Tel: 7676775624 | Mail: info@yellowandred.in

Language: EN KAN

    Follow us :


ಮೀನುಗಾರಿಕೆ ಇಲಾಖೆಯಲ್ಲಿ ಆಸಕ್ತಿ ಉಳ್ಳವರಿಗೆ ವಿಫುಲ ಅವಕಾಶಗಳಿವೆ ಯೋಗಾನಂದ

Posted date: 27 Oct, 2018

Powered by:     Yellow and Red

ಮೀನುಗಾರಿಕೆ ಇಲಾಖೆಯಲ್ಲಿ ಆಸಕ್ತಿ ಉಳ್ಳವರಿಗೆ ವಿಫುಲ ಅವಕಾಶಗಳಿವೆ ಯೋಗಾನಂದ

(ತಾಲ್ಲೂಕಿನಲ್ಲಿ ಅನೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದರೂ ಅನೇಕರಿಗೆ ಗೊತ್ತಿಲ್ಲ, ಅಥವಾ ಕೆಲವರಿಗಷ್ಟೇ ಸೀಮಿತವಾಗಿವೆ, ಹಾಗಾಗಿ ಪ್ರತಿ ಸೋಮವಾರ ನಿಮಗಾಗಿ ಇಲಾಖೆ ಮತ್ತು ಅಧಿಕಾರಿಗಳ ಪರಿಚಯ ನಿಮಗಾಗಿ)

ಮೀನುಗಾರಿಕೆ ಇಲಾಖೆಯಲ್ಲಿ ಮೀನು ಕೃಷಿ ಮಾಡುವ ಆಸಕ್ತಿ ಉಳ್ಳವರಿಗೆ ವಿಫುಲ ಅವಕಾಶಗಳಿವೆ, ನಿರುದ್ಯೋಗಿಗಳು, ಕಡಿಮೆ ಭೂಮಿ ಉಳ್ಳವರು ಆಸಕ್ತಿ ವಹಿಸ ಮೀನು ಕೃಷಿಯಲ್ಲಿ ತೊಡಗಿಕೊಂಡರೇ ಆರ್ಥಿಕವಾಗಿ ಸದೃಢರಾಗಬಹುದು, ಇಲಾಖೆಯು ಆಸಕ್ತರಿಗೆ ತರಬೇತಿಯ ಜೊತೆಗೆ ಸಹಾಯಧನವನ್ನು ನೀಡುತ್ತದೆ, ನಿರುದ್ಯೋಗ ಯುವಕ ಯುವತಿಯರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕ ಯೋಗಾನಂದ ನಮ್ಮ ಪತ್ರಿಕೆಯ ಸಂದರ್ಶನದ ಮೂಲಕ ಕರೆ ನೀಡಿದರು.

*ತಾಲ್ಲೂಕಿನ ಒಟ್ಟು ಕೆರೆಗಳು*

ತಾಲ್ಲೂಕಿನಲ್ಲಿ ಕಣ್ವ ಜಲಾಶಯ ಸೇರಿದಂತೆ ತೊಂಭತ್ತಾರು ಕೆರೆಗಳಿದ್ದು ನಲವತ್ತು ಹೆಕ್ಟೇರ
 ಗಿಂತ ಹೆಚ್ಚು ಪ್ರದೇಶವುಳ್ಳ ಕೆರೆಗಳಾದ ಮೂವತ್ತು ಕೆರೆಗಳು ಮೀನುಗಾರಿಕೆ ಇಲಾಖೆಯ ಸುಪರ್ದಿಗೆ ಬರುತ್ತವೆ, ಸಣ್ಣಪುಟ್ಟ ಕೆರೆಗಳು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ.

*ಹರಾಜು ಪ್ರಕ್ರಿಯೆ*

ಇಲಾಖೆಯ ನೋಟೀಸ್ ಬೋರ್ಡ್, ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯತ್, ಮೀನು ಸಹಕಾರ ಸಂಘಗಳು, ನಗರಸಭೆ ಮತ್ತು ಗ್ರಾಮ ಪಂಚಾಯತಿ ಕಛೇರಿಗಳು ಮತ್ತು  ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವುದರ ಮೂಲಕ ಕೆರೆಗಳ ಹರಾಜು ಪ್ರಕ್ರಿಯೆಯನ್ನು ಸಾರ್ವಜನಿಕರಿಗೆ ತಿಳಿಸಿಕೊಡಲಾಗುತ್ತದೆ.
ಒಂದು ಕೆರೆಯನ್ನು ಐದು ವರ್ಷಗಳ ಅವಧಿಗೆ ನೀಡಲಾಗುತ್ತದೆ, ಪ್ರತಿ ವರ್ಷವೂ ಶೇಕಡಾ ಐದರಷ್ಟು ಹಣವನ್ನು ಸೇರಿಸಿ ಕಟ್ಟಬೇಕು.
ಪ್ರತಿಬಾರಿ ಹರಾಜು ಕೂಗುವಾಗಲೂ ಹಿಂದಿನ ವರ್ಷದ ಹರಾಜು ಎಷ್ಟಿತ್ತೋ ಅದರ ಅರ್ಧಕ್ಕೆ ಸರ್ಕಾರಿ ಸವಾಲ್ ಕೂಗಲಾಗುತ್ತದೆ.

*ಖಾಸಗಿಯಾಗಿ ಮತ್ತು ಕೃಷಿ ಹೊಂಡದ ಮಾಲೀಕರಿಗೂ ಸಹಾಯ*

ನೀಲಿಕ್ರಾಂತಿ ಯೋಜನೆಯಡಿಯಲ್ಲಿ ಕನಿಷ್ಠ ಇಪ್ಪತ್ತು ಗುಂಟೆ ಜಮೀನಿರುವವರಿಗೆ ಮೀನು ಉತ್ಪಾದನೆ ಮಾಡಲು ಅನೇಕ ಸವಲತ್ತುಗಳನ್ನು ನೀಡುತ್ತೇವೆ.
ಇಪ್ಪತ್ತು ಗುಂಟೆ ಜಮೀನು ನೀರು ನಿಲ್ಲುವ ಭೂಮಿಯಾಗಿರಬೇಕು, ಮತ್ತು ನೀರಿನ ಸೌಲಭ್ಯವಿರಬೇಕು, ಅಂತವರು ಅರ್ಜಿ ಸಲ್ಲಿಸಿದರೆ ದಾಖಲೆಗಳನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು, ಸಾಮಾನ್ಯ ವರ್ಗಕ್ಕೆ ಶೇಕಡಾ ನಲವತ್ತು, ಮಹಿಳೆಯರು ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡಾ ಅರವತ್ತು, ಮೀನು ಮರಿಗಳಿಗೆ ತಲಾ ಐದು ಸಾವಿರ/ ಹತ್ತು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.
ದೊಡ್ಡ ಕೃಷಿ ಹೊಂಡಗಳಿಗೂ ಸಹ ಮೀನು ಮರಿಗಳನ್ನು ಕೊಳ್ಳಲು ಸಹಾಯ ಮಾಡಲಾಗುವುದು.

*ಅಲಂಕಾರಿಕ ಮೀನುಗಳ ಉತ್ಪಾದನೆ*

ಬೆಂಗಳೂರಿಗೆ ನಗರ ಸಮೀಪದಲ್ಲಿರುವುದರಿಂದ ಅಲಂಕಾರಿಕ ಮೀನುಗಳ ಉತ್ಪಾದನೆ ಮಾಡಿದರೆ ಅಧಿಕ ಲಾಭ ಪಡೆಯುವುದರಲ್ಲಿ ಸಂದೇಹವಿಲ್ಲ, ಅಲಂಕಾರಿಕ ಮೀನುಗಳನ್ನು ಉತ್ಪಾದಿಸಲು ಸಹ ಐದಾರು ಗುಂಟೆ ಜಮೀನು, ಸೂಕ್ತ ಭದ್ರತೆ ಮತ್ತು ನೀರು ಇದ್ದರೆ ಸಾಕು, ಮಾರುಕಟ್ಟೆಯನ್ನು ಅವರೇ ವಿಸ್ತರಿಸಿಕೊಳ್ಳಬೇಕು, ಸಾಕಾಣಿಕೆದಾರರು ತರಬೇತಿ ಪಡೆದರೆ ಉತ್ತಮ, ಇವರಿಗೂ ಸಹ ಶೇಕಡಾ ನಲವತ್ತು/ಅರವತ್ತು ಸಹಾಯ ಧನ ನೀಡಲಾಗುವುದು,

*ಮತ್ಯಾಶ್ರಯ ಯೋಜನೆ ಮತ್ತು ದೋಣಿ ಬಲೆ ವಿತರಣೆ*

ಮತ್ಯಾಶ್ರಯ ಯೋಜನೆಯಲ್ಲಿ ಮೀನುಗಾರರಿಗೆ ಮನೆಕಟ್ಟಿಕೊಳ್ಳಲು ಸಹ ಸಹಾಯ ಧನ ನೀಡಲಾಗುವುದು, ಸಾಮಾನ್ಯ ವರ್ಗಕ್ಕೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂಗಳು, ಪರಿಶಿಷ್ಟ ಪಂಗಡದವರಿಗೆ ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಗಳನ್ನು ಸಹಾಯಧನವಾಗಿ ನೀಡಲಾಗುತ್ತದೆ, ಈ ಯೋಜನೆಯ ಫಲಾನುಭವಿಗಳು ಬೇರೆ ಯೋಜನೆಯಲ್ಲಿ ವಸತಿ ಸಹಾಯಧನ ಪಡೆದಿರಬಾರದು.
ಹಾಗೂ ಮೀನು ಹಿಡಿಯಲು ಸಣ್ಣ ದೋಣಿ ಮತ್ತು ಬಲೆಯನ್ನು ಉಚಿತವಾಗಿ ನೀಡಲಾಗುವುದು.

*ಹಲವಾರು ರೀತಿಯ ಉಪಯೋಗಗಳು*

ಮೀನು ಮಾರಾಟ ಮಾಡಲು ದ್ವಿಚಕ್ರ ವಾಹನಕ್ಕೆ ಸಹಾಯಧನ, ಸಮಗ್ರ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯಧನ, ಪ್ರದರ್ಶನ ಮತ್ತು ತರಬೇತಿ, ಆವರ್ತಕ ನಿಧಿ, ತರಬೇತಿ ಮತ್ತು ತಾಂತ್ರಿಕತೆ ಹಾಗೂ ಆಧುನಿಕತೆ ಬಗ್ಗೆ ಹೊರ ರಾಜ್ಯಗಳಿಗೆ ಪ್ರವಾಸ ಮತ್ತು ಮೀನುಗಾರಿಕೆ ಸಹಕಾರ ಸಂಘಗಳಿಗೆ ಮೀನು ಮಾರುಕಟ್ಟೆ ಸ್ಥಾಪನೆಗಾಗಿ ಸಹಾಯಧನ ನೀಡಲಾಗುತ್ತದೆ.

*ಇರೋ ಮೂರು ಹುದ್ದೆಗಳಲ್ಲಿ ಒಂದು ಖಾಲಿ ಸ್ವಂತ ಕಟ್ಟಡವೂ ಇಲ್ಲ*

ಎಲ್ಲಾ ಇಲಾಖೆಗಳಂತೆ ಇಲ್ಲಿಯೂ ಸಿಬ್ಬಂದಿ ಕೊರತೆಯಿದೆ, ಇರುವ ಒಟ್ಟು ಮೂರು ಹುದ್ದೆಗಳಲ್ಲಿ ಒಂದು ಹುದ್ದೆ ಖಾಲಿ ಇದೆ, ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಕೆರೆಗಳನ್ನು ಇಲಾಖೆಗೆ ವಹಿಸುವ ಪ್ರಸ್ತಾಪವಿರುವುದರಿಂದ ಇನ್ನೂ ಹೆಚ್ಚಿನ ಸಿಬ್ಬಂದಿ ಬೇಕಾಗಬಹುದು, ಸದ್ಯ ಈಗ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಿದರೇ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಲಾಖೆಯನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಈಗ ಬಾಡಿಗೆ ಕಟ್ಟಡದಲ್ಲಿ ಇದ್ದು ಸ್ವಂತ ಕಟ್ಟಡ ಆಗಬೇಕಾಗಿದೆ.

*ಇಲಾಖೆಯಿಂದಲೇ ನಗರದಲ್ಲಿ ಮಾರುಕಟ್ಟೆ ಯೋಜನೆ*

ನಗರಸಭೆಯವರು ಜಾಗ ಮಂಜೂರು ಮಾಡಿದರೇ ನಗರದಲ್ಲಿ ಒಂದು ಸುಸಜ್ಜಿತ ಮೀನು ಮಾರಾಟ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ, ಇದಕ್ಕೆ ಸಂಬಂಧಿಸಿದಂತೆ ನಗರಸಭೆ ಮತ್ತು ದಂಡಾಧಿಕಾರಿಗಳಿಗೆ ಶೀಘ್ರವಾಗಿ ಮನವಿ ಸಲ್ಲಿಸಿ  ಯೋಜನೆ ಸಿದ್ದಪಡಿಸಲಾಗುವುದು.

*ಮೀನು ಸೇವನೆಯಿಂದ ಆರೋಗ್ಯ*

ಮೀನು ಪೌಷ್ಟಿಕ ಆಹಾರದ ಗಣಿ, ವಿಟಮಿನ್ ಮತ್ತು ಮಿನರಲ್ ಅಂಶಗಳು ಹೆಚ್ಚಿದ್ದು ಮೆದುಳು ಚುರುಕುಗೊಳ್ಳಲು ಸಹಕಾರಿಯಾಗುವುದು, ಹೃದಯ ಸಂಬಂಧಿ ಕಾಯಿಲೆಗಿದು ರಾಮಬಾಣ, ಕೊಬ್ಬಿನಂಶ ಕಡಿಮೆ ಇದ್ದು ಬೇಗ ಜೀರ್ಣವಾಗುತ್ತದೆ ಮತ್ತು ಗರ್ಭಿಣಿಯರಿಗೂ ಇದು ಉತ್ತಮ ಆಹಾರವಾಗಿದೆ, ಕನಿಷ್ಟ ತಿಂಗಳಿಗೆ ಮೂರ್ನಾಲ್ಕು ಬಾರಿಯಾದರೂ ಮೀನು ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ.

*ರಾಜ್ಯದಲ್ಲಿಯೇ ತಾಲ್ಲೂಕನ್ನೂ ಮೇಲ್ದರ್ಜೆಗೆ ತರುವ ಆಸೆ*

ಬೇರೆ ತಾಲ್ಲೂಕುಗಳಿಗೆ ಹೋಲಿಸಿದಾಗ ನಮ್ಮ ತಾಲ್ಲೂಕಿನ ಕೆರೆಗಳಲ್ಲಿ ಸದ್ಯ ಹೆಚ್ಚಿನ ನೀರಿನ ಸಂಗ್ರಹಣೆ ಇದ್ದು ಏತ ನೀರಾವರಿಯಿಂದ ಆಗಿಂದಾಗ್ಗೆ ನೀರು ತುಂಬಿಸುವುದರಿಂದ ಇಲ್ಲಿ ಮೀನು ಕೃಷಿಯನ್ಬು ಹೆಚ್ಚಾಗಿ ಮಾಡಬಹುದು, ಗ್ರಾಮ ಪಂಚಾಯತಿ ಕೆರೆಗಳನ್ನು ನಮ್ಮ ಇಲಾಖೆಗೆ ವಹಿಸಿ, ಅದಕ್ಕೆ ಬೇಕಾದ ಸಿಬ್ಬಂದಿ ಮತ್ತು ಅನುಕೂಲಗಳನ್ನು ಮೇಲಾಧಿಕಾರಿಗಳು ಒದಗಿಸುವುದರ ಜೊತೆಗೆ ಯುವಕ ಯುವತಿಯರು ಆಸಕ್ತಿಯಿಂದ ಮೀನು ಕೃಷಿಯಲ್ಲಿ ತೊಡಗಿಕೊಂಡರೆ ರಾಜ್ಯದಲ್ಲಿಯೇ ಮೇಲ್ದರ್ಜೆಗೆ ಏರಿಸಲು ಪ್ರಯತ್ನ ಮಾಡುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ಮೀನು ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಟಿ. ಯೋಗಾನಂದ
ಮೀನುಗಾರಿಕೆ ಸಹಾಯಕ ನಿರ್ದೇಶಕರು. (ಶ್ರೇಣಿ ೨)
ಚನ್ನಪಟ್ಟಣ.


ಗೋ ರಾ ಶ್ರೀನಿವಾಸ...
ಮೊ: 9845856139.



 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑