Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ಕೆಎಸ್ಆರ್ಟಿಸಿ ಘಟಕಕ್ಕೆ ಎಲ್ಲಾ ಸೌಕರ್ಯವಿದ್ದೂ ನಷ್ಟ ಅನುಭವಿಸಲು ಕಾರಣಗಳೇನು?

Posted date: 19 Nov, 2018

Powered by:     Yellow and Red

ಚನ್ನಪಟ್ಟಣ ಕೆಎಸ್ಆರ್ಟಿಸಿ ಘಟಕಕ್ಕೆ ಎಲ್ಲಾ ಸೌಕರ್ಯವಿದ್ದೂ ನಷ್ಟ ಅನುಭವಿಸಲು ಕಾರಣಗಳೇನು?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಯ ಚನ್ನಪಟ್ಟಣದ ಘಟಕದಲ್ಲಿ ಸಿಬ್ಬಂದಿಯ ಜೊತೆಗೆ ಸಕಲ ಸೌಲಭ್ಯಗಳಿದ್ದು ನಷ್ಟ ಅನುಭವಿಸುತ್ತಿದೆ, ಪ್ರತಿ ಕಿಲೋಮೀಟರ್ ಗೆ ಆರು ರೂಪಾಯಿಗಳಿಂದ ಏಳು ರೂಪಾಯಿಗಳಷ್ಟು ನಷ್ಟವನ್ನು ಚನ್ನಪಟ್ಟಣ ತಾಲ್ಲೂಕಿನ ಕೆ ಎಸ್ ಆರ್ ಟಿ ಸಿ ಘಟಕ ಎದುರಿಸುತ್ತಿದೆ, ಇದಕ್ಕೆ ಕಾರಣವೇನು ? ಅದನ್ನು ತಡೆಗಟ್ಟಲು ಯಾರು ? ಹೇಗೆ ? ಯಾರ ವಿರುದ್ದ ಕ್ರಮ ಕೈಗೊಳ್ಳಬೇಕೆಂಬ ಮಾಹಿತಿಯನ್ನು ಘಟಕದ ಅಧಿಕಾರಿ ರಾಘವೇಂದ್ರ ರವರು ತೆರೆದಿಟ್ಟಿದ್ದಾರೆ, ಈ ಎಲ್ಲಾ ಆಗುಹೋಗುಗಳಿಗೆ ಸಂಬಂಧಿಸಿದ ಮಾಹಿತಿ ನಿಮ್ಮ ಮುಂದೆ...

ಚನ್ನಪಟ್ಟಣ ತಾಲ್ಲೂಕಿನ ಬಹುತೇಕ ಎಲ್ಲಾ ಹಳ್ಳಿಗಳಿಗೂ ಸರ್ಕಾರಿ ಬಸ್ಸುಗಳ ಸೌಲಭ್ಯವಿದೆ, ಕೆಲವೊಂದು ಗ್ರಾಮಗಳ ಒಳಗೆ ಹೋಗದಿದ್ದರೂ ಸಮೀಪದ ನಿಲ್ದಾಣ (ಗೇಟ್) ತನಕ ಸಮಯಕ್ಕೆ ಸರಿಯಾಗಿ ಬಸ್ಸುಗಳು ತಲುಪುತ್ತಿವೆ.

ಚನ್ನಪಟ್ಟಣದಿಂದ ಮದ್ದೂರು, ಮಂಡ್ಯ ಮತ್ತು ರಾಮನಗರ, ಬಿಡದಿಗೆ ನೇರವಾದ ಷಟಲ್ ಬಸ್ ಗಳಿಲ್ಲ, ಆದರೆ ರಾಮನಗರದಿಂದ ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಬಿಡದಿ, ಕೆಂಗೇರಿ ಮತ್ತು ಬೆಂಗಳೂರಿನವರೆಗೂ ಷಟಲ್ ಬಸ್ ಗಳಿವೆ, ಪ್ರಯಾಣಿಕರಿಗೆ ತೊಂದರೆಯಾಗದಿರಲೆಂದು ಎಲ್ಲಿ ಕೈ ತೋರಿಸುತ್ತಾರೋ ಅಲ್ಲಿಯೇ ನಿಲ್ಲಿಸಿ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿದೆ.

ಚನ್ನಪಟ್ಟಣ ಘಟಕಕ್ಕೆ ಸಂಬಂಧಿಸಿದಂತೆ ಪ್ರತಿ ಕಿಲೋಮೀಟರ್ ಗೆ ೩೩ ರೂಪಾಯಿಗಳಿಂದ ೩೪ ರೂಪಾಯಿಗಳ ಖರ್ಚು ಬರುತ್ತದೆಯಾದರೂ ತಾಲ್ಲೂಕಿನಾದ್ಯಂತ ಬರುತ್ತಿರುವ ಹಣ ಕೇವಲ ೨೭ ರೂಪಾಯಿಗಳಿಂದ ೨೮ ರೂಪಾಯಿಗಳ
 ಮಾತ್ರ, ಅಂದರೆ ಆರು ರೂಪಾಯಿಗಳಿಂದ ಏಳು ರೂಪಾಯಿಗಳು ಸರ್ಕಾರ ಕ್ಕೆ ಹೊರೆಯಾಗುತ್ತಿದೆ.

ಇದಕ್ಕೆಲ್ಲ ಕಾರಣ ನೀತಿ ನಿಯಮಗಳನ್ನು ಪಾಲಿಸದ ಆಫೇ ಆಟೋಗಳು ಮತ್ತು ಖಾಸಗಿ ಬಸ್ಸುಗಳು, ಸುರಕ್ಷತೆ ಇಲ್ಲದ ಖಾಸಗಿ ವಾಹನಗಳನ್ನು ಸಂಬಂಧಿಸಿದ ಹಿರಿಯ ಅಧಿಕಾರಿಗಳು ಕಾನೂನು ಪ್ರಕಾರ ತಡೆಗಟ್ಟಿದರೆ ಸಾಕು ಪ್ರಯಾಣಿಕರ ಪ್ರಾಣವೂ ಉಳಿಯುತ್ತದೆ, ಸಾರಿಗೆ ಬಸ್ಸುಗಳ ಆದಾಯವೂ ದ್ವಿಗುಣವಾಗುತ್ತದೆ.

ಖಾಸಗಿ ಬಸ್ಸುಗಳು ಕೆಲವು ದೊಡ್ಡ ದೊಡ್ಡ ಗ್ರಾಮಗಳಿಗಷ್ಟೇ ಸೀಮಿತವಾಗಿವೆ, ನಮ್ಮ ಬಸ್ಸುಗಳು ಹೊರಡುವ ಸಮಯವನ್ನು ಹೊಂದಿಸಿಕೊಂಡು ಒಂದೈದು ನಿಮಿಷಗಳ ಕಾಲ ಬೇಗ ಹೊರಡುತ್ತವೆ ಇಲ್ಲವೇ ಪೈಪೋಟಿಗಿಳಿದು ಯದ್ವಾತದ್ವಾ ವೇಗಮಿತಿ ಇಲ್ಲದೆ ಮನಸೋ ಇಚ್ಚೆ ಹೋಗುತ್ತಾರೆ ಇದರಿಂದ ನಮ್ಮ ಇಲಾಖೆಗೆ ನಷ್ಟವಾಗುವುದರ ಜೊತೆಗೆ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ.

ಆಫೇ ಆಟೋಗಳಲ್ಲಿ ಕೇವಲ ಮೂರು ಮಂದಿ ಪ್ರಯಾಣಿಕರು ಮಾತ್ರ ಕೂರಲು ಅವಕಾಶ ನೀಡಲಾಗಿದೆಯಾದರೂ ಹದಿನೈದಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಾರೆ, ಅದು ತ್ರಿಚಕ್ರ ವಾಹನವಾಗಿರುವುದರಿಂದ ಏಕಾಏಕಿ ತಹಬದಿಗೆ ತರಲು ಸಾಧ್ಯವಾಗುವುದಿಲ್ಲ, ಇನ್ನೂ ಪ್ರಯಾಣಿಕರಿಗೆ ಯಾವುದೇ ರೀತಿಯ ಭದ್ರತೆಯಂತು ಇಲ್ಲವೇ ಇಲ್ಲಾ, ಈ ಆಟೋಗಳು ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಹೋಗುವುದರಿಂದ ನಮ್ಮ ಇಲಾಖೆಗೆ ಆರ್ಥಿಕವಾಗಿ ಹೊಡೆತ ಬೀಳುತ್ತಿದೆ.
ಆಟೋಗಳ ಆಟಾಟೋಪವನ್ನು ನಿಲ್ಲಿಸಲು ರಾಮನಗರದ ಆರ್ ಟಿ ಓ, ಪೋಲೀಸ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೂ ಸಹ ದಾಖಲೆ ಸಮೇತ ವರದಿ ಕೊಟ್ಟಿದ್ದರೂ ಸಹ ಕ್ರಮ ಕೈಗೊಂಡಿಲ್ಲ.

ನಮ್ಮ ತಾಲ್ಲೂಕಿನಲ್ಲಿ ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಿನನಿತ್ಯದ ಪಾಸ್ ಗಳನ್ನು ನೀಡಲಾಗಿದೆ, ವಿದ್ಯಾರ್ಥಿ ಪಾಸ್ ಗಳಲ್ಲದೆ ಸರ್ಕಾರ ನಿಗದಿಪಡಿಸಿರುವಂತಹ ವಿಕಲಚೇತನರು, ಹಿರಿಯ ನಾಗರೀಕರು, ಅಂಧರು, ಸ್ವಾತಂತ್ರ್ಯ ಹೋರಾಟಗಾರರು ಅಥವಾ ಕುಟುಂಬ, ಗೋವಾ ವಿಮೋಚನಾ ಚಳವಳಿಗಾರರು, ಎಂಡೋಸಲ್ಫಾನ್ ಪೀಡಿತರು, ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಸೇರಿದಂತೆ ಇನ್ನೂ ಅನೇಕರಿಗೆ ಪಾಸ್ ಗಳನ್ನು ವಿತರಿಸಲಾಗಿದೆ.

ಬಹುದೊಡ್ಡ ಅಪಘಾತಗಳಿಂದಾದ ವಾಹನಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ರೀತಿಯ ದುರಸ್ತಿಯನ್ನು ನಮ್ಮ ಘಟಕದಲ್ಲಿಯೇ ನಿರ್ವಹಣೆ ಮಾಡುತ್ತೇವೆ, ಅದಕ್ಕೆ ಸಂಬಂಧಿಸಿದ ಬಿಡಿಭಾಗಗಳು ಮತ್ತು ನುರಿತ ಸಿಬ್ಬಂದಿಗಳು ನಮ್ಮಲ್ಲಿ ಇದ್ದಾರೆ.

ಬಸ್ ನಿಲ್ದಾಣವೂ ಸಹ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿಯೇ ‌ಅತಿ ದೊಡ್ಡದಾಗಿ ಮತ್ತು ಸುಂದರವಾಗಿದೆ, ಪಾರ್ಕಿಂಗ್ ಇದ್ದರೂ ಸಹ ಖಾಸಗಿ ವಾಹನಗಳ ಮಾಲೀಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುವುದರಿಂದ ನಮ್ಮ ವಾಹನಗಳಿಗೆ ತೊಂದರೆಯಾಗುತ್ತಿದೆ.

ಸ್ವಚತೆ ಮತ್ತು ಕಳ್ಳತನದ ಬಗ್ಗೆ ವಿಶೇಷ ಕಾಳಜಿವಹಿಸುತ್ತೇನೆ, ಅಗತ್ಯವಿರುವೆಡೆಯಲ್ಲೆಲ್ಲ ಸಿ ಸಿ ಟಿವಿ ಕ್ಯಾಮೆರಾವನ್ನು ಅಳವಡಿಸಲು ಸರ್ಕಾರಕ್ಕೆ  ಪ್ರಸ್ತಾವನೆ ಕಳುಹಿಸಲಾಗಿದೆ, ಶೀಘ್ರವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ನಿಲ್ದಾಣದಲ್ಲಿ ನಡೆಯುವ ಎಲ್ಲಾ ಕಳ್ಳತನ ಮತ್ತು ಇನ್ನಿತರೇ ಅಪರಾಧಗಳನ್ನು ತಪ್ಪಿಸಲು ಕ್ರಮಕೈಗೊಳ್ಳಲಾಗುವುದು.

ಪಾರ್ಕಿಂಗ್ ಮತ್ತು ಶೌಚಾಲಯಗಳನ್ನು ಗುತ್ತಿಗೆಯವರಿಗೆ ನೀಡಿದ್ದರೂ ಸಹ ಸರಿಯಾದ ಕ್ರಮವನ್ನು ಅವರು ತೆಗೆದುಕೊಳ್ಖುತಿಲ್ಲ, ಖಾಸಗಿ ಭದ್ರತಾ ಸಿಬ್ಬಂದಿ, ಪೋಲಿಸ್ ಚೌಕಿಗಳಿದ್ದೂ ಸಹ ಅಪರಾಧಗಳು ಇಲ್ಲಿ ತಪ್ಪಿಲ್ಲ, ನಾನು ಕಳೆದ  ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ ಆದ್ದರಿಂದ ಹಂತಹಂತವಾಗಿ ಅಭಿವೃದ್ಧಿ ಮಾಡುತ್ತೇನೆ ಎಂದರು.

ಬಸ್ ನಿಲ್ದಾಣದಲ್ಲಿ ಅನೇಕ ಅಂಗಡಿಮಳಿಗೆಗಳಿದ್ದು ಬಹುತೇಕ ಎಲ್ಲಾ ಅಂಗಡಿಗಳನ್ನು ಬಾಡಿಗೆಗೆ ಕೊಡಲಾಗಿದೆ, ಕೆಲವು ಅಂಗಡಿ ಮಾಲೀಕರು ಎರಡು ಭಾಗ ಮಾಡಿಕೊಂಡು ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದಾರೆ ಎಂಬ ದೂರುಗಳಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ ರಾಘವೇಂದ್ರ ಅದು ನಮ್ಮ ಗಮನಕ್ಕೆ ಬಂದಿಲ್ಲ, ನಮಗೆ ಬಾಡಿಗೆ ಬರುತ್ತಿದೆ,  ಯಾವುದೇ ರೀತಿಯ ದೂರುಗಳು ಬಂದಿಲ್ಲ, ಆರೀತಿಯಾಗಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.

ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಏನು ಹೇಳಲು ಬಯಸುತ್ತೀರೆಂಬ ಪ್ರಶ್ನೆಗೆ, ನಮ್ಮ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಪ್ರಯಾಣಿಕರನ್ನು ತಲುಪಿಸಿ, ಅವರ ಜೊತೆ ಸೌಹಾರ್ದತೆಯಿಂದ ವರ್ತಿಸಿ, ಗಲಾಟೆಗೆ ಆಸ್ಪದ ಮಾಡಿಕೊಡಬೇಡಿ, ಹಾಗೇ‌ ಪ್ರಯಾಣಿಕರಲ್ಲಿಯೂ ಸಹ ನನ್ನ ಮನವಿಯೇನೆಂದರೆ ನಿಮ್ಮ ಸುರಕ್ಷತಾ ದೃಷ್ಟಿಯಿಂದ  ಕೆಎಸ್ಸಾರ್ಟಿಸಿ ಬಸ್ ಗಳನ್ನು ಅತಿ ಹೆಚ್ಚಾಗಿ ಬಳಸಿ, ಸುರಕ್ಷತೆ ಇಲ್ಲದೆ ಅತಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ಆಫೇ ಆಟಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಬಸ್ ಮತ್ತು ನಿಲ್ದಾಣವನ್ನು ಶುಚಿಯಾಗಿಡಲು ಸಹಕರಿಸಿ ಎಂದು ಮನವಿ ಮಾಡಿದರು.

ಬೆಂಗಳೂರಿನಿಂದ ಹೊರಡುವ ಬಸ್ ಗಳಲ್ಲದೆ ಚನ್ನಪಟ್ಟಣ ಘಟಕದಿಂದ ತೊಂಭತ್ತೊಂದು ಬಸ್ ಗಳಿದ್ದು ಚಾಲಕ ಮತ್ತು ನಿರ್ವಾಹಕ ಸೇರಿದಂತೆ ೫೮೦ ಮಂದಿ ಇದ್ದಾರೆ, ಇನ್ನೂ ಡಿಪೋದಲ್ಲಿ ೨೮ ಮೆಕ್ಯಾನಿಕ್ ಗಳಿದ್ದು ಸಿಬ್ಬಂದಿ ಕೊರತೆ ಎದುರಾಗಿಲ್ಲ ಎಂದು ತಿಳಿಸಿದರು.

(ಪ್ರಯಾಣಿಕರೇ ಸರ್ಕಾರಿ ಬಸ್ ಗಳನ್ನು ಬಳಸಿ ನಿಮ್ಮ ಪ್ರಾಣ ಉಳಿಸಿಕೊಳ್ಳುವುದರ ಜೊತೆಗೆ ನಷ್ಟವನ್ನು ತಪ್ಪಿಸಿ.)

ಗೋ ರಾ ಶ್ರೀನಿವಾಸ...
ಮೊ: 9845856139.



 

ಪ್ರತಿಕ್ರಿಯೆಗಳು1 comments

  • Puttaswamy B wrote:
    28 Dec, 2018 10:26 pm

    Super sar

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑