Tel: 7676775624 | Mail: info@yellowandred.in

Language: EN KAN

    Follow us :


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಡ ವಿದ್ಯಾರ್ಥಿಗಳ ಪಾಲಿಗೆ ಕಲ್ಯಾಣ ಇಲಾಖೆಯೇ ಸರಿ

Posted date: 12 Nov, 2018

Powered by:     Yellow and Red

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಡ ವಿದ್ಯಾರ್ಥಿಗಳ ಪಾಲಿಗೆ ಕಲ್ಯಾಣ ಇಲಾಖೆಯೇ ಸರಿ

ಹಲವಾರು ಇಲಾಖೆಗಳ ಪೈಕಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳು ಮತ್ತು ಬಡ ಪೋಷಕರ ಪಾಲಿಗೆ ಕಲ್ಯಾಣ ಇಲಾಖೆಯೇ ಆಗಿದೆ, ಇಲ್ಲಿ ಓದಿದ ಬಹುತೇಕ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲದೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉನ್ನತ ಅಧಿಕಾರಿಗಳಾಗಿ ಇಂದಿಗೂ ಕೆಲಸ ಮಾಡುತ್ತಿದ್ದಾರೆ, ಈ ಇಲಾಖೆಯ ಪ್ರಭಾರ ವಿಸ್ತರಣಾಧಿಕಾರಿಗಳಾದ ಎನ್ ಮೋಹನ್ ರವರ ಸಂದರ್ಶನ ತಮ್ಮ ಮುಂದೆ...

ಸಹಕಾರಿ ಧುರೀಣ ಮಾಜಿ ಮುಖ್ಯಮಂತ್ರಿ ಡಿ ದೇವರಾಜು ಅರಸರ ಸಾರ್ಥಕ ಶ್ರಮದ ಫಲ

೧೯೭೭ ರಲ್ಲಿ ಅಂದಿನ ಮುಖ್ಯಮಂತ್ರಿ ಡಿ ದೇವರಾಜು ಅರಸು ರವರು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಮತ್ತು ಸವಲತ್ತುಗಳು ದೊರೆಯಬೇಕೆಂಬ ಹೆಬ್ಬಯಕೆಯಿಂದ ಸಮಾಜ ಕಲ್ಯಾಣ ಇಲಾಖೆಯೊಳಗಿದ್ದ ಈ ಇಲಾಖೆಯನ್ನು ಬೇರ್ಪಡಿಸಿ ಹಿಂದುಳಿದ ವರ್ಗಗಳ ಇಲಾಖೆ ಎಂಬ ನಾಮದಡಿಯಲ್ಲಿ ಸ್ಥಾಪನೆ ಮಾಡಿದರು, ಅಂದು ಅವರು ಇಟ್ಟ ದಿಟ್ಟ ಹೆಜ್ಜೆಯಿಂದ ಇಂದು ಸಾಮಾನ್ಯರೂ ಸಹ ಸರ್ಕಾರದಲ್ಲಿನ ಉನ್ನತ ದರ್ಜೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಅನುಕೂಲವಾಗಿದೆ.

ತಾಲೂಕಿನಲ್ಲಿ ಒಂಭತ್ತು ವಿದ್ಯಾರ್ಥಿ ನಿಲಯಗಳು

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಎಂಬ ಎರಡು ರೀತಿಯ ಒಂಭತ್ತು ವಿದ್ಯಾರ್ಥಿ ನಿಲಯಗಳಿದ್ದು ಒಟ್ಟು ಆರುನೂರಾ ಎಪ್ಪತ್ತು ವಿದ್ಯಾರ್ಥಿಗಳು ಸೌಲಭ್ಯ ಪಡೆದುಕೊಂಡಿದ್ದಾರೆ, ಇದರಲ್ಲಿ ಮೂರು ವಿದ್ಯಾರ್ಥಿ ನಿಲಯಗಳು ಹೆಣ್ಣು ಮಕ್ಕಳಿಗೆ ಹಾಗೂ ನಾಲ್ಕು ವಿದ್ಯಾರ್ಥಿ ನಿಲಯಗಳು ಗಂಡು ಮಕ್ಕಳಿಗಾಗಿ ಮೀಸಲಾಗಿವೆ.

ಚಚ್೯ ರಸ್ತೆಯಲ್ಲಿ ಒಂದು ಮತ್ತು ಕುವೆಂಪು ನಗರದ ಆರನೇ ತಿರುವಿನಲ್ಲಿ ಎರಡು ಅರಳಾಳುಸಂದ್ರ, ಬೇವೂರು, ಚಿಕ್ಕಮಳೂರಿನಲ್ಲಿ ಎರಡು, ತಗಚಗೆರೆ, ಮಹದೇಶ್ವರ ದೇವಾಲಯದ ಆವರಣದಲ್ಲಿ ತಲಾ ಒಂದರಂತೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹೆಣ್ಣು ಮತ್ತು ಗಂಡು ಮಕ್ಕಳ ಒಟ್ಟು ಒಂಭತ್ತು ವಿದ್ಯಾರ್ಥಿ ನಿಲಯಗಳಿದ್ದು ಎಲ್ಲವೂ ಉತ್ತಮ ಸೌಲಭ್ಯಗಳನ್ನು ಹೊಂದಿವೆ.

ಒಂಭತ್ತರಲ್ಲಿ ಆರು ವಿದ್ಯಾರ್ಥಿ ನಿಲಯಗಳು ಮತ್ತು ಕಛೇರಿ ಬಾಡಿಗೆ ಕಟ್ಟಡದಲ್ಲಿ

ಒಂಭತ್ತು ವಿದ್ಯಾರ್ಥಿ ನಿಲಯಗಳಲ್ಲಿ ಅರಳಾಳುಸಂದ್ರ, ಬೇವೂರು ಮತ್ತು ಮಹದೇಶ್ವರ ದೇವಸ್ಥಾನದ ಬಳಿ ಇರುವ ವಿದ್ಯಾರ್ಥಿ ನಿಲಯಗಳನ್ನು ಹೊರತುಪಡಿಸಿದರೆ ಮಿಕ್ಕ ಆರು ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಸಹ ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ, ಇವುಗಳ ಒಂದು ತಿಂಗಳ ಒಟ್ಟು ಬಾಡಿಗೆ ಎರಡು ಲಕ್ಷದ ಮೂವತ್ಮೂರು ಸಾವಿರದ ಮೂವತ್ತು ಮೂರು (೨,೩೩,೦೩೩) ರೂಪಾಯಿಗಳು.

ನಿವೇಶನ, ಕಾಮಗಾರಿ ಅಧಿಕಾರಿಗಳ ನಿರುತ್ಸಾಹ

ನಗರದ ಕೊತ್ತನಹಳ್ಳಿ ಕೆರೆಯಲ್ಲಿ ನಾಲ್ಕು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಒಂದು ಎಕರೆ ಪ್ರದೇಶವನ್ನು ಇಲಾಖೆಗೆ ನೀಡಿದೆಯಾದರೂ ಇನ್ನೂ ಕಟ್ಟಡ ಕಟ್ಟಲು ಇಲಾಖೆ ಮುಂದಾಗಿಲ್ಲ, ತಗಚಗೆರೆ ಗ್ರಾಮದಲ್ಲಿ ಇಪ್ಪತ್ತು ಗುಂಟೆ ಖಾಸಗಿ ಜಮೀನನ್ನು ಸರ್ಕಾರ ಖರೀದಿಸಿದ್ದು ಅಲ್ಲಿಯೂ

ಸಹ ಕಾಮಗಾರಿಗೆ ಚಾಲನೆ ನೀಡಿಲ್ಲ, ಇನ್ನೊಂದು ದುರಂತವೆಂದರೆ ಚಿಕ್ಕಮಳೂರಿನಲ್ಲಿ ಒಂದು ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದೆ.

 

ವಸತಿ ನಿಲಯ ವಂಚಿತ ವಿದ್ಯಾರ್ಥಿಗಳಿಗೂ ಸಹ ವಿದ್ಯಾಸಿರಿ ಯೋಜನೆಯಲ್ಲಿ ಪ್ರೋತ್ಸಾಹ

ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿಗಳು ಹೆಚ್ಚಾದ ಕಾರಣ ಆ ವಿದ್ಯಾರ್ಥಿಗೆ ಪ್ರವೇಶ ದೊರೆಯದಿದ್ದಲ್ಲಿ ಆ ವಿದ್ಯಾರ್ಥಿಗೆ ಆತ ಓದುವವರೆಗೂ ಕಾಲೇಜಿನ ಹಾಜರಾತಿ ಮೇರೆಗೆ ವರ್ಷದಲ್ಲಿ ಹತ್ತು ತಿಂಗಳುಗಳ ಕಾಲ ಪ್ರತಿ ವರ್ಷವೂ ತಿಂಗಳಿಗೆ ೧,೫೦೦*೧೦ ರ ಲೆಕ್ಕದಲ್ಲಿ ೧೫,೦೦೦ ರೂಪಾಯಿಗಳನ್ನು ಇಲಾಖೆಯ ವತಿಯಿಂದ ನೀಡಲಾಗುತ್ತಿದೆ.

ವಿದ್ಯಾಸಿರಿ ಯೋಜನೆಯ ಹೆಸರಿನಲ್ಲಿ ವಿದ್ಯಾರ್ಥಿ ವೇತನ ಮತ್ತು ಶುಲ್ಕದಲ್ಲಿ ವಿನಾಯಿತಿಯನ್ನು ನೀಡಲಾಗುತ್ತದೆ.

 

ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯಗಳು

ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಮಂಚ, ಒಳ್ಳೆಯ ಕಂಪನಿಯ ಹಾಸಿಗೆ ಮತ್ತು ದಿಂಬು, ಪ್ರತಿ ತಿಂಗಳು 'ನಿರ್ಮಲ ಶುಚಿ ಸಂಭ್ರಮ' ಎನ್ನುವ ಹೆಸರಿನಲ್ಲಿ ಒಂದು ಕಿಟ್ ನೀಡಲಾಗುತ್ತದೆ, ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ಬೇಕಾದ ದಿನನಿತ್ಯೋಪಯೋಗಿ ವಸ್ತುಗಳು ಅದರಲ್ಲಿರುತ್ತವೆ, ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಕ್ಷೌರದ ವ್ಯವಸ್ಥೆ ಸಹ ಇದೆ, ಇನ್ನೂ ಊಟದ ಮೆನು ನೋಡಿದರೆ ಅರ್ಥವಾಗುತ್ತದೆ ಪ್ರತಿ ನಿತ್ಯವೂ ವಿಟಮಿನ್, ಪೌಷ್ಟಿಕಾಂಶವುಳ್ಳ ತರಕಾರಿಗಳು ಮತ್ತು ಕಾಳುಗಳ ಊಟ, ದಿನಬಿಟ್ಟುದಿನ ಹಣ್ಣು ಹಾಗೂ ಮೊಟ್ಟೆ, ತಿಂಗಳಿಗೆರಡು ಬಾರಿ ಮಾಂಸದೂಟ ತಪ್ಪುವುದಿಲ್ಲ.

 

ಅಧಿಕಾರಿ ಮತ್ತು ಮೇಲ್ವಿಚಾರಕರ ಕೊರತೆ

ಎಲ್ಲಾ ಇಲಾಖೆಯಂತೆ ಇಲ್ಲಿಯೂ ಸಹ ಕೆಲ ಸಿಬ್ಬಂದಿ ಕೊರತೆ ಇದೆ, ಈ ಹಿಂದೆ ವಿಸ್ತರಣಾಧಿಕಾರಿಯಾಗಿದ್ದ ಬಿ ನಾರಾಯಣ ಸ್ವಾಮಿ ಯವರು ವರ್ಗಾವಣೆಯಾದ ನಂತರ ಆ ಜಾಗಕ್ಕೆ ಮತ್ತೊಬ್ಬ ಅಧಿಕಾರಿ ಬಂದಿಲ್ಲ, ಮಹತ್ವಾಕಾಂಕ್ಷೆಯ ಮಾನವತೆಯುಳ್ಳ ಅಧಿಕಾರಿ ಎನ್ ಮೋಹನ್ ರವರು ಪ್ರಭಾರ ವಿಸ್ತರಣಾಧಿಕಾರಿಯಾಗಿ ಆ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ, ಮೂರು ವಿದ್ಯಾರ್ಥಿ ನಿಲಯಕ್ಕೆ ಮೇಲ್ವಿಚಾರಕರಿಲ್ಲದೆ ಹತ್ತಿರವಿರುವ ಮತ್ತೊಂದು ನಿಲಯದ ಮೇಲ್ವಿಚಾರಕರು ನೋಡಿಕೊಳ್ಳುತಿದ್ದಾರೆ  ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಮೇಲ್ವಿಚಾರಕರಿಬ್ಬರಿಗೂ ತೊಂದರೆಯಾಗುತ್ತಿದೆ.

 

ಅನುದಾನಿತ ನಿಲಯಗಳಿಗೂ ಇಲಾಖೆ ಸಾಥ್

ಮಾರುತಿ ಅನುದಾನ ವಸತಿ ನಿಲಯ, ವಿರಕ್ತ ಮಠದ ವಿದ್ಯಾರ್ಥಿ ನಿಲಯ ಹಾಗೂ ಇನ್ನಿತರ ಅನುದಾನ ವಿದ್ಯಾರ್ಥಿ ವಸತಿ ನಿಲಯಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೇ ಅನುದಾನ ನೀಡುತ್ತಾ ಬಂದಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮೋಹನ್ ರವರ ಹಿತನುಡಿಗಳು

ಎಷ್ಟೋ ಪೋಷಕರು ತಮ್ಮ ಮಕ್ಕಳನ್ನು ಹಾಸ್ಟೆಲ್ ಗೆ ಸೇರಿಸಿದ ನಂತರ ಅವರ ಜಂಜಾಟದಲ್ಲಿ ಮಕ್ಕಳನ್ನು ಮರೆತೇ ಬಿಡುತ್ತಾರೆ, ಹಾಗಾಗಬಾರದು ತಿಂಗಳಿಗೊಮ್ಮೆಯಾದರೂ ಪೋಷಕರು ಹಾಸ್ಟೆಲ್ ಗೆ ಭೇಟಿ ನೀಡಿ ತಮ್ಮ ಮಕ್ಕಳನ್ನು ವಿಚಾರಿಸಬೇಕು, ಹಾಸ್ಟೆಲ್ ನಿಂದ ಏನು ತೊಂದರೆಯಾಗದಿದ್ದರೂ ಹೊರಗಡೆ ಕಾಲೇಜಿಗೆ ಹೋದ ಸಂದರ್ಭದಲ್ಲಿ ಅವರು ದುರ್ನಡತೆಗೊಳಗಾಗಬಹುದು, ಕೆಟ್ಟವರಾದ ನಂತರ ಎಚ್ಚರ ವಹಿಸುವ ಬದಲು ಈಗಲೇ ಎಚ್ಚೆತ್ತುಕೊಂಡರೆ ಮಕ್ಕಳು ಒಳ್ಳೆಯ ದಾರಿಯಲ್ಲಿ ಸಾಗುತ್ತಾರೆ.

ನಮ್ಮ ಹಾಸ್ಟೆಲ್ ನಲ್ಲಿ ಬೆಳೆದ ಮಕ್ಕಳು ಇಂದು ದೇಶವಿದೇಶಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಣ್ಣ ಹುದ್ದೆಯಿಂದ ಹಿಡಿದು ಉನ್ನತ ದರ್ಜೆಯ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಅದಕ್ಕಿಂತ ಹೆಚ್ಚಾಗಿ ಉತ್ತಮ ಪ್ರಜೆಗಳಾಗಿದ್ದಾರೆ, ಅವರುಗಳು ಇಲ್ಲಿ ಏನೇನು ಸವಲತ್ತುಗಳನ್ನು ಪಡೆದುಕೊಂಡು ಹೋಗಿದ್ದಾರೋ ಅದನ್ನು ಅವರು ಸಮಾಜದ ಒಳಿತಿಗಾಗಿ ಬಡವರ ಏಳ್ಗೆಗಾಗಿ ಶ್ರಮಿಸಿದರೆ ಇಲಾಖೆಯ ಋಣ ತೀರಿಸಿದಂತೆ, ಆದ್ದರಿಂದ ಅವರು ಮತ್ತೊಬ್ಬರಿಗೆ ಬೆಳಕಾಗಬೇಕೆಂದು ತಮ್ಮ ಮನದಾಳದಿಂದ ನುಡಿದರು.

ಹೃದಯವಂತ ಅಧಿಕಾರಿ ಮೋಹನ್

ಒಂದು ವಿದ್ಯಾರ್ಥಿ ನಿಲಯದಲ್ಲಿ ಇಂತಿಷ್ಟೇ ಮಕ್ಕಳು ಮಾತ್ರ ಇರಬೇಕೆಂಬ ನಿಯಮವಿದೆ, ಆದರೆ ಮೋಹನ್ ರವರು ಅತಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗೆ ಪ್ರವೇಶ ಸಿಕ್ಕದೆ ಆತ ವಿದ್ಯಾರ್ಥಿ ಜೀವನವನ್ನೇ ಕಳೆದುಕೊಳ್ಳುತ್ತಾನೆಂದು ತಿಳಿದು ಬಂದರೆ ಆ ವಿದ್ಯಾರ್ಥಿಯನ್ನು ಕರೆದು ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳ ಮನವೊಲಿಸಿ ಅವರಲ್ಲೊಬ್ಬರಾಗಿರುವಂತೆ ತಿಳಿಸಿ ಆ ವಿದ್ಯಾರ್ಥಿಗೆ ಎಲ್ಲಾ ಸವಲತ್ತುಗಳನ್ನು ಕೆಲವು ಬಾರಿ ಸ್ವಂತ ಹಣದಲ್ಲಿ ವಿದ್ಯಾರ್ಥಿಗಳನ್ನು ಸಲುಹಿದ್ದಾರೆ, ಇದು ಒಂದೆರಡಲ್ಲ, ಪ್ರತಿವರ್ಷವೂ ಹತ್ತು ಹದಿನೈದು ಮಂದಿ ವಿದ್ಯಾರ್ಥಿಗಳು ಈ ಸದುಪಯೋಗವನ್ನು ಪಡೆದು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮೇಲ್ಮಟ್ಟಕ್ಕೇರಿದ್ದಾರೆ, ಇದು ನಿಯಮಗಳಿಗೆ ವಿರುದ್ದವಾದರೂ ಮಾನವೀಯತೆ ಮತ್ತು ವಿದ್ಯಾರ್ಥಿಯ ಜೀವನದ ದೃಷ್ಟಿಯಿಂದ ಇದೊಂದು ಶ್ಲಾಘನೀಯ ಕಾರ್ಯವಾಗಿದೆ.

ತಾಲ್ಲೂಕಿನ ಎಲ್ಲಾ ಇಲಾಖೆಗಳಿಗಿಂತಲೂ ಒಂದು ಕೈ ಮೇಲಾದ ಇಲಾಖೆ ಎಂದರೆ ಅದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇಲ್ಲಿ ಅಧಿಕಾರಿಯಾದವರಿಗೆ ಲಂಚ ರುಸುವತ್ತು ಹಾಗೂ ಬಡ್ತಿ ಇಲ್ಲವಾದ್ದರಿಂದ ತುಂಬಾ ಚನ್ನಾಗಿ ಬೆಳೆಯಲು ಮತ್ತು ಬೆಳೆಸಲು ಕಾರಣವಾಗಿದೆ.

 

ಮುಂದಿನ ದಿನಗಳಲ್ಲಿ ಇಲಾಖೆಯ ಉಪಯೋಗಗಳನ್ನು ವಿದ್ಯಾರ್ಥಿಗಳು ಸದುಪಯೋಗಿಸಿಕೊಳ್ಳಲಿ.

 

ಗೋ ರಾ ಶ್ರೀನಿವಾಸ...

ಮೊ:9845856139.



 

ಪ್ರತಿಕ್ರಿಯೆಗಳು2 comments

  • Kumar Police department wrote:
    12 Nov, 2018 08:21 pm

    Sri Mr. Mohan sir good persons and good ♥. Person

  • Prashantha k p wrote:
    13 Nov, 2018 10:57 am

    Mohan sir friendly with all students and also guide for the students. Sir provides all facilities whatever students want. Thank you sir..........

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑