Tel: 7676775624 | Mail: info@yellowandred.in

Language: EN KAN

    Follow us :

ಭೂಹಳ್ಳಿ ಗ್ರಾ.ಪಂ. ಪಿಡಿಓ ಮತ್ತು ಅಧ್ಯಕ್ಷನಿಂದ ವಿದ್ಯುತ್ ಮತ್ತು ನೀರಿನ ಹಣ ಕಳ್ಳತನ!?

Posted date: 19 Nov, 2018

Powered by:     Yellow and Red

ಭೂಹಳ್ಳಿ ಗ್ರಾ.ಪಂ. ಪಿಡಿಓ ಮತ್ತು ಅಧ್ಯಕ್ಷನಿಂದ ವಿದ್ಯುತ್ ಮತ್ತು ನೀರಿನ ಹಣ ಕಳ್ಳತನ!?

ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಬ್ಬರು ಸೇರಿ ಕಳೆದ ಮೂರು ವರ್ಷಗಳಿಂದ ಹಲವಾರು ಅವ್ಯವಹಾರಗಳನ್ನು ಮಾಡುತ್ತಾ  ಹಣವನ್ನು ಲೂಟಿ ಹೊಡೆಯುತ್ತಿರುವುದಾಗಿ ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮಮ್ಮ ಮತ್ತು ಹನ್ನೆರಡು ಮಂದಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ರೈತಸಂಘದ ಹಿರಿಯ ಮುಖಂಡ ಸಿ.ಪುಟ್ಟಸ್ವಾಮಿ ನೇರ ಆರೋಪ ಮಾಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗೊಷ್ಠಿ ನಡೆಸಿದ ಅವರು ಅಧ್ಯಕ್ಷರು ಹಾಗೂ ಪಿಡಿಓ ವಿರುದ್ದ ಹರಿಹಾಯ್ದರಲ್ಲದೆ ಸೂಕ್ತ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತಕ್ಷಣದಲ್ಲಿಯೇ ಅಧ್ಯಕ್ಷರನ್ನು ಪದಚ್ಯುತಗೊಳಿಸಬೇಕು ಮತ್ತು ಸಂಬಂಧಿಸಿದ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಶಿಕ್ಷಿಸಲು ಒತ್ತಾಯಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ  ಪಂಚಾಯ್ತಿ ಕಾಯ್ದೆಗಳನ್ನು ಉಲ್ಲಂಘನೆ ಮಾಡುತ್ತಾ ಸಾರ್ವಜನಿಕರ ಹಣವನ್ನು ಲಪಟಾಯಿಸುತ್ತಿರುವ ಭೂಹಳ್ಳಿ ಗ್ರಾ.ಪಂ.ಅಧ್ಯಕ್ಷ ನಿಂಗೇಗೌಡ ಪಂಚಾಯ್ತಿಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಾ ಪಂಚಾಯ್ತಿಗೆ ಒಳಪಟ್ಟ ಶುದ್ದ ಕುಡಿಯುವ ನೀರಿನ ಘಟಕದಿಂದ ಸರಾಸರಿ ದಿನಕ್ಕೆ ಎಂಟುನೂರು ರೂಪಾಯಿಗಳಂತೆ ಮೂರು ವರ್ಷಗಳಲ್ಲಿ ೭,೫೦,೦೦೦ (ಏಳೂವರೆಲಕ್ಷ)ಕ್ಕೂ ಹೆಚ್ಚು ಹಣವನ್ನು ಪಂಚಾಯ್ತಿ ಗಮನಕ್ಕೆ ತರದೆ ಘಟಕವೇ ತನ್ನ ಮನೆಯ ಆಸ್ತಿಯಂತೆ ಬಂದ ನೀರಿನ ಹಣವನ್ನು ತನ್ನ ಜೇಬಿಗೆ ಇಳಿಸಿಕೊಂಡಿದ್ದು ಪಿಡಿಓ ಗಳು ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.

ಏಕೆಂದರೆ ೨೦೧೬ ರಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿದ ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸದರಿ ಪಂಚಾಯತಿಗೆ ಸದರಿ ಘಟಕವನ್ನು ಹಸ್ತಾಂತರಿಸಿ ಸಂಪೂರ್ಣವಾದ ಜವಾಬ್ದಾರಿ, ಹೊಣೆಗಾರಿಕೆ ಮತ್ತು ನಿರ್ವಹಣೆಗಳನ್ನು ವಹಿಸಲು ಸೂಚಿಸಿದ್ದಾರೆ.

ವಿಪರ್ಯಾಸವೆಂದರೆ ಸದರಿ ಹಸ್ತಾಂತರದ ಸಂಗತಿಯನ್ನೇ ಪಂಚಾಯ್ತಿಯ ಗಮನಕ್ಕೆ ತಾರದೆ ಅಧ್ಯಕ್ಷ ಮತ್ತು ಅಲ್ಲಿನ ಪಿಡಿಓ ಮುಚ್ಚಿ ಹಾಕಿ ಇಡೀ ಘಟಕಕ್ಕೆ ಬೀಗ ಹಾಕಿ ಅಧ್ಯಕ್ಷನೇ ಯಜಮಾನಿಕೆ ವಹಿಸಿಕೊಂಡಿದ್ದಾನೆ.

ಸದರಿ ನೀರಿನ ಘಟಕಕ್ಕೆ ಕಾನೂನು ಬದ್ದವಾಗಿ ವಿದ್ಯುತ್ ಸಂಪರ್ಕ ಪಡೆಯದೇ ಇಂದಿನವರೆಗೂ ವಿದ್ಯುತ್ ಕಳ್ಳತನ ಮಾಡಿರುವುದು ಬಹುಶಃ ಕರ್ನಾಟಕ ಗ್ರಾಮಪಂಚಾಯಿತಿ ಇತಿಹಾಸದಲ್ಲೇ ಮೊದಲ ಅಧ್ಯಕ್ಷ ನಾಗಿರಬಹುದು ಎಂದು ಆರೋಪಿಸಿದರು.

ಮಾಹಿತಿ ಪಡೆದ ವಿದ್ಯುತ್ ಜಾಗೃತ ದಳವು ವಿದ್ಯುತ್ ಕಳ್ಳತನವನ್ನು ದೃಢಪಡಿಸಿ ೨,೩೫,೦೦೦ (ಎರಡು ಲಕ್ಷದ ಮೂವತ್ತೈದು ಸಾವಿರ) ರೂಪಾಯಿಗಳ ಹಣವನ್ನು ದಂಡದ ರೂಪದಲ್ಲಿ ಪಾವತಿಸುವಂತೆ ನೋಟೀಸ್ ಜಾರಿಮಾಡಿದ್ದಾರೆ.

ಸಂಸದರು ಮತ್ತು ಶಾಸಕರ ಹೆಸರಿನ ಅನುದಾನದಲ್ಲಿ ಸ್ಥಾಪಿಸಿರುವ ಇಂತಹ ಘಟಕಗಳು ಕೆಲವರ ಪಾಲಿನ ಅಕ್ಷಯ ಪಾತ್ರೆಗಳಾಗಿ ಪರಿವರ್ತಿತವಾಗಿದ್ದರು ಸಂಬಂಧಿಸಿದ ಅಧಿಕಾರಿಗಳು ಜಾಣಗುರುಡು ಪ್ರದರ್ಶಿಸುವುದನ್ನು ಗಮನಿಸಿದರೆ ಅವರಿಗೂ ಪಾಲಿದೆಯಾ ಎಂಬ ಅನುಮಾನ ಮೂಡುತ್ತಿದೆ.

ಇಂತಹ ಅಧ್ಯಕ್ಷನ ಹಾಗೂ ಇವರಿಗೆ ಸಹಕರಿಸುತ್ತಿರುವ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗೆ ಕಾನೂನಿನ ರೀತಿಯಲ್ಲಿ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಇವರು ಮಾಡಿರುವ ಕಾಮಗಾರಿಗಳೆಲ್ಲಾ ಕಳಪೆ ಗುಣಮಟ್ಟದಿಂದ ಕೂಡಿದ್ದು ಕೆಲವು ಕಾಮಗಾರಿ ಗಳನ್ನು ಮಾಡದೆಯೇ ಹಣ ಪಾವತಿ ಮಾಡಿಕೊಂಡಿರುವುದನ್ನು ಇಲಾಖೆಯೇ ಪತ್ತೆ ಹಚ್ಚಿದ್ದು ಹಣ ಮರುಪಾವತಿ ಮಾಡಿಕೊಂಡಿದ್ದರೂ ಸಹ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ನೈತಿಕ ಹಕ್ಕು ಇದೆಯೇ ಎಂದು ಪ್ರಶ್ನಿಸಿದರು.

ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ರೀತಿಯ ಪ್ರಯೋಜನವಿಲ್ಲವಾಗಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತಿ ಸಿಇಓ ರವರಿಗೂ ಸಮಗ್ರ ತನಿಖೆ ನಡೆಸಲು ದೂರು ನೀಡಲಾಗಿದೆ ಎಂದರು.

ಗ್ರಾ.ಪಂ.ಸದಸ್ಯ ಪ್ರಭು ಮಾತನಾಡಿ ಅಧ್ಯಕ್ಷರು ಹಣ ದುರುಪಯೋಗ ಸಂಬಂಧ ಈಗಾಗಲೇ ತನಿಖೆ ಎದುರಿಸಿ ದಂಡ ಸಹ ಪಾವತಿಸಿದ್ದು ಇಷ್ಟಾದರೂ ಬುದ್ದಿ ಕಲಿಯದ ಅಧ್ಯಕ್ಷರು ಇನ್ನೂ ತಮ್ಮ ತಪ್ಪನ್ನು ತಿದ್ದಿಕೊಳ್ಳದೆ ಶುದ್ದಕುಡಿಯುವ ನೀರಿನ ಘಟಕದ ವಿಚಾರದಲ್ಲೂ ಸಾಕಷ್ಟು ಅಕ್ರಮ ಮಾಡಿದ್ದು ಇದೇ ವೇಳೆ ವಿದ್ಯುತ್ ಮತ್ತು ಹಣ ದುರುಪಯೋಗ ಮಾಡಿ ನಮ್ಮೆಲ್ಲಾ ಗ್ರಾಮಪಂಚಾಯಿತಿ ಸದಸ್ಯರೆಲ್ಲರೂ ಅವಮಾನ ಅನುಭವಿಸುವಂತೆ ಮಾಡಿರುವುದು ತರವಲ್ಲ.

ಎರಡು ಕೆರೆಗಳ ಮೀನುಗಳನ್ನು ಹರಾಜು ಮಾಡಿ ವರ್ಷವಾದರೂ ಪಂಚಾಯ್ತಿಗೆ ಹಣ ಕಟ್ಟದೆ ದುರುಪಯೋಗ ಪಡಿಸಿಕೊಂಡಿರುವುದಲ್ಲದೆ, ಖಾಸಗಿ ಜಮೀನಿನ ಮೇಲೆ ಪಂಚಾಯತಿ ಅಧ್ಯಕ್ಷ ಮತ್ತು ಅಧಿಕಾರಿಗಳು ದಾಖಲೆ ಇಲ್ಲದೆ ಅಮಾಯಕರನ್ನು ಉಚ್ಚ ನ್ಯಾಯಾಲಯದ ಮೆಟ್ಡಿಲೇರುವಂತೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಈ ಕೂಡಲೇ ಅಮಾಯಕರಿಗೆ ಸೂಕ್ತ ಪರಿಹಾರ ಕೊಟ್ಟು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಹದಿನಾರು ಗ್ರಾ.ಪಂ.ಸದಸ್ಯರಲ್ಲಿ ಕುಳ್ಳಪ್ಪ ಸೇರಿದಂತೆ ಹದಿಮೂರು ಮಂದಿ ಸದಸ್ಯರು ಹಾಗೂ ರೈತ ಮುಖಂಡರಾದ ಲಕ್ಷ್ಮಣ ಹಾಜರಿದ್ದರು.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು2 comments

  • Sharath wrote:
    20 Nov, 2018 06:52 pm

    This is fake news

  • Ranjan gowda wrote:
    20 Nov, 2018 07:34 pm

    E siddu yali aropa maduthiru prabhu avare nihu ujjanahalli Grama Dali ero sudda niru gataka Yardru........? Nihu adara adalitha nodkotha edira yake.....? Nihu kuda panchayithiya vyapthige seresbeku alave.

  • Ranju wrote:
    20 Nov, 2018 07:35 pm

    Bari sullu suddi edu........

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್

ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  

Top ↑