Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಾದ್ಯಂತ ಮೂವತ್ತು ಸಾವಿರ ಎಕರೆ ಅರಣ್ಯ ಆಪತ್ತು, ವಿಪತ್ತು ಮತ್ತು ಸಂಪತ್ತು

Posted date: 03 Dec, 2018

Powered by:     Yellow and Red

ತಾಲ್ಲೂಕಿನಾದ್ಯಂತ ಮೂವತ್ತು ಸಾವಿರ ಎಕರೆ ಅರಣ್ಯ ಆಪತ್ತು, ವಿಪತ್ತು ಮತ್ತು ಸಂಪತ್ತು

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಮೂವತ್ತು ಸಾವಿರ ಎಕರೆ ಅರಣ್ಯ ಪ್ರದೇಶವಿದ್ದು ದೊಡ್ಡ ಮಣ್ಣುಗುಡ್ಡೆ, ಚಿಕ್ಕ ಮಣ್ಣುಗುಡ್ಡೆ ಮತ್ತು ತೆಂಗಿನಕಲ್ಲು ಅರಣ್ಯ ಪ್ರದೇಶ ಸೇರಿದಂತೆ ಎಲ್ಲಾ ಕಡೆಯು ಹಂಚಿಹೋಗಿದೆ, ಇದರಲ್ಲಿ ಸರ್ಕಾರವೇ ಕೆಲವು ಸಂಸ್ಥೆಗಳಿಗೆ, ಪರಿಶಿಷ್ಟ ಜನಾಂಗದವರಿಗೆ ಮತ್ತು ಮುಳುಗಡೆ ಪ್ರದೇಶಗಳಿಗೆ ಕೊಟ್ಟಿದ್ದರೆ ಇನ್ನೂ ಕೆಲವು ಎಕರೆ ಪ್ರದೇಶಗಳು ಖಾಸಗಿಯಾಗಿ ಒತ್ತುವರಿಯಾಗಿವೆ. ಪ್ರಾಣಿ ಪಕ್ಷಿಗಳು ಮತ್ತು ಗಿಡ ಮರಗಳನ್ನು ಬೆಳೆಸಿ ಉಳಿಸಿಕೊಳ್ಳುವುದು, ಆನೆಗಳನ್ನು ತಡೆಗಟ್ಟಿ ರೈತರ ಬೆಳೆ ಮತ್ತು ಸಾಕು ಪ್ರಾಣಿಗಳನ್ನು ಉಳಿಸುವುದರ ಜೊತೆಗೆ ಅಕ್ರಮಗಳನ್ನು ತಡೆಗಟ್ಟುವುದು ಸಹ ನಮ್ಮ ಇಲಾಖೆಯ ಹೊಣೆಯಾಗಿದೆ ಎಂದು ವಲಯ ಅರಣ್ಯಾಧಿಕಾರಿ *ಕೆ ಎಂ ಕುಮಾರ್* ಸಂದರ್ಶನದಲ್ಲಿ ತಮ್ಮ ಹೊಣೆಗಾರಿಕೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಯಾವುದಕ್ಕೆ ಎಷ್ಟು ಭೂಮಿ

೧೯೪೩ ರಲ್ಲಿ ಕಣ್ವ ಜಲಾಶಯದ ಮುಳುಗಡೆ ಪ್ರದೇಶಕ್ಕಾಗಿ ಮಾಕಳಿ ಅರಣ್ಯ ಪ್ರದೇಶದಲ್ಲಿ ರಾಜ್ಯ ಅರಣ್ಯ ಇಲಾಖೆ ವತಿಯಿಂದ ಒಂದು ಬಾರಿ ೭೦೦ ಎಕರೆ ಮತ್ತೊಂದು ಬಾರಿ ಇನ್ನೂರು ಎಕರೆ ಪ್ರದೇಶವನ್ನು ನೀಡಲಾಗಿದೆ, ಪರಿಶಿಷ್ಟ ಜನಾಂಗದವರಿಗೆ ೧,೩೮೨ ಎಕರೆ ಅರಣ್ಯ ಪ್ರದೇಶವನ್ನು ನೀಡಲಾಗಿದೆ, ಇವುಗಳಲ್ಲದೇ ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಲೋಕಕ್ಕೆ ಮತ್ತು ಹೊಂಬೇಗೌಡ ಶಿಕ್ಷಣ ಸಂಸ್ಥೆಯ ಕುವೆಂಪು ಕಾಲೇಜಿಗೂ ಸಹ ಅರಣ್ಯ ಭೂಮಿಯನ್ನೇ ನೀಡಲಾಗಿದೆ. ಇದಲ್ಲದೇ ಅರಣ್ಯ ಪ್ರದೇಶದ ಗಡಿಗಳಲ್ಲಿ ಕೆಲವು ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.

ನ್ಯಾಯಾಲಯದಲ್ಲಿ ದಾವೆ

ಜಾನಪದ ಲೋಕ ಮತ್ತು ಕುವೆಂಪು ಕಾಲೇಜಿಗೆ ಅರಣ್ಯ ಭೂಮಿ ನೀಡಿರುವುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದ್ದು ಕುವೆಂಪು ಕಾಲೇಜಿನವರು ಹದಿನಾರು ಎಕರೆ ಪ್ರದೇಶವನ್ನು ಮರಳಿಸಿದ್ದು ಒಂಭತ್ತು ಎಕರೆ ಪ್ರದೇಶವನ್ನು ಮತ್ತು ಜಾನಪದ ಲೋಕದವರು ಸಹ ನಿರ್ದಿಷ್ಟವಾದ ಅವಧಿಗೆ ಗುತ್ತಿಗೆ (ಲೀಸ್) ನೀಡಬೇಕೆಂದು ಸಂಬಂಧಿಸಿದ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ, ನ್ಯಾಯಾಲಯದ ಆದೇಶ ಕೈ ಸೇರಿದ ನಂತರ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ.

ರೈತರಿಗೆ ೪೮,೦೦,೦೦೦ ಪರಿಹಾರ

೨೦೧೭/೧೮ ನೇ ಸಾಲಿನಲ್ಲಿ ಆನೆಗಳಿಂದ ರೈತರ ಫಸಲಿಗೆ ಹಾನಿಯನ್ನುಂಟಾಗಿದ್ದರಿಂದ ಕರ್ನಾಟಕ ಸರ್ಕಾರದ ನಡಾವಳಿಗಳ ಆದೇಶದಂತೆ ಅಪಜೀ ೫೨, ೨೫೯, ೧೬೨, ೭೦, ೧೪೩, ೧೦೯, ಎಫ್ ಡಬ್ಲ್ಯೂ ಎಲ್ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಿ೨/ಸಿಆರ್-೩೭ ರ ಪ್ರಕಾರ ವನ್ಯ ಪ್ರಾಣಿಗಳಿಂದ ಬೆಳೆನಾಶ, ಮಾನವ ಪ್ರಾಣಹಾನಿ, ಸಾಕು ಪ್ರಾಣಿಗಳ ಪ್ರಾಣಹಾನಿ, ಶಾಶ್ವತ ಅಂಗವಿಕಲತೆ ಗಾಯಗೊಂಡ ಹಾಗೂ ಆಸ್ತಿಪಾಸ್ತಿ, ನಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಾವತ್ತಿಸುತ್ತಿರುವ ದಯಾತ್ಮಕ ಧನವನ್ನು ಕಾಲಕಾಲಕ್ಕೆ ಪರಿಸ್ಕರಿಸಿ ನಿಗದಿಪಡಿಸಿದಂತೆ ನೀಡಲಾಗಿದೆ, ಪರಿಹಾರದ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಆನೆಗಳನ್ನು ಹೊರದಬ್ಬಲು ಆರು ಲಕ್ಷ ಖರ್ಚು

೨೦೧೭/೧೮ ನೇ ಸಾಲಿನಲ್ಲಿ ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಆನೆಗಳ ಹಾವಳಿ ಹೆಚ್ಚಾಗಿತ್ತು, ಕೇವಲ ರೈತ ಬೆಳೆದ ಬೆಳೆಗಷ್ಟೇ ಸೀಮಿತವಾಗದ ಆನೆ ಹಾವಳಿ ಸಮೀಪದ ಹಳ್ಳಿಗಳಿಗೂ ಧಾಂಗುಡಿಯಿಟ್ಟಿಸದ್ದವು, ಆನೆಗಳನ್ನು ಸಮೀಪದ ಅರಣ್ಯಕ್ಕೆ ಅಲ್ಲಿಂದ ದೂರದ ಅರಣ್ಯಕ್ಕೆ ದಬ್ಬಲು ಸರಿಸುಮಾರು ೬,೦೦,೦೦೦ ರೂ ಗಳು ಖರ್ಚಾಗಿವೆ, ಸಿಬ್ಬಂದಿಗಳ ಜೊತೆಗೆ ನುರಿತ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ವಾಹನಗಳು, ಪಟಾಕಿ, ಏರ್ ಗನ್ ಮತ್ತು ಕಾರ್ಮಿಕರ ಕೂಲಿ ಸೇರಿದಂತೆ ಆರು ಲಕ್ಷ ರೂ ಗಳು ಖರ್ಚಾಗಿದೆಯಂತೆ.

ಕೆಂಗಲ್ ಹನುಮಂತಯ್ಯ ಸಸ್ಯೋದ್ಯಾನವನ

ಕೆಂಗಲ್ ಸಮೀಪ ಕೆಂಗಲ್ ಹನುಮಂತಯ್ಯ ಸಸ್ಯೋದ್ಯಾನವನ ಎಂಬ ಉದ್ಯಾನವನ್ನು ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ್ದು ಹಲವಾರು ಜಾತಿಯ ಉಪಯುಕ್ತ ಮರಗಳನ್ನು ಬೆಳೆಸಲಾಗಿದೆ, ಒಳಗಡೆ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಉತ್ತಮ ವಾತಾವರಣವಿದ್ದು ವಿಶ್ರಾಂತಿ ತೆಗೆದುಕೊಳ್ಳಲು ಉತ್ತಮವಾದ ಸ್ಥಳ, ಆದರೆ ಕಾಲೇಜಿನ ಯುವ ಜೋಡಿಗಳ ಮುಂದೆ ಸಭ್ಯಸ್ಥರು ಕುಟುಂಬ ಸಮೇತ ಹೋಗಲು ಸಾಧ್ಯವಾಗದು.

ಸಸ್ಯೋದ್ಯಾನವನ ಕ್ಕೆ ಸಿಸಿ ಟಿವಿ ಮತ್ತು ಭದ್ರತಾ ಸಿಬ್ಬಂದಿ ಅತ್ಯವಶ್ಯಕ

ಅದೊಂದು ವಿಶಾಲವಾದ ಅರಣ್ಯ ಪ್ರದೇಶದೊಳಗೆ ಸಸ್ಯೋದ್ಯಾನವನ ಮತ್ತು ಮಕ್ಕಳ ಆಟೋಪಕರಣಗಳನ್ಮು ಅಳವಡಿಸಿದ್ದರೂ ಸಹ ಅದಕ್ಕೊಂದು ಎಲ್ಲೆ ಇರದ ಕಾರಣ ಯುವ ಮತ್ತು ಕಾಲೇಜಿನ ಮಕ್ಕಳು ಹಾದಿ ತಪ್ಪಲು ಸಹಕಾರಿಯಾದಂತಿದೆ, ಬರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗುರುತು ಚೀಟಿ ಮತ್ತು ಆಧಾರ್ ಪ್ರತಿ ಗಮನಿಸಿ ಒಳಗೆ ಬಿಡುವುದು ಹೊರತುಪಡಿಸಿದರೆ ಮತ್ಯಾವ ನಿರ್ಬಂಧಗಳು ಅಲ್ಲಿ ಕಾಣಸಿಗುವುದಿಲ್ಲ, ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ಕೇವಲ ಐದು ರೂ ಗಳನ್ನು ಪಾವತಿಸಿ ಅವರು ಅಲ್ಲಿರಬಹುದು, ಮಕ್ಕಳ ಹಾದಿ ತಪ್ಪುವಿಕೆ ಮತ್ತು ಇಲಾಖೆಗೆ ಕೆಟ್ಟ ಹೆಸರು ಬರಬಾರದೆಂದರೆ ಉದ್ಯಾನ ಬಿಟ್ಟು ಹೊರಹೋಗದಂತೆ ಭದ್ರತಾ ಸಿಬ್ಬಂದಿ, ನಿಗದಿತ ಸಮಯದ ಜೊತೆಗೆ ಶೀಘ್ರವಾಗಿ ಸಿಸಿ ಟಿವಿ ಗಳನ್ನು ಅಳವಡಿಸಿದರೆ ಒಳ್ಳೆಯದು.

ಗೆದ್ದಲು ತಿನ್ನುತ್ತಿರುವ ಮರಗಳು ಕೆರೆ ಕಟ್ಟೆಗಳು

ಹಲವಾರು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಅನೇಕ ಮರಗಳನ್ನು ದಾಸ್ತಾನು ಮಾಡಿದ್ದು ಆ ಮರಗಳು ಬಿಸಿನಲ್ಲಿ ಒಣಗಿ ಮಳೆಯಲ್ಲಿ ತೊಯ್ದು ಈಗ ಗೆದ್ದಲು ಹುಳುಗಳು ಮೇಯುತ್ತಿವೆ, ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರವಾಗಿ ಮುಗಿಸಿ ಹರಾಜು ಮಾಡಿದರೆ ಕೊಂಡುಕೊಳ್ಳುವವರಿಗೆ ಮತ್ತು ಇಲಾಖೆಗೆ ಉಪಯೋಗವಾಗುವುದಿಲ್ಲವೇ ?
ಬಹುತೇಕ ಎಲ್ಲಾ ಅರಣ್ಯ ಪ್ರದೇಶದಲ್ಲಿ ಸಣ್ಣಪುಟ್ಟ ಕಟ್ಟೆಗಳಿದ್ದು ಮೂರು ಕೆರೆಗಳಿರುವುದರಿಂದ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿಲ್ಲ.

ಸಿಬ್ಬಂದಿ ಕೊರತೆ

ಎಲ್ಲಾ ಇಲಾಖೆಗಳಂತೆ ಇಲ್ಲಿಯೂ ಸಿಬ್ಬಂದಿ ಕೊರತೆ ಇದ್ದು ಇರುವ ಮೂವತ್ತು ಹುದ್ದೆಗಳಲ್ಲಿ ಅರಣ್ಯ ರಕ್ಷಕ ಎರಡು, ಅರಣ್ಯ ವೀಕ್ಷಕ ಮೂರು, ದ್ವಿತೀಯ ದರ್ಜೆ ಸಹಾಯಕ ಒಂದು, ಕಛೇರಿ ಸೇವಕ ಒಂದು, ಮತ್ತು ರಾತ್ರಿ ಕಾವಲುಗಾರ ಹುದ್ದೆ ಸೇರಿದಂತೆ ಏಳು ಹುದ್ದೆಗಳು ಖಾಲಿ ಇವೆ, ಇನ್ನೊಬ್ಬರು ಅನಧಿಕೃತ ಗೈರು ಹಾಜರಾಗಿದ್ದಾರೆ.

ಒಟ್ಟಾರೆ ಅರಣ್ಯ ಇಲಾಖೆ ಇನ್ನೂ ಸದೃಢವಾಗಬೇಕಾಗಿದೆ, ರೈತರಿಗೆ ತೊಂದರೆ ಕೊಡುವ ಪ್ರಾಣಿಗಳ ಬಗ್ಗೆ ಮುನ್ನೆಚ್ಚರಿಕೆ, ಅವರಿಗೆ ತಲುಪಬೇಕಾದ ಪರಿಹಾರಗಳು ಶೀಘ್ರವಾಗಿ ತಲುಪುವಂತೆ ನೋಡಿಕೊಳ್ಳುವುದರ ಜೊತೆಗೆ ಒತ್ತುವರಿಯನ್ನು ತೆರವುಗೊಳಿಸಿ ಪ್ರಾಣಿಪಕ್ಷಿಗಳಿಗೆ ಅವುಗಳಿರುವ ಸ್ಥಳದಲ್ಲಿಯೇ ಮೇವು ನೀರು ಸಿಗುವಂತೆ ನೋಡಿಕೊಳ್ಳುವುದು ಅತಿಮುಖ್ಯ ಕೆಲಸವಾಗಿದೆ.
ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮವಹಿಸಿದರೆ ರಾಜ್ಯದಲ್ಲಿಯೇ ಚನ್ನಪಟ್ಟಣ ತಾಲ್ಲೂಕು ಅರಣ್ಯ ಪ್ರದೇಶವನ್ನು ಮುನ್ನೆಲೆಗೆ ತಂದ ಕೀರ್ತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಲ್ಲುತ್ತದೆ.


ಗೋ ರಾ ಶ್ರೀನಿವಾಸ...
ಮೊ:9845856139.



 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑