Tel: 7676775624 | Mail: info@yellowandred.in

Language: EN KAN

    Follow us :


ಹಾರಿಜಾನ್ ಲೇಕ್ ವ್ಯೂವ್ ಶಾಲೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

Posted date: 06 Nov, 2018

Powered by:     Yellow and Red

ಹಾರಿಜಾನ್ ಲೇಕ್ ವ್ಯೂವ್ ಶಾಲೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಇಲ್ಲಿನ ಹಾರಿಜಾನ್‌ಲೇಕ್ ವ್ಯೂವ್ ಪಬ್ಲಿಕ್ ಶಾಲೆಯು ಈ ಸಾರಿಯ ೬೩ನೇ ಕನ್ನಡ ರಾಜ್ಯೋತ್ಸವವನ್ನು ನುಡಿ ವೈಭವ ೨೦೧೮ ಆಗಿ ಆಚರಿಸಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚನ್ನಪಟ್ಟಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್. ಸೀತಾ ರಾಮು ಅವರು ಮಾತನಾಡಿ, ನಮ್ಮ ವಿದ್ಯಾರ್ಥಿ ಸಮೂಹ ಇಂದು ಮೊಬೈಲ್ ಹಾಗೂ ದೂರದರ್ಶನಕ್ಕೆ ಮೊರೆ ಹೋಗುತ್ತಿದ್ದಾರೆ. ಅವುಗಳು ಉತ್ತಮ ಸಂಸ್ಕೃತಿ ಯನ್ನು ಕಲಿಸುವುದಿಲ್ಲ. ಅದಕ್ಕೆ ನಮ್ಮ ಕವಿಗಳು, ಬರಹಗಾರರು, ವಿಚಾರ ವಂತರು ಬರೆದಿರುವ ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕವಿ ಕುವೆಂಪು ಅವರ, ಕವಿತೆಗಳಲ್ಲಿ, ಕನ್ನಡದ ಬಗ್ಗೆ ಅಭಿಮಾನವನ್ನು ಮೂಡಿ ಸಬಲ್ಲ, ಧೀಶಕ್ತಿಯು ಇದೆ. ಕನ್ನಡಕ್ಕೆ ೮ ಜ್ಞಾನಪೀಠ ಪ್ರಶಸ್ತಿ ಬಂದಿದ್ದೇ ನಮ್ಮ ಹೆಮ್ಮೆ.

ಕನ್ನಡ ಭಾಷೆಯು ಬೇರೆ ಭಾಷೆಗಿಂತ ಕಡಿಮೆಯೇನು ಇಲ್ಲ. ವ್ಯವಹಾರಕ್ಕೆ ಬೇಕಾದರೆ ಬೇರೆ ಭಾಷೆಯ ಆಶ್ರಯ ಬೇಕಿದ್ದರೆ ಇರಲಿ. ಆದರೆ, ಕನ್ನಡ ನಾಡಿನವರಾದ ನಾವು ಕನ್ನಡವನ್ನು ನಮ್ಮೆಲ್ಲರ ಉಸಿರಾಗಿಸಿಕೊಳ್ಳಬೇಕು ಎಂದು ಅಭಿ ಪ್ರಾಯ ವ್ಯಕ್ತಪಡಿಸಿದರು.

ಸಂದರ್ಭದಲ್ಲಿ ಮತ್ತೋರ್ವ ಅತಿಥಿ ಕರ್ನಾಟಕ ಜಾನ ಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸು.ತ. ರಾಮೇಗೌಡ ಅವರು ಮಾತನಾಡಿ, ಕುವೆಂಪು ಅವರು ಕೇವಲ ಕನ್ನಡದ ಬಗ್ಗೆ ಅಭಿಮಾನ ಮೂಡಿಸಲಿಲ್ಲ. ವೈಚಾರಿಕವಾಗಿ ಬದುಕುವುದನ್ನೂ ಕಲಿಸಿದರು.

ಅವರ ವಿಚಾರಗಳು ವಿದ್ಯಾರ್ಥಿಗಳು, ಶಿಕ್ಷಕರು ಗಳಿಗಷ್ಟೇ ಸೀಮಿತವಲ್ಲ. ಕನ್ನಡದಲ್ಲಿ ಬರೆಯುವ ವಿದ್ವಾಂಸರಿಗೂ ಪ್ರೇರಣೆ ಯಾಗಿವೆ.

ನಾಡಿನ ಪ್ರತಿಯೊಬ್ಬ ಬರಹಗಾರರು ಸಹ ತನ್ನದೇ ಆದ ವೈಶಿಷ್ಠವನ್ನು ಹೊಂದಿ ದ್ದಾರೆ ಎಂದರು. 

ರಾಜಾಶ್ರಯದಲ್ಲಿ ಕವಿಗಳು ಕಾವ್ಯ ರಚಿಸುತ್ತಿದ್ದಾಗ, ಅವು ಅವರ ಸಭಾಂಗಣ ಕ್ಕಷ್ಟೇ ಸೀಮಿತವಾಗಿರುತ್ತಿತ್ತು. ಈಗ ಕವಿಗಳ ಬರಹಗಳು ವಿಸ್ತಾರವಾಗಿವೆ. ಒಂದೊಂದು ಪುಸ್ತಕವೂ ಸಹ ಒಬ್ಬ ಸ್ನೇಹಿತನಾಗಿ, ಮಾರ್ಗದರ್ಶ ಕರಾಗಿ ಕೆಲಸ ಮಾಡುತ್ತವೆ ಎಂಬುದು ನಮಗೆ ಅರಿವಿಗೆ ಬರಬೇಕು ಎಂದರು.

ಈ ನೆಲದಲ್ಲಿ ಕನ್ನಡಕ್ಕೆ ವಿಶಿಷ್ಠ ಚೇತನ ತಂದುಕೊಟ್ಟ ಇತಿಹಾಸ ಇದೆ. ಗಂಗರ ದೊರೆ ಶ್ರೀಕುಮಾರ ೭ನೇ ಶತಮಾನದಲ್ಲಿ  ಗಜಶಾಸ್ತ್ರ ವನ್ನುಬರೆಯುತ್ತಾನೆ ಹೊರ ಗಿನಿಂದ ಬಂದ ಹಲವರು, ಇಲ್ಲಿ ಉನ್ನತ ಹಂತಕ್ಕೆ ಬೆಳೆದವರು ಇದ್ದಾರೆ. ಸಿ.ಕೆ.ವೆಂಕಟರಾಮಯ್ಯ ಹಾಗೂ ದೇ.ಜ.ಗೌ. ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುತ್ತಾರೆ. ದಾಸ ಪರಂಪರೆಯ ಹುಟ್ಟು ಇಲ್ಲಿ ಆಗುತ್ತದೆ.

ಹಾಗಾಗಿ, ಇಲ್ಲಿನ ಆಬಾಲವೃದ್ದರಾದಿಯಾಗಿ ವಿಶಿಷ್ಠ ಗುಣ ಹೊಂದಿದ ವರು ಎಂದರು.

ಸಂದರ್ಭದಲ್ಲಿ ಎಲ್.ಕೆ.ಜಿ. ವಿದ್ಯಾರ್ಥಿಗಳು ಕನ್ನಡಾಂಬೆಯ ಅಕ್ಕ-ಪಕ್ಕ ನಿಂತು ಒಬ್ಬೊಬ್ಬ ಜ್ಞಾನಪೀಠ ಪುರಸ್ಕೃತರಾಗಿ ಪರಿಚಯ ಮಾಡಿಕೊಂಡಿದ್ದು ವಿಶೇಷ ವಾಗಿತ್ತು.

ಈ ಸಂದರ್ಭದಲ್ಲಿ ಇಲ್ಲಿ ಜಾನಪದ ಲೋಕದ ರಂಗನಿರ್ದೇಶಕ ಬೈರನಹಳ್ಳಿ ಶಿವರಾಂ ಅವರನ್ನು ಸನ್ಮಾ ನಿಸಲಾಯಿತು.

ಅವರು ಸನ್ಮಾನಕ್ಕೆ ಉತ್ತರಿಸಿ, ಇಂದು ನಮ್ಮ ಪೋಷಕರು ತಮ್ಮ ಮಕ್ಕಳು ವೈದ್ಯರಾಗಬೇಕು. ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಹಿಂದೆ ಮಕ್ಕಳ ತಾಯಂದಿರು ಆಚಾ ರಕ್ಕೆ ಅರಸಾಗು, ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು ಎಂದು ಹರಸುತ್ತಿದ್ದರು ಎಂದು ಹೇಳಿ, ನಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಗುಣವಂತರನ್ನಾಗಿ ಬೆಳೆ ಸುವ ಪರಿಪಾಠ ಬೆಳೆಯಬೇಕು. ಆಗ ತನಗೆ ತಾನೇ ಮಗುವಿನಲ್ಲಿ ಭಾಷೆಯ ಮೇಲಿನ ಅಭಿಮಾನ ತಂದೆ -ತಾಯಿಗಳು ಹಾಗೂ ಗುರುಗಳ ಮೇಲೆ ಗೌರವ ಹೆಚ್ಚುತ್ತದೆ ಎಂದು ಹೇಳಿದರು.

ಕಾಲೇಜು ವಿಭಾಗ ಪ್ರಭಾರ ಪ್ರಾಂಶುಪಾಲರಾದ ಜೆಡಿಯನ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ, ಕಿರಿಯ ಪ್ರಾಥಮಿಕ ಶಾಲೆಯ ಲತಾ, ಕಂಪ್ಯೂಟರ್ ನಿರ್ವಾಹಕಿ ಪಿ ಬೃಂದಾ ಹಾಗೂ ನರ್ಸರಿ ವಿಭಾಗದ ವಿನೋದಿನಿಯವರು ಇದ್ದರು.

ಇಡೀ ಕಾರ್ಯಕ್ರಮ ವನ್ನು ಮಕ್ಕಳೇ ನಿರ್ವಹಿಸಿದ್ದು, ವಿಶೇಷವಾಗಿತ್ತು, ಸ್ವಾಗತ ವನ್ನು ನಿಸರ್ಗಾ ಬಿ. ಮಾಡಿದರೆ, ನಿರೂಪಣೆಯನ್ನು ಮಧು ಚಂದ್ರ, ದಿವ್ಯ ಮಾಡಿದರು. ಪ್ರಸ್ತಾವಿಕ ನುಡಿಯನ್ನು, ಮಹಮದ್ ಕೈಫ್ ಉಲ್ಲಾ ಕಾಜಲ್, ವಂದನಾರ್ಪಣೆ ಯನ್ನು ಯಶಸ್ ಆರ್. ಮಾಡಿದರು.

ನಂತರ ಮಕ್ಕಳಿಂದ ಕನ್ನಡದ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮ ಹಲವು ಹತ್ತು ರೀತಿಯ ವಿಶೇಷತೆ ಯನ್ನು ಹೊಂದಿತ್ತು.

 

ಗೋ ರಾ ಶ್ರೀನಿವಾಸ...

ಮೊ: 9845856139.



 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑