Tel: 7676775624 | Mail: info@yellowandred.in

Language: EN KAN

    Follow us :


ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಅಭಿವೃದ್ಧಿಯೇ ಕ್ಷೀಣ

Posted date: 07 Jan, 2019

Powered by:     Yellow and Red

ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಅಭಿವೃದ್ಧಿಯೇ ಕ್ಷೀಣ

ಅಂಗನವಾಡಿಗಳ ಅಂಕಿಅಂಶಗಳು, ಭವಿಷ್ಯದ ಮಕ್ಕಳ ಮೇಲೆ ತೂಗುಯ್ಯಾಲೆ

ಚನ್ನಪಟ್ಟಣ ತಾಲ್ಲೂಕಿನಲ್ಲಿ ನಗರ ಪ್ರದೇಶವೂ ಸೇರಿದಂತೆ *೩೩೪* ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿ *೨೭೭* ನಗರದಲ್ಲಿ *೫೭* ಇದ್ದು ಗ್ರಾಮೀಣ ಪ್ರದೇಶದಲ್ಲಿ *೧೮೫* ಮತ್ತು ನಗರ ಪ್ರದೇಶದಲ್ಲಿ ಕೇವಲ *೧೭* ಮಾತ್ರ ಸ್ವಂತ ಕಟ್ಟಡಗಳಿದ್ದು, ಗ್ರಾಮೀಣ ಭಾಗದಲ್ಲಿ *೦೩* ಪಂಚಾಯಿತಿಯಲ್ಲಿ, *೩೦* ಸಮುದಾಯ ಭವನದಲ್ಲಿ *೩೪* ಶಾಲೆಗಳಲ್ಲಿ *೨೫* ಬಾಡಿಗೆ ಕಟ್ಟಡದಲ್ಲಿ, ಹಾಗೂ ನಗರದಲ್ಲಿ *೦೪* ಸಮುದಾಯ ಭವನ, *೦೪* ಶಾಲೆಗಳಲ್ಲಿ ನಡೆದರೆ *೩೨* ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದರೆ ಪುಟ್ಟಪ್ಪನದೊಡ್ಡಿಯಲ್ಲಿ ಯಾವುದೇ ರೀತಿಯ ಕಟ್ಟಡವೂ ಇಲ್ಲದೆ ಮನೆಯೊಂದರ ಪಡಶಾಲೆಯಲ್ಲಿ ನಡೆಯುತ್ತಿರುವುದು ಮುಖ್ಯಮಂತ್ರಿಗಳ ಕ್ಷೇತ್ರಕ್ಕೆ ಅಪಮಾನಕರ.


ಕಛೇರಿಯೂ ಬಾಡಿಗೆ

ಕಛೇರಿಗೂ ಸಹ ಸ್ವಂತ ಕಟ್ಟಡ ಇಲ್ಲದೆ ಚಾನೆಲ್ ರಸ್ತೆಯಲ್ಲಿ ಮಾಸಿದ ನಾಮಫಲಕದೊಂದಿಗೆ *೨೬,೫೫೦* ಮಾಸಿಕ ಬಾಡಿಗೆ ಕಟ್ಟಿ ಸಾಗುತ್ತಿದ್ದರೆ ನಗರ ಪ್ರದೇಶದ ಅಂಗನವಾಡಿಗಳ ಬಾಡಿಗೆ ಬರೋಬ್ಬರಿ *೧,೨೮,೦೦೦* ರೂಪಾಯಿಗಳಾದರೆ ಗ್ರಾಮೀಣ ಅಂಗನವಾಡಿಗಳ ಬಾಡಿಗೆ *೨೫,೦೦೦* ರೂಪಾಯಿಗಳು, ಒಟ್ಟು ಮಾಸಿಕ ಬಾಡಿಗೆ *೧,೭೯,೫೫೦* ರೂಪಾಯಿಗಳು, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಒಂದು ಕಟ್ಟಡಕ್ಕೆ *೩,೦೦,೦೦೦* ರೂಪಾಯಿಗಳನ್ನು ನೀಡುತ್ತದೆ ಮಿಕ್ಕ ಹಣವನ್ನು ಗ್ರಾಮ ಪಂಚಾಯತಿ ನೀಡುತ್ತದೆಯಾದರೂ *೧೩೨* ಅಂಗನವಾಡಿಗಳು ಬಾಡಿಗೆ ಮತ್ತು ಇನ್ನಿತರ ವಶದಲ್ಲಿ ನಡೆಯುತ್ತಿರುವುದು ಮುಂದಿನ *ಭವಿಷ್ಯದ ಮಕ್ಕಳ* ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಸುಳ್ಳಲ್ಲ.


ಅಡುಗೆ ಮನೆ, ಶೌಚಾಲಯ, ನೀರು, ವಿದ್ಯುತ್ ಎಲ್ಲವೂ ದೋಖಾ

ಗ್ರಾಮೀಣ ಪ್ರದೇಶದಲ್ಲಿ *೨೭೭* ಕ್ಕೆ *೮೪* ಅಡುಗೆ ಮನೆ, *೧೮* ಶೌಚಾಲಯ *೮೧* ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದರ ಜೊತೆಗೆ *೧೪೩* ಅಂಗನವಾಡಿಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ.

ಇನ್ನೂ ನಗರ ಪ್ರದೇಶದಲ್ಲಿ *೫೭* ಅಂಗನವಾಡಿಗಳಲ್ಲಿ *೨೬* ಅಡುಗೆಮನೆ, *೩೦* ರಲ್ಲಿ ಶೌಚಾಲಯ *೧೭* ರಲ್ಲಿ ನೀರು ಮತ್ತು *೨೧* ರಲ್ಲಿ ವಿದ್ಯುತ್ ಸಂಪರ್ಕ ಇಲ್ಲ.

ಗ್ರಾಮೀಣ ಪ್ರದೇಶದಲ್ಲಿ *೩೧* ಅಂಗನವಾಡಿ ಕೇಂದ್ರಗಳು ನಿರ್ಮಾಣ ಹಂತದಲ್ಲಿ‌ ಇವೆ ಎಂದು ಹೇಳುತ್ತಾರಾದರೂ ಅವುಗಳಿಗೆ ಕಾಲಮಿತಿ ಇಲ್ಲದಿರುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿವೆ.


ಭಾಗ್ಯಲಕ್ಷ್ಮಿ ಬಾಂಡ್ ಮತ್ತು ಅಪೌಷ್ಟಿಕತೆ

*೨೦೦೬/೦೭ ರಿಂದ ೨೦೧೮/೧೯* ರ ಸಾಲಿನಲ್ಲಿ ಒಟ್ಟು *೧೪,೭೨೩* ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮಿ ಫಲಾನುಭವಿಗಳಾಗಿದ್ದು *೨೦೧೬ ರಿಂದ ೨೦೧೯* ರ ಸಾಲಿನ ವರೆಗೆ *೧೮೭೨* ಮಕ್ಕಳಿಗೆ ಬಾಂಡ್ ತಲಿಪಿಲ್ಲ, *೨೦೦೮/೦೯* ರ ಸಾಲಿನ ಇಬ್ಬರು ಮಕ್ಕಳಿಗೆ ಇನ್ನೂ ತಲುಪದಿರುವುದಕ್ಕೆ ಯಾರೂ ಕಾರಣ ಎಂಬುದನ್ನು ಇಲಾಖೆಯ ಅಧಿಕಾರಿಗಳೇ ಹೇಳಬೇಕು.

*೨೦೧೮* ರ ಡಿಸೆಂಬರ್ ಮಾಹಿತಿಯ ಪ್ರಕಾರ ಸಾಮಾನ್ಯ ಅಪೌಷ್ಟಿಕತೆಯುಳ್ಳ *೨೬೩* ಮಕ್ಕಳಿದ್ದು ತೀವ್ರ ಅಪೌಷ್ಟಿಕತೆಯುಳ್ಳ *೨೪* ಮಕ್ಕಳಿದ್ದಾರೆ, ಇವರಲ್ಲಿ ಪರಿಶಿಷ್ಟ ಜಾತಿಯ *೦೩*, ಪರಿಶಿಷ್ಟ ಪಂಗಡದ *೦೧* ಮತ್ತು ಇತರೆ ವರ್ಗದ *೨೦* ಮಕ್ಕಳಿದ್ದು ಇವರ ಆರೋಗ್ಯ *ಸರ್ಕಾರಿ ಆಸ್ಪತ್ರೆ*ಗಷ್ಟೆ ಸೀಮಿತವಾಗಿದೆ.


ತಿಟ್ಟಮಾರನಹಳ್ಳಿಯಲ್ಲಿ ಪೂರಕ ಪೌಷ್ಟಿಕ ಆಹಾರ

ಅಂಗನವಾಡಿಗಳಿಗೆ ಕೊಡುವ ಪೌಷ್ಟಿಕ ಆಹಾರ ತಾಲ್ಲೂಕಿನ ಸಹಕಾರ ಸಂಘಗಳಡಿಯಲ್ಲಿ ನೋಂದಣಿಯಾಗಿರುವ *ಎಂ ಎಸ್ ಪಿ ಸಿ* ತಯಾರಿಕಾ ಘಟಕದಲ್ಲಿ ತಯಾರಾಗುತ್ತದೆ, ಈ ಘಟಕವು ತಾಲ್ಲೂಕಿನ *ತಿಟ್ಟಮಾರನಹಳ್ಳಿ* ಗ್ರಾಮದಲ್ಲಿದ್ದು ಸ್ವಚ್ಚತೆ ಗೆ ಮೊದಲ ಮನ್ನಣೆ ನೀಡಿರುವುದು ಖುದ್ದು ಭೇಟಿ ನೀಡಿ ಪರೀಕ್ಷಿಸಿದಾಗ ಗಮನಕ್ಕೆ ಬಂದಿತ್ತು, ಆಯಾಯ ತಿಂಗಳು ಎಷ್ಟು ಪ್ರಮಾಣದ ಆಹಾರ ಬೇಕು ಎಂದು ಮಾಹಿತಿ ಕೊಡುತ್ತಾರೋ ಅಷ್ಟು ಆಹಾರವನ್ನು *ಎಂ ಎಸ್ ಪಿ ಸಿ* ನಲ್ಲಿಯೇ ಸ್ವಚ್ಛಗೊಳಿಸಿ ಹುರಿದು ಹದ ಮಾಡಿ ಬೆರೆಸಿ ಚೀಲಗಳಲ್ಲಿ ತುಂಬಿ ಸರಬರಾಜು ಮಾಡಲಾಗುತ್ತದೆ, *೦೬ ತಿಂಗಳಿಂದ ೦೧* ವರ್ಷ, ಒಂದರಿಂದ ಮೂರು, ಐದರಿಂದ ಆರು, ಹದಿನೆಂಟು ವರ್ಷ ಒಳಪಟ್ಟ ಪೌಷ್ಟಿಕಾಂಶ ಕೊರತೆಯುಳ್ಳ ಕಿಶೋರಿಯರಿಗೆ, ಗರ್ಭಿಣಿಯರು ಮತ್ತು ಬಾಣಂತಿಯರಿಗೆಂದೆ ವಿವಿಧ ರೀತಿಯ ಆಹಾರ ತಯಾರಿಸಿ ಸರಬರಾಜು ಮಾಡಲಾಗುತ್ತದೆ, ಅಲ್ಲಿನ ಮೇಲ್ವಿಚಾರಕಿ *ಸವಿತಾ ಮತ್ತು ಸಿಬ್ಬಂದಿಗಳು* ಸ್ವಚತೆಗೆ ಮೊದಲ ಆದ್ಯತೆ ನೀಡಿರುವುದು ಶ್ಲಾಘನೀಯ.


 ಸ್ತ್ರೀ ಶಕ್ತಿ ಭವನ ಮತ್ತು ಗುಂಪುಗಳು

ಸ್ತ್ರೀ ಶಕ್ತಿ ಭವನವು ಕುವೆಂಪು ನಗರದ ಮೊದಲನೆ ತಿರುವಿನಲ್ಲಿ ನಿರ್ಮಾಣ ಹಂತದಲ್ಲಿಯೇ ನಿಂತು ಹೋಗಿದೆ, *೧೫೧೨* ಸ್ತ್ರೀ ಶಕ್ತಿ ಗುಂಪುಗಳಿದ್ದು ಅವರು ಏನಾದರೊಂದು ಕಲಿಯಲಾಗಲಿ, ಸಭೆ ನಡೆಸಲಾಗಲಿ ಒಂದು ಸ್ಥಳ ಇಲ್ಲ, ಅರ್ಧಕ್ಕೆ ನಿಂತಿರುವ ಕಟ್ಟಡವನ್ನು ಯಾವಾಗ ಪೂರ್ಣಗೊಳಿಸುತ್ತಾರೋ ಇಲಾಖೆಯೆ ಬಲ್ಲದು !?.

ಒಟ್ಟು *೧೫೧೨* ಗುಂಪುಗಳಲ್ಲಿ *೨೪,೨೬೬ ಸದಸ್ಯರಿದ್ದು ಪರಿಶಿಷ್ಟ ಜಾತಿ ಸದಸ್ಯರು *೫೧೦೮* ಪರಿಶಿಷ್ಟ ಪಂಗಡ ಸದಸ್ಯರು *೯೬* ಅಲ್ಪಸಂಖ್ಯಾತರು *೧೯೨* ಇತರೆ *೧೮,೮೭೦* ಸದಸ್ಯರಿದ್ದು ಹದಿನೈದಕ್ಕಿಂತ ಹೆಚ್ಚು ಮತ್ತು ಕಡಿಮೆ ಇರುವ ಸಂಘಗಳೆಂದು ವಿಂಗಡಿಸಲಾಗಿದೆ.


ಉಳಿತಾಯ ಖಾತೆಗಳಲ್ಲಿ *೭೫,೦೦೦ ರೂ ಉಳಿಸಿದರೆ *೧೫,೦೦೦ ರೂ *೧,೦೦,೦೦೦ ಕ್ಕಿಂತ ಹೆಚ್ಚು ಉಳಿಸಿದರೆ *೨೦,೦೦೦ ರೂ ಗಳ ನೀಡಲಾಗುತ್ತದೆ. ಶೇಕಡಾ *೦೬* ರಷ್ಟು ಬಡ್ಡಿಯನ್ನು ಇಲಾಖೆಯೇ ತುಂಬಿಕೊಡುತ್ತದೆ. ಹಾಗೂ ಕೆಲ ಆಯ್ದ ಸಂಘಗಳಿಗೆ ಇಪ್ಪತ್ತು ತಿಂಗಳ ಅವಧಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆಯಾದರೂ ಇದರಲ್ಲಿ *ತಾರತಮ್ಯ* ಮಾಡುತ್ತಾರೆ ಎಂದು ಹಲವಾರು ಸಂಘಗಳ ಸದಸ್ಯರ ದೂರು.


ಸಂಘಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲ


ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ತಾಲ್ಲೂಕಿನ ನೀಲಸಂದ್ರ, ಕರಿಯಪ್ಪನದೊಡ್ಡಿ ಗ್ರಾಮಗಳಲ್ಲಿ ವಾಹನಗಳ ಆಸನಗಳಿಗೆ ಮಣಿ ಹಾಕುವ ಕೆಲಸ ಮಾಡುತ್ತವೆ, ಭೈರಾಪಟ್ಟಣ ಗ್ರಾಮದಲ್ಲಿ ರೇಷ್ಮೆ ಗೂಡಿನ ಹಾರಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರಾದರು, ಮಾರುಕಟ್ಟೆ ಸಮಸ್ಯೆಯಿಂದ ಅವರು ನಿಲ್ಲಿಸಿದ್ದಾರೆ.

ಒಂದು ಸಂಘದಲ್ಲಿ ಕನಿಷ್ಠ ಹತ್ತರಿಂದ ಇಪ್ಪತ್ತು ಮಂದಿ ಸದಸ್ಯರು ಇರುತ್ತಾರೆ, ಅವರೆಲ್ಲರೂ ಸೇರಿ ಒಂದು ಸ್ವ ಉದ್ಯೋಗ ಸ್ಥಾಪಿಸಿ ಇನ್ನೂ ಕೆಲ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಂಘಗಳು ಕೆಲಸ ಮಾಡುವಂತೆ ಇಲಾಖೆ ಪ್ರೇರೇಪಿಸಿಯೇ ಇಲ್ಲ, ಇದರ ಅರಿವನ್ನು ಮೂಡಿಸದಿರುವುದು ಇಲಾಖೆಯ *ಜಾಣತನವನ್ನು* ತೋರಿಸುತ್ತದೆ.


ಬಾಲ್ಯ ವಿವಾಹ ಮತ್ತು ಕುಟುಂಬ ದೌರ್ಜನ್ಯ

ಬಾಲ್ಯ ವಿವಾಹವನ್ನು ತಡೆಯಲು ದೇವಾಲಯಗಳಿಗೆ, ಕಲ್ಯಾಣ ಮಂಟಪಗಳಿಗೆ ಅಷ್ಟೇ ಮಾಹಿತಿ ನೀಡಿ ಸುಮ್ಮನಾಗುತ್ತಿದ್ದಾರೆ ಅಧಿಕಾರಿಗಳು, ಆದರೆ ಬಾಲ್ಯವಿವಾಹ ಮಾಡುವವರು ಕಲ್ಯಾಣ ಮಂಟಪದಲ್ಲಿ ಮಾಡುವುದಿಲ್ಲ, ಗುಟ್ಟಾಗಿ ಮಾಡುವುದರಿಂದ ಆಯಾಯ ಗ್ರಾಮ ಮತ್ತು ವಾಡ್೯ಗಳಿಗೆ ಸಂಬಂಧಿಸಿದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲೆಯ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಇಲಾಖೆಯ ಸಿಬ್ಬಂದಿಗಳು ಗಮನಹರಿಸಿದರೆ ಮಾತ್ರ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯ.


೨೦೧೮ ರ ಏಪ್ರಿಲ್ ನಿಂದ ನವೆಂಬರ್ ವರೆಗೆ *೧೧* ಕೌಟುಂಬಿಕ ದೌರ್ಜನ್ಯ ದೂರು ದಾಖಲಾಗಿದ್ದು *೦೬* ಪ್ರಕರಣಗಳಷ್ಟೇ ಸಮಾಲೋಚನೆಯಲ್ಲಿ ಬಗೆಹರಿದಿದ್ದು ಉಳಿದವು ಕಾಲಾವಕಾಶ ಕೇಳಿ ಮತ್ತು ಕೆಲವು ಬರದೆ ಇರುವುದರಿಂದ ಬಗೆಹರಿದಿಲ್ಲ, ಮೊಳಕೆಯಲ್ಲೆ ಸರಿ ಮಾಡುವ ಈ ಕೆಲಸವನ್ನು ಇಲಾಖೆ ಸಮರ್ಥವಾಗಿ ನಿಭಾಯಿಸಿದರೆ ಹಲವು ಕುಟುಂಬಗಳು ಸುಖಜೀವನ ನಡೆಸಬಹುದು.


ಸಿಬ್ಬಂದಿಗಳ ಕೊರತೆ ಮತ್ತು ಪ್ರಶಸ್ತಿ ಪುರಸ್ಕೃತರು

ಈ ಇಲಾಖೆಯಲ್ಲಿಯೂ ಸಿಬ್ಬಂದಿಗಳ ಕೊರತೆ ಇದ್ದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎರಡಕ್ಕೆ ಎರಡು, ಹಿರಿಯ ಮೇಲ್ವಿಚಾರಕಿ ಎರಡರಲ್ಲಿ ಒಂದು, ಪ್ರ ದ ಸಹಾಯಕ ನಾಲ್ಕರಲ್ಲಿ ಒಂದು, ಮೇಲ್ವಿಚಾರಕಿಯರು ಹನ್ನೊಂದರಲ್ಲಿ ಎಂಟು, ಗ್ರೂಪ್ ಡಿ ಮೂರರಲ್ಲಿ ಮೂರು ಹುದ್ದೆಗಳು ಖಾಲಿ ಇದ್ದು ಒಟ್ಟು *ಇಪ್ಪತೈದು ಹುದ್ದೆಗಳಲ್ಲಿ ಹದಿಮೂರು ಹುದ್ದೆಗಳಷ್ಟೇ ಇದ್ದು ಹನ್ನೆರಡು ಹುದ್ದೆಗಳು ಖಾಲಿ ಇವೆ.*

ಅಂಗನವಾಡಿ ಕೇಂದ್ರಗಳಲ್ಲಿ ಅನೇಕ ಮಂದಿ ಶಿಕ್ಷಕಿಯರು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರು ಇದ್ದು ಅವರನ್ನು ಇಲಾಖೆ ಗುರುತಿಸಿ ಸನ್ಮಾನ ಮಾಡುವುದಿರಲಿ ಅವರ ಸಂಪೂರ್ಣ ಮಾಹಿತಿಯೂ ಇಲಾಖೆಯಲ್ಲಿ ಇಲ್ಲದಿರುವುದು ವಿಷಾದದ ಸಂಗತಿ.


ಅಧಿಕಾರಿ ಕಾಂತರಾಜು

ಹಲವಾರು ವರ್ಷಗಳ ಕಾಲ ಇದೇ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ತಾಲ್ಲೂಕಿಗೆ ಸಿಡಿಪಿಓ ಆಗಿ ಬಂದಿರುವ ಕಾಂತರಾಜುರವರು ಸ್ತ್ರೀ ಶಕ್ತಿ ಭವನ, ಅಂಗನವಾಡಿಗಳ ಕಟ್ಟಡ, ಪೌಷ್ಟಿಕಾಹಾರ, ಬಾಲ್ಯ ವಿವಾಹ, ರೋಗಪೀಡಿತ ಮಕ್ಕಳಿಗೆ ಉತ್ತಮ ತಪಾಸಣೆ ಇನ್ನೂ ಮುಂತಾದ ಅಭಿವೃದ್ಧಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಮೂಲಕ *ಶಿಶು ಅಭಿವೃದ್ಧಿ ಯೋಜನೆ ಇಲಾಖೆಯನ್ನು *ಮುಖ್ಯಮಂತ್ರಿಗಳ* ಕ್ಷೇತ್ರದಲ್ಲಿ ಮಾದರಿ ತಾಲ್ಲೂಕು ಕೇಂದ್ರವಾಗಿ ರೂಪಿಸಲಿ ಎಂದು ನಮ್ಮ ಪತ್ರಿಕೆ ಆಶಿಸುತ್ತದೆ.



ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑