಾರು ಅಂಗಡಿ ಮಳಿಗೆಗಳಲ್ಲಿ ಕರಬಲ ಮೈದಾನದಲ್ಲಿನ ಕೆಲವು ಮಳಿಗೆಗಳನ್ನು ಹೊರತುಪಡಿಸಿದರೆ ಸುಸ್ಥಿತಿಯಲ್ಲಿರುವ ಅಂಗಡಿಗಳ ತಿಂಗಳ ಆದಾಯವೇ ಒಂದು ಲಕ್ಷಕ್ಕಿಂತ ಹೆಚ್ಚು, ಕರಬಲ ಮೈದಾನಲ್ಲಿ ಹಾಳಾಗಿರುವ ಮಳಿಗೆಗಳನ್ನು ಸರಿಪಡಿಸಿ ಬೀದಿಬದಿ ವ್ಯಾಪಾರಿಗಳ ಮನವೊಲಿಸಿ ಬಾಡಿಗೆಗೆ ನೀಡಿದರೇ ಪುಟ್ ಪಾತ್ ತೆರವಿನಿಂದ ನಗರ ಸುಂದರವಾಗಿ ಕಾಣುವುದಲ್ಲದೆ ನಗರಸಭೆಗೂ ಆದಾಯ ಬರುತ್ತದೆ.

 

ಒಳಚರಂಡಿ ಕಾಮಗಾರಿ ನೆನೆಗುದಿಗೆ

ಒಳಚರಂಡಿ ಕಾಮಗಾರಿ ಎಂಟತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಶ್ನೆಗೆ ಒಳ ಚರಂಡಿ ನಿರ್ಮಾಣ ಮಾಡಿದ ನಂತರ ಆ ನೀರನ್ನು ಒಂದುಕಡೆ ಶೇಖರಿಸಿ ಶುದ್ಧೀಕರಿಸಲು ಜಾಗದ ಸಮಸ್ಯೆ ಇತ್ತು, ನಗರದ ಒಂದನೇ ವಾಡ್೯ (ಚಿಕ್ಕಮಳೂರು) ನಲ್ಲಿ ಜಾಗ ಗುರುತಿಸಿದ್ದು ಇನ್ನೊಂದು ವರ್ಷದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇವೆ, ಹರಿದು ಬರುವ ನೀರನ್ನು ಎಸ್ ಟಿ ಪಿ (STP) ಯಲ್ಲಿ ಶೇಖರಿಸಿ, ಶುದ್ದೀಕರಿಸಿದ ನೀರನ್ನು ರೈತರು ವ್ಯವಸಾಯಕ್ಕೆ ಬಳಸಿಕೊಳ್ಳಲು  ಯೋಜನೆ ಸಿದ್ದಪಡಿಸಲಾಗುತ್ತಿದೆ.

ಗಾಂಧಿಭವನ ಮತ್ತು ಗ್ರಂಥಾಲಯ

ನಗರದ ಹೃದಯ ಭಾಗದಲ್ಲಿ ಸ್ವಾತಂತ್ರ್ಯ ಚಳವಳಿ ಮತ್ತು ಗಾಂಧಿ ಭೇಟಿಯ ನೆನಪಿಗಾಗಿ ನಿರ್ಮಿಸಲಾಗಿರುವ ಭವನವೂ ಬಹುಭಾಗ ಹಾಳಾಗಿ ಹೋಗಿದೆ, ಅಲ್ಲಿರುವ ಗ್ರಂಥಾಲಯವೂ ಸಹ ಸರಿಯಾದ ವ್ಯವಸ್ಥೆ ಇಲ್ಲದೆ ಕಾಟಾಚಾರಕ್ಕೆಂಬಂತೆ ಇದೆ ಎಂಬ ಪ್ರಶ್ನೆಗೆ ಗ್ರಂಥಾಲಯವನ್ನು ನಮ್ಮ ಆರೋಗ್ಯ ಶಾಖೆಗೆ ವರ್ಗಾಯಸಿ ಹೊಸದಾಗಿ ಗಾಂಧಿಭವನ ನಿರ್ಮಿಸಿ ಮತ್ತು ಅಲ್ಲಿರುವ ಪ್ರಮುಖರ ಪ್ರತಿಮೆಗಳನ್ನು ರಕ್ಷಿಸಿ ಸೂಕ್ತ ಜಾಗದಲ್ಲಿ, ಗಾಂಧಿಭವನದ ಮುಂಭಾಗದಲ್ಲೇ ಸ್ಥಾಪಿಸಲು ಶೀಘ್ರವಾಗಿ ಕ್ರಮಕೈಗೊಳ್ಳುತ್ತೇನೆ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ .

ಕಂದಾಯ ವಸೂಲಾತಿ ಬಗ್ಗೆ ಕ್ರಮ

ನಗರದಲ್ಲಿ ಎಲ್ಲಾ ರೀತಿಯ ಕಂದಾಯಗಳು ಬಹುತೇಕ ಬಾಕಿ ಉಳಿದಿವೆ, ಕಂದಾಯ ವಸೂಲು ಮಾಡುವುದೇ ಕಷ್ಟಕರವಾಗಿದೆ, ಸಣ್ಣಸಣ್ಣ ಕಂದಾಯಯಗಳಲ್ಲದೇ ಒಂದು, ಎರಡು, ಮೂರು ಮತ್ತು ನಾಲ್ಕು ಲಕ್ಷದವರೆಗೂ ಕೆಲವರು ಕಂದಾಯ ಉಳಿಸಿಕೊಂಡಿದ್ದಾರೆ, ಇಂತಹವರ ವಿರುದ್ಧ ಶೀಘ್ರವೇ ನೋಟಿಸ್ ಜಾರಿ ಮಾಡಿ, ನಂತರ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.

ಅಲ್ಲಿಗೂ ಕಂದಾಯ ಕಟ್ಟಲಿಲ್ಲವೆಂದರೇ ಅವರ ಮನೆ ಅಥವಾ ಆಸ್ತಿಯ ಮುಂದೆ ಟಾಂ ಟಾಂ ಹೊಡೆಸುವ ಮೂಲಕ ಕಂದಾಯ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

ನಗರಸಭೆ ವ್ಯಾಪ್ತಿಯ ಬಡಾವಣೆಗಳಲ್ಲಿ ಕಳಪೆ ರಸ್ತೆ

ನಗರದ ಬಡಾವಣೆಗಳಲ್ಲಿ ಚರಂಡಿ ಮತ್ತು ರಸ್ತೆ ಡಾಂಬರೀಕರಣವು ಕಳಪೆ ಗುಣಮಟ್ಟದಿಂದ ಕೂಡಿದೆ ಹಾಗೂ ಐದು ವರ್ಷದಲ್ಲಿ ಒಂದು ಬಾರಿಯೂ ಗುತ್ತಿಗೆದಾರರು ನಿರ್ವಹಣೆ ಮಾಡಿಲ್ಲ ಎನ್ನುವ ದೂರಿನ ಪ್ರಶ್ನೆಗೆ ಉತ್ತರಿಸಿ, ಹಿಂದಿನ ಅಂದರೆ ನಾ ಬರುವ ಮೊದಲಿನ ಕಾಮಗಾರಿಗಳ ಬಗ್ಗೆ ಅಷ್ಟೊಂದು ಗೊತ್ತಿಲ್ಲವಾದರೂ ಪರಿಶೀಲಿಸುತ್ತೇನೆ, ನನ್ನ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಿ ಗುಣಮಟ್ಟದ ಕಾಮಗಾರಿಯನ್ನು ಮಾಡಿಸುತ್ತಿದ್ದೇನೆ, ಆ ಕಾಮಗಾರಿಗಳಿಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ಐದು ವರ್ಷದ ಅವಧಿಯಲ್ಲಿ ಕಿತ್ತು ಹೋದರೆ ಅವರೇ ಜವಾಬ್ದಾರಿಯಾಗಿರುತ್ತಾರೆ ಅದನ್ನು ಸರಿಪಡಿಸಲು ಎಚ್ಚರಿಕೆ ನೀಡಿ ನಂತರ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು.

ಕಸ ವಿಂಗಡಣೆಗೆ ಸದ್ಯದ ಜಾಗ ಮತ್ತು ಡಬ್ಬ ವಿತರಣೆ

ತಾಲ್ಲೂಕಿನ ವಾಲೇತೋಪು ಗ್ರಾಮದಲ್ಲಿ ಮತ್ತು ನಗರದ ಎಲೇಕೇರಿ ಸ್ಮಶಾನ ದಲ್ಲಿ ಕಸ ವಿಂಗಡಣೆಗೆಂದು ತಾತ್ಕಾಲಿಕ ಜಾಗ ನಿಗದಿಪಡಿಸಿಕೊಂಡೆವಾದರೂ ತಾಲ್ಲೂಕಿನ ವಾಲೇತೋಪು ಗ್ರಾಮದಲ್ಲಿ ಜಮೀನಿಗೆ ಸಂಬಂಧಿಸಿದ ಕೆಲವು ವಿವಾದಗಳಿದ್ದು ನೆನೆಗುದಿಗೆ ಬಿದ್ದಿದೆ, ನಗರದ ಎಲೇಕೇರಿ ಸ್ಮಶಾನ ಭೂಮಿಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ, ಕಾಂಪೌಂಡ್ ಆದ ತಕ್ಷಣವೇ ಕಸವಿಂಗಡಣೆ ಕೆಲಸ ಕೈಗೆತ್ತಿಕೊಳ್ಳುತ್ತೇವೆ, ಈ ಬಾರಿ ಎಲ್ಲಾ ವಾಡ್೯ಗಳ ಮನೆ ಮನೆಗೂ ಕಸ ವಿಂಗಡಣೆಗೆಂದು ಡಬ್ಬಗಳನ್ನು ವಿತರಣೆ ಮಾಡಿರುವುದು ಸಹ ಉಪಯೋಗಕ್ಕೆ ಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಂದಿ, ನಾಯಿ ಮತ್ತು ಬೀಡಾಡಿ ಹಸುಗಳ ಬಗ್ಗೆ ತುರ್ತುಕ್ರಮ

ನಗರದಲ್ಲಿ ಬೀದಿನಾಯಿಗಳ ಕಾಟದೊಂದಿಗೆ ಹಂದಿಗಳು ಮತ್ತು ಬೀಡಾಡಿ ಹಸುಗಳು ನಗರದೆಲ್ಲೆಡೆ ಅಲೆದಾಡುತ್ತಿರುವುದರಿಂದ ಸಾರ್ವಜನಿಕರ ಸುಗಮಸಂಚಾರಕ್ಕೆ ತೊಂದರೆಯಾಗುತ್ತಿದೆ, ಹಂದಿ ಮತ್ತು ಹಸುಗಳ ಮಾಲೀಕರನ್ನು ಗುರುತಿಸಿ ನೋಟೀಸ್ ಜಾರಿ ಮಾಡಿ ಎಚ್ಚೆತ್ತುಕೊಳ್ಳದಿದ್ದರೆ ಕಾನೂನು ರೀತ್ಯಾ ಅವರ ಮೇಲೆ ಕ್ರಮಗೊಳ್ಳಲು ತೀರ್ಮಾನಿಸಲಾಗುವುದು, ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನೀಡಿ ನೂರು ಕಿಮೀ ದೂರದಲ್ಲಿರುವ ದೊಡ್ಡ ಅರಣ್ಯಕ್ಕೆ ಬಿಡುವ ಯೋಜನೆ ಇದೆ, ಪ್ರಾಣಿದಯಾ ಸಂಘದವರು ಮುಂದೆ ಬಂದರೆ ದತ್ತು ನೀಡಲು ಸಿದ್ದರಿದ್ದೇವೆ ಎಂದುತ್ತರಿಸಿದರು.

 

ಕೋಳಿ ಮತ್ತು ಮಾಂಸದಂಗಡಿಯ ತ್ಯಾಜ್ಯ

ನಗರದಾದ್ಯಂತ ಇರುವ ಕೋಳಿ ಅಂಗಡಿಗಳು ಮತ್ತು ಮಾಂಸದಂಗಡಿಗಳನ್ನು ಗಣತಿ ಮಾಡಿ ಅಲ್ಲಿನ ತ್ಯಾಜ್ಯವನ್ನು ನಿಗದಿತವಾಗಿ ಮೂರುದಿನಕ್ಕೊಮ್ಮೆಯಾದರೂ ನಗರಸಭೆಯ ವಾಹನಗಳಿಗೆ ಕೊಡಬೇಕೆಂದು, ಕೊಡದೆ ಎಲ್ಲೆಂದರಲ್ಲಿ ಬಿಸಾಡುವವರ ವಿರುದ್ಧ ಲೈಸೆನ್ಸ್ ರದ್ದುಗೊಳಿಸುವ ಮತ್ತು ಕಠಿಣ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ, ನಗರದ ಸ್ವಚ್ಚತೆ ಮತ್ತು ಸೌಂದರ್ಯ ಉಳಿಯಬೇಕೆಂದರೆ ಎಲ್ಲರೂ ಕೈಜೋಡಿಸಲೇಬೇಕು.

 

ಇಲಾಖೆಯೊಳಗಿನ ಹಗರಣ

ನಗರಸಭೆಯ ಕೆಲವು ಅಧಿಕಾರಿಗಳೇ ಕಮೀಷನ್ ಆಸೆಗಾಗಿ ಕೆಲವು ಅಕ್ರಮಗಳನ್ನು ಮಾಡುತ್ತಿದ್ದಾರಂತೆ, ಉದಾಹರಣೆಗೆ ಇ ಖಾತೆಗಳು, ಆರೋಗ್ಯ ಶಾಖೆಯ ಅಧಿಕಾರಿಗಳು ಕುಣಿಗಲ್ ನಿಂದ ಬ್ಲೀಚಿಂಗ್ ಪೌಡರ್ ತರಿಸುತ್ತಿರುವುದು ಹಾಗೂ ಇನ್ನಿತರೆ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ ಎಂಬ ಪ್ರಶ್ನೆಗೆ ಇವ್ಯಾವು ನನ್ನ ಗಮನಕ್ಕೆ ಬಂದಿಲ್ಲ, ಇದನ್ನು ಪರಾಮರ್ಶಿಸಿ ಇಲಾಖೆಯ ವತಿಯಿಂದ ತನಿಖೆ ಮಾಡಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

 

ನಗರಸಭೆ ಸದಸ್ಯರು ಮತ್ತು ಸಿಬ್ಬಂದಿಯ ಸಹಕಾರ

ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಸದಸ್ಯರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದು ಯಾವುದೇ ರೀತಿಯ ಅಡಚಣೆಗಳಾಗುತ್ತಿಲ್ಲ, ನಾನು ಕೈಗೊಳ್ಳುತ್ತಿರುವ ಕೆಲಸದ ಮೇಲೆ ಅವರಿಗೆ ನಂಬಿಕೆ ಇದೆ, ಇನ್ನು ಮುಂದೆಯೂ ಅವರೆಲ್ಲರೂ ನಗರಸಭೆಯ ಎಲ್ಲಾ ಉತ್ತಮ ಕೆಲಸಗಳಿಗೂ ಬೆಂಬಲ ನೀಡುತ್ತಾರೆ ಎಂದು ಆತ್ಮವಿಶ್ವಾಸದಿಂದ ನುಡಿದರು.

 

ಪತಿಯರ ದರ್ಬಾರ್ ಗೆ ಕಡಿವಾಣ

ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷೆ ಅಲ್ಲದೇ ಕೆಲವು ಮಹಿಳಾ ಸದಸ್ಯೆಯರ ಪರವಾಗಿ ಅವರ ಪತಿ ಯೇ ಅಧಿಕಾರ ಚಲಾಯಿಸುತ್ತಿದ್ದಾರೆಂದು ಸಾರ್ವಜನಿಕರು ಮತ್ತು ಕೆಲವು ಸಿಬ್ಬಂದಿ ಗಂಭೀರ ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಇದು ಬಹುತೇಕ ಎಲ್ಲಾ ಕಡೆಯೂ ನಡೆಯುತ್ತಿದೆ, ನನ್ನ ಗಮನಕ್ಕೂ ಬಂದಿದೆ, ಮೊನ್ನೆ ನಡೆದ ಒಂದು ಸಣ್ಣ ಗಲಾಟೆಗೆ ಸಂಬಂಧಿಸಿದಂತೆ ಅವರನ್ನು ಕರೆದು ಎಚ್ಚರಿಕೆ ಕೊಟ್ಟಿದ್ದಲ್ಲದೆ ಮಹಿಳಾ ಸದಸ್ಯರಿಗೂ ಸೂಕ್ಷ್ಮವಾಗಿ ತಿಳಿಹೇಳಲಾಗಿದೆ. ಹೀಗೆ ಮುಂದುವರೆದು ದೂರುಗಳು ಬಂದರೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

 

ಕಣ್ವ ಯೋಜನೆ

ಬಹಳ ಮುಖ್ಯವಾಗಿ ನಗರ ಸ್ವಚ್ಚವಾಗಬೇಕು ಮತ್ತು ಅಭಿವೃದ್ಧಿ ಹೊಂದಬೇಕೆಂದರೆ ಶೀಘ್ರವಾಗಿ ಕಣ್ವ ಗ್ರಾಮದ ಬಳಿ ಗುರುತಿಸಿರುವ ಜಾಗಕ್ಕೆ ಅನುಮೋದನೆ ಸಿಗಬೇಕು, ಇದಕ್ಕೆ ತಡೆ ಉಂಟಾಗಿರುವುದು ಕಣ್ವ ಗ್ರಾಮಸ್ಥರು ಒಂದೆಡೆಯಾದರೇ ಮೇಲ್ಮಟ್ಟದ ಅಧಿಕಾರಿಗಳು ಒಂದೆಡೆ.

ಸ್ಥಳೀಯರನ್ನು ಮನವೊಲಿಸಿ ಕಸ ವಿಲೇವಾರಿ ಮಾಡುವ ವಿಧಾನ, ಅದರಿಂದಾಗುವ ತೊಂದರೆ ಮತ್ತು ಲಾಭ ಎಲ್ಲವನ್ನೂ ಸಂಪೂರ್ಣ ಎಳೆಎಳೆಯಾಗಿ ಅರ್ಥ ಮಾಡಿಸಿದರೆ ಗ್ರಾಮಸ್ಥರು ಒಪ್ಪಿಕೊಳ್ಳುತ್ತಾರೆ, ಇದನ್ನು ಗಮನದಲ್ಲಿಟ್ಟುಕೊಂಡು ಹಿರಿಯ ಅಧಿಕಾರಿಗಳು ಈ ಜಾಗವನ್ನು ನಮ್ಮ ಸುಪರ್ದಿಗೆ ನೀಡಿದರೆ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳ ಮೂಲಕ ರಾಮನಗರ ಚನ್ನಪಟ್ಟಣ ಅಲ್ಲದೆ ಬಿಡದಿ ಪುರಸಭೆಯ ಕಸವನ್ನು ಸಹ ವಿಂಗಡಿಸಿ ವಿಲೇವಾರಿ ಮಾಡಬಹುದು, ಇದರಿಂದ ಅನುಕೂಲವೇ ಹೆಚ್ಚಾಗಿದೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಶೀಘ್ರವಾಗಿ ತೀರ್ಮಾನ ಕೈಗೊಳ್ಳಬೇಕಾಗಿದೆ.

ಒಟ್ಟು ಸಿಬ್ಬಂದಿ ಎಷ್ಟೆಂಬುದು ಪೌರಾಯುಕ್ತರಿಗೂ ಗೊತ್ತಿಲ್ಲ?

ಇಡಿ ನಗರಸಭೆಗೆ ಸಂಬಂಧಿಸಿದಂತೆ ಎಷ್ಟು ಸಿಬ್ಬಂದಿ ಇದ್ದಾರೆ ಎಂಬುದು ಪೌರಾಯುಕ್ತರಿಗಾಗಲಿ ಸಂಬಂಧಿಸಿದ ಅಧಿಕಾರಿಗಳಿಗಾಗಲಿ ಮಾಹಿತಿ ಇಲ್ಲದಿರುವುದು ಅವರ ಕರ್ತವ್ಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ, ಪೌರಾಯುಕ್ತರು ಕೇವಲ ಹತ್ತು ಹುದ್ದೆಗಳು ಖಾಲಿ ಇವೆ ಎಂದರೆ ಜೀವನ್ ಎನ್ನುವವರು ೨೩೬ ಹುದ್ದೆಗಳಿರಬೇಕು ಇರುವುದು ಕೇವಲ ೮೯ ಎಂದು ಮಾಹಿತಿ ನೀಡುತ್ತಾರೆ. ಹಾಗಾದರೆ ಒಟ್ಟು ಇರಬೇಕಾದ ಹುದ್ದೆಗಳು ಎಷ್ಟು ? ಯಾವ್ಯಾವ ಶಾಖೆಯಲ್ಲಿ ಎಷ್ಟು ಹುದ್ದೆಗಳು ಇರಬೇಕು ? ಎಷ್ಟು ಖಾಲಿ ಇವೆ ಹಾಗೂ ಅವರು ಕೆಲಸ ನಿರ್ವಹಿಸುತ್ತಿದ್ದಾರಾ ? ಎಂಬುದನ್ನು ಪರಿಶೀಲಿಸಿ ಉತ್ತರಿಸಬೇಕಾಗಿದೆ.

 

ಕುಪ್ಪಿಯಡಿಯಲ್ಲಿ ಕತ್ತಲೆಂಬ ನಾಣ್ಣುಡಿಯಂತೆ ಆವರಣವೇ ಗಬ್ಬೆದ್ದು ನಾರುತ್ತಿದೆ

ಕುಪ್ಪಿಯಡಿಯಲ್ಲಿ(ದೀಪ) ಕತ್ತಲು ಎಂಬ ನಾಣ್ಣುಡಿಯಂತೆ ಸರಿಸುಮಾರು ಮೂರುವರೆ ಕಿಲೋಮೀಟರ್ ಗೂ ಹೆಚ್ಚಿರುವ ನಗರಸಭೆ ವ್ಯಾಪ್ತಿಯ ಸ್ವಚ್ಛತೆ ಇರಲಿ, ನಗರಸಭೆಯ ಆವರಣವನ್ನೇ ಶುಚಿಯಾಗಿಟ್ಟುಕೊಂಡಿಲ್ಲ, ಇನ್ನೂ ನಗರವನ್ನು ಹೇಗೆ ಸ್ವಚ್ಛಗೊಳಿಸುವ ಕೆಲಸ ಮಾಡ್ತಾರೆ ? ನೀವು ನಗರಸಭೆಯ ಆವರಣದೊಳಗೆ ಕಾಲಿಟ್ಟರೇ ಸಾಕು ಗಬ್ಬೆದ್ದು ನಾರುವ ಸಾರ್ವಜನಿಕ ಶೌಚಾಲಯ, ಅದರ ಮುಂದೆಯೇ ಸುರಿದಿರುವ ಕಸದ ರಾಶಿ, ದೊಡ್ಡ ಮರದ ನೆರಳು ಮತ್ತು ಬೆಂಚ್ ಗಳನ್ನು ಹೊರತು ಪಡಿಸಿ ಬಣಗುಡುವ ಉದ್ಯಾನ, ಬಣ್ಣಗೆಟ್ಟ ಪುರಭವನ, ಪುರಭವನಕ್ಕೆ ನೇಣು ಹಾಕಿಕೊಂಡಿರುವ ಲತೆಬಳ್ಳಿಗಳು, ಕಸದ ವಾಹನಗಳನ್ನು ನಿಲ್ಲಿಸಿದಾಗ ಗಲೀಜು ನೀರು ಸೋರಿ ಭತ್ತದ ಗದ್ದೆಯಾದ ಆವರಣ, ನೀರಿನ ಟ್ಯಾಂಕ್ ಗೆ ಮುತ್ತಿಟ್ಟಿರುವ ಉಗಿನಿ ಹಂಬುಗಳು, ಬೀದಿಬದಿಯಲ್ಲಿರಬೇಕಾದ ದೊಡ್ಡ ಗಾತ್ರದ ಕಸ ಸಂಗ್ರಹಣಾ ಬಾಕ್ಸ್ ಗಳು ತುಕ್ಕು ಹಿಡಿಯುತ್ತಿವೆ, ಇಂತಹ ಹತ್ತಾರು ಸಮಸ್ಯೆಗಳು ನಗರಸಭೆಯ ಆವರಣದಲ್ಲೇ ಇರಬೇಕಾದರೆ ನಗರ ಶುಚಿಮಾಡುವ ನೈತಿಕತೆ ನಿಜವಾಗಿಯೂ ನಗರಸಭೆಗೆ ಇದೆಯಾ ?

ತನ್ನ ಅಂಡನ್ನೇ ತೊಳೆದುಕೊಳ್ಳದವರೂ ಇನ್ನೊಬ್ಬರ ಅಂಡನ್ನು ತೊಳೆದುಕೊಡುವರೇ !?

ಸ್ವಾಮಿ ಪೌರಾಯುಕ್ತರೇ , ಅಧಿಕಾರಸ್ತರೇ ಹಾಗೂ ಜನಪ್ರತಿನಿಧಿಗಳೇ ಮೊದಲು ನೀವು ಕೂತುಣ್ಣುವ ಜಾಗವನ್ನಾದರೂ ಸ್ವಚ್ಚ ಮಾಡಿ ಮಾದರಿಯಾಗಿ.

 

ಮೈಸೂರಿನಂತೆ ಸ್ವಚ್ಛ ಚನ್ನಪಟ್ಟಣ ಮಾಡುವ ಶಪಥ ಪೌರಾಯುಕ್ತ

ನಾನು ಮೈಸೂರಿನ ಮಹಾನಗರ ಮಾಲಿಕೆಯಲ್ಲಿ ಕೆಲಸ ನಿರ್ವಹಿಸಿ ಬಂದಿದ್ದೇನೆ, ಅಲ್ಲಿಯ ಸ್ವಚ್ಚತೆಗೂ ಚನ್ನಪಟ್ಟಣದ ಸ್ವಚ್ಚತೆಗೂ ಹೋಲಿಕೆಯಿಲ್ಲದಷ್ಟೂ ಅಜಗಜಾಂತರವಿದೆ, ಮೇಲಾಧಿಕಾರಿಗಳು ಮತ್ತು ಮುಖ್ಯಮಂತ್ರಿ ಯವರ ಗಮನಕ್ಕೆ ತಂದು ಹೆಚ್ಚು ಅನುದಾನ ತಂದು ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಇಡೀ ನಗರವನ್ನು ಕಸಮುಕ್ತ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಶಪಥ ಮಾಡಿದ್ದೇನೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯದೇ ಎಲ್ಲರ ಸಹಕಾರದೊಂದಿಗೆ ಮೈಸೂರಿನಂತೆ ಉತ್ತಮ ಸ್ವಚ್ಛ ನಗರವನ್ನು ರೂಪಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ದೃಢ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದರು.

ಪುರಾಣ ಪ್ರಸಿದ್ಧ, ಇತಿಹಾಸ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ಗೊಂಬೆಗಳ ನಗರಿಯನ್ನು ಕಸದ ಕೊಂಪೆಯಾಗಿ ಮಾಡದೇ ಸುಂದರ ಸ್ವಚ್ಛ ನಗರವನ್ನಾಗಿಸಲು ನಗರಸಭೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಗ್ಗೂಡಿ ದೇಶದಲ್ಲಿ ಅಲ್ಲವಾದರೂ ರಾಜ್ಯದಲ್ಲಿ ಸ್ವಚ್ಛ ಅಭಿವೃದ್ಧಿ ಹೊಂದಿದ ಪ್ರಥಮ ನಗರ ಕೇಂದ್ರವನ್ನಾಗಿ ಮಾಡಲಿ ಎಂದು ನಮ್ಮ ಪತ್ರಿಕಾ ಬಳಗ ಮತ್ತು ತಾಲೂಕಿನ ಜನತೆಯ ಆಶಯವಾಗಿದೆ.

 

ಗೋ ರಾ ಶ್ರೀನಿವಾಸ...

ಮೊ: 9845856139.

ಪ್ರತಿಕ್ರಿಯೆಗಳು1 comments

  • Shivalingegowda wrote:
    23 Oct, 2018 08:09 pm

    Thumba Dhanyavadagalu sir nimma Daari eege guri atta munduvariyali

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑